ಹೊಸ ಯೋಜನೆ NPS ವಾತ್ಸಲ್ಯ Scheme!! ಮಕ್ಕಳ ವಯಸ್ಸು 18 ರಿಂದ ಒಳಗೆ ಇದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು

October 24, 2024 5:00 AM
ಹೊಸ ಯೋಜನೆ NPS ವಾತ್ಸಲ್ಯ Scheme!! ಮಕ್ಕಳ ವಯಸ್ಸು 18 ರಿಂದ ಒಳಗೆ ಇದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಎಲ್ಲರಿಗೂ ನಮಸ್ಕಾರ, ಮಕ್ಕಳಿಗೋಸ್ಕರ Budget ನಲ್ಲಿ ಘೋಷಣೆಯಾಗಿದ್ದ ಹೊಸ ಯೋಜನೆ NPS ವಾತ್ಸಲ್ಯ ಈಗಷ್ಟೇ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಈ ಯೋಜನೆಗೆ ಅಧಿಕೃತವಾಗಿ ಚಾಲನೆ ಕೊಟ್ಟಿದ್ದಾರೆ.

ಈ ಲೇಖನದಲ್ಲಿ ಬಹಳ ಕಡಿಮೆ ಸಮಯದಲ್ಲಿ ವಾತ್ಸಲ್ಯ ಯೋಜನೆ ಬಗ್ಗೆ ಪೂರ್ತಿ ಮಾಹಿತಿ ತಿಳಿದುಕೊಳ್ಳೋಣ. ಯಾರಿಗೋಸ್ಕರ ಈ ಯೋಜನೆ ಯೋಜನೆ ಹೆಸರೇ ಹೇಳುವ ಹಾಗೆ ಪಾಲಕರು ಅಥವಾ ಪೋಷಕರು ಮಕ್ಕಳ ಮೇಲೆ ತೋರಿಸೋ ವಾತ್ಸಲ್ಯವನ್ನೇ ಈ ಯೋಜನೆಗೂ ಇಡಲಾಗಿದೆ.

ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ರೂಪಿಸಿರುವ ದೀರ್ಘಾವಧಿಯ ಉಳಿತಾಯ ಯೋಜನೆ.

NPS ವಾತ್ಸಲ್ಯ Scheme ಮೂಲಕ ಎಷ್ಟು ಹೂಡಿಕೆ ಮಾಡಬಹುದು

NPS ವಾತ್ಸಲ್ಯ ಈ ಯೋಜನೆಯನ್ನ ಪಿಂಚಣಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಣೆ ಮಾಡುತ್ತಿದೆ 18ಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳ ಹೆಸರಲ್ಲೂ ಈ ಯೋಜನೆ ಅಕೌಂಟ್ ಓಪನ್ ಮಾಡೋಕೆ ಅವಕಾಶ ಇದೆ ತಿಂಗಳಿಗೆ ವರ್ಷಕ್ಕೆ ಎಷ್ಟು ಹೂಡಿಕೆ ಮಾಡಬೇಕು ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಎಷ್ಟು ವರ್ಷಕ್ಕೆ ಗರಿಷ್ಠ ಎಷ್ಟು ಹಣ ಕಟ್ಟಬಹುದು ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸದ್ಯ ಕನಿಷ್ಠ 1,000 ರೂಪಾಯಿ ಹೂಡಿಕೆ ಮಾಡಬೇಕಾಗುತ್ತೆ. ಅಂದ್ರೆ ಒಂದು ವರ್ಷಕ್ಕೆ ಕನಿಷ್ಠ 1,000 ಕಟ್ಟಬೇಕಾಗುತ್ತೆ ಆದರೆ ಗರಿಷ್ಠ ಎಷ್ಟು ಹೂಡಿಕೆ ಮಾಡಬಹುದು ಅನ್ನೋದನ್ನ ಮಿತಿಯನ್ನ ಹಾಕಿಲ್ಲ ಇಲ್ಲಿ ತಿಂಗಳಿಗೆ ಒಮ್ಮೆ ಕಟ್ಟಬೇಕು ವರ್ಷಕ್ಕೆ ಅರ್ಧ ವರ್ಷಕ್ಕೆ ಕಟ್ಟಬೇಕು ಅನ್ನೋ ನಿರ್ಬಂಧಗಳು ಏನು ಇಲ್ಲ.

How To Open NPS Account

ಪಾಲಕರು ಯಾವುದೇ ದಿನ ತಮ್ಮ ಮಕ್ಕಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು ಖಾತೆ ಓಪನ್ ಮಾಡೋದು ಎಲ್ಲಿ ಬಾಲಕರು ತಮ್ಮ ಮಕ್ಕಳ ಹೆಸರಲ್ಲಿ ಬ್ಯಾಂಕ್ ಗಳು, ಅಂಚೆ ಕಚೇರಿ, NPS ವೆಬ್ಸೈಟ್ ಅಥವಾ ಪೆನ್ಶನ್ ಫಂಡ್ ಗಳ ಮೂಲಕ ಖಾತೆಯನ್ನು ಓಪನ್ ಮಾಡಬಹುದು.

ಈ ಖಾತೆಯನ್ನು ಆನ್ಲೈನ್ ಅಥವಾ ಭೌತಿಕವಾಗಿ ಅಪ್ಲಿಕೇಶನ್ ಕೊಟ್ಟು ಕೂಡ ಶುರು ಮಾಡೋಕೆ ಅವಕಾಶ ಇದೆ.

NPS ವಾತ್ಸಲ್ಯ ಏನೆಲ್ಲಾ ದಾಖಲೆಗಳು ಬೇಕಾಗುತ್ತೆ

NPS ವಾತ್ಸಲ್ಯ ಖಾತೆ ಓಪನ್ ಮಾಡೋಕೆ ಮುಖ್ಯವಾಗಿ ಮಕ್ಕಳ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳು ಬೇಕಾಗುತ್ತೆ

  • ಜನನ ಪ್ರಮಾಣಪತ್ರ
  • ಶಾಲೆ ಸರ್ಟಿಫಿಕೇಟ್
  • SSLC ಸರ್ಟಿಫಿಕೇಟ್
  • ಪ್ಯಾನ್ ಕಾರ್ಡ್

ಅಕಸ್ಮಾತ್ ವಿದೇಶದಲ್ಲಿದ್ದರೆ ಮಕ್ಕಳು ಅವರ ಪಾಸ್ಪೋರ್ಟ್ ಕೂಡ ಬೇಕಾಗುತ್ತೆ. ಅದರ ಜೊತೆಗೆ ಪಾಲಕರ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ ಕೂಡ ಕೊಡಬೇಕಾಗುತ್ತೆ.

ಈ NPS ಯೋಜನೆಯಲ್ಲಿ ಎಷ್ಟು ಆಯ್ಕೆಗಳು ಇದೆ

ಈ ಯೋಜನೆಯಲ್ಲಿ ಒಟ್ಟು 2 ಆಯ್ಕೆಗಳಿವೆ

Moderate ಲೈಫ್ ಸೈಕಲ್ ಫಂಡ್:

ಇದರಲ್ಲಿ ಶೇಕಡಾ 50 ರಷ್ಟು ಈಕ್ವಿಟಿಕೆ ಹೂಡಿಕೆ ಆಗುತ್ತೆ

Auto ಚಾಯ್ಸ್:

ಇಲ್ಲಿ ಹೂರ್ಕೆಯಾಗುವ ಮೊತ್ತದಲ್ಲಿ ಶೇರ್ ಪೇಟೆಗೆ ಅಂದ್ರೆ ಈಕ್ವಿಟಿಗೆ ಎಷ್ಟು ಪ್ರಮಾಣ ಹೋಗ್ಬೇಕು ಅನ್ನೋದನ್ನ ಪಾಲಕರೇ ಆಯ್ಕೆ ಮಾಡಿಕೊಳ್ಳಬಹುದು ಅದರಲ್ಲಿ ಶೇಕಡ 25, 50, 75 ರಷ್ಟು ಈಕ್ವಿಟಿ ಪ್ರಮಾಣದ ಆಯ್ಕೆಗಳಿವೆ ಅಂದಹಾಗೆ ಸರ್ಕಾರದ ಪ್ರಕಾರ ಎನ್ ಪಿಎಸ್ ನಲ್ಲಿ ಹೂಡಿಕೆ ಮಾಡಿದ ಹಣ ಶೇಕಡಾ ಒಂಬತ್ತರಿಂದ 14 ರವರೆಗೂ ಬೆಳವಣಿಗೆ ಕಂಡಿದೆ ಅಂದ್ರೆ ಯಾವುದೇ ಎಫ್ ಡಿ, ಆರ್ ಡಿ ಗಿಂತಲೂ ಜಾಸ್ತಿ ಲಾಭ ಸಿಗುತ್ತೆ.

ಮಕ್ಕಳಿಗೆ ಹಣ ಸಿಗೋದು ಯಾವಾಗ

ಇಲ್ಲಿ ಪಾಲಕರು ತಮ್ಮ ಮಕ್ಕಳ ಹೆಸರಲ್ಲಿ ಅವರಿಗೆ 18 ವರ್ಷ ಆಗೋವರೆಗೂ ಹೂಡಿಕೆ ಮಾಡ್ತಾ ಹೋಗ್ತಾರೆ ಮಕ್ಕಳ ವಯಸ್ಸು 18 ವರ್ಷ ಆಗ್ತಿದ್ದಂಗೆ ಎನ್ ಪಿಎಸ್ ವಾತ್ಸಲ್ಯ ಖಾತೆಯು ಸಾಮಾನ್ಯವಾದ ಎನ್ ಪಿಎಸ್ ತೈರ್ ಒನ್ ಖಾತೆಯಾಗಿ ಬದಲಾಗುತ್ತೆ ಅಲ್ಲಿಂದ ಎನ್ ಪಿಎಸ್ ಗೆ ಅನ್ವಯಿಸಿದಂತೆ 60 ವರ್ಷ ವಯಸ್ಸಿನ ನಂತರ ಪಿಂಚಣಿ ಮತ್ತು ಶೇಕಡ 40 ರಷ್ಟು ಮೊತ್ತವನ್ನ ಒಟ್ಟಿಗೆ ಪಡೆಯಬಹುದು ಸರಿಯಾಗಿ 18 ವರ್ಷಕ್ಕೆ ಅಥವಾ ಅದಕ್ಕೂ ಮುಂಚೆಯೇ ಹಣ ಪಡೆಯುವುದಕ್ಕೂ ಅವಕಾಶಗಳು ಇವೆ ಹೂಡಿಕೆ ಶುರು ಮಾಡಿದ ನಂತರ 3 ವರ್ಷದವರೆಗೂ ಹಣ ಲಾಕ್ ಆಗಿರುತ್ತೆ.

ಆನಂತರದಲ್ಲಿ ಮಕ್ಕಳ ಶಿಕ್ಷಣಕ್ಕೆ ಅಥವಾ ಅನಾರೋಗ್ಯಕ್ಕೆ ಒಳಗಾದರೆ ಹೂಡಿಕೆ ಮಾಡಿರೋ ಮೊತ್ತದಲ್ಲಿ ಶೇಕಡ 25% ರವರೆಗೂ ಹಣವನ್ನು ವಾಪಸ್ ಪಡೆಯೋಕೆ ಅವಕಾಶ ಇರುತ್ತೆ.

ಎಷ್ಟು ಬಾರಿ ಹೂಡಿಕೆ ಹಣವನ್ನು ತೆಗೆಯಬಹುದು

ಗರಿಷ್ಠ 3 ಸಲ ಈ ರೀತಿ ಹಣ ವಿಥ್ಡ್ರಾ ಮಾಡಿಕೊಳ್ಳಬಹುದು ಅಥವಾ 18 ವರ್ಷಕ್ಕೆ ಖಾತೆಯ ಹೂಡಿಕೆ ನಿಲ್ಲಿಸಿ ಹಣ ವಾಪಸ್ ಪಡೆಯೋಕು ಅವಕಾಶ ಇದೆ. ಖಾತೆಯಲ್ಲಿರುವ ಒಟ್ಟು ಮೊತ್ತ ಎರಡುವರೆ ಲಕ್ಷ ರೂಪಾಯಿಗಿಂತ ಕಡಿಮೆ ಇದ್ರೆ ಎಲ್ಲಾ ಹಣವನ್ನು ಒಟ್ಟಿಗೆ ವಿಥ್ಡ್ರಾ ಮಾಡಿಕೊಳ್ಳಬಹುದು ಆದರೆ ಖಾತೆಯಲ್ಲಿರುವ ಹಣ ಎರಡುವರೆ ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಜಾಸ್ತಿ ಇದ್ರೆ ಅದರಲ್ಲಿ ಶೇಕಡ 25% ರಷ್ಟು ಹಣವನ್ನು ಒಟ್ಟಿಗೆ ಪಡಿಬಹುದು.

ಉಳಿದ 80% ರಷ್ಟು ಹಣವನ್ನು ಪಿಂಚಣಿಗಾಗಿ ಖಾತೆಯಲ್ಲೇ ಉಳಿಸಬೇಕಾಗುತ್ತೆ ಆದರೆ 18 ವರ್ಷ ಆದ್ಮೇಲೆ ಮಕ್ಕಳು ಪೆನ್ಶನ್ ತಗೊಳ್ಳಬಹುದು ಅಕಸ್ಮಾತ್ 18 ವರ್ಷಕ್ಕೂ ಮುಂಚೆನೇ ಅಕಾಲಿಕ ಸಾವಿಗೆ ಏನಾದರೂ ಈಡಾದರೆ ಪೂರ್ತಿ ಹಣ ಪಾಲಕರಿಗೆ ಒಪ್ಪಿಸಲಾಗುತ್ತೆ.

ಇದನ್ನೂ ಓದಿ: Gruha Lakshmi: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ಇಂದು ಬಿಡುಗಡೆ

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment