UPI Payment Circle ಪ್ರಯೋಜನಗಳು!! ಇದರ ಮೂಲಕ ಸುಲಭವಾಗಿ UPI ಪೇಮೆಂಟ್ ಮಾಡಬಹುದು

October 15, 2024 4:45 AM
UPI Payment Circle ಪ್ರಯೋಜನಗಳು

ಎಲ್ಲರಿಗೂ ನಮಸ್ಕಾರ, ಕೆಲವು ಸಲ ಸರ್ವರ್ ಡೌನ್ ಆಯ್ತು ಅಂತಂದ್ರೆ ಗೂಗಲ್ ಪೇ ಮತ್ತೆ ಫೋನ್ ಪೇ ವರ್ಕ್ ಆಗೋದಿಲ್ಲ ಇನ್ನು ಕೆಲವು ಸಲ ಏನ್ ಮಾಡ್ತೀವಿ ನಮ್ಮ ಅಕೌಂಟ್ ಅಲ್ಲಿ ಇರುವಂತಹ ಬ್ಯಾಲೆನ್ಸ್ ಅನ್ನ ಚೆಕ್ ಮಾಡಿಕೊಳ್ಳುವುದಿಲ್ಲ ತಗೊಂಡು ಹೋಗಿರೋ ಕ್ಯಾಶ್ ಖಾಲಿಯಾಗಿ ಅಕೌಂಟ್ ಅಲ್ಲಿ ದುಡ್ಡಿಲ್ಲ ಅಂತಂದ್ರೆ ತುಂಬಾ ಸಮಸ್ಯೆಗಳನ್ನ ನಾವು ಎದುರಿಸಬೇಕಾಗುತ್ತೆ.

ಇದಕ್ಕೆಲ್ಲ ಸೊಲ್ಯೂಷನ್ ನಿಮ್ಮ UPI ನಲ್ಲೇ ಇದೆ ನೀವು ಯೂಸ್ ಮಾಡ್ತಿರುವಂತಹ ಗೂಗಲ್ ಪೇ ಬೀಮ್ ಆಪ್ ಗಳಲ್ಲಿ UPI Circle ಅಂತ ಹೊಸ ಸರ್ವಿಸ್ ಅನ್ನ ಇಂಟ್ರೊಡ್ಯೂಸ್ ಮಾಡಿದ್ದಾರೆ. ನೀವು ಒಂದು ಪ್ರೈಮರಿ ಅಕೌಂಟ್ ಇಂದ ನಿಮ್ಮ ಪರಿಚಯ ಇರೋವರಿಗೆ ಅಥವಾ ಫ್ಯಾಮಿಲಿ ಮೆಂಬರ್ಸ್ ಗೆ UPI ಯಾವ ಅಕೌಂಟ್ ಗೆ ಲಿಂಕ್ ಆಗಿರುತ್ತೋ ಆ ಒಂದು ಅಕೌಂಟ್ ಇಂದ ಆಪ್ ಅನ್ನ ಯೂಸ್ ಮಾಡ್ಕೊಂಡು ನೀವು ದುಡ್ಡನ್ನ ಕಳಿಸಬಹುದು ಅಥವಾ ಬ್ಯಾಂಕಲ್ಲಿ ಇರುವಂತಹ ಹಣವನ್ನು ನೀವು ಯೂಸ್ ಮಾಡಿಕೊಳ್ಳಬಹುದು.

What Is UPI Payment Circle

UPI ಸರ್ಕಲ್ ಅಂತ ಅಂದ್ರೆ ಫಾರ್ ಎಕ್ಸಾಂಪಲ್ ನೀವು WhatsApp ನೋಡಿರ್ತೀರ ಅಲ್ವಾ WhatsApp ಅಲ್ಲಿ ನಾವು ಒಂದು ಗ್ರೂಪ್ ಅನ್ನ ಕ್ರಿಯೇಟ್ ಮಾಡ್ತಿದೀವಿ ಅಂತ ಅಂದ್ರೆ ಅಲ್ಲಿ ಒಂದು ಲಿಮಿಟೆಡ್ ಮೆಂಬರ್ಸ್ ಆ ಗ್ರೂಪ್ ಅಲ್ಲಿ ಇರ್ತಾರೆ ಅದಕ್ಕೊಬ್ಬ ಅಡ್ಮಿನ್ ಇರ್ತಾನೆ ಅದೇ ಇದೇ ತರ ನಿಮ್ಮ UPI ನಲ್ಲೂ ಕೂಡ ಒಂದು ಗ್ರೂಪ್ ಆಗುತ್ತೆ ಹೇಗೆ ಅಂತ ಅಂದ್ರೆ ನೀವು ನಿಮ್ಮ ಗೂಗಲ್ ಪೇ ನ ಬಳಸಿ ನಿಮಗೆ ಬೇಕಾಗಿರುವಂತಹ ಒಂದು ಗ್ರೂಪ್ ಅನ್ನ ನೀವು ಕ್ರಿಯೇಟ್ ಮಾಡಿಕೊಳ್ಳಬಹುದು ನಿಮ್ಮ ಕ್ಲೋಸ್ ಫ್ರೆಂಡ್ಸ್ ಫ್ಯಾಮಿಲಿ ಮೆಂಬರ್ಸ್ ಮತ್ತೆ ನಿಮಗೆ ಯಾರೆಲ್ಲ ತುಂಬಾ ಕ್ಲೋಸ್ ಆಗಿ ಪರಿಚಯ ಇರ್ತಾರೋ ಅವರನ್ನ ನೀವು ಈ ಗ್ರೂಪ್ ಅಲ್ಲಿ ಆಡ್ ಮಾಡಿಕೊಳ್ಳಬಹುದು ಮತ್ತೆ UPI ಸರ್ಕಲ್ ಇಂದ ಆಗುವಂತಹ ಉಪಯೋಗಗಳಾದರೂ ಏನು ಇದರಿಂದ ನಿಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಮೆಂಬರ್ಸ್ ಗೆ ಯಾವಾಗ ತುಂಬಾ ಅವಶ್ಯಕತೆ ಇರುತ್ತೋ ಆಗ ಅಕೌಂಟ್ ಅಲ್ಲಿ ಇರುವಂತಹ ದುಡ್ಡನ್ನ ಬಳಸಿಕೊಳ್ಳಬಹುದು.

UPI Payment Circle ಉಪಯೋಗಗಳು

ಉದಾಹರಣೆಗೆ: ನಮ್ಮ ತಾಯಿ ತಾಯಿದು UPI ಸರ್ಕಲ್ ಅಕೌಂಟ್ ಇರುತ್ತೆ ಅಂತ ಅಂದುಕೊಳ್ಳೋಣ ನಾನೆಲ್ಲೋ ಶಾಪಿಂಗ್ ಹೋಗಿರ್ತೀನಿ ನನ್ನ ತಾಯಿ ನನಗೆ 5,000 ದುಡ್ಡನ್ನ ಕೊಟ್ಟಿರ್ತಾರೆ. ಶಾಪಿಂಗ್ ಮಾಡ್ತಾ ಮಾಡ್ತಾ 5,000 ನ ಕಂಪ್ಲೀಟ್ ಆಗಿ ಖರ್ಚು ಮಾಡಿರ್ತೀನಿ ನನಗೆ ಬರ್ತಾ ಯಾವುದೋ ಒಂದು ಹೊಸ ಡ್ರೆಸ್ ಇಷ್ಟ ಆಗುತ್ತೆ ಆ ಡ್ರೆಸ್ ನ ಬೆಲೆ ಬಂದು 2,000 ಇರುತ್ತೆ ಅದನ್ನ ನಾನು ಶಾಪಿಂಗ್ ಮಾಡಬೇಕು ಅಂತ ಅಂದ್ರೆ ನನಗೆ ಶಾರ್ಟೇಜ್ ಇರುವಂತಹ 2,000 ಅಮೌಂಟ್ ಅನ್ನ ಏನ್ ಮಾಡ್ತೀನಿ ಅಂತ ಅಂದ್ರೆ ನನ್ನ ತಾಯಿ ಅಕೌಂಟ್ ಅನ್ನ ಯೂಸ್ ಮಾಡಿ UPI ಸರ್ಕಲ್ ಇಂದ ಆ ಅಮೌಂಟ್ ಅನ್ನ ನಾನು ಪೇ ಮಾಡ್ತೀನಿ.

ನಾವೇನಾದ್ರು UPI ಸರ್ಕಲ್ ಅಲ್ಲಿ ನಮ್ಮ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಮೆಂಬರ್ಸ್ ನ ಆಡ್ ಮಾಡಿದ್ದಲ್ಲಿ ಇನ್ ಕೇಸ್ ಅವರ ಹತ್ರ ದುಡ್ಡು ಇಲ್ಲ ಅಂತ ಅಂದ್ರೆ ನಾವು ಆ ಕ್ಷಣದಲ್ಲಿ ಫೋನ್ ಗೂ ಕೂಡ ಸಿಕ್ತಿಲ್ಲ ಅಂತ ಅಂದ್ರೆ ಅವರು ನಮ್ಮ ಅಕೌಂಟ್ ಅನ್ನ ಯೂಸ್ ಮಾಡ್ಕೊಂಡು ಬೇಕಾಗಿರುವಂತಹ ಹಣವನ್ನ ಪೇ ಮಾಡಬಹುದು ಸೊ ಇದೆ ಎಮರ್ಜೆನ್ಸಿಯಲ್ಲಿ UPI ಸರ್ಕಲ್ ಇಂದ ನಮಗೆ ಆಗುವಂತಹ ಒಂದು ಉಪಯೋಗ.

UPI Payment Circle Permission

ಪರ್ಮಿಷನ್ ಯಾವ ರೀತಿ ಸಿಗುತ್ತೆ ಇನ್ ಕೇಸ್ UPI ಸರ್ಕಲ್ ಅಲ್ಲಿ ನನ್ನ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಮೆಂಬರ್ಸ್ ನಾನು ಆಡ್ ಮಾಡಿರ್ತೀನಿ ಕಡೆ ಪಕ್ಷ ಅವರೇನಾದ್ರು ಬೇಕಾದ ಹಾಗೆ ಯೂಸ್ ಮಾಡ್ಕೊಂಡ್ರೆ ಏನ್ ಮಾಡೋದು ಅಂತ ನೀವು ಯೋಚನೆ ಮಾಡ್ತಿದ್ರೆ ಡೋಂಟ್ ವರಿ ಇಲ್ಲಿ ನೀವು Limit ಅನ್ನ ಸೆಟ್ ಮಾಡಿಕೊಳ್ಳಬಹುದು ಹಾಗೆ ಆಕ್ಸೆಸ್ ನು ಕೂಡ ಬ್ಲಾಕ್ ಮಾಡಬಹುದು ಮತ್ತೆ ನಿಮ್ಮ ಪರ್ಮಿಷನ್ ಇಲ್ಲದೆ ಯಾರು ಸಹ ನಿಮ್ಮ ಅಕೌಂಟ್ ಅನ್ನ ಯೂಸ್ ಮಾಡದೆ ಇರೋ ರೀತಿ ನೀವು ರಿಸ್ಟ್ರಿಕ್ಷನ್ ಸಹ ಮಾಡಬಹುದು.

ನಿಮ್ಮ ಪರ್ಮಿಷನ್ ಇಲ್ಲದೆ UPI ಸರ್ಕಲ್ ಅಲ್ಲಿ ಯಾರು ಸಹ ದುಡ್ಡನ್ನ ಟ್ರಾನ್ಸ್ಫರ್ ಮಾಡ್ಕೊಳೋದಕ್ಕೆ ಆಗೋದಿಲ್ಲ ಯಾಕೆ ಅಂತ ಅಂದ್ರೆ ಆಲ್ರೆಡಿ ನಿಮಗೆ ಬೇಕಾಗಿರುವಂತಹ ಫ್ಯಾಮಿಲಿ ಮೆಂಬರ್ಸ್ ಗೆ ಮತ್ತೆ ಫ್ರೆಂಡ್ಸ್ ಗೆ ನೀವು ಒಂದು ಲಿಮಿಟ್ ಅನ್ನ ಸೆಟ್ ಮಾಡಿರ್ತೀರಾ ಇನ್ ಕೇಸ್ ಆ ಲಿಮಿಟ್ ಅನ್ನ ಮೀರಿ ಅವರು ಟ್ರಾನ್ಸ್ಫರ್ ಮಾಡ್ತಿದ್ದಾರೆ ಅಂತ ಅಂದ್ರೆ ಅವರಿಗೆ ನೀವು ಕೊಟ್ಟಿರುವಂತಹ ಆಕ್ಸೆಸ್ ಅನ್ನು ಸಹ ಬ್ಲಾಕ್ ಮಾಡಬಹುದು.

2 Option In UPI Circle

1. Partial Delegation

ಪಾರ್ಷಿಯಲ್ ಡೆಲಿಗೇಶನ್ ಅಂದ್ರೆ ಯಾರಾದ್ರೂ ನಿಮ್ಮ ಅಕೌಂಟ್ ಇಂದ ದುಡ್ಡನ್ನ ಟ್ರಾನ್ಸ್ಫರ್ ಮಾಡಿಕೊಳ್ಳಬೇಕು ಅಂತ ಅಂದ್ರೆ ನಿಮಗೆ ನೋಟಿಫಿಕೇಶನ್ ಬರುತ್ತೆ ಅದನ್ನ ನೀವು ಅಪ್ರೂವ್ ಮಾಡಿದ್ರೆ ಮಾತ್ರ ನಿಮ್ಮ ಅಕೌಂಟ್ ಇಂದ ಅವರ ಅಕೌಂಟ್ ಗೆ ದುಡ್ಡು ಟ್ರಾನ್ಸ್ಫರ್ ಆಗುತ್ತೆ.

ಉದಾಹರಣೆಗೆ: ನಿಮ್ಮ ಹೆಂಡತಿ ನಿಮ್ಮ UPI ಸರ್ಕಲ್ ಅನ್ನ ಯೂಸ್ ಮಾಡ್ಕೊಂಡು ಪೇ ಮಾಡಬೇಕು ಅಂತ ಅನ್ಕೊಂಡಿರ್ತಾರೆ ಸೋ ನಿಮಗೆ ಒಂದು ನೋಟಿಫಿಕೇಶನ್ ಬರುತ್ತೆ ಅದನ್ನ ನೀವು ಅಪ್ರೂವ್ ಮಾಡಿದ್ರೆ ಮಾತ್ರ ಆ ಅಕೌಂಟಿಗೆ ನಿಮ್ಮ ಅಕೌಂಟ್ ಇಂದ ದುಡ್ಡು ಟ್ರಾನ್ಸ್ಫರ್ ಆಗುತ್ತೆ ಅಂಡ್ ಮೋಸ್ಟ್ ಇಂಪಾರ್ಟೆಂಟ್ಲಿ ಇಲ್ಲಿ ನೀವು ಲಿಮಿಟ್ ಸಹ ಫಿಕ್ಸ್ ಮಾಡಬಹುದು.

ಈ ತಿಂಗಳಿಗೆ 15,000 ಲಿಮಿಟ್ ಇದೆ ಮತ್ತೆ ಸಿಂಗಲ್ ಪೇಮೆಂಟ್ ನಲ್ಲಿ ನೀವು 5000 ತನಕ ಪೇ ಮಾಡಬಹುದು

2. Full Delegation

ಫುಲ್ ಡೆಲಿಗೇಶನ್ ಫುಲ್ ಡೆಲಿಗೇಶನ್ ಅಂತ ಅಂದ್ರೆ ನಿಮ್ಮ ಅಕೌಂಟ್ ಗೆ ನೀವು ಫುಲ್ ಪರ್ಮಿಷನ್ ಅನ್ನ ಕೊಟ್ಟಿರ್ತೀರಾ ಯಾವುದೇ ರೀತಿಯಾದಂತಹ ಅಪ್ರೂವಲ್ ಅವಶ್ಯಕತೆ ಇಲ್ಲ ಸೋ ಬೇಸಿಕಲಿ ಯುಪಿಐ ಸರ್ಕಲ್ ಹೇಗೆ ಮಾಡಬಹುದು ಸದ್ಯಕ್ಕೆ UPI ಸರ್ಕಲ್ ಅಂತ ಹೊಸ ಸರ್ವಿಸ್ ಏನಿದೆ ಇದು Google ಪೇ ಮತ್ತೆ ಬೀಮ್ ಆಪ್ ಆಪ್ ಗಳಲ್ಲಿ ಮಾತ್ರ ಇದೆ ನೀವು ಗೂಗಲ್ ಪೇ ಓಪನ್ ಮಾಡಿದ ತಕ್ಷಣ ನಿಮಗೆ ಯುಪಿಐ ಸರ್ಕಲ್ ಅಂತ ಒಂದು ಆಪ್ಷನ್ ಕಾಣುತ್ತೆ ಅದನ್ನ ಕ್ಲಿಕ್ ಮಾಡಿ ಅದಾದ್ಮೇಲೆ ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಮೆಂಬರ್ಸ್ ನ ನೀವು ಆ ಯುಪಿಐ ಸರ್ಕಲ್ ಅಲ್ಲಿ ಆಡ್ ಮಾಡಬಹುದು.

ನೀವು ಯಾರನ್ನ ಯುಪಿಐ ಸರ್ಕಲ್ ಅಲ್ಲಿ ಆಡ್ ಮಾಡಬೇಕು ಅಂತ ಅನ್ಕೊಂಡಿರ್ತೀರೋ ಅವರ ನಂಬರ್ ನಿಮ್ಮ ಫೋನ್ ನಲ್ಲಿ ಸೇವ್ ಆಗಿರಬೇಕು. ಯುಪಿಐ ಸರ್ಕಲ್ ಆಪ್ಷನ್ ಅಲ್ಲಿ ಒಬ್ಬೊಬ್ಬರ ಫೋನ್ ನಂಬರನ್ನ ಸರ್ಚ್ ಮಾಡಿ ಆಡ್ ಮಾಡ್ತಾ ಹೋಗ್ಬೇಕು ಇಷ್ಟು ದಿನ ಹೊರಗಡೆ ಹೋದಾಗ ನಮ್ಮ ಹತ್ರ ದುಡ್ಡು ಏನಾದ್ರು ಇಲ್ಲ ಅಂತ ಅಂದ್ರೆ ಸ್ಕ್ಯಾನ್ ಮಾಡಬೇಕಾದರೆ.

ಆ ಸ್ಕ್ಯಾನರ್ ಏನಿರುತ್ತೆ ಅದನ್ನ ತಗೊಂಡು ನಮ್ಮ ಫ್ಯಾಮಿಲಿ ಮೆಂಬರ್ಸ್ ಗೆ ಕಳಿಸ್ತಿದ್ವಿ ಇಮ್ಮಿಡಿಯೇಟ್ಲಿ ಅವರು ಅದನ್ನ ಸ್ಕ್ಯಾನ್ ಮಾಡಿದ ತಕ್ಷಣ ಈ ಒಂದು ಅಂಗಡಿಗಳಿಗೆ ಅಥವಾ ಶಾಪಿಂಗ್ ಸೆಂಟರ್ ಗೆ ದುಡ್ಡು ಬರ್ತಿತ್ತು ಈ ತಲೆನೋವು ಬೇಡ ಅಂತಾನೆ ಇನ್ನು ಮೇಲೆ UPI ಸರ್ಕಲ್ ಇಂದ ನೀವು ಈಸಿಯಾಗಿ ದುಡ್ಡನ್ನ ಪೇ ಮಾಡಬಹುದು ಬಟ್ ಒಂದು ವಿಷಯ ನೆನಪಲ್ಲಿ ಇರಲಿ ನೀವು ಯಾರನ್ನ UPI ಸರ್ಕಲ್ ಗೆ ಆಡ್ ಮಾಡ್ತೀರೋ ಅವರ ಮೇಲೆ ನಿಮಗೆ ಪೂರ್ತಿ ನಂಬಿಕೆ ಇರಲಿ ಅವರು ನಿಮಗೆ ಫ್ಯಾಮಿಲಿ ಮೆಂಬರ್ಸ್ ಆಗಿರಲಿ ಅಥವಾ ತುಂಬಾ ಪರಿಚಯ ಇದ್ರೆ ಮಾತ್ರ UPI ಸರ್ಕಲ್ ಗೆ ಆಡ್ ಮಾಡಿ ಇಲ್ಲ ಅಂತ ಅಂದ್ರೆ ನಿಮ್ಮ ದುಡ್ಡು ಮಿಸ್ ಯೂಸ್ ಆಗುವಂತಹ ಚಾನ್ಸಸ್ ಗಳು ಬೇಕಾದಷ್ಟು ಇರುತ್ತೆ.

ಇದನ್ನೂ ಓದಿ: FASTag 2024 ಹೊಸ ನಿಯಮಗಳು!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment