Mudra Loan ಸ್ಕೀಮ್ ಉಪಯೋಗಗಳು!!

October 22, 2024 6:26 AM
Mudra Loan ಸ್ಕೀಮ್ ಉಪಯೋಗಗಳು!!

ಎಲ್ಲರಿಗೂ ನಮಸ್ಕಾರ, 2024 ಹಾಗೂ 25ರ Budget ನಲ್ಲಿ Industries ಹಾಗೂ Start Up ಗಳಿಗೆ ಹೆಚ್ಚಿನ ಗಮನವನ್ನ ಕೊಟ್ಟಿದ್ದಾರೆ ಉದ್ಯೋಗ ಸೃಷ್ಟಿ, ಸ್ಕಿಲ್ ಡೆವಲಪ್ಮೆಂಟ್ ಇದೆಲ್ಲದಕ್ಕೂ ಕೂಡ ಹೆಚ್ಚಿನ ಪ್ರೋತ್ಸಾಹನೆ ಕೊಟ್ಟಿದ್ದಾರೆ ಅಂತ ಹೇಳಬಹುದು ನೀವೇನಾದ್ರು ನಿಮ್ಮದೇ ಆದ Business ನ ಸ್ಟಾರ್ಟ್ ಮಾಡಬೇಕು ಅಂತ ಅನ್ಕೊಂಡಿದ್ದೀರಾ ಹಾಗಿದ್ರೆ ಸರ್ಕಾರ ನಿಮಗೆ ದೊಡ್ಡ ಗಿಫ್ಟ್ ಅನ್ನೇ ಕೊಟ್ಟಿದೆ ಅಂತ ಹೇಳಬಹುದು.

ಮುಂಚೆ ಎಲ್ಲಾ 10 ಲಕ್ಷಕ್ಕೆ ಇದ್ದಂತಹ ಮುದ್ರಾ ಲೋನ್ ನ ಲಿಮಿಟ್ ಬರೋಬರಿ 20 ಲಕ್ಷಕ್ಕೆ ಜಾಸ್ತಿ ಆಗಿದೆ. ಹಾಗಿದ್ರೆ ಈ Mudra Loan ಯಾರಿಗೆಲ್ಲ ಸಿಗುತ್ತೆ? ಎಷ್ಟು ಸಿಗುತ್ತೆ? ಈ ಮುದ್ರಾ ಲೋನ್ ಅನ್ನ ಅಪ್ಲೈ ಮಾಡ್ಬೇಕಾದ್ರೆ ನಾವು ಯಾವ ಕ್ಯಾಟಗರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು? ಹೇಗೆ ಅಪ್ಲೈ ಮಾಡಬಹುದು? ಅನ್ನೋದರ ಬಗ್ಗೆ ಫುಲ್ ಡೀಟೇಲ್ಸ್ ನ ನಾನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. 

ಯಾಕೆ Mudra Loan ಬಳಸಬೇಕು

ನೀವೇನಾದ್ರು ಹೊಸ Business ನ ಸ್ಟಾರ್ಟ್ ಮಾಡಬೇಕು ಅನ್ನೋ ಒಂದು ಯೋಚನೆಯಲ್ಲಿ ಇದ್ದೀರಾ ಅಂತ ಅಂದ್ರೆ ಮುದ್ರಾ ಲೋನ್ ಬಗ್ಗೆ ಅಪ್ಡೇಟ್ ನ ತಪ್ಪದೇ ತಿಳಿದುಕೊಳ್ಳಿ ಹೌದು 10 ಲಕ್ಷ ಇಂದ ಬರೋಬರಿ ಲಿಮಿಟ್ ನ 20 ಲಕ್ಷ ವರೆಗೂ ಕೂಡ ಜಾಸ್ತಿ ಮಾಡಿದ್ದಾರೆ ಇದು ಅತೀ ಕಡಿಮೆ ಇಂಟರೆಸ್ಟ್ ಅಲ್ಲಿ ಕೊಡುವಂತಹ ಒಂದು ಲೋನ್ ಅಂತ ಹೇಳಬಹುದು ಇದು ಸರ್ಕಾರ ಯಾಕೆ ಜಾರಿಗೆ ತಗೊಂಡು ಬಂತು ಅಂತ ಅಂದ್ರೆ ನಮ್ಮ ದೇಶದಲ್ಲಿ ಇರುವಂತಹ ಸಣ್ಣ ಪುಟ್ಟ ಕೈಗಾರಿಕೆಗಳನ್ನ ಅಭಿವೃದ್ಧಿ ಮಾಡಿಸೋದರ ಜೊತೆಗೆ ನಮ್ಮ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಏನಿರುತ್ತೆ ಇದು ಕೂಡ ಬರೋಬ್ಬರಿ ಬೆಳಿತಾನೆ ಇರಬೇಕು ಅನ್ನೋ ಒಂದೇ ಪ್ಲಾನ್ ಇಂದ ನಮ್ಮ ಸರ್ಕಾರ ಮುದ್ರಾ ಲೋನ್ ಅನ್ನ ಜಾರಿಗೆ ತಗೊಂಡು ಬಂತು ತಮ್ಮದೇ ಆದ ಸ್ವಂತ Business ಅನ್ನ ಸ್ಟಾರ್ಟ್ ಮಾಡಿ ಜೀವನದಲ್ಲಿ ಮುಂದೆ ಬರಬೇಕು ಅನ್ನೋವರಿಗೆಲ್ಲ Mudra Loan ಒಂತರ ಇನ್ಸ್ಪಿರೇಷನ್ ಆದಂಗೆ ಆಯ್ತು.

ಬರೋಬರಿ 69% ಅಂದ್ರೆ 4496 ಕ್ರೋರ್ಸ್ ಅಮೌಂಟ್ ಅನ್ನ ಈ ಮುದ್ರಾ ಲೋನ್ ಕ್ಯಾಟಗರಿಯಲ್ಲಿ ಸರ್ಕಾರ ಸ್ಯಾಂಕ್ಷನ್ ಮಾಡಿದೆ. Mudra Loan ಅನ್ನ 2015 ನಲ್ಲೇ ಲಾಂಚ್ ಮಾಡಿದ್ರು ಇನ್ ಕೇಸ್ ನಮ್ಮ ಮನೆಯಲ್ಲಿ ನಾನೇನಾದ್ರು ಬಿಸಿನೆಸ್ ಸ್ಟಾರ್ಟ್ ಮಾಡಬೇಕು ಅಂತ ಅನ್ಕೊಂಡಿದ್ರೆ ನನ್ನ ಹೆಸರಲ್ಲಿ ಮುದ್ರಾ ಲೋನ್ ಅನ್ನ ತಗೊಳ್ಬಹುದು ಅತಿ ಕಡಿಮೆ Intrest ಅಲ್ಲಿ ಅಥವಾ ನನ್ನ ಮದುವೆ ಆಗಿರುತ್ತೆ ಅಂತ ಅಂದುಕೊಳ್ಳಿ ಆಗ ನನ್ನ ಗಂಡ ಆದವರು ಏನು ಮಾಡಬಹುದು ಅಂತ ಅಂದ್ರೆ ಅವರ ಹೆಂಡತಿ ಹೆಸರಲ್ಲಿ ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು.

Where Can We Get Mudra Loan

Where Can We Get Mudra Loan

Over All ಸ್ಟ್ರಕ್ಚರ್ ನ ನಾವು ನೋಡಿದಾಗ ನಿಮಗೆ ಬರೋಬರಿ 21 ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್ ಅಲ್ಲಿ ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು 36 ರೀಜನಲ್ ರೂರಲ್ ಬ್ಯಾಂಕ್ಸ್ ಅಲ್ಲೂ ಸಹ ನೀವು ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು ಹಾಗೇನೇ 18 ಪ್ರೈವೇಟ್ ಸೆಕ್ಟರ್ ಬ್ಯಾಂಕ್ಸ್ ಗಳಲ್ಲೂ ಕೂಡ ನೀವು ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು ಜೊತೆಗೆ 35 Non ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿ.

NBFC ಅಂತ ಏನು ಹೇಳ್ತಿವಿ ಅಲ್ಲೂ ಸಹ ಹೋಗಿ ನಿಮ್ಮ ಡಾಕ್ಯುಮೆಂಟ್ಸ್ ಏನಿರುತ್ತೆ ಅದನ್ನ ಪ್ರೊವೈಡ್ ಮಾಡಿದ್ರೆ ನೀವು ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದಾಗುತ್ತೆ ಜೊತೆಗೆ 47 ಎನ್ ಬಿಎಫ್ಸಿ ಇದನ್ನ ನಾವು ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕೋಆಪರೇಷನ್ ಅಂತ ಹೇಳ್ತಿವಿ ಇಲ್ಲೂ ಸಹ ನೀವು ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು ಹಾಗೆ 15 ಕೋ ಆಪರೇಟಿವ್ ಬ್ಯಾಂಕ್ಸ್ ಅಲ್ಲೂ ಸಹ ನೀವು ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು.

6 ಸ್ಮಾಲ್ ಫೈನಾನ್ಸ್ ಬ್ಯಾಂಕ್ಸ್ ಅಂತ ನಾವು ಏನು ಹೇಳ್ತಿವಿ ಅದರಲ್ಲೂ ಸಹ ನೀವು ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದಾಗುತ್ತೆ.

What Are The 3 Categories in Mudra Loan

  • ಶಿಶು
  • ಕಿಶೋರ
  • ತರುಣ

ಈ ಶಿಶು ಅನ್ನೋ ಒಂದು ಕ್ಯಾಟಗರಿಗೆ ಬರೋಬರಿ 60% ಅಷ್ಟು ಲೋನ್ ಅನ್ನ ಸ್ಯಾಂಕ್ಷನ್ ಮಾಡಲಾಗುತ್ತೆ.

ಈ ಕಿಶೋರ ಮತ್ತೆ ತರುಣ ಅಂತ ನಾವು ಏನು ಹೇಳ್ತಿವಿ ಇದಕ್ಕೆ 40% ಅಷ್ಟು ಲೋನ್ ಅನ್ನ ಸ್ಯಾಂಕ್ಷನ್ ಮಾಡ್ತಾರೆ.

ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಸ್ವಂತವಾದ Business ಅನ್ನ ಸ್ಟಾರ್ಟ್ ಮಾಡಬೇಕು ಹಾಗೆ ಹ್ಯೂಜ್ ಇನ್ವೆಸ್ಟ್ಮೆಂಟ್ ಮಾಡಿ ನನ್ನದೇ ಆದ ಒಂದು ಪುಟ್ಟ ಗೂಡನ್ನ ಕಟ್ಟಿಕೊಳ್ಳಬೇಕು ಅಂತ ಯಾವಾಗ್ಲೂ ಕೂಡ ಕನಸನ್ನ ಕಾಣ್ತಿರ್ತಾರೆ ಅದಕ್ಕೆ ಯೂಸ್ ಆಗ್ಲಿ ಅಂತಾನೆ ಈ ಮುದ್ರಾ ಲೋನ್ ಅನ್ನ ಜಾರಿಗೆ ತಗೊಂಡು ಬಂದಿರೋದು.

ಯಾವ Business ಗೆ ಮುದ್ರಾ ಲೋನ್ ಪಡಿಬಹುದು

ಕಮರ್ಷಿಯಲ್ ವೆಹಿಕಲ್ ಲೋನ್: ಟ್ರ್ಯಾಕ್ಟರ್ ಗಳು, ಪವರ್ ಟ್ರಿಲ್ಲರ್ ಗಳು, ಟ್ರ್ಯಾಕ್ಟರ್ ಟ್ರಾಲಿಗಳು, ಕಮರ್ಷಿಯಲ್ ಪರ್ಪಸ್ ಗೆ ನಾವು ಬಳಸುವಂತಹ ಟೂ ವೀಲರ್ ವಾಹನಗಳನ್ನು ಸಹ ನಾವು ಈ ಸ್ಕೀಮ್ ಅಲ್ಲಿ ಪಡಿಬಹುದು

ಟ್ರಾನ್ಸ್ಪೋರ್ಟ್ ವೆಹಿಕಲ್ ಲೋನ್: ಆಟೋ ರಿಕ್ಷೆಗಳು, ದ್ವಿಚಕ್ರ ವಾಹನಗಳು ಈ ಸಣ್ಣ ಪುಟ್ಟ ಕೈಗಾರಿಕೆಗಳಿಗೆ ಬಳಸುವಂತಹ ಹಾಗೆ ಸರಕುಗಳನ್ನು ನಾವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನಾವು ಕಳಿಸುತ್ತಿದ್ದೇವೆ ಅಂತಂದ್ರೆ ಈ ಟ್ರಾನ್ಸ್ಪೋರ್ಟೇಷನ್ ಗೆ ಬೇಕಾಗಿರುವಂತಹ ಟ್ಯಾಕ್ಸಿಗಳಾಗಿರಬಹುದು, ಈ ರಿಕ್ಷೆಗಳಾಗಿರಬಹುದು ಇದನ್ನ ನಾವು ಈ ಸ್ಕೀಮ್ ಅಲ್ಲಿ ಪಡೆದುಕೊಳ್ಳಬಹುದು.

ವರ್ಕಿಂಗ್ ಕ್ಯಾಪಿಟಲ್ ಲೋನ್: ಸಲೂನ್ಗಳು ಜಿಮ್ನಾಶಿಯಂ, ಬ್ಯೂಟಿ ಪಾರ್ಲರ್, ಟೈಲರಿಂಗ್ ಅಂಗಡಿಗಳು, ಡಿಸೈನರ್ ಬೊಟಿಕ್ ಡ್ರೈ ಕ್ಲೀನಿಂಗ್, ಮೆಡಿಸಿನ್ ಶಾಪ್ ಗಳು, ಸೈಕಲ್ ಮತ್ತು ಮೋಟಾರ್ ಸೈಕಲ್ ರಿಪೇರಿ ಗ್ಯಾರೇಜ್ ಇದನ್ನೆಲ್ಲ ನಡೆಸಿರುವಂತಹ ಈ ಸಣ್ಣ ಪುಟ್ಟ ಕೈಗಾರಿಕೆಗಳು ಏನಿರುತ್ತೆ ಇದನ್ನು ಸಹ ನಾವು ಈ ಕ್ಯಾಟಗರಿಯಲ್ಲಿ ಲೋನ್ ಅನ್ನ ತಗೊಳ್ಬಹುದು

ಲೋನ್ ಫಾರ್ ಪ್ಲಾಂಟ್ ಅಂಡ್ ಮೆಷಿನರಿ: ಉಪ್ಪಿನಕಾಯಿ ತಯಾರಿಕೆ, ಪಾಪಡ್ ತಯಾರಿಕೆ. ಸಣ್ಣ ಪುಟ್ಟ ಸಿಹಿ ತಿಂಡಿಗಳ ಅಂಗಡಿಗಳು, ಜಾಮ್ ತಯಾರಿಕೆ, ಸ್ಮಾಲ್ ಸ್ಕೇಲ್ ಫುಡ್ ಸರ್ವಿಸ್ ಡೈಲಿ ಫುಡ್ ಪ್ರಾಡಕ್ಟ್ ಮತ್ತೆ ಕ್ಯಾಂಟೀನ್ ಗಳು

ಐಸ್ ತಯಾರಿಕೆ ಮತ್ತು ಐಸ್ ಕ್ರೀಮ್ ಘಟಕಗಳು: ಈ ಕೋಲ್ಡ್ ಸ್ಟೋರೇಜ್ ಗಳನ್ನ ಮಾಡಿರುವಂತಹ ಸ್ಮಾಲ್ ಬಿಸಿನೆಸ್ ಗಳು ಬ್ರೆಡ್ ಮತ್ತೆ ಬನ್ ತಯಾರಿಕೆ, ಬಿಸಿನೆಸ್ ಅನ್ನ ತಯಾರಿಸುವಂತಹ ಫ್ಯಾಕ್ಟರಿಗಳು ಇವರೆಲ್ಲರೂ ಸಹ ಈ ಕ್ಯಾಟಗರಿಯಲ್ಲಿ ಮುದ್ರಾ ಲೋನ್ ಅನ್ನ ಪಡೆದುಕೊಳ್ಳಬಹುದಾಗುತ್ತೆ.

ಕೃಷಿಗೆ ಸಂಬಂಧಪಟ್ಟಂತಹ ಚಟುವಟಿಕೆಗಳ Loan

ಉದಾಹರಣೆಗೆ: ನಾನು ಜೇನು ಸಾಕಾಣಿಕೆ ಮಾಡಬೇಕು ಅಂತ ಅನ್ಕೊಂಡಿರ್ತೀನಿ ಅದಕ್ಕೆ ಸಂಬಂಧಪಟ್ಟಂತಹ ಬಾಕ್ಸ್ ಗಳನ್ನ ಪರ್ಚೇಸ್ ಮಾಡೋದಕ್ಕೆ ಕೋಳಿ ಸಾಕಾಣಿಕೆ ಏನಾದ್ರು ಮಾಡಬೇಕಾದರೆ ಅದಕ್ಕೆ ಬಳಸುವಂತಹ ಫೀಡ್ ಮತ್ತೆ ಮಿಷಿನರಿಗಳು, ಅಗ್ರಿಕಲ್ಚರ್ ಇಂಡಸ್ಟ್ರಿ ಮೀನುಗಾರಿಕೆಯಲ್ಲಿ ಬಳಸಲಾಗುವಂತಹ ಫುಡ್ ಆಗಿರಬಹುದು ಡೈರಿ ಫುಡ್ ಮೆಡಿಸಿನ್ಸ್ ಗಳು ಫುಡ್ ಪ್ರೋಸೆಸ್ಸಿಂಗ್ ಪ್ರಾಡಕ್ಟ್ಸ್ ಗಳು ಕೂಡ ಹೌದು. ಈ ಎಲ್ಲಾ ಸರ್ವಿಸ್ ಅನ್ನ ಯಾವುದು ಕೊಡುತ್ತೆ ಇದಕ್ಕೂ ಸಹ ನೀವು ಮುದ್ರಾ ಲೋನ್ ಕ್ಯಾಟಗರಿಯಲ್ಲಿ ಲೋನ್ ಅನ್ನ ಅಪ್ಲೈ ಮಾಡಬಹುದು.

Business Eligible For Mudra Loan

  • Business ಲೋನ್ಸ್ ಫಾರ್ ಟ್ರೇಡರ್ಸ್ ಅಂಡ್ ಶಾಪ್
  • ಕೀಪರ್ಸ್ ಹ್ಯಾಂಡ್ ಲೂಮ್
  • ಖಾದಿ ಪವರ್ ಲೂಮ್
  • ಹ್ಯಾಂಡ್ ಡೈಯಿಂಗ್ ಮತ್ತು ಪ್ರಿಂಟಿಂಗ್ ಕಸೂತಿ
  • ಹ್ಯಾಂಡ್ ಮೇಡ್ ವಸ್ತುಗಳು
  • ಕಂಪ್ಯೂಟರೈಸ್ಡ್ ಡಿಸೈನ್ಸ್
  • ಕಾಟನ್ ಜಿನ್ನಿಂಗ್
  • ಹೊಲಿಗೆ ಮತ್ತು ಟೆಕ್ಸ್ಟೈಲ್
  • Non ಗವರ್ಮೆಂಟ್ ಪ್ರಾಡಕ್ಟ್ಸ್
  • ವೆಹಿಕಲ್ ಆಕ್ಸೆಸರೀಸ್
  • ಬ್ಯಾಗ್ಸ್, ಫರ್ನಿಶಿಂಗ್ ಆಕ್ಸೆಸರೀಸ್

ಇವರೆಲ್ಲರೂ ಸಹ ಮುದ್ರಾ ಲೋನ್ ಗೆ ಅಪ್ಲೈ ಮಾಡೋದಕ್ಕೆ ಅರ್ಹರಾಗಿರುತ್ತಾರೆ.

ಯಾರಿಗೆ ಮುದ್ರಾ ಲೋನ್ ಅಪ್ಲೈ ಆಗುವುದಿಲ್ಲ

ಯಾರೆಲ್ಲ ಕೃಷಿ ಮಾಡ್ತಿರ್ತಾರೋ ಅಂದ್ರೆ ಅಗ್ರಿಕಲ್ಚರ್ ಫೀಲ್ಡ್ ಅಲ್ಲಿ ಯಾರು ಇರ್ತಾರೋ ಅವರು ಖಂಡಿತವಾಗ್ಲೂ ಈ ಲೋನ್ ಅಪ್ಲಿಕೇಬಲ್ ಆಗೋದಿಲ್ಲ ಕೃಷಿ ಏತರ ವಲಯ.

ಯಾರಿಗೆ ಮುದ್ರಾ ಲೋನ್ ಅಪ್ಲೈ ಆಗುತ್ತದೆ

ಮುದ್ರ ಲೋನ್ ಯಾರಿಗೆ ಅಪ್ಲೈ ಆಗುತ್ತೆ ಅಂತಂದ್ರೆ ಯಾರು ಕೃಷಿಗೆ ಸಂಬಂಧಪಡದೆ ಬೇರೆ ಬೇರೆ ಸೆಕ್ಟರ್ ಗಳಲ್ಲಿ ಕೆಲಸ ಮಾಡ್ತಿರ್ತಾರೋ ಅವರಿಗೆ ಈ ಒಂದು ಕ್ಯಾಟಗರಿಯಲ್ಲಿ ನೀವು ಲೋನ್ ಅನ್ನ ಅಪ್ಲೈ ಮಾಡಬಹುದು ಮ್ಯಾನುಫ್ಯಾಕ್ಚರಿಂಗ್ ಟ್ರೇಡಿಂಗ್ ಹಾಗೂ ಸರ್ವಿಸ್ ಸೆಕ್ಟರ್ ಗಳಲ್ಲಿ ಯಾರೆಲ್ಲ Business ಅನ್ನ ಸ್ಟಾರ್ಟ್ ಮಾಡಿರ್ತೀರೋ ನಿಮ್ಮ ಒಂದು Business ಅನ್ನ ಎಕ್ಸ್ಪ್ಯಾಂಡ್ ಮಾಡಬೇಕು ಅಂತ ಅನ್ಕೊಂಡಿದ್ರೆ ನಿಮಗೆ ಖಂಡಿತವಾಗ್ಲೂ ಮುದ್ರಾ ಲೋನ್ ನಲ್ಲಿ 20 ಲಕ್ಷ ಲೋನ್ ತಗೊಳ್ಳುವಂತಹ ಅರ್ಹತೆ ಖಂಡಿತವಾಗ್ಲೂ ಇರುತ್ತೆ.

ಯಾವ ರೀತಿ Mudra ಲೋನ್ ಅನ್ನ ಸ್ಯಾಂಕ್ಷನ್ ಮಾಡ್ತಾರೆ

ಯಾವ ರೀತಿ Mudra ಲೋನ್ ಅನ್ನ ಸ್ಯಾಂಕ್ಷನ್ ಮಾಡ್ತಾರೆ

1. ಶಿಶು ಕ್ಯಾಟಗರಿ:

ನಿಮಗೆ 50,000 ವರೆಗೂ ಲೋನ್ ಸಿಗುತ್ತೆ. ಈ ಸಣ್ಣ ಪ್ರಮಾಣದ ಬಿಸಿನೆಸ್ ಗಳನ್ನ ನೀವು ಸ್ಟಾರ್ಟ್ ಮಾಡಬೇಕು ಅಂತ ಅನ್ಕೊಂಡಿದ್ರೆ ನಿಮಗೆ ನಿಮ್ಮ ಇನ್ವೆಸ್ಟ್ಮೆಂಟ್ 1 ಲಕ್ಷ ವರೆಗೂ ಹೋಗುತ್ತೆ ಅಂತ ಅಂದುಕೊಳ್ಳೋಣ ಆಗ ನೀವು 50,000 ವರೆಗೂ ಸಹ ಈ ಒಂದು ಕ್ಯಾಟಗರಿಯಲ್ಲಿ ನೀವು ಲೋನ್ ಅನ್ನ ತಗೊಳ್ಳಬಹುದಾಗುತ್ತೆ.

2. ಕಿಶೋರ ಕ್ಯಾಟಗರಿ:

ನಿಮಗೆ 50 ಸಾವಿರ ದಿಂದ 5 ಲಕ್ಷ ವರೆಗೂ ಕೂಡ ಲೋನ್ ಸಿಗುತ್ತೆ ನಿಮ್ಮದು ಈಗ ಆಲ್ರೆಡಿ ಬಿಸಿನೆಸ್ ಇದೆ ಅಂತ ಅಂದುಕೊಳ್ಳೋಣ ಅದನ್ನ ನೀವು ದೊಡ್ಡದಾಗಿ ಎಕ್ಸ್ಪೆಂಡ್ ಮಾಡಬೇಕು ಅಂತ ಅನ್ಕೊಂಡಿರ್ತೀರಾ ಅದಕ್ಕೆ ಬೇಕಾದಂತಹ ಮೆಷಿನರಿಸ್ ಗಳನ್ನ ಪರ್ಚೇಸ್ ಮಾಡಬೇಕು ಎಕ್ವಿಪ್ಮೆಂಟ್ಸ್ ಗಳು ಬೇಕಾಗುತ್ತೆ ಮತ್ತೆ ಮ್ಯಾನ್ ಪವರ್ ಬೇಕಾಗುತ್ತೆ. ಇಂತಹ ಸಂದರ್ಭದಲ್ಲಿ ನೀವು ಈ ಕಿಶೋರ ಕ್ಯಾಟಗರಿಯಲ್ಲಿ 50,000 ದಿಂದ 5 ಲಕ್ಷ ವರೆಗೂ ಸಹ ಮುದ್ರಾ ಲೋನ್ ಗೆ ಅಪ್ಲೈ ಮಾಡಬಹುದು.

3. ತರುಣ ಕ್ಯಾಟಗರಿ:

ನಿಮಗೆ 5 ಲಕ್ಷಕ್ಕಿಂತ ಅಧಿಕವಾದ ಅಮೌಂಟ್ ಅನ್ನ ಕೊಡ್ತಾರೆ ಅಂದ್ರೆ ಬರೋಬರಿ 5 ಲಕ್ಷದಿಂದ 10 ಲಕ್ಷ ವರೆಗೂ ಸಹ ನೀವಿಲ್ಲಿ ಲೋನ್ ಅನ್ನ ತಗೊಳ್ಳಬಹುದಾಗುತ್ತೆ ಇಲ್ಲಿ ನೀವು ಆಲ್ರೆಡಿ ಲೋನ್ ಅನ್ನ ತಗೊಂಡಿರ್ತೀರಾ ನಿಮ್ಮ ಬಿಸಿನೆಸ್ ಚೆನ್ನಾಗಿ ವರ್ಕ್ ಆಗಿ ಒಂದು ಲೆವೆಲ್ ಗೆ ಸೆಟ್ ಆಗಿರುತ್ತೆ ಅಂತ ಅಂದುಕೊಳ್ಳೋಣ ಅಂತ ಸಂದರ್ಭದಲ್ಲಿ ನೀವು ತಗೊಂಡಿರುವಂತಹ ಲೋನ್ ಅನ್ನ ರಿಪೇಮೆಂಟ್ ಸಹ ಸರಿಯಾದ ಟೈಮ್ಗೆ ಮಾಡಿರ್ತೀರಾ ಇವಾಗ ಏನಾಗುತ್ತೆ ಅಂತ ಅಂದ್ರೆ ನೀವು 5 ಲಕ್ಷದಿಂದ 10 ಲಕ್ಷ ವರೆಗೂ ಲೋನ್ ಅನ್ನ ತಗೊಳ್ಳಬಹುದಾಗುತ್ತೆ.

ಮುಂಚೆ ಎಲ್ಲಾ ನಿಮಗೆ ಮುದ್ರಾ ಲೋನ್ ಕ್ಯಾಟಗರಿಯಲ್ಲಿ ಕೇವಲ 10 ಲಕ್ಷ ಅಂತ ಮಾತ್ರ ಇತ್ತು. ಈಗ ಬಜೆಟ್ ಅಲ್ಲಿ ಅನೌನ್ಸ್ ಮಾಡಿರೋ ಪ್ರಕಾರ ನೀವು ಲೋನ್ ಕಟ್ಟಿರುವಂತಹ ಹಿಸ್ಟರಿ ಚೆನ್ನಾಗಿದೆ ಅಂತ ಅಂದ್ರೆ ತರುಣ ಲೋನ್ ಕ್ಯಾಟಗರಿಯಲ್ಲಿ ನಿಮಗೆ 20 ಲಕ್ಷ ವರೆಗೂ ಲೋನ್ ಅನ್ನ ಸ್ಯಾಂಕ್ಷನ್ ಮಾಡ್ತಾರೆ ಇಲ್ಲಿ ನಿಮಗೆ ಮುಖ್ಯವಾಗಿ ಏನು ಬೇಕಾಗಿರೋದು ಅಂತ ಅಂದ್ರೆ ನೀವು ಸಾಲ ಕಟ್ಟಿರುವಂತಹ Track Record ತುಂಬಾ ಚೆನ್ನಾಗಿರಬೇಕು ಸೋ ಚೆನ್ನಾಗಿದೆ ಅಂತ ಅಂದ್ರೆ ನಿಮಗೆ ಈಸಿಯಾಗಿ 20 ಲಕ್ಷ ವರೆಗೂ ಕೂಡ ಲೋನ್ ಸ್ಯಾಂಕ್ಷನ್ ಆಗುತ್ತೆ.

How To Apply For Mudra Loan

Mudra Loan ಗೆ ನೀವು ಹೇಗೆಲ್ಲಾ ಅಪ್ಲೈ ಮಾಡಬಹುದು? ಕಮರ್ಷಿಯಲ್ ಬ್ಯಾಂಕ್ಸ್ ಅಲ್ಲೂ ಅಪ್ಲೈ ಮಾಡಬಹುದು ಇನ್ ಕೇಸ್ ನೀವು ಹಳ್ಳಿಗಳಲ್ಲಿ ಇದ್ದೀರಾ ಅಂತ ಅಂದುಕೊಳ್ಳೋಣ ಅಲ್ಲಿ ಹೋಗಿ ರೀಜನಲ್ ರೂರಲ್ ಬ್ಯಾಂಕ್ಸ್ ಅಂತಾನೂ ಕೂಡ ಇರುತ್ತೆ ಅಲ್ಲೂ ಸಹ ನೀವು ಅಪ್ಲೈ ಮಾಡಬಹುದು ಹಾಗೇನೇ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಸ್ ಅಲ್ಲೂ ಸಹ ನೀವು ಲೋನ್ ಅನ್ನ ಅಪ್ಲೈ ಮಾಡಬಹುದು. ಬೇಸಿಕಲಿ ಅಪ್ಲಿಕೇಶನ್ ಪ್ರೋಸೆಸ್ ಯಾವ ರೀತಿ ವರ್ಕ್ ಆಗುತ್ತೆ ಅಂತ ಅಂದ್ರೆ ನಿಮಗೆ ಏನಾದರೂ ಮುದ್ರಾ ಲೋನ್ ಬೇಕು ಅಂತ ಅಂದ್ರೆ ನಿಮ್ಮ ಲೋಕಲ್ ಎಂ ಎಲ್ ಐ ಯಾರು ಇರ್ತಾರೆ ಮಲ್ಟಿ ಲ್ಯಾಟರಲ್ ಇನ್ಸ್ಟ್ರುಮೆಂಟ್ ನ ಕಾಂಟ್ಯಾಕ್ಟ್ ಮಾಡಿದ್ರೆ ಅಂದ್ರೆ ಅವರು ನಿಮಗೆ ಮುದ್ರಾ ಲೋನ್ ಗೆ ಸಂಬಂಧಪಟ್ಟಂತಹ ಇನ್ಫಾರ್ಮೇಷನ್ ಅನ್ನ ಕೊಡ್ತಾರೆ.

ನೀವೇನಾದ್ರೂ ಮುದ್ರಾ ಲೋನ್ ಗೆ ಅಪ್ಲೈ ಮಾಡಬೇಕು ಅಂತ ಅನ್ಕೊಂಡಿದ್ರೆ ನಿಮ್ಮ ಒಂದು ಬೇಸಿಕ್ ಡಾಕ್ಯುಮೆಂಟ್ಸ್ ನ ಖಂಡಿತವಾಗ್ಲೂ ಬ್ಯಾಂಕ್ ಅವರು ಕೇಳ್ತಾರೆ ಅಂದ್ರೆ ನಾನು ಯಾವುದಾದರೂ ಸಲೂನ್ ಬಿಸಿನೆಸ್ ನ ಮಾಡಬೇಕು ಅಂತ ಅನ್ಕೊಂಡಿದ್ರೆ ಆ ಒಂದು ಬಿಸಿನೆಸ್ ಗೆ ನನಗೆ ಬೇಕಾಗಿರುವಂತಹ ಸ್ಟ್ರಕ್ಚರ್ ಯಾವುದು ನೀವು ಯಾವ ಜಾಗದಲ್ಲಿ ಬಿಸಿನೆಸ್ ಅನ್ನ ಸ್ಟಾರ್ಟ್ ಮಾಡಬೇಕು ಅಂತ ಅನ್ಕೊಂಡಿದ್ದೀರಾ ಅದಕ್ಕೆ ಬೇಕಾದಂತಹ Budget ಏನು ಇನ್ ಕೇಸ್ ಬ್ಯಾಂಕ್ ಏನಾದ್ರು ನಿಮಗೆ 5 ಲಕ್ಷ ಕೊಡ್ತಿದೆ ಅಥವಾ 50,000 ಕೊಡ್ತಿದೆ ಅಂತ ಅಂದ್ರೆ ನಿಮ್ಮ ಕೈಯಿಂದ ನೀವು ಎಷ್ಟನ್ನ ಇನ್ವೆಸ್ಟ್ ಮಾಡ್ತೀರಾ ಸೋ ಈ ಪ್ರತಿಯೊಂದು ಡೀಟೇಲ್ಸ್ ಅನ್ನ ನಿಮ್ಮ Project ರಿಪೋರ್ಟ್ ಅಲ್ಲಿ ನೀವು ಮೆನ್ಷನ್ ಮಾಡಿರಬೇಕು ಬೇಸಿಕ್ ಡಾಕ್ಯುಮೆಂಟ್ಸ್ ಜೊತೆಗೆ ನಿಮ್ಮ ಪ್ರಾಜೆಕ್ಟ್ ರಿಪೋರ್ಟ್ ಅನ್ನು ಸಹ ಕೇಳ್ತಾರೆ.

ಅದರ ಜೊತೆಗೆ ID ಪ್ರೂಫ್, ಅಡ್ರೆಸ್ ಪ್ರೂಫ್ ಮತ್ತೆ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ಅಂದ್ರೆ ಈ ಒಂದು ವರ್ಷದಲ್ಲಿ ನೀವು ಯಾವ ರೀತಿ ಟ್ರಾನ್ಸಾಕ್ಷನ್ಸ್ ಮಾಡಿರ್ತೀರಾ ಅನ್ನೋದನ್ನ ಡೀಟೇಲ್ಡ್ ರಿಪೋರ್ಟ್ ಸಹ ನೀವು ಸಬ್ಮಿಟ್ ಮಾಡಬೇಕಾಗುತ್ತೆ ಇನ್ನು ಮುದ್ರಾ ಲೋನ್ ಅಲ್ಲಿ ಇಂಟರೆಸ್ಟ್ ಯಾವ ರೀತಿ ಇರುತ್ತೆ ಅಂತಂದ್ರೆ ನಿಮ್ಮ Credit History ಹಿಸ್ಟರಿ ಹಾಗೂ ನೀವು ಯಾವ ಕ್ಯಾಟಗರಿಯಲ್ಲಿ ಲೋನ್ ಅನ್ನ ತಗೊಂಬೇಕು ಅಂತ ಅನ್ಕೊಂಡಿದ್ದೀರಾ ಅದರ ಮೇಲೆ ನೋಡಿ ನಿಮ್ಮ ಇಂಟರೆಸ್ಟ್ ಡಿಪೆಂಡ್ ಆಗಿರುತ್ತೆ. ಮುದ್ರಾ ಲೋನ್ ಬಗ್ಗೆ ಹೆಚ್ಚಿನ ಡೀಟೇಲ್ಸ್ ಬೇಕು ಹಾಗೆ ಅಪ್ಲಿಕೇಶನ್ ಬೇಕು ಅಂತ ಅಂದ್ರೆ Small Industries Development Bank Of India ಅಂತ ಇವರದೇ ಆದ ಆಫೀಶಿಯಲ್ ವೆಬ್ಸೈಟ್ ಇದೆ ಇಲ್ಲಿ ಹೋದ್ರೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತೆ. ಕೃಷಿ ವಲಯವನ್ನ ಬಿಟ್ಟು ಯಾರೆಲ್ಲ ಮ್ಯಾನುಫ್ಯಾಕ್ಚರಿಂಗ್ ಸರ್ವಿಸ್ ಹಾಗೂ ಟ್ರೇಡಿಂಗ್ ಸೆಕ್ಟರ್ ಗಳಲ್ಲಿ ಇರ್ತೀರಾ ಅದು ಪ್ರೊಡಕ್ಷನ್ ಆಗಿರಬಹುದು ಅಥವಾ ಮಾರ್ಕೆಟಿಂಗ್ ಆಗಿರಬಹುದು ಸೋ ಇಂತಹ ಸೆಕ್ಟರ್ ಗಳಲ್ಲಿ ಇರೋವರಿಗೆ ಖಂಡಿತವಾಗ್ಲೂ ಮುದ್ರಾ ಲೋನ್ ಈಸಿಯಾಗಿ ಸಿಗುತ್ತೆ.

ಇದನ್ನೂ ಓದಿ: Kisan Vikas Patra Scheme!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment