ಎಲ್ಲರಿಗೂ ನಮಸ್ಕಾರ, Budget ನಲ್ಲಿ ಈ ಯೋಜನೆ ಬಗ್ಗೆ ಕೇಳಿದಾಗಲಿಂದ ಮಾತಿನ ನಡುವೆ. ಮಕ್ಕಳಿಗೂ ಪಿಂಚಣಿ ಕೊಡ್ತಾರಂತೆ? ಮಕ್ಕಳ ಪಿಂಚಣಿ ಯೋಜನೆ ಇದು? ಗೊತ್ತಿಲ್ವಾ? ಅದರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಈ ಲೇಖನದಲ್ಲಿ ಈ ಲೇಖನದಲ್ಲಿ ಹೂಡಿಕೆಯ ಸಲಹೆಗಳು ಇರುವುದಿಲ್ಲ ಇಲ್ಲಿನ ಅಭಿಪ್ರಾಯಗಳು ಹಣಕಾಸು ಮತ್ತು ಹೂಡಿಕೆ ಬಗೆಗಿನ ತಿಳುವಳಿಕೆಯ ಉದ್ದೇಶಕ್ಕೆ ಮಾತ್ರ. ನಿರ್ಮಲ ಸೀತಾರಾಮನ್ವರು Budget ಭಾಷಣದಲ್ಲಿ ಘೋಷಣೆ ಮಾಡಿದ ಹೊಸ ಯೋಜನೆಯ ಹೆಸರು NPS ವಾತ್ಸಲ್ಯ ಚೆನ್ನಾಗಿದೆ ಅಲ್ವಾ ಹೆಸರು!
ವಾತ್ಸಲ್ಯ ಅಂದ್ರೆ ಏನು?
ಈಗ ಅಪ್ಪ, ಅಮ್ಮ ,ಅಜ್ಜಿ, ತಾತ ತಮ್ಮ ಮಕ್ಕಳ ಮೇಲೆ ತೋರಿಸ್ತಾರಲ್ಲ ಪ್ರೀತಿ ಮಮತೆ ಅದೇ ವಾತ್ಸಲ್ಯ.
NPS ಅಂದ್ರೆ ಏನು?
NPS ಅಂದ್ರೆ National Pension Scheme ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ ಅಂತ ಕರೀಬಹುದು ಕೇಂದ್ರ ಸರ್ಕಾರದವರು 2004 ರಲ್ಲಿ. ಕೇಂದ್ರ ಸರ್ಕಾರದ ನೌಕರರಿಗೋಸ್ಕರನೇ ತಂದಂತಹ ಯೋಜನೆ ಇದು ಆಮೇಲೆ ಏನಾಯ್ತು 2009ಕ್ಕೆ ಈ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡ್ತಾ ಇರ್ತಾರಲ್ಲ ಉದ್ಯೋಗಿಗಳು ಕಾರ್ಪೊರೇಟ್ ಉದ್ಯೋಗಿಗಳು ಅವರು ಸಹ NPS ಅನ್ನ ಆಯ್ಕೆ ಮಾಡಿಕೊಳ್ಳಬಹುದು ಅಂತ ಆದೇಶ ಬಂತು.
ಅಲ್ಲಿಂದ NPS ಎಲ್ಲರಿಗೂ ಕೂಡ ಪಿಂಚಣಿ ಯೋಜನೆಯಾಗಿ ಒಂದು ಫೇಮಸ್ ಆಗಿದೆ.
ರಾಜ್ಯ ಸರ್ಕಾರದ ನೌಕರರಿಗೆ ಈ NPS ಬಗ್ಗೆ ಬಾರಿ ವಿರೋಧ ಇದೆ:
ಯಾಕಂದ್ರೆ NPS ನಲ್ಲಿ ನಾವು ಹಾಕೋ ದುಡ್ಡು ಎಲ್ಲಿ ಇನ್ವೆಸ್ಟ್ ಆಗುತ್ತೆ ಅದಕ್ಕೆ ರಿಟರ್ನ್ಸ್ ಇದೆಯಾ ಇಲ್ವಾ ಏನು ಗ್ಯಾರಂಟಿ ಇಲ್ಲ ಅದಕ್ಕೋಸ್ಕರ ವಿರೋಧ ಮಾಡುತ್ತಿದ್ದಾರೆ ಇದು ತುಂಬಾನೇ ದೊಡ್ಡ ವಿಷಯ.
NPS ವಾತ್ಸಲ್ಯ ಯೋಜನೆ ಎಂದರೆ ಏನು
NPS ವಾತ್ಸಲ್ಯದ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಎರಡುವರೆ ಸಾಲಲ್ಲಿ ಹೇಳಿ ಮುಗಿಸಿಬಿಟ್ರು ಏನಂತ “ಪಾಲಕರು, ಪೋಷಕರು ಅವರ ಅಪ್ರಾಪ್ತ ಮಕ್ಕಳಿಗೆ ಅಂದ್ರೆ ಚಿಕ್ಕ ವಯಸ್ಸಿನ ಮಕ್ಕಳು ಇರ್ತಾರಲ್ಲ ಅವರಿಗೆ ಎನ್ ಪಿಎಸ್ ವಾತ್ಸಲ್ಯ ಖಾತೆ ತೆರೆದು ಅದರಲ್ಲಿ ಹೂಡಿಕೆ ಮಾಡ್ತಾ ಹೋಗೋದು.
ಹೂಡಿಕೆ ಮಾಡ್ತಾ ಹೋಗಿ ಅವರಿಗೆ 18 ವರ್ಷ ಆಗುತ್ತಲ್ಲ ಮಕ್ಕಳಿಗೆ ಅಂದ್ರೆ ವಯಸ್ಕರ ಆಗ್ತಾರಲ್ಲ ಆಗ ಆ ಖಾತೆ ಸಾಮಾನ್ಯವಾಗಿ NPS ಖಾತೆ ಆಗಿ ಹೋಗುತ್ತೆ ಅಷ್ಟೇ.
ಹಾಗಾದ್ರೆ ಮಕ್ಕಳಿಗೆ ಪಿಂಚಣಿ ಕೊಡೋದು ಅಲ್ವಾ?
ಖಂಡಿತ ಅಲ್ಲ! ಚಿಕ್ಕವರಿಂದ ದೊಡ್ಡವರಾಗಿ ಸ್ಕೂಲ್ಗೆ ಹೋಗಿ ಕಾಲೇಜಿಗೆ ಹೋಗಿ ಕೆಲಸಕ್ಕೆ ಸೇರಿ ಮದುವೆಯಾಗಿ ಅವರಿಗೆ ಮಕ್ಕಳಾಗಿ ಅವರ ಕೆಲಸದಿಂದ ರಿಟೈರ್ಡ್ ಆಗಿ 60 ವರ್ಷ ಆಗಿ ಆಮೇಲೆ ಪಿಂಚಣಿ ಬರುತ್ತಲ್ಲ ಅದೇ NPS + ವಾತ್ಸಲ್ಯ ಕೂಡ ಈಗಿನ ಮಾಹಿತಿ ಪ್ರಕಾರ ಅಷ್ಟೇ.
ಹಾಗಾದ್ರೆ ಅಪ್ಪ ಅಮ್ಮ ಮಕ್ಕಳ ಮೇಲೆ ಹೂಡಿಕೆ ಮಾಡ್ತಾ ಮಾಡ್ತಾ ಮಾಡ್ತಾ ಮಾಡ್ತಾ ಹೋಗ್ತಾರೆ ಆಮೇಲೆ 60 ವರ್ಷ ಆದ್ಮೇಲೆ ಅದೊಂದು ದೊಡ್ಡ ಮೊತ್ತಾಗಿ ಮಕ್ಕಳಿಗೆ ಪಿಂಚಣಿಯಾಗಿ ಬರ್ತಾ ಹೋಗುತ್ತೆ.
NPS ವಾತ್ಸಲ್ಯ ಯೋಜನೆ New Update
ಈ ಖಾಸಗಿ ಕಂಪನಿ ನೌಕರರು NPS ಗೆ ಯಾರು ಆಪ್ಟ್ ಮಾಡಿರ್ತಾರಲ್ಲ ಆಯ್ಕೆ ಮಾಡಿಕೊಂಡಿರ್ತಾರಲ್ಲ ಅವರ ಬೇಸಿಕ್ ಸ್ಯಾಲರಿ ಇಂದ 10% ಡಿಡಕ್ಟ್ ಆಗ್ತಿತ್ತು ಆದರೆ ಈಗ 14% ಡಿಡಕ್ಟ್ ಆಗೋ ಹಾಗೆ ಅನೌನ್ಸ್ ಮಾಡಿದ್ದಾರೆ ಅಂದ್ರೆ ಈಗ ಬೇಸಿಕ್ ಸ್ಯಾಲರಿ ನಿಮ್ಮದು 10,000 ಅಂತ ಇಟ್ಕೊಳಿ ಅದರಲ್ಲಿ 10% ಅಂದ್ರೆ 1,000 NPS ಗೆ ಹೋಗ್ತಿತ್ತು.
ಇನ್ನು ಮುಂದೆ ಏನಾಗುತ್ತೆ 1,400 NPS ಖಾತೆಗೆ ಜಮಾ ಆಗುತ್ತೆ ಅಂದ್ರೆ ನೀವು ನಿವೃತ್ತಿಗೆ ಅಂದ್ರೆ ಪಿಂಚಣಿಗೋಸ್ಕರ ಹೆಚ್ಚಿನ ಹಣ ಜಮಾ ಮಾಡ್ತಾ ಹೋಗ್ತಿದ್ದೀರಾ ಇದು ಹೊಸ ಅಪ್ಡೇಟ್.
ಸರ್ಕಾರ ಈ NPS ಯೋಜನೆ ತಂದಿರೋದು ಯಾಕೆ?
ಈ ಸ್ಟಾರ್ಟ್ ಅರ್ಲಿ ಕಾನ್ಸೆಪ್ಟ್ ಅಂತ ಇದೆ ಅಂದ್ರೆ ಮಕ್ಕಳು ಚಿಕ್ಕ ವಯಸ್ಸಲ್ಲೇನೆ ಹೂಡಿಕೆ ಶುರು ಮಾಡಿದ್ರೆ ಅವರು ವಯಸ್ಸು ಆಗ್ತಾ ಆಗ್ತಾ ಒಂದು ದೊಡ್ಡ ಮೊತ್ತ ಅವರ ಹತ್ರ ಸೇರಿಕೊಳ್ಳುತ್ತೆ ಅಂದ್ರೆ ಆರ್ಥಿಕ ಭದ್ರತೆ ಅವರಿಗೆ ಇರುತ್ತೆ ಆರ್ಥಿಕ ಭದ್ರತೆ ಇದ್ದಾಗ ಏನಾಗುತ್ತೆ ಅವರು ಯಾವುದೇ ಕೆಲಸ ಮಾಡಬೇಕಾದರೂ ಅವರಿಗೊಂದು ಬೆಂಬಲ ಇರುತ್ತೆ ಅಂತ ಆದರೆ ಮಕ್ಕಳಿಗೆ ತಂದೆ ತಾಯಿ ಯಾವುದಕ್ಕೋಸ್ಕರ ಇನ್ವೆಸ್ಟ್ ಮಾಡ್ತಾ ಹೋಗ್ತಾರೆ. ಅಂದ್ರೆ ಯಾವುದಕ್ಕೋಸ್ಕರ ಉಳಿತಾಯ ಮಾಡ್ತಾ ಹೋಗ್ತಾರೆ ಅಂದ್ರೆ ಶಿಕ್ಷಣಕ್ಕೋಸ್ಕರ, ಮದುವೆಗೋಸ್ಕರ ಅಥವಾ ಯಾವುದೇ ತುರ್ತು ಪರಿಸ್ಥಿತಿ ಬಂದ್ರೆ ಅದಕ್ಕೋಸ್ಕರ ಹೂಡಿಕೆ ಮಾಡ್ತಾರೆ.
ಈಗಾಗಲೇ ಮಕ್ಕಳಿಗೋಸ್ಕರ ಹೆಣ್ಣು ಮಕ್ಕಳಿದ್ರಂತೂ ಸುಖನ್ಯ ಸಮೃದ್ಧಿ ಯೋಜನೆ ಇದೆ 8.2% ಅದರಲ್ಲಿ ಬಡ್ಡಿ ಬರ್ತಾ ಇದೆ ಸೋ ಒಳ್ಳೆ ಯೋಜನೆ ಅದು ಬಿಟ್ರೆ ಈ ಹೊಸ ಹೂಡಿಕೆದಾರರು Mutual ಫಂಡ್ ಬಗ್ಗೆ ಗೊತ್ತಿದ್ರೆ ಮ್ಯೂಚುವಲ್ ಫಂಡ್ ಅಲ್ಲಿ ಇನ್ವೆಸ್ಟ್ ಮಾಡ್ತಿದ್ದಾರೆ ಅಥವಾ ಪಿಪಿಎಫ್ ಅಲ್ಲಿ ಇನ್ವೆಸ್ಟ್ ಮಾಡ್ತಾರೆ ಇದು ಯಾವುದು ಬೇಡ ಅಂದ್ರೆ ಎಫ್ ಡಿ, ಆರ್ ಡಿ ಅಂತೂ ಇದ್ದೆ ಇದೆ.
NPS ವಾತ್ಸಲ್ಯದಲ್ಲಿ ಯಾಕೆ Invest ಮಾಡಬೇಕು
ಈಗ ಎರಡುವರೆ ಲಕ್ಷದಿಂದ ಹೆಚ್ಚು ಇನ್ವೆಸ್ಟ್ ಮಾಡಿರ್ತಾರೆ ಅಂದುಕೊಳ್ಳಿ ಅವಾಗ ದೊಡ್ಡ ಆ ಇನ್ವೆಸ್ಟ್ ಅಮೌಂಟ್ ಅನ್ನ ಒಟ್ಟಿಗೆ ತೆಗೆಯೋದಕ್ಕೆ ಆಗೋದಿಲ್ಲ ಎರಡುವರೆ ಲಕ್ಷದ ಒಳಗಡೆ ಇದ್ರೆ ಐದು ವರ್ಷದ ನಂತರ ಆ ಪೂರ್ತಿ ಅಮೌಂಟ್ ನ ವಿಥ್ಡ್ರಾ ಮಾಡಿಕೊಳ್ಳಬಹುದು ಆದ್ರೆ ಮೊತ್ತ ಎರಡುವರೆ ಲಕ್ಷ ದಾಟ್ತು ಅಂದ ತಕ್ಷಣನೇ ಕೇವಲ 20% ಮಾತ್ರನೇ ವಿಥ್ ಡ್ರಾ ಮಾಡ್ಕೋಬಹುದು. ಇನ್ನು ಉಳಿದ 80% ಏನಿದೆ ಅದು ಹಾಗೆ ಹೂಡಿಕೆ ಆಗ್ತಾ ಮುಂದುವರೆಯುತ್ತೆ.
NPS ವಾತ್ಸಲ್ಯದಿಂದ ಏನಪ್ಪಾ ಉಪಯೋಗ

1. ದೀರ್ಘಾವಧಿ ಹೂಡಿಕೆ:
ನಾನು ಹೇಳಿದೆ ಚಿಕ್ಕ ಮಗು ಅಂದ್ರೆ ಆ ಹುಟ್ಟಿದ ತಕ್ಷಣನೇ ನೀವು ಶುರು ಮಾಡ್ತೀರಾ ಹೂಡಿಕೆ ಅಂದ್ರೆ ಆ ಮಗು 60 ವರ್ಷದವರೆಗೂ ಈ NPS ಖಾತೆಯಲ್ಲಿ ಹೂಡಿಕೆ ಆಗ್ತಾ ಹೋಗುತ್ತೆ 60 ವರ್ಷ ಒಂದೇ ಒಂದು ಇನ್ಸ್ಟ್ರುಮೆಂಟ್ ಅಲ್ಲಿ ನೀವು ಇನ್ವೆಸ್ಟ್ ಮಾಡ್ತಿದ್ದೀರಾ ಅಂದ್ರೆ ಚಕ್ರ ಬಡ್ಡಿ ಲೆಕ್ಕದಲ್ಲಿ ಎಷ್ಟು ದೊಡ್ಡ ಅಮೌಂಟ್ ಬರಬಹುದು ನೀವೇ ಲೆಕ್ಕ ಹಾಕಿ.
2. ಹಣಕಾಸು ಜ್ಞಾನ:
ಈ NPS ಖಾತೆ ಮೂಲಕ ವತ್ಸಲೆ ಖಾತೆ ಮೂಲಕ ಅವರಿಗೆ ಹೇಳಿಕೊಡಬಹುದು ನೋಡು ನಿನ್ನ ಹೆಸರಲ್ಲಿ ಇಷ್ಟು ಹಾಕ್ತಿದೀವಿ ಈ ವರ್ಷಕ್ಕೆ ಇಷ್ಟು ಬೆಳವಣಿಗೆ ಆಯ್ತು ಮುಂದಿನ ವರ್ಷಕ್ಕೆ ಇಷ್ಟ ಆಗುತ್ತೆ ನೀನು 60 ವರ್ಷ ಆದ್ಮೇಲೆ ನಿನಗೆ ಇಷ್ಟು ಪಿಂಚಣಿ ಬರಬಹುದು ಈ ಲೆಕ್ಕಾಚಾರ ಎಲ್ಲಾ ಹಾಕಿದ್ರೆ ಅವರಿಗೂ ಒಂದು ಐಡಿಯಾ ಸಿಗುತ್ತೆ ಹಣಕಾಸಿನ ವ್ಯವಸ್ಥೆ ಬಗ್ಗೆ.
3. ತೆರಿಗೆ ಉಳಿತಾಯ:
ನಾವು NPS ಖಾತೆಗೆ ಹೂಡಿಕೆ ಮಾಡ್ತಿರ್ತೀವಲ್ಲ ನಾವು ಎಷ್ಟೇ ಹೂಡಿಕೆ ಮಾಡಿದ್ರು ಆ ಮೊತ್ತ Tax ಡಿಡಕ್ಷನ್ ಅಲ್ಲಿ ತೋರಿಸಬಹುದು ಅಂದ್ರೆ ನಾವು ಐಟಿಆರ್ ಫೈಲ್ ಮಾಡ್ತೀವಲ್ಲ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಿದಾಗ ಈ ಅಮೌಂಟ್ ಡಿಡಕ್ಟ್ ಆಗುತ್ತೆ. ತೆರಿಗೆ ಲಾಭ ಕೂಡ ಇದೆ.
4. ಆಟೋಮೆಟಿಕ್ ಬದಲಾವಣೆ:
18 ವರ್ಷ ಆಗ್ತಿದ್ದಂಗೆ ಎನ್ ಪಿಎಸ್ ವಾತ್ಸಲ್ಯ ಎನ್ ಪಿಎಸ್ ನಾರ್ಮಲ್ ಖಾತೆಯಾಗಿ ಸ್ವಿಚ್ ಆಗೋಗುತ್ತೆ. ನಾವೆಲ್ಲೋ ಹೋಗ್ಬೇಕು ಅದನ್ನ ಸ್ವಿಚ್ ಮಾಡಬೇಕು ಈ ಖಾತೆಯಿಂದ ಅಲ್ಲಿಗೆ ಬದಲಾವಣೆ ಮಾಡಬೇಕು ಈ ಗೊಂದಲಗಳೆಲ್ಲ ಇರುತ್ತಲ್ಲ ಏನು ಇರಲ್ಲ ಸಾಮಾನ್ಯವಾಗಿ ವಾತ್ಸಲ್ಯ ಅಂತ ಏನಿರೋದು ನಾರ್ಮಲ್ NPS ಆಗೋಗುತ್ತೆ ಇದು ಕೂಡ ಒಂದು ಅನುಕೂಲನೆ.
NPS ಯೋಜನೆ ಮೂಲಕ 1 ಕೋಟಿ ಪಡೆಯಬಹುದಾ?

NPS ನಲ್ಲಿ ಒಂದು ಕೋಟಿ ಗಳಿಸೋದಕ್ಕೆ ಸಾಧ್ಯನಾ NPS Calculator ಇಟ್ಕೊಂಡೆ ಈ ಒಂದು ಲೆಕ್ಕಾಚಾರ ತೋರಿಸ್ತೀನಿ ನೋಡಿ Kiran ಅಂತ ಒಬ್ಬ ಹುಡುಗ ಅವನು ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಅಂತ ಅಂದುಕೊಳ್ಳಿ ಅವನಿಗೆ ಇನ್ನ ಮದುವೆ ಆಗಿಲ್ಲ ಅವನಿಗೆ 25 ವರ್ಷ ಅವನು ಮಾಸಿಕ ತಿಂಗಳಿಗೆ ತಿಂಗಳು 2,500 ರೂಪಾಯಿ ಅವನು ಎನ್ ಪಿಎಸ್ ಖಾತೆಗೆ ಹಾಕ್ತಾ ಹೋಗ್ತಾನೆ ಅಂದ್ರೆ ಅವನಿಗೆ ಈಗ 25 ವರ್ಷ ಅವನು 35 ವರ್ಷ ಸುದೀರ್ಘವಾಗಿ ಹೂಡಿಕೆ ಮಾಡ್ತಾ ಹೋಗ್ತಾನೆ ಅಂದ್ರೆ ಅವನಿಗೆ 60 ವರ್ಷ ಆಗೋವರೆಗೂ ಹೂಡಿಕೆ ಮಾಡ್ತಾನೆ.

ಹೂಡಿಕೆ ಮಾಡ್ತಾ ಹೋದ್ರೆ NPS ಖಾತೆಯಲ್ಲಿ ಏನಾಗುತ್ತೆ ಗೊತ್ತಾ ಕನಿಷ್ಠ ಅಂದ್ರೆ 7% ಗರಿಷ್ಠ ಅಂದ್ರೆ 14% ವರೆಗೂ ಗ್ರೋಥ್ ಆಗುತ್ತೆ ನಾವು ಹಾಕೋ ದುಡ್ಡು ಇಲ್ಲಿ ಈ Kiran ಉದಾಹರಣೆಯಲ್ಲಿ ನಾವು 10% ಇಟ್ಕೊಳ್ಳೋಣ ಆವರೇಜ್ 10% ಗ್ರೋಥ್ ಆಗುತ್ತೆ ಚಕ್ರ ಬಡ್ಡಿಯಲ್ಲಿ ಬೆಳೆಯುತ್ತೆ ಅಂತ. ಸೋ 35 ವರ್ಷಕ್ಕೆ ಎಷ್ಟಾಗುತ್ತೆ ಅಂದ್ರೆ ಇವರು Kiran 10,50,000 ಅವರ ಖಾತೆಗೆ ಜಮಾ ಮಾಡಿರ್ತಾರೆ ಇವರ ಸಂಬಳದಿಂದ ಅದು ಅವರ ಪಿಂಚಣಿ ಅಂದ್ರೆ ಏಜ್ ಗೆ 60 ವರ್ಷ ಆಗ್ತಿದ್ದಂಗೆನೆ ಒಟ್ಟು ಮೊತ್ತ 95 ಲಕ್ಷ ಆಗಿರುತ್ತೆ. ಅಂದ್ರೆ ಹತ್ರ ಹತ್ರ 1 ಕೋಟಿಗೆ ಹತ್ರ ಆಗೋಗಿರುತ್ತೆ.
ಅಕಸ್ಮಾತ್ Kiran ಸಂಬಳ ಜಾಸ್ತಿ ಆಯ್ತು ಅವಾಗ ನಾನು ಎನ್ಪಿಎಸ್ ಗೆ ಎಕ್ಸ್ಟ್ರಾ ದುಡ್ಡು ಹಾಕ್ತೀನಿ ಅಂತ ಹಾಕ್ತಾ ಹೋಗ್ತಿದ್ದಂಗೆ ಅವರು ಒಂದು ಕೋಟಿಗಿಂತ ಜಾಸ್ತಿನು ಮೀರಬಹುದು ಇಲ್ಲಿ 95 1/2 ಲಕ್ಷ ಆಗಿರುತ್ತೆ. ಅದರಲ್ಲಿ ಏನಾಗುತ್ತೆ 60% ಅಂದ್ರೆ 57 ಲಕ್ಷ 57.42 ಲಕ್ಷ ಏನೋ ಬರುತ್ತೆ ಅಷ್ಟು ಲಂಸಮ್ ಆಗಿ ತಗೊಂಡು ಬಿಡಬಹುದು 60 ವರ್ಷ ಆದ್ಮೇಲೆ ಇದಕ್ಕೆ ತೆರಿಗೆ ಇರಲ್ಲ ಇನ್ನು 40% ಇರುತ್ತಲ್ಲ ಇಲ್ಲಿ 40% ಅಂದ್ರೆ ಎಷ್ಟು 38 ಲಕ್ಷ ರೂಪಾಯಿ ಈ 38 ಲಕ್ಷ ರೂಪಾಯಿ ಆ ಎನ್ ಪಿಎಸ್ ಖಾತೆಯಲ್ಲಿ ಉಳಿಯುತ್ತೆ ಆ NPS ಖಾತೆಯಲ್ಲಿ ಉಳಿದು ಅದನ್ನು ಬೆಳಿತಾ ಹೋಗುತ್ತೆ.
ಈ ಬೆಳವಣಿಗೆ 6% ಅಲ್ಲಿ ಆಗುತ್ತೆ ಅಂತ ಅಂದುಕೊಳ್ಳಿ 6% ದುಡ್ಡು ನಮಗೆ ಪಿಂಚಣಿ ರೂಪದಲ್ಲಿ ತಿಂಗಳು ತಿಂಗಳು ಬರ್ತಾ ಹೋಗುತ್ತೆ ಈ 38 ಲಕ್ಷದಲ್ಲಿ 6% ಅಂದ್ರೆ ಕನಿಷ್ಠ ಅಂದ್ರು 19,000 ತಿಂಗಳಿಗೆ Kiran ಗೆ ಪೆನ್ಶನ್ ಬರ್ತಾ ಹೋಗುತ್ತೆ ಇದಕ್ಕಿಂತ ಇನ್ನೇನು ಬೇಕು. NPS ಅಲ್ಲಿ ಎಷ್ಟು ದುಡ್ಡಿದೆ ಎಷ್ಟು ದುಡ್ಡು ಬರಬಹುದು ಅನ್ನೋದು ಒಂದು ಸಣ್ಣ ಐಡಿಯಾ ನಿಮಗೆ ಗೊತ್ತು ಆಯ್ತಲ್ವಾ ಆದರೆ NPS ವಾತ್ಸಲ್ಯದಲ್ಲಿ ಇದೇ ರೀತಿ ಆಗುತ್ತಾ 18 ವರ್ಷ ಆದ್ಮೇಲೆ ಏನಾಗುತ್ತೆ ಈ ಸ್ಕೀಮ್ ಅಲ್ಲಿ ಏನಾದರೂ ಬದಲಾವಣೆ ಇದೆಯಾ ಈ ಎಲ್ಲಾ ಪ್ರಶ್ನೆಗಳು ನಮಗೂ ಇದೆ ಆದರೆ ಸರ್ಕಾರದವರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನ ಬಿಟ್ಟಿಲ್ಲ.
ಇದನ್ನೂ ಓದಿ: ಹೊಸ ಯೋಜನೆ NPS ವಾತ್ಸಲ್ಯ Scheme










