ಎಲ್ಲರಿಗೂ ನಮಸ್ಕಾರ, ಮನೆಯಿಂದಲೇ ನಡೆಸಬಹುದಾದ ಐದು ಲಾಭದಾಯಕ ಉದ್ಯಮಗಳು ಇತ್ತೀಚಿನ ದಿನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ Business ಅನ್ನ ಆರಂಭಿಸುವುದು ಅತ್ಯಂತ ಸೂಕ್ತ ಬಿಸಿನೆಸ್ ಐಡಿಯಾ ಆಗಿ ಹೊರಹೊಮ್ಮುತ್ತಾ ಇದೆ.
ನಗರ ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಮಳಿಗೆ ಬಾಡಿಗೆ ಹಿಡಿಯುವುದು ಅತ್ಯಂತ ಕಷ್ಟಕರವಾಗ್ತಾ ಇದೆ. ಇಂತಹ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು ಒಂದು ಟ್ರೆಂಡ್ ಕೂಡ ಆಗ್ತಾ ಇದೆ ಹಾಗಾದ್ರೆ ಬನ್ನಿ ಮನೆಯಿಂದಲೇ ನಡೆಸಬಹುದಾದ ಟಾಪ್ ಐದು ಬಿಸಿನೆಸ್ ಐಡಿಯಾಗಳು ಯಾವುವು ಅಂತ ನೋಡೋಣ.
ಮನೆಯಿಂದಲೇ ನಡೆಸಬಹುದಾದ Top 5 Business ಐಡಿಯಾ
1. ವೆಬ್ಸೈಟ್ ಡಿಸೈನಿಂಗ್
ವೆಬ್ಸೈಟ್ ಡಿಸೈನಿಂಗ್ ಐಟಿ ಕ್ಷೇತ್ರದಲ್ಲಿ ಶಿಕ್ಷಣ ಪಡೆದವರು ಮನೆಯಿಂದಲೇ ಸುಲಭವಾಗಿ ವೆಬ್ಸೈಟ್ ಡಿಸೈನಿಂಗ್ ಕೆಲಸವನ್ನ ಆರಂಭಿಸಬಹುದು ಇದು ತುಂಬಾ ಲಾಭದಾಯಕ ಬಿಸಿನೆಸ್ ಗಳಲ್ಲಿ ಒಂದಾಗಿದೆ ವೆಬ್ಸೈಟ್ ಡಿಸೈನಿಂಗ್ ನ ಬೇಸಿಕ್ ಜ್ಞಾನ ಹಾಗೂ ಹೆಚ್ಚಿನ ಕ್ರಿಯಾಶೀಲತೆಯಿಂದ ಉತ್ತಮ ಗುಣಮಟ್ಟದ ವೆಬ್ಸೈಟ್ ಗಳನ್ನ ತಯಾರಿಸಿದರೆ ಹೆಚ್ಚಿನ ಗ್ರಾಹಕರನ್ನ ಸೆಳೆಯಬಹುದು ಈಗ ಗೋಡ್ಡಿ ಹಾಗೂ ಬಿಗ್ ರಾಕ್ ನಂತಹ ವೆಬ್ಸೈಟ್ ಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಡೊಮೈನ್ ನೇಮ್ ಗಳು ಕೂಡ ಲಭ್ಯವಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ವೆಬ್ಸೈಟ್ ಮೂಲಕ ಮನೆಯಿಂದಲೇ ಜನ ಯಾವುದೇ ರೀತಿಯ ಬಿಸಿನೆಸ್ ಆರಂಭಿಸಬಹುದಾಗಿದ್ದು ಅವರಿಗೆ ಸರಿಹೊಂದುವಂತಹ ವೆಬ್ಸೈಟ್ ಮಾಡಿಕೊಟ್ಟಲ್ಲಿ ಉತ್ತಮ ಹಣವನ್ನು ಸಂಪಾದಿಸಬಹುದು.
2. ಕೇಟರಿಂಗ್
ಕೇಟರಿಂಗ್ ಅಥವಾ ಊಟ ತಿಂಡಿ ಸರಬರಾಜು ವ್ಯವಹಾರ ಅತಿ ಲಾಭದಾಯಕ ಬಿಸಿನೆಸ್ ಆಗಿದೆ ಪಾರ್ಟಿಗಳು ಮದುವೆ ಹಾಗೂ ಇನ್ಯಾವುದೇ ಮೀಟಿಂಗ್ ಹೀಗೆ ಯಾವುದೇ ಸಮಾರಂಭವಿದ್ದರೂ ಅಲ್ಲಿ ಊಟ ತಿಂಡಿಯ ವ್ಯವಸ್ಥೆ ಆಗಲೇಬೇಕು ಈಗ ಅಡುಗೆ ಮಾಡುತ್ತಾ ಕುಳಿತುಕೊಳ್ಳುವಷ್ಟು ಸಮಯ ಯಾರಿಗೂ ಇಲ್ಲ ಹೀಗಾಗಿ ಎಲ್ಲವನ್ನು ರೆಡಿ ಮಾಡಿಕೊಂಡು ಸ್ಥಳಕ್ಕೆ ಬಂದು ಬಡಿಸುವ ಕೇಟರಿಂಗ್ ವ್ಯವಹಾರ ಜೋರಾಗಿ ನಡೆಯುತ್ತಾ ಇದೆ.
ಇದನ್ನ ಆರಂಭಿಸಬೇಕಾದರೆ ಅಡುಗೆ ಕೌಶಲ್ಯ ಆಡಳಿತ ಜಾಣ್ಮೆ ಮುಂತಾದವು ಇರಬೇಕಾಗುತ್ತೆ ಇನ್ನು ಪಾರ್ಟಿ ಆರಂಭದಿಂದ ಮುಗಿಯುವವರೆಗೆ ಏನೇನು ತಿಂಡಿ ತಿನಿಸುಗಳು ಬೇಕಾಗುತ್ತವೆ ಎಂಬುದನ್ನ ಲಿಸ್ಟ್ ಮಾಡಿ ಅದರ ಪ್ರಕಾರ ಬಡಿಸಬೇಕಾಗುತ್ತೆ ಅಲ್ಲದೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೆನ್ಯೂ ಅನ್ನು ಕೂಡ ತಯಾರಿಸಬೇಕು.
3. ನೆಟ್ವರ್ಕ್ ಮಾರ್ಕೆಟಿಂಗ್
ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಎಂ ಎಲ್ ಎಂ ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಇದು ಭಾರತದಲ್ಲಿ ಮನೆಯಿಂದಲೇ ಮಾಡಬಹುದಾದ ಪ್ರಮುಖ ಬಿಸಿನೆಸ್ ಐಡಿಯಾ ಆಗಿದೆ ಆರೋಗ್ಯ ಪೌಷ್ಟಿಕಾಂಶದ ಆಹಾರ ಸೌಂದರ್ಯವರ್ಧಕ ವಸ್ತುಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ವ್ಯಾಪಾರ ಜಾಲವನ್ನು ವೃದ್ಧಿಸಿ ತೋರಿದ್ರಿಂದ ಎಂಎಲ್ಎ ಎಂ ವಲಯದಲ್ಲಿ ಅವಕಾಶಗಳು ಹೆಚ್ಚಾಗ್ತಾ ಇವೆ.
ಡಯಾಬಿಟಿಸ್ ನಿಯಂತ್ರಣದಿಂದ ಹಿಡಿದು ತಲೆಗೂದಲು ಉದುರುವಿಕೆ ತಡೆಗಟ್ಟುವ ತೈಲ ಹೀಗೆ ಹಲವಾರು ಪರ್ಯಾಯ ವೈದ್ಯಕೀಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಬಹು ಜನಪ್ರಿಯತೆಯನ್ನು ಗಳಿಸುತ್ತಿದೆ ಇದೇ ವ್ಯವಹಾರವನ್ನು ಆನ್ಲೈನ್ ಮೂಲಕ ಮಾಡಿ ನೀವು ಹೆಚ್ಚು ಲಾಭವನ್ನು ಗಳಿಸಲು ಯತ್ನಿಸಬಹುದು.
4. ಪ್ಯಾಕಿಂಗ್ ಹಾಗೂ ರಿಪ್ಯಾಕಿಂಗ್
ಪ್ಯಾಕಿಂಗ್ ಹಾಗೂ ರಿಪ್ಯಾಕಿಂಗ್ ಕೈಗಾರಿಕ ಪ್ರದೇಶಗಳು ಹಾಗೂ ವಾಣಿಜ್ಯ ಪ್ರದೇಶಗಳ ಹತ್ತಿರ ವಾಸಿಸುತ್ತಿರುವವರಿಗೆ ಮನೆಯಿಂದಲೇ ಪ್ಯಾಕಿಂಗ್ ಹಾಗೂ ರಿಪ್ಯಾಕಿಂಗ್ ಬಿಸಿನೆಸ್ ಆರಂಭಿಸಲು ಸೂಕ್ತವಾಗಿದೆ ಕೈಗಾರಿಕೆಗಳಿಂದ ನಿಮಗೆ ವಸ್ತುಗಳನ್ನು ತುಂಬಿದ ಬಾಕ್ಸ್ ಗಳನ್ನ ನೀಡಲಾಗುತ್ತೆ ಆ ಬಾಕ್ಸ್ ಗಳನ್ನ ಬಿಚ್ಚಿ ಅದರಲ್ಲಿ ಇರುವ ವಸ್ತುಗಳಲ್ಲಿ ಯಾವುದಾದರೂ ವಸ್ತು ಗುಣಮಟ್ಟದ್ದು ಆಗಿಲ್ಲ ಅಂದ್ರೆ ಅದನ್ನ ತೆಗೆದು ಬೇರೆ ಪೀಸ್ ಅನ್ನ ಸೇರಿಸಬೇಕಾಗುತ್ತೆ ನಂತರ ಮತ್ತೆ ಬಾಕ್ಸ್ ಅನ್ನ ಮೊದಲಿನಂತೆ ಪ್ಯಾಕ್ ಮಾಡಿ ಕಳಿಸಬೇಕಾಗುತ್ತೆ.
5. ಗ್ರಾಫಿಕ್ ಡಿಸೈನಿಂಗ್
ಗ್ರಾಫಿಕ್ ಡಿಸೈನ್ ಸ್ಟುಡಿಯೋ ಆರಂಭಿಸುವುದು ಮನೆಯಿಂದಲೇ ಮಾಡಬಹುದಾದ ಮತ್ತೊಂದು ಉತ್ತಮ ಬಿಸಿನೆಸ್ ಐಡಿಯಾ ಆಗಿದೆ ಇದಕ್ಕಾಗಿ ನಿಮ್ಮ ಬಳಿ ಗ್ರಾಫಿಕ್ ಕಾರ್ಡ್ ಅಳವಡಿಸಿದ ಒಳ್ಳೆ ಕ್ವಾಲಿಟಿಯ ಕಂಪ್ಯೂಟರ್ ಇರುವುದು ಅವಶ್ಯಕ ಲೋಗೋ ಸೈನ್ ಬೋರ್ಡ್ ಗಳು ಜಾಹಿರಾತು ಡಿಸೈನ್ ಆಮಂತ್ರಣ ಪತ್ರಿಕೆ ಡಿಸೈನ್ ಹೀಗೆ ಹಲವಾರು ಕೆಲಸಗಳನ್ನ ಗ್ರಾಫಿಕ್ ಡಿಸೈನ್ ಒಳಗೊಂಡಿದೆ ಜೊತೆಗೆ ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಪುಸ್ತಕಗಳ ಮುಖಪುಟವನ್ನು ಸಹ ವಿನ್ಯಾಸ ಮಾಡಿ ಕೊಡಬಹುದಾಗಿದೆ.
ಇದನ್ನೂ ಓದಿ: ನಿಮ್ಮ ಬಳಿ ಕೇವಲ 25,000 ಇದ್ದರೆ ಈ 4 ಬಿಸಿನೆಸ್ ಶುರು ಮಾಡಬಹುದು!!





