ಹಾಯ್ ಡಾಕ್ಟರ್ಸ್! ನೀಟ್ 2026 ಎಕ್ಸಾಮ್ ಪ್ರಿಪೇರ್ ಆಗ್ತಾ ಇದ್ದೀರಾ ಅಲ್ವಾ? ಕರ್ನಾಟಕದಲ್ಲಿ ಒಳ್ಳೆ MBBS ಸೀಟ್ ಸಿಗಬೇಕು ಅನ್ನೋ ಕನಸು ಕಂಡವರಿಗೆ ನಮ್ಮ Belagavi Voice ಇಂದ ಇದು ಒಂದು ಕಂಪ್ಲೀಟ್ ಗೈಡೆನ್ಸ್.
ಈ ಬ್ಲಾಗ್‌ನಲ್ಲಿ ಕರ್ನಾಟಕದ ಟಾಪ್ 10 Governemet ಮೆಡಿಕಲ್ ಕಾಲೇಜುಗಳು, ಸೀಟ್ ಮ್ಯಾಟ್ರಿಕ್ಸ್, ಕಟ್-ಆಫ್, ರ‍್ಯಾಂಕ್ ಮತ್ತು ಫೀಸ್ ಬಗ್ಗೆ ಡೀಟೇಲ್ ಆಗಿ ತಿಳ್ಕೊಳ್ಳೋಣ.
ನಿಮ್ಮ ಡ್ರೀಮ್ ಕಾಲೇಜ್ ಸೇರಿಕೊಳ್ಳೋಕೆ ಏನೆಲ್ಲಾ ಬೇಕು ಅಂತ ಇಲ್ಲಿ ತಿಳಿಯುತ್ತೆ.
ಒಳ್ಳೆ ಸ್ಕೋರ್ ಮಾಡಿ, ನಿಮ್ಮ ಮೆಡಿಕಲ್ ಕನಸನ್ನು ನನಸು ಮಾಡಿಕೊಳ್ಳಿ.
ಕರ್ನಾಟಕದಲ್ಲಿ ಮೆಡಿಕಲ್ College Seat: ಒಂದು ಗೋಲ್ಡ್ ಮೈನ್!
ನೀವೆಲ್ಲಾ ಕರ್ನಾಟಕದ ಸ್ಟೂಡೆಂಟ್ಸ್ ತುಂಬಾ ಲಕ್ಕಿ ಅಂದರೆ ಸುಳ್ಳಲ್ಲ.
ಯಾಕಂದ್ರೆ, ಇಡೀ ಇಂಡಿಯಾದಲ್ಲೇ ಅತಿ ಹೆಚ್ಚು ಮೆಡಿಕಲ್ ಕಾಲೇಜು ಸೀಟ್‌ಗಳಿರೋದು ನಮ್ಮ ಕರುನಾಡಲ್ಲಿ! ಅಪ್ರೋಕ್ಸಿಮೇಟ್ ಆಗಿ 11,500 ಇಂದ 12,000 ಟೋಟಲ್ ಸೀಟ್ಸ್ ಇದೆ.
ಇದು ನಮಗೆಲ್ಲಾ ಒಂದು ಹೆಮ್ಮೆಯ ವಿಷಯ, ಹೌದಾ? ಇಷ್ಟೊಂದು ಅಪರ್ಚುನಿಟಿಸ್ ಇರೋದ್ರಿಂದ, ನೀವು ಕಂಪ್ಲೀಟ್ ಫೋಕಸ್ ಮಾಡಿ ಪ್ರಿಪೇರ್ ಆದ್ರೆ, ಸೀಟ್ ಸಿಗೋ ಚಾನ್ಸಸ್ ತುಂಬಾನೇ ಜಾಸ್ತಿ ಇರುತ್ತೆ.
ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಮಕ್ಕಳೇ.
Medical Seat ಮ್ಯಾಟ್ರಿಕ್ಸ್ ಯಾವ ಸೀಟ್ಸ್ ಬೆಸ್ಟ್?
ಟೋಟಲ್ ಸೀಟ್ಸ್ ಅಂದ್ರೆ, ಅದರಲ್ಲಿ ಬೇರೆ ಬೇರೆ ಟೈಪ್ಸ್ ಇರುತ್ತೆ.
ಪ್ಯೂರ್ ಗವರ್ನಮೆಂಟ್ ಸೀಟ್ಸ್, ಸೆಮಿ-ಗವರ್ನಮೆಂಟ್, ಪ್ರೈವೇಟ್ ಕಾಲೇಜ್ ಸೀಟ್ಸ್ ಮತ್ತು ಡೀಮ್ಡ್ ಯೂನಿವರ್ಸಿಟೀಸ್.
ನಿಮ್ಮ ಗೋಲ್ ಯಾವಾಗಲೂ ಪ್ಯೂರ್ ಗವರ್ನಮೆಂಟ್ ಸೀಟ್ ಆಗಿರಬೇಕು.
ಯಾಕಂದ್ರೆ, ಪ್ಯೂರ್ ಗವರ್ನಮೆಂಟ್ ಕಾಲೇಜುಗಳಲ್ಲಿ ಸುಮಾರು 3500 ಸೀಟುಗಳಿರುತ್ತೆ, ಅದರಲ್ಲಿ 85% ನಮ್ ಕರ್ನಾಟಕದ ಸ್ಟೂಡೆಂಟ್ಸ್‌ಗೆ ಅಂತ ರಿಸರ್ವ್ ಆಗಿರುತ್ತೆ.
ಅಂದ್ರೆ, ಸುಮಾರು 2,975 ಸೀಟುಗಳು ನಮಗೆ ಸಿಗುತ್ತವೆ. ಇದು ಒಂದು ಬಿಗ್ ಅಡ್ವಾಂಟೇಜ್.
Medical Government Seats: ಕಡಿಮೆ ಫೀಸ್, ಒಳ್ಳೆ ಭವಿಷ್ಯ!
Government ಮೆಡಿಕಲ್ ಕಾಲೇಜ್‌ಗೆ ಎಂಟರ್ ಆಗೋಕೆ ಮೇನ್ ರೀಸನ್ ಏನು ಗೊತ್ತಾ? ಫೀಸ್! ಒಂದು ವರ್ಷಕ್ಕೆ ಅರೌಂಡ್ 70,000 ಅಷ್ಟೇ ಕಾಲೇಜ್ ಫೀಸ್ ಇರುತ್ತೆ.
ಹಾಸ್ಟೆಲ್ ಫೀಸ್ ಇದಕ್ಕಿಂತ ಬೇರೆ.
ಇದು ಬೇರೆ ಪ್ರೈವೇಟ್ ಅಥವಾ ಡೀಮ್ಡ್ ಯೂನಿವರ್ಸಿಟಿಗಳ ಫೀಸ್‌ಗೆ ಹೋಲಿಸಿದ್ರೆ ಸಿಕ್ಕಾಪಟ್ಟೆ ಕಡಿಮೆ.
ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬಹುದು.
ಇದು ನಿಮ್ಮ Future ಡ್ರೀಮ್ಸ್‌ಗೆ ಒಳ್ಳೆ ಬುನಾದಿ ಹಾಕುತ್ತೆ.
ಹಾಗಾಗಿ, ನಿಮ್ಮ ಫೋಕಸ್ ಗವರ್ನಮೆಂಟ್ ಸೀಟ್ ಕಡೆನೇ ಇರಬೇಕು.
Private ಮತ್ತು ಡೀಮ್ಡ್ ಕಾಲೇಜುಗಳ ಫೀಸ್ ಒಂದು ನೋಟ.
ಇನ್ನು Private ಕಾಲೇಜ್‌ಗಳಲ್ಲಿ ಗವರ್ನಮೆಂಟ್ ಕೋಟಾದಲ್ಲಿ ಸೀಟ್ ಸಿಕ್ಕರೆ ಸುಮಾರು 1.75 ಲಕ್ಷದಷ್ಟು ಫೀಸ್ ಇರಬಹುದು. ಕಂಪ್ಲೀಟ್ ಪ್ರೈವೇಟ್ ಅಥವಾ ಮ್ಯಾನೇಜ್ಮೆಂಟ್ ಸೀಟ್‌ಗೆ ಹೋದರೆ, ವರ್ಷಕ್ಕೆ 11 ಇಂದ 12 ಲಕ್ಷದವರೆಗೆ ಫೀಸ್ ಕೊಡಬೇಕಾಗುತ್ತೆ.
ಡೀಮ್ಡ್ ಯೂನಿವರ್ಸಿಟಿಗಳಾದ KMC ಮಣಿಪಾಲ್, JSS ಮೈಸೂರುಗಳಲ್ಲಿ ಫೀಸ್ 18 ಲಕ್ಷಕ್ಕೂ ಹೆಚ್ಚು ಇರುತ್ತೆ.
ನೀಟ್ ಸ್ಕೋರ್ ಇಲ್ಲಿ ಅಷ್ಟೊಂದು ಮ್ಯಾಟರ್ ಆಗಲ್ಲ, ಜಸ್ಟ್ ಎಕ್ಸಾಮ್ ಅಪಿಯರ್ ಆದ್ರೆ ಸಾಕು.
ಆದ್ರೆ, ಹಣ ಖರ್ಚು ಜಾಸ್ತಿ. ಸೋ, ಬೆಸ್ಟ್ ಆಪ್ಷನ್ ಅಂದ್ರೆ ಗವರ್ನಮೆಂಟ್ ಸೀಟ್.
Top 10 ಗವರ್ನಮೆಂಟ್ Medical ಕಾಲೇಜುಗಳು
ಈಗ ನಮ್ಮ ಕರ್ನಾಟಕದಲ್ಲಿರುವ ಟಾಪ್ 10 ಗವರ್ನಮೆಂಟ್ ಮೆಡಿಕಲ್ ಕಾಲೇಜುಗಳ ಬಗ್ಗೆ ಡೀಟೇಲ್ಸ್ ನೋಡೋಣ. ನೆನಪಿಟ್ಟುಕೊಳ್ಳಿ, ಇಲ್ಲಿ ಸ್ಕೋರ್‌ಗಿಂತ ರ‍್ಯಾಂಕ್ ತುಂಬಾನೇ ಇಂಪಾರ್ಟೆಂಟ್.
ಯಾಕಂದ್ರೆ, ಪೇಪರ್ ಲೆವೆಲ್ ಕಷ್ಟ ಆದ್ರೆ ಸ್ಕೋರ್ ಕಟ್ ಆಫ್ ಕಮ್ಮಿ ಆಗುತ್ತೆ, ಸುಲಭ ಆದ್ರೆ ಜಾಸ್ತಿ ಆಗುತ್ತೆ.
ಆದ್ರೆ ರ‍್ಯಾಂಕ್ ನಿಮಗೆ ಸೀಟ್ ತಗೊಳ್ಳೋಕೆ ಮೇಜರ್ ರೋಲ್ ಪ್ಲೇ ಮಾಡುತ್ತೆ.
ಇಲ್ಲಿ ನಾನು ಹೇಳೋ ಸ್ಕೋರ್ ಮತ್ತು ರ‍್ಯಾಂಕ್ ಜನರಲ್ ಮೆರಿಟ್‌ಗೆ.
ರಿಸರ್ವೇಶನ್ ಇರೋರಿಗೆ 10-15 ಮಾರ್ಕ್ಸ್ ಕಮ್ಮಿ ಇದ್ರೂ ಸೀಟ್ ಸಿಗುವ ಚಾನ್ಸ್ ಇರುತ್ತೆ.
Top 10 Government Medical Colleges in Karnataka
NEET Target Score · AIR Cutoff · Annual Fee · Seats for Karnataka Students
| # | College | Target Score | AIR Range | Annual Fee (₹) | Total Seats | KA Quota Seats |
|---|---|---|---|---|---|---|
| 1 | BMCRI – Bangalore Medical College & Research Institute📍 Bengaluru | 685+ | 2,100 – 4,500 | ₹64,350 | 250 | 212~85% Karnataka Quota |
| 2 | MMCRI – Mysore Medical College & Research Institute📍 Mysuru | 665+ | 7,000 – 9,000 | ₹64,350 | 250 | 212~85% Karnataka Quota |
| 3 | KIMS – Karnataka Institute of Medical Sciences📍 Hubballi | 650+ | 11,000 – 14,000 | ₹64,350 | 200 | 170~85% Karnataka Quota |
| 4 | ABVMC – Atal Bihari Vajpayee Medical College📍 Bengaluru | 645+ | 12,000 – 15,000 | ₹64,350 | 150 | 127~85% Karnataka Quota |
| 5 | ESIC Medical College, Rajajinagar📍 Bengaluru | 640+ | 12,500 – 16,000 | ₹1,09,350⚠️ Higher Fee | 150 | 125~83% Karnataka Quota |
| 6 | VIMS – Vijayanagara Institute of Medical Sciences📍 Ballari | 630+ | 21,000 – 25,000 | ₹64,350 | — | Details awaited |
| 7 | SIMS – Shivamogga Institute of Medical Sciences📍 Shivamogga | 625+ | 22,000 – 26,000 | ₹64,350 | — | Details awaited |
| 8 | HIMS – Hassan Institute of Medical Sciences📍 Hassan | 625+ | 22,000 – 27,000 | ₹64,350 | — | Details awaited |
| 9 | BIMS – Belagavi Institute of Medical Sciences📍 Belagavi | 622+ | 20,000 – 28,000 | ₹64,350 | — | Details awaited |
| 10 | MIMS – Mandya Institute of Medical Sciences📍 Mandya | 620+ | 18,500 – 30,000 | ₹64,350 | — | Details awaited |
Bengaluru ಪ್ರಮುಖ Government ವೈದ್ಯಕೀಯ ಕಾಲೇಜುಗಳು

| ಕಾಲೇಜಿನ ಹೆಸರು | ಟಾರ್ಗೆಟ್ ಸ್ಕೋರ್ | ಆಲ್ ಇಂಡಿಯಾ ರ‍್ಯಾಂಕ್ | ಕರ್ನಾಟಕದ ಸೀಟುಗಳು |
|---|---|---|---|
| BMCRI (ಬೆಂಗಳೂರು) | 685+ | 2,100 – 4,500 | 212 |
| Atal ಬಿಹಾರಿ ವಾಜಪೇಯಿ ಕಾಲೇಜ್ | 645+ | 12,000 – 15,000 | 127 |
| ESIC, ರಾಜಾಜಿನಗರ | 640+ | 12,000 – 16,000 | 125 |
ಮೈಸೂರು ಮತ್ತು ಹುಬ್ಬಳ್ಳಿಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳು

ಮೈಸೂರು ಮೆಡಿಕಲ್ ಕಾಲೇಜ್ (MMCRI):
- ಟಾರ್ಗೆಟ್ ಸ್ಕೋರ್: 665+
- ರ‍್ಯಾಂಕ್: 7000 – 9000
- ಒಟ್ಟು ಸೀಟುಗಳು: 250
KIMS ಹುಬ್ಬಳ್ಳಿ:
- ಟಾರ್ಗೆಟ್ ಸ್ಕೋರ್: 650+
- ರ‍್ಯಾಂಕ್: 11000 – 14000
- ಕರ್ನಾಟಕದ ಸೀಟುಗಳು: 170
ರಾಜ್ಯದ ಇತರೆ ಪ್ರಾದೇಶಿಕ ಸರ್ಕಾರಿ ವೈದ್ಯಕೀಯ ಕಾಲೇಜುಗಳು

| ಕಾಲೇಜಿನ ಹೆಸರು | ಟಾರ್ಗೆಟ್ ಸ್ಕೋರ್ | ಆಲ್ ಇಂಡಿಯಾ ರ‍್ಯಾಂಕ್ |
|---|---|---|
| VIMS ಬಳ್ಳಾರಿ | 630+ | 21,000 – 25,000 |
| SIMS ಶಿವಮೊಗ್ಗ | 625+ | 22,000 – 26,000 |
| HIMS ಹಾಸನ | 625+ | 22,000 – 26,000 |
| BIMS ಬೆಳಗಾವಿ | 622+ | 25,000 – 28,000 |
| MIMS ಮಂಡ್ಯ | 620+ | 25,000 – 28,000 |
Official Websites – Karnataka Government Medical Colleges
Click the button to visit the official website of each college for admission details, fee structure, and more.
| # | College | Official Website |
|---|---|---|
| 1 | BMCRI📍 Bengaluru | 🌐 Visit |
| 2 | MMCRI📍 Mysuru | 🌐 Visit |
| 3 | KIMS📍 Hubballi | 🌐 Visit |
| 4 | ABVMC📍 Bengaluru | 🌐 Visit |
| 5 | ESIC Medical College📍 Bengaluru | 🌐 Visit |
| 6 | VIMS📍 Ballari | 🌐 Visit |
| 7 | SIMS📍 Shivamogga | 🌐 Visit |
| 8 | HIMS📍 Hassan | 🌐 Visit |
| 9 | BIMS📍 Belagavi | 🌐 Visit |
| 10 | MIMS📍 Mandya | 🌐 Visit |
NEET 2026: ನಿಮ್ಮ ಟಾರ್ಗೆಟ್ ಸ್ಕೋರ್ ಎಷ್ಟಿರಬೇಕು?
ನೀವು ಯಾವುದೇ ಕೆಟಗರಿಯವರೇ ಆಗಿರಲಿ, ಗವರ್ನಮೆಂಟ್ ಸೀಟ್ ಬೇಕು ಅಂದರೆ, 650+ ಸ್ಕೋರ್ ಅನ್ನು ಟಾರ್ಗೆಟ್ ಮಾಡಲೇಬೇಕು.
ಕಳೆದ ವರ್ಷ ಪೇಪರ್ ಸ್ವಲ್ಪ ಕಷ್ಟ ಇದ್ದ ಕಾರಣ ಕಟ್ ಆಫ್ ಕಮ್ಮಿ ಆಗಿತ್ತು.
ಆದ್ರೆ, ಈ ವರ್ಷ ಮಾಡರೇಟ್ ಪೇಪರ್ ಬಂದರೆ 650 ಟಾರ್ಗೆಟ್ ಇಟ್ಟುಕೊಳ್ಳೋದು ಸೇಫ್.
ನಿಮ್ಮ ರಿಸರ್ವೇಶನ್ ಡಾಕ್ಯುಮೆಂಟ್ಸ್ ಅನ್ನು ಸರಿಯಾಗಿ ಕ್ಲೇಮ್ ಮಾಡಿ, ಇದು ನಿಮಗೆ ಅಡ್ಮಿಷನ್‌ನಲ್ಲಿ ತುಂಬಾನೇ ಹೆಲ್ಪ್ ಆಗುತ್ತೆ.
ನಿಮ್ಮ ಸಮಯವನ್ನು ವೇಸ್ಟ್ ಮಾಡದೆ, ಪ್ರಿಪರೇಷನ್ ಮೇಲೆ ಫೋಕಸ್ ಮಾಡಿ.
ಕೊನೆಯ ಮಾತು
ಡಿಯರ್ ಡಾಕ್ಟರ್ಸ್, ಇಷ್ಟು ಕರ್ನಾಟಕದ ಟಾಪ್ 10 ಸರ್ಕಾರಿ ಮೆಡಿಕಲ್ ಕಾಲೇಜುಗಳ ಡೀಟೇಲ್ಸ್.
ಈ ಮಾಹಿತಿ ನಿಮಗೆ ಹೆಲ್ಪ್ ಆಗಿದೆ ಅಂತ ಭಾವಿಸ್ತೀವಿ.
ನಿಮ್ಮ ಡ್ರೀಮ್ ಕಾಲೇಜ್ ಯಾವುದು ಮತ್ತು ನಿಮ್ಮ ನೀಟ್ 2026 ಟಾರ್ಗೆಟ್ ರ‍್ಯಾಂಕ್ ಎಷ್ಟಿದೆ ಅಂತ ಕಮೆಂಟ್ ಸೆಕ್ಷನ್‌ನಲ್ಲಿ ತಿಳಿಸಿ. ಸಮಯವನ್ನು ಸರಿಯಾಗಿ ಬಳಸಿಕೊಂಡು, ಚೆನ್ನಾಗಿ ಪ್ರಿಪೇರ್ ಆಗಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತೆ. ಆಲ್ ದಿ ಬೆಸ್ಟ್!
FAQ
1. ಕರ್ನಾಟಕದಲ್ಲಿ ಒಟ್ಟು ಎಷ್ಟು (MBBS) ಸೀಟುಗಳು ಲಭ್ಯವಿವೆ?
ರಾಜ್ಯದಲ್ಲಿ ಅಂದಾಜು 11,500 ರಿಂದ 12,000 ಎಂಬಿಬಿಎಸ್ ಸೀಟುಗಳಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಸೀಟು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.
2. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಎಷ್ಟು ಸೀಟು ಮೀಸಲಿವೆ?
ಶುದ್ಧ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿರುವ ಸುಮಾರು 3,500 ಸೀಟುಗಳಲ್ಲಿ ಶೇ. 85ರಷ್ಟು (ಅಂದಾಜು 2,975 ಸೀಟುಗಳು) ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾಗಿವೆ.
3. ಸರ್ಕಾರಿ ಮೆಡಿಕಲ್ ಕಾಲೇಜುಗಳ ವಾರ್ಷಿಕ ಶುಲ್ಕ ಎಷ್ಟು?
ಶುದ್ಧ ಸರ್ಕಾರಿ ಕಾಲೇಜುಗಳಲ್ಲಿ ವಾರ್ಷಿಕ ಶುಲ್ಕ ಅಂದಾಜು 70,000 ರೂ. ಇರುತ್ತದೆ (ಇಎಸ್ಐಸಿ ಕಾಲೇಜು ಹೊರತುಪಡಿಸಿ).
4. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳ ಶುಲ್ಕ ಎಷ್ಟಿರಬಹುದು?
ಖಾಸಗಿ ಮ್ಯಾನೇಜ್‌ಮೆಂಟ್ ಸೀಟುಗಳಿಗೆ 11-12 ಲಕ್ಷ ರೂ. ಮತ್ತು ಡೀಮ್ಡ್ ವಿವಿಗಳಲ್ಲಿ (ಮಣಿಪಾಲ್, ಜೆಎಸ್ಎಸ್ ಮೈಸೂರು) 18 ಲಕ್ಷ ರೂ.ಗಿಂತ ಹೆಚ್ಚು ಶುಲ್ಕವಿರುತ್ತದೆ.
5. ಸೀಟು ಪಡೆಯಲು ಸ್ಕೋರ್ ಮುಖ್ಯವೋ ಅಥವಾ ರ‍್ಯಾಂಕ್ ಮುಖ್ಯವೋ?
ಸೀಟು ಪಡೆಯಲು ಸ್ಕೋರ್‌ಗಿಂತ ಆಲ್ ಇಂಡಿಯಾ ರ‍್ಯಾಂಕ್ (AIR) ಹೆಚ್ಚು ಮುಖ್ಯ ಮತ್ತು ಸ್ಥಿರವಾಗಿರುತ್ತದೆ.
6. ಬೆಂಗಳೂರು ಮೆಡಿಕಲ್ ಕಾಲೇಜು (BMCRI) ಸೇರಲು ಎಷ್ಟು ರ‍್ಯಾಂಕ್ ಇರಬೇಕು?
BMCRI ಸೇರಲು ಸಾಮಾನ್ಯವಾಗಿ ಆಲ್ ಇಂಡಿಯಾ ರ‍್ಯಾಂಕ್ 2100 ರಿಂದ 4500 ರ ಒಳಗಿರಬೇಕು ಮತ್ತು 685+ ಸ್ಕೋರ್ ಗುರಿ ಹೊಂದಿರಬೇಕು.
7. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (BIMS) ಕಟ್-ಆಫ್ ಎಷ್ಟಿರಬಹುದು?
BIMS ಬೆಳಗಾವಿಯಲ್ಲಿ ಸೀಟು ಪಡೆಯಲು ಅಂದಾಜು 622+ ಸ್ಕೋರ್ ಮತ್ತು 25,000 ರಿಂದ 28,000 ರ‍್ಯಾಂಕ್ ಅಗತ್ಯವಿರುತ್ತದೆ.
8. ಅರೆ-ಸರ್ಕಾರಿ (Semi-Government) ಸೀಟುಗಳ ಶುಲ್ಕ ಎಷ್ಟಿರುತ್ತದೆ?
ಅರೆ-ಸರ್ಕಾರಿ ಸೀಟುಗಳಿಗೆ ವಾರ್ಷಿಕ ಅಂದಾಜು 1.75 ಲಕ್ಷ ರೂ. ಶುಲ್ಕವಿರುತ್ತದೆ.
9. ಸುರಕ್ಷಿತವಾಗಿ ಸರ್ಕಾರಿ ಸೀಟು ಪಡೆಯಲು ಎಷ್ಟು ಅಂಕಗಳ ಗುರಿ ಇರಬೇಕು?
ಯಾವುದೇ ಮೀಸಲಾತಿ ಇದ್ದರೂ, ಉತ್ತಮ ಸರ್ಕಾರಿ ಕಾಲೇಜು ಪಡೆಯಲು ಕನಿಷ್ಠ 650 ಅಂಕಗಳನ್ನು ಗಳಿಸುವ ಗುರಿ ಇಟ್ಟುಕೊಳ್ಳುವುದು ಉತ್ತಮ.
10. ಕಡಿಮೆ ಅಂಕ ಬಂದರೂ ಸರ್ಕಾರಿ ಸೀಟು ಪಡೆಯಲು ಏನು ಮಾಡಬೇಕು?
ವಿದ್ಯಾರ್ಥಿಗಳು ತಮ್ಮ ಮೀಸಲಾತಿ (Reservation) ಪ್ರಯೋಜನಗಳನ್ನು ಸರಿಯಾಗಿ ಕ್ಲೇಮ್ ಮಾಡುವ ಮೂಲಕ ಸೀಟು ಪಡೆಯುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು.
Read More:
UPSC 2025-26 ಫಲಿತಾಂಶ: ರಾಜ್ಯದ 22 ಅಭ್ಯರ್ಥಿಗಳು ಸಾಧನೆ. ಕಿರಣ್ ಕಮಾಟೆಗೆ 53ನೇ ರ‍್ಯಾಂಕ್!










