ಚಿನ್ನ ಉಳಿತಾಯ ಹೂಡಿಕೆ ಯೋಜನೆ 2024!! ಕೆಲವು ಅನುಕೂಲಗಳು, ಕೆಲವು ಅನಾನುಕೂಲಗಳು ಆಗುತ್ತೆ

October 31, 2024 3:34 AM
ಚಿನ್ನ ಉಳಿತಾಯ ಹೂಡಿಕೆ ಯೋಜನೆ 2024!! ಕೆಲವು ಅನುಕೂಲಗಳು, ಕೆಲವು ಅನಾನುಕೂಲಗಳು ಆಗುತ್ತೆ

ಎಲ್ಲರಿಗೂ ನಮಸ್ಕಾರ, ನೀವೇನಾದರೂ Gold Scheme ಗಳಲ್ಲಿ ಹಣವನ್ನು ಇನ್ವೆಸ್ಟ್ಮೆಂಟ್ ಮಾಡಬೇಕು ಅನ್ಕೊಂಡಿದ್ರೆ ಗೋಲ್ಡ್ ಸ್ಕೀಮ್ ಅಂದ್ರೆ ಈಗ ಕೆಲವು Jewellery ಅಂಗಡಿಗಳವರು ಅವರು ತಮ್ಮ ಅಂಗಡಿಯಲ್ಲಿ ಅವರು ಕೆಲವು ಸ್ಕೀಮ್ ಗಳನ್ನ ಬಿಡ್ತಾರೆ ಅದರಲ್ಲಿ ನಾವು ಹಣವನ್ನು ತೋರಿಸಿಕೊಂಡಾಗ ಒಂದು ಆರು ತಿಂಗಳು ಇಲ್ಲ 12 ತಿಂಗಳು ನಾವು ಹಣವನ್ನು ರೆಗ್ಯುಲರ್ ಆಗಿ ತೋರಿಸಿಕೊಂಡಾಗ 12 ತಿಂಗಳು ಆಗೋ ಮೇಲೆ ನಮಗೆ ಆ ಹಣದಲ್ಲಿ ನಾವು ಒಂದು ಇಷ್ಟು ಚಿನ್ನನ ಬೈ ಮಾಡಬಹುದು ಅಂತ ಕೆಲವರು ಸ್ಕೀಮ್ ಗಳು ಕೊಡ್ತಾರೆ.

ಇಲ್ಲಾಂದ್ರೆ ಒಂದು ಕೆಲವು ಆಫರ್ ಗಳು ಕೊಡ್ತಾರೆ ಕೆಲವು ಎಕ್ಸ್ಟ್ರಾ Benefits ಕೂಡ ಸಿಗುತ್ತೆ ಅಂತಾನೂ ಕೂಡ ಹೇಳ್ತಾರೆ ಆದ ಕಾರಣ ಇತರ ಸ್ಕೀಮ್ ಗಳಲ್ಲಿ ನಾವು ಹಣವನ್ನು ತೋರಿಸಿಕೊಂಡಾಗ ಏನೆಲ್ಲಾ ಅನುಕೂಲಗಳು ಆಗುತ್ತೆ ಮತ್ತೆ ಏನೆಲ್ಲಾ ಅನಾನುಕೂಲಗಳು ಆಗಬಹುದು ಅನ್ನೋದನ್ನ ನಾನು ನಿಮಗೆ ಈ ಲೇಖನದಲ್ಲಿ ನಿಮಗೆ ಡೀಟೇಲ್ ಆಗಿ ತಿಳಿಸಿಕೊಡ್ತಾ ಇದೀನಿ. ಈಗಂತೂ ಚಿನ್ನ 7,000 ಮೇಲೆ ಕ್ರಾಸ್ ಆಗಿರೋದ್ರಿಂದ ನಾವು ಒಂದೊಂದು ಗ್ರಾಂ ತಗೊಳ್ಬೇಕು ಅಂದ್ರುನು ನಮ್ಮಲ್ಲಿ ಸಾಕಷ್ಟು ರೀತಿಯಲ್ಲಿ ದೊಡ್ಡ ಮೊತ್ತದ ಹಣ ಹಣವನ್ನೇ ಇರಬೇಕಾಗುತ್ತೆ.

ಆದ ಕಾರಣ ನಾರ್ಮಲ್ ಆಗಿ ಜನಗಳು ಏನು ಮಾಡ್ತಾರೆ ಅಂದ್ರೆ ಈ ಗೋಲ್ಡ್ ಜುವೆಲರ್ ಶಾಖೆಗಳಲ್ಲಿ ಯಾವುದಾದರೂ ಸ್ಕೀಮ್ ಗಳಿದ್ದರೆ ಅದರಲ್ಲಿ ನಾವು ತಿಂಗಳು ತಿಂಗಳು ಈಗ ಒಂದು 5,000 ಅಂತ ಕಟ್ಕೊಂಡು ಹೋದ್ರೆ ವರ್ಷಕ್ಕೆ ಒಂದು 60,000 ಆಗುವಷ್ಟು ನಾವು ಚಿನ್ನವನ್ನ ನಾವು ಬೈ ಮಾಡಬಹುದು. ಆಗ ಅವರು ಕೆಲವು ಮೇಕಿಂಗ್ ಚಾರ್ಜಸ್ ಇಲ್ಲ ಅಂದ್ರೆ ವೇಸ್ಟೇಜ್ ಚಾರ್ಜಸ್ ಅದೆಲ್ಲ ಇರೋದಿಲ್ಲ ಅಂತಾನೂ ಕೆಲವು ಸ್ಕೀಮ್ ಗಳಲ್ಲಿ ಹೇಳ್ತಾರೆ. ಆಗ ಜನಗಳು ಅದಕ್ಕೆ ಅಟ್ರಾಕ್ಟ್ ಆಗಿ ತಮ್ಮ ಹಣವನ್ನು ಅಲ್ಲಿ ಹೂಡಿಕೆ ಮಾಡ್ತಾರೆ.

ಈ ರೀತಿ ಹೂಡಿಕೆ ಮಾಡಿದಾಗ ಕೆಲವು ಸಲಿ ಅನುಕೂಲಗಳು ಆಗುತ್ತೆ ಕೆಲವು ಅನಾನುಕೂಲಗಳು ಆಗುತ್ತೆ.

ಈ ರೀತಿ ಹೂಡಿಕೆ ಮಾಡಿದಾಗ ಕೆಲವು ಅನುಕೂಲಗಳೇನು

ಯಾಕಂದ್ರೆ ಗೋಲ್ಡ್ ಜಾಸ್ತಿ ಆದಾಗೆಲ್ಲಾನು ನಾವು ಕಡಿಮೆ ಮೊತ್ತಕ್ಕೆ ಪ್ರತಿ ತಿಂಗಳು ಇಷ್ಟು ಹಣ ಕಟ್ಟಿದಾಗ ಅಷ್ಟು ಗೋಲ್ಡ್ ನಿಮ್ಮ ಹೆಸರಲ್ಲಿ Allot ಆಗಿರುತ್ತೆ ಆಗ ನಮಗೆ ಜಾಸ್ತಿ ಗೋಲ್ಡ್ ಸಿಗುತ್ತೆ ನಾವು ಒಂದು 12 ತಿಂಗಳು ಇಲ್ಲಾಂದ್ರೆ ಎರಡು ವರ್ಷಕ್ಕೆ ಆದ್ಮೇಲೆ ನಾವು ತಗೊಂಡಾಗ ಚಿನ್ನನ ಇದು ಮೊದಲನೇ ಅಡ್ವಾಂಟೇಜ್ ಮತ್ತೆ ಎರಡನೇ ಅಡ್ವಾಂಟೇಜ್ ಏನಂದ್ರೆ ನಾರ್ಮಲ್ ಆಗಿ ಗೋಲ್ಡ್ ಜುವೆಲರ್ಸ್ ಏನ್ ಮಾಡ್ತಾರೆ ಅಂದ್ರೆ ಕೆಲವು ಆಗ್ಲೇ ಹೇಳಿದ ಹಾಗೆ ಬೋನಸ್ ಗಳು ಕೊಡಬಹುದು ಇಲ್ಲಾಂದ್ರೆ ಡಿಸ್ಕೌಂಟ್ on ಮೇಕಿಂಗ್ ಚಾರ್ಜಸ್ ಕೊಡಬಹುದು ಇಲ್ಲ ಅಂದ್ರೆ ಎಕ್ಸ್ಟ್ರಾ ಗ್ರಾಮ್ಸ್ ಆಫ್ ಚಿನ್ನ ಕೊಡ್ತೀವಿ ಅಂತಾನೂ ಹೇಳಬಹುದು.

ಇವೆಲ್ಲ ಕೆಲವು ಎಕ್ಸ್ಟ್ರಾ ಆಫರ್ ಗಳು ಕೊಟ್ಟಾಗ ಕೆಲವು ಸಲಿ ಇದು ಅಟ್ರಾಕ್ಟಿವ್ ಅಂತಾನೂ ಕಾಣ್ಸುತ್ತೆ ಇದು ಎರಡನೇ ಲಾಭ ಮತ್ತೆ ಮೂರನೇ ಲಾಭ ಏನಂದ್ರೆ ನಾವು ಈ ರೀತಿಯಲ್ಲಿ ಮಾಡಿದಾಗ ನಮ್ಮಲ್ಲಿ ಏನಾಗುತ್ತೆ ಅಂದ್ರೆ ನಿಯಮಿತವಾಗಿ ಹಣವನ್ನು ಉಳಿತಾಯ ಮಾಡಿದಾಗ ಆಗುತ್ತೆ. ಯಾಕಂದ್ರೆ ನಾವು ಪ್ರತಿ ತಿಂಗಳು ಇಷ್ಟು ಮೊತ್ತದ ಹಣವನ್ನು ನಾವು ಚಿನ್ನಕ್ಕೆ ನಾವು ಮೀಸಲಿಟ್ಟಾಗ ನಮ್ಮಲ್ಲಿ ಒಂದು ಶಿಸ್ತು ಉತ್ಪತ್ತಿಯಾಗುತ್ತೆ ಶಿಸ್ತುಬದ್ಧವಾಗಿ ನಾವು ಹಣವನ್ನು ಉಳಿತಾಯ ಮಾಡ್ತೀವಿ ಈ ಗೋಲ್ಡ್ ಪರ್ಚೇಸ್ ಗೋಸ್ಕರ ಇದು ಕೂಡ ಒಂದು ಅನುಕೂಲನೆ ಅಂತಾನೆ ಹೇಳಬಹುದು ಇಷ್ಟೆಲ್ಲ ವಿಷಯಗಳಲ್ಲಿ ನಮಗೆ ಅನುಕೂಲಗಳು ಕಾಣಿಸುತ್ತೆ.

ಈ ರೀತಿ ಹೂಡಿಕೆ ಮಾಡಿದಾಗ ಕೆಲವು ಅನಾನುಕೂಲಗಳೇನು

ಏನೆಲ್ಲಾ ಅನಾನುಕೂಲಗಳು ಆಗಬಹುದು? ನಾರ್ಮಲ್ ಆಗಿ ನಮ್ಮ ಗೋಲ್ಡ್ ಪ್ರೈಸಸ್ ಜಾಸ್ತಿ ಆಗ್ತಿದ್ದಾಗ ಮಾತ್ರ ಈ ಸ್ಕೀಮ್ ಗಳಲ್ಲಿ ನಮಗೆ ಒಂದು ಬೆನಿಫಿಟ್ ಇರುತ್ತೆ ಇನ್ ಕೇಸ್ ಏನಾದ್ರು ಗೋಲ್ಡ್ ಸ್ಕೀಮ್ ಅಲ್ಲಿ ನಾವು ಹಣ ಹೂಡಿದಾಗ 5,000 ಇದ್ರೆ ನಮ್ಮ ಗೋಲ್ಡ್ ಕಡಿಮೆ ಆಗ್ತಾ ಬಂದಾಗ ಈಗ 4500 ಆಗ್ಬಿಟ್ರೆ 5,000 ಇನ್ವೆಸ್ಟ್ಮೆಂಟ್ ಮಾಡಿರುವ ಗೋಲ್ಡ್ 4,500 ಆಗ್ಬಿಟ್ರೆ ನಮಗೆ 500 ಇಲ್ಲಿ ಲಾಸ್ ಆಗುತ್ತೆ ಇದು ಒಂದು ಪ್ರಾಬ್ಲಮ್ ಅಂತಾನೆ ಹೇಳಬಹುದು ನಾರ್ಮಲ್ ಆಗಿ ಮಾರ್ಕೆಟ್ ಮಾರ್ಕೆಟ್ ಅಪ್ ಇದ್ದಾಗ ಈ ತರ ಸಮಸ್ಯೆ ಬರೋದಿಲ್ಲ ಮಾರ್ಕೆಟ್ ಡೌನ್ ಟ್ರೆಂಡಿಂಗ್ ಅಲ್ಲಿ ಇದ್ದಾಗ ಮಾರ್ಕೆಟ್ ಬೀಳೋ ಟ್ರೆಂಡ್ ಅಲ್ಲಿ ಇದ್ದಾಗ ನಾರ್ಮಲ್ ಆಗಿ ಈ ಸಿನಾರಿಯೋ ನಾವು ನೋಡಬಹುದು.

ಎರಡನೇದು ಏನಂದ್ರೆ ಇಲ್ಲಿ ನಾವು ಪ್ರತಿ ತಿಂಗಳು ನಾವು ಹಣವನ್ನು ಹೂಡಿಕೆ ಮಾಡಿದಾಗ ಇನ್ ಕೇಸ್ ಏನಾದರೂ ನಮಗೆ ಎಮರ್ಜೆನ್ಸಿಯಾಗಿ ಹಣ ಬೇಕು ಬೇರೆ ಯಾವುದಕ್ಕೆ ಕಾರಣಕ್ಕೆ ಹಣ ಬೇಕು ಅಂದ್ರೆ ಈ ಹಣವನ್ನು ನಾವು ಯೂಸ್ ಮಾಡೋಕೆ ಆಗಲ್ಲ ಯಾಕಂದ್ರೆ ಈ ಹಣ ಒಂದು ಕಡೆ ಲಾಕ್ ಆಗಿಬಿಡುತ್ತೆ, ಅಲ್ಲಿ ನಾವು ಚಿನ್ನ ಮಾತ್ರ ಬೈ ಮಾಡಬಹುದು ಚಿನ್ನ ಬಿಟ್ಟು ಇನ್ನೇನು ಬೈ ಮಾಡೋದಕ್ಕೆ ಆಗೋದಿಲ್ಲ ಇದು ಕೂಡ ಒಂದು ಅನಾನುಕೂಲನ್ ಅಂತಾನೆ ಹೇಳಬಹುದು.

ಮೂರನೆಯ ಅನಾನುಕೂಲ ಏನಂದ್ರೆ ಇದರಲ್ಲಿ ನಮಗೆ ಯಾವುದೇ ರೀತಿಯ ಇಂಟರೆಸ್ಟ್ ಕೂಡ ಸಿಗೋದಿಲ್ಲ ಇಲ್ಲಿ ಏನಂದ್ರೆ ಚಿನ್ನ ಆ ಡೇಟ್ ಚಿನ್ನ ಏನಿದೆಯೋ ಅಷ್ಟು ಅಲೋಕೇಟ್ ಆಗುತ್ತೆ ಇನ್ ಕೇಸ್ ಏನಾದ್ರೂ ಜಾಸ್ತಿ ಆದ್ರೆ ನಮಗೆ ಹಣ ಜಾಸ್ತಿ ಆಗುತ್ತೆ ಕಡಿಮೆ ಆದ್ರೆ ಕಡಿಮೆ ಆಗುತ್ತೆ ಇದರಲ್ಲಿ ನಮಗೆ ಎಕ್ಸ್ಟ್ರಾ ಇಂಟರೆಸ್ಟ್ ರೇಟ್ ಏನು ಸಿಗೋದಿಲ್ಲ ಈ ರೀತಿಯಲ್ಲಿ ನಾವು ಇನ್ವೆಸ್ಟ್ಮೆಂಟ್ ಮಾಡಿದಾಗ ಗೋಲ್ಡ್ ಅಲ್ಲಿ ಇಂಟರೆಸ್ಟ್ ಬರ್ಲಿಲ್ಲ ಅಂದಾಗ ಜಾಸ್ತಿ ಆಬ್ವಿಯಸ್ ಆಗಿ ನಮಗೆ ಒಂದು ರೀತಿಯಲ್ಲಿ ಲಾಸ್ ಅಂತಾನೆ ಹೇಳಬಹುದು.

ಯಾಕಂದ್ರೆ ಇದೇ ಹಣವನ್ನು ನಾವು ಬೇರೆ ಕಡೆ ಇಟ್ಟಾಗ ಈಗ ಫಿಕ್ಸ್ಡ್ ಡಿಪಾಸಿಟ್ ಇಲ್ಲ ಅಂದ್ರೆ ಮ್ಯೂಚುವಲ್ ಫಂಡ್ಸ್ ಅಲ್ಲಿ ಇಟ್ಟಾಗ ಈವನ್ ಫಿಕ್ಸ್ಡ್ ಡಿಪಾಸಿಟ್ ಅಲ್ಲಿ ಇಟ್ಟರೆ ನಿಮಗೆ ಸೆವೆನ್ ಟು 8% ನಿಮಗೆ ಇಂಟರೆಸ್ಟ್ ಸಿಗುತ್ತೆ. ಅದೇ ಮ್ಯೂಚುವಲ್ ಫಂಡ್ಸ್ ಅಲ್ಲಿ ಇಟ್ಟರೆ ನಾರ್ಮಲ್ ಆಗಿ 10 ಟು 12% ನಿಮಗೆ ಆವರೇಜ್ ರಿಟರ್ನ್ ಸಿಕ್ಕೆ ಸಿಗುತ್ತೆ ಇದು ಒಂದು ಲಾಸ್ ಅಂತಾನೆ ಹೇಳಬಹುದು.

Hidden ಕಾಸ್ಟ್ ಇರುತ್ತೆ

ನಾವು ಈ ತರ ಸ್ಕೀಮ್ ಗಳಲ್ಲಿ ಆಡ್ ಮಾಡಿದಾಗ ಹಣವನ್ನು ಏನಂದ್ರೆ ಹಿಡನ್ ಕಾಸ್ಟ್ ಯಾವುದಾದರೂ ಇರಬಹುದು ಅಂದ್ರೆ ನಿಮಗೆ ಮೇಕಿಂಗ್ ಚಾರ್ಜಸ್ ಇರಬಹುದು ಎಕ್ಸ್ಟ್ರಾ ಫೀಸಸ್ ಕೂಡ ಅವರು ನಿಮಗೆ ಚಾರ್ಜ್ ಮಾಡಬಹುದು ಗೋಲ್ಡ್ ಕಂಪನಿಗಳವರು ಇಲ್ಲಿ ಏನಾಗುತ್ತೆ ಅಂದ್ರೆ ನಮಗೆ ಇಲ್ಲಿ ನಾವು ಗೋಲ್ಡ್ ಅನ್ನೋದು ಸಿಗುತ್ತೆ ನಾವು ಆ ಗೋಲ್ಡ್ ನ ನಾವು ಜುವೆಲರಿಯಾಗಿ ಕನ್ವರ್ಟ್ ಮಾಡಿದಾಗ ನಮಗೆ ಅಲ್ಲಿ Excess ಆಗಿ ನೀವು ಮೇಕಿಂಗ್ ಚಾರ್ಜಸ್ ಕೂಡ ಪೇ ಮಾಡಬೇಕಾಗುತ್ತೆ ಈಗ ಒಂದು 10% ಮೇಕಿಂಗ್ ಚಾರ್ಜಸ್ ಅಂದ್ರೆ ನಿಮಗೆ 1 ಲಕ್ಷದಲ್ಲಿ 10,000 ನಿಮಗೆ ಎಕ್ಸ್ಟ್ರಾ ಕೂಡ ನೀವು ಪೇ ಮಾಡಬೇಕಾಗುತ್ತೆ ಮೇಕಿಂಗ್ ಚಾರ್ಜಸ್ ಅಂದ್ಬಿಟ್ಟು, ಆಗ ಏನಾಗುತ್ತೆ ಅಂದ್ರೆ ನಿಮಗೆ Profit ಏನು ಅಂತ ಅನ್ಕೊಂಡಿದ್ವೋ ಅದು ಕಂಪ್ಲೀಟ್ ಆಗಿ ಲಾಸ್ ಆಗುತ್ತೆ ಯಾಕಂದ್ರೆ ಓವರ್ ಆಲ್ ಆಗಿ ಗೋಲ್ಡ್ ಜೊತೆಯಲ್ಲಿ ನಾವು 10% ನಾವು ಕೊಡಬೇಕಾಗುತ್ತೆ ಆಗ ನಮಗೆ ಓವರ್ ಆಲ್ ಆಗಿ ಲಾಸ್ ಅಂತಾನೆ ಹೇಳಬಹುದು.

ಯಾಕಂದ್ರೆ ನಾವು ಬೇರೆ ಇನ್ವೆಸ್ಟ್ಮೆಂಟ್ ಗೆ ಕಂಪೇರ್ ಮಾಡಿದಾಗ ಎಫ್ಡಿ, ಮ್ಯೂಚುವಲ್ ಫಂಡ್ಸ್ ಕಂಪೇರ್ ಮಾಡಿದಾಗ ನಮಗೆ ಇಲ್ಲಿ ದೊಡ್ಡ ಲಾಸ್ ಅಂತಾನೆ ಹೇಳಬಹುದು ಮತ್ತೊಂದು ಮೇಜರ್ ಪ್ರಾಬ್ಲಮ್ಸ್ ಏನಾಗಬಹುದು ನಾವು ಇತರ ಜುವೆಲರಿ ಕಂಪನಿಗಳಲ್ಲಿ ಹಣವನ್ನು ತೋರಿಸಿಕೊಂಡು ಚಿನ್ನವನ್ನು ಬೈ ಮಾಡಬೇಕು ಅಂದಾಗ ಕೆಲವು ಸಲ ಏನಾಗುತ್ತೆ ಅಂದ್ರೆ ಎಲ್ಲಾ ಜುವೆಲರ್ ಕಂಪನಿಗಳು ಪ್ರಾಬ್ಲಮ್ ಅಲ್ಲಿ ಸಿಕ್ಕಾಕಿಕೊಳ್ಳುತ್ತೆ ಅಂತ ಅಂತ ಹೇಳೋಕೆ ಆಗಲ್ಲ ಕೆಲವು ಜಿನೈನ್ ಆಗಿರಬಹುದು ಕೆಲವು ಜಿನೈನ್ ಅಲ್ಲದಿರೋ ಗೋಲ್ಡ್ ಕಂಪನಿಗಳಲ್ಲಿ ಏನಾಗುತ್ತೆ ಅಂದ್ರೆ ಕೆಲವು ಸಲಿ ಮಿಸ್ ಮ್ಯಾನೇಜ್ಮೆಂಟ್ ಆದಾಗ ಸಾಕಷ್ಟು ಫ್ರಾಡ್ ಆದಾಗ ನಮಗೆ ಇತರ ಜುವೆಲರಿ ಇನ್ಸ್ಟಿಟ್ಯೂಷನ್ ಗಳಲ್ಲಿ ನಾವೇನಾದ್ರು ಸ್ಕೀಮ್ ಗಳಲ್ಲಿ ಹಣವನ್ನು ತೋರಿಸಿಕೊಂಡಾಗ ಆಗ ಸಾಕಷ್ಟು ರೀತಿಯಲ್ಲಿ ಫೈನಾನ್ಸಿಯಲ್ ಪ್ರಾಬ್ಲಮ್ ಕೂಡ ಆಗಬಹುದು ಸಾಕಷ್ಟು ತೊಂದರೆಗಳು ಕೂಡ ನಾವು ಸಿಕ್ಕಾಕಿಕೊಳ್ಳಬಹುದು.

ಕೆಲವು ಸಲಿ ನಾವು ಹಾಕಿರುವ ಬಂಡವಾಳ ಕೂಡ ಕಂಪ್ಲೀಟ್ ಆಗಿ ಲಾಸ್ ಕೂಡ ಆಗಬಹುದು ಹಾಗೆ ಏನಾಗುತ್ತೆ ಅಂದ್ರೆ ನಾವು ಕೋರ್ಟ್ಗೆ ಹೋಗಬೇಕು ಕಚೇರಿಗೆ ಹೋಗಬೇಕು ಈ ತರ ಎಲ್ಲ ಮಾಡಿದಾಗ ನಮಗೆ ಸಾಕಷ್ಟು ರೀತಿಯಲ್ಲಿ ಟೈಮ್ ವೇಸ್ಟ್ ಆಗುತ್ತೆ ಹಣವು ವೇಸ್ಟ್ ಆಗುತ್ತೆ ಮತ್ತೆ ಮೆಂಟಲ್ ಟಾರ್ಚರ್ ಕೂಡ ಆಗುತ್ತೆ ಆದಕಾರಣ ಆಗಲೇ ಹೇಳಿದ ಹಾಗೆ ಕೆಲವು ಅನುಕೂಲಗಳು ಇದೆ ಮತ್ತೆ ಅನಾನುಕೂಲಗಳು ಇದೆ ಆದಕಾರಣ ನೀವು ಇಲ್ಲಿ ಹಣವನ್ನು ಇನ್ವೆಸ್ಟ್ಮೆಂಟ್ ಮಾಡಿದಾಗ ನಿಮಗೆ ಯಾವುದು ಅನುಕೂಲ ಜಾಸ್ತಿ ಇದೆಯೋ ಯಾವುದು ಅನಾನುಕೂಲ ನಿಮಗೆ ಜಾಸ್ತಿ ಪ್ರಾಬ್ಲಮ್ ಅನ್ಸುತ್ತೋ ಅವೆಲ್ಲ ನೋಡ್ಕೊಂಡು ಇಲ್ಲಿ ಹಣವನ್ನು ಇನ್ವೆಸ್ಟ್ಮೆಂಟ್ ಮಾಡಿದ್ರೆ ಸೂಕ್ತ

ಇದನ್ನೂ ಓದಿ: Crop Insurance Status Check 2024!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment