ದೆಹಲಿ ವಾಯುಗುಣಮಟ್ಟ Google Air Quality Monitoring.! ಇಲ್ಲಿದೆ ಮಾಹಿತಿ 

November 30, 2024 1:45 PM
ದೆಹಲಿ ವಾಯುಗುಣಮಟ್ಟ Google Air Quality Monitoring.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ,  ದೆಹಲಿಯ ವಾಯುಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡ್ತಾ ಇದೆ ಈ ಹಿನ್ನೆಲೆಯಲ್ಲಿ ಏರ್ ಕ್ವಾಲಿಟಿ ಬಗ್ಗೆ ಮಾಹಿತಿ ನೀಡಲು ಗೂಗಲ್ ಮ್ಯಾಪ್ ಮುಂದಾಗಿದೆ ಸಂಶೋಧಕರು ನಾಗರಿಕರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಸವಾಲನ್ನ ಎದುರಿಸಲು ಗೂಗಲ್ ನೆರವಾಗಿದೆ ಈ ಬಗ್ಗೆ ಮಾಹಿತಿ ಇಲ್ಲಿದೆ ಭಾರತದ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪರಿಸ್ಥಿತಿ ಕಳವಳಕಾರಿ ಮಟ್ಟ ತಲುಪಿದೆ ಇನ್ನು ಅಲ್ಲಿ ದಟ್ಟ ಹೊಗೆ ಕವಿದಿದೆ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದ್ದು ಕಳಪೆ ವರ್ಗದಲ್ಲಿದೆ.

ಹೀಗಾಗಿ ವಾಯುಗುಣಮಟ್ಟ ಮಾಹಿತಿ ನೀಡಲು ಏರ್ ವ್ಯೂ ಪ್ಲಸ್ ಫೀಚರ್ ಅನ್ನ ಗೂಗಲ್ ಪರಿಚಯಿಸಿದೆ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಹೈಪರ್ ಲೋಕಲ್ ವಾಯುಗುಣಮಟ್ಟದ ಮಾಹಿತಿ ನೀಡಲಿದೆ ದೆಹಲಿ ಎನ್ ಸಿ ಆರ್ ನಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರುತ್ತಿರುವ ವೇಳೆಯಲ್ಲಿ ಹೊಸ ಫೀಚರ್ ಹೊರಬಂದಿದೆ ವಾಯುಮಾಲಿನ್ಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರ್ತಾ ಇದೆ.

Google Air Quality Monitoring

ವಾಯುಗುಣಮಟ್ಟದ ಮೇಲಿನ ಅಪೂರ್ಣ ಮಾಹಿತಿಯಿಂದಾಗಿ ಹೈಪರ್ ಲೋಕಲ್ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವ ಸಾಮರ್ಥ್ಯವನ್ನ ಸೀಮಿತಗೊಳಿಸಿದೆ ಆಗಿದೆ ಸ್ಥಳೀಯ ಹವಾಮಾನ ತಂತ್ರಜ್ಞಾನ ಸಂಸ್ಥೆಗಳು ಮತ್ತು ಸ್ಥಳೀಯ ಸ್ಟಾರ್ಟ್ ಅಪ್ ಗಳು ಸಂಶೋಧಕರು ಅಥವಾ ಕ್ಲೈಮೇಟ್ ಆಕ್ಷನ್ ಗುಂಪುಗಳು ನಿಗಮಗಳು ನಗರ ನಿರ್ವಾಹಕರು ಮತ್ತು ನಾಗರಿಕರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಈ ಸವಾಲನ್ನ ಎದುರಿಸಲು ಗೂಗಲ್ ನೆರವಾಗಿದೆ ಇದಕ್ಕಾಗಿ ಏರ್ ವ್ಯೂ ಪ್ಲಸ್ ಪರಿಚಯಿಸಿದೆ ಈ ಹಿಂದೆ ವಾಯುಗುಣಮಟ್ಟದ ಮೇಲ್ವಿಚಾರಣೆಗೆ ಅಗತ್ಯ ಮೂಲ ಸೌಕರ್ಯಗಳ ಕೊರತೆ ಇರುವ ನಗರಗಳಲ್ಲಿ ಏರ್ ಕ್ವಾಲಿಟಿ ಸೆನ್ಸರ್ ನೆಟ್ವರ್ಕ್ ಸ್ಥಾಪಿಸುವಲ್ಲಿ ಕ್ಲೈಮೇಟ್ ಟೆಕ್ ಸಂಸ್ಥೆಗಳಾದ ಔರ ಶೂರ್ ಮತ್ತು ರೆಸ್ಪೈರ್ ಲಿವಿಂಗ್ ಸೈನ್ಸ್ ಪ್ರಮುಖ ಪಾತ್ರ ವಹಿಸಿದ್ವು ಈ ಸೆನ್ಸರ್ ಗಳು ತಾಪಮಾನ ಮತ್ತು ತೇವಾಂಶದ ಜೊತೆಗೆ pm 25 pm 10 co2 no2 ಓಜೋನ್ ಮತ್ತು VOC ಗಳಂತಹ ಗಾಳಿಯ ಗುಣಮಟ್ಟದ ನಿಯಂತ್ರಕಗಳನ್ನ ಪ್ರತಿ ನಿಮಿಷಕ್ಕೆ ಅಳತೆ ಮಾಡುತ್ತೆ.

ಈ ಸೆನ್ಸರ್ ಗಳನ್ನ ಆಡಳಿತ ಸಂಸ್ಥೆಗಳು ಯುಟಿಲಿಟಿ ಪೊಲೀಸ್ ವಾಣಿಜ್ಯ ಕಟ್ಟಡಗಳು ಇತ್ಯಾದಿಗಳಂತಹ 150ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ನಿಯೋಜಿಸಲಾಗಿದೆ ಅಷ್ಟೇ ಅಲ್ಲದೆ ಅವುಗಳು ನಿರಂತರವಾಗಿ ಏರ್ ಕ್ವಾಲಿಟಿಯನ್ನ ಮೇಲ್ವಿಚಾರಣೆ ಮಾಡುತ್ತಲೇ ಇರುತ್ತೆ ಐಟಿ ದೆಹಲಿ ಐಟಿ ಹೈದರಾಬಾದ್ ರಾಜ್ಯ ಮಾಲಿನ್ಯ ಮಂಡಳಿಗಳು ಮತ್ತು ಸಿ ಎಸ್ ಡಿ ಇಪಿ ನಂತಹ ಕ್ಲೈಮೇಟ್ ಆಕ್ಷನ್ ಗುಂಪುಗಳ ಸ್ಥಳೀಯ ಸಂಶೋಧಕರ ಬೆಂಬಲದೊಂದಿಗೆ ಈ ಸೆನ್ಸರ್ ಗಳನ್ನ ಕಟ್ಟುನಿಟ್ಟಾಗಿ ಮೌಲಿಕರಿಸಲಾಗಿದೆ ಒಳನೋಟಗಳನ್ನ ತ್ವರಿತವಾಗಿ ಮತ್ತು ಪ್ರಮಾಣದಲ್ಲಿ ಲೆಕ್ಕಾಚಾರ ಮಾಡಲು ಸಂಶೋಧಕರು ಮತ್ತು ಸಮರ್ಥನೀಯ ಸ್ಟಾರ್ಟ್ ಅಪ್ ಗಳಿಂದ ಗೂಗಲ್ ಎಐ ಅನ್ನ ಬಳಸಿಕೊಂಡು ಡೇಟಾವನ್ನ ವಿಶ್ಲೇಷಿಸಲಾಗಿದೆ ಎಂದು ಗೂಗಲ್ ಹೇಳಿದೆ.

ಗೂಗಲ್ ಎಐ ನಿಂದ ನಡೆಸಲ್ಪಡುವ ಏರ್ ವ್ಯೂ ಪ್ಲಸ್ ಭಾರತ ಭಾರತದಾದ್ಯಂತ ಬಳಕೆದಾರರಿಗೆ ಗೂಗಲ್ ಮ್ಯಾಪ್ ನಲ್ಲಿ ರಿಯಲ್ ಟೈಮ್ ನ ಹೈಪರ್ ಲೋಕಲ್ ವಾಯುಗುಣಮಟ್ಟದ ಮಾಹಿತಿ ನೀಡುತ್ತೆ ಅಷ್ಟೇ ಅಲ್ಲ ಪರಿಸರ ಮೇಲ್ವಿಚಾರಣೆ ಮತ್ತು ನಗರ ಯೋಜನೆಗೆ ಜವಾಬ್ದಾರರಾಗಿರುವ ಸರ್ಕಾರಿ ಏಜೆನ್ಸಿಗಳಿಗೆ ಮೌಲ್ಯಯುತವಾದ ವಾಯುಗುಣಮಟ್ಟದ ಒಳನೋಟವನ್ನು ಲಭ್ಯವಾಗುವಂತೆ ಮಾಡುತ್ತೆ ಬಳಕೆದಾರರು ಇದೀಗ ಗೂಗಲ್ ಮ್ಯಾಪ್ ಬಳಸಿಕೊಂಡು ಭಾರತದಾದ್ಯಂತ ಹೈಪರ್ ಲೋಕಲ್ ವಾಯುಗುಣಮಟ್ಟದ ಮಾಹಿತಿ ಪಡೆಯಬಹುದಾಗಿದೆ.

ಸೆನ್ಸಾರ್ ನೆಟ್ವರ್ಕ್ ಗಳು ಸರ್ಕಾರಿ ಡೇಟಾ ಉಪಗ್ರಹ ಚಿತ್ರಣ ಹವಾಮಾನ ಮತ್ತು ವಾಯು ಮಾದರಿ ಗಳು ಟ್ರಾಫಿಕ್ ಪರಿಸ್ಥಿತಿಗಳು ಲ್ಯಾಂಡ್ ಕವರ್ ಸೇರಿದಂತೆ ಹೆಚ್ಚಿನವುಗಳಂತಹ ವಿವಿಧ ಇನ್ಪುಟ್ ಮೂಲಗಳಿಂದ ಡೇಟಾವನ್ನ ಒಟ್ಟುಗೂಡಿಸುವ ಮಲ್ಟಿ ಲೇಯರ್ಡ್ AI ವಿಧಾನವನ್ನು ಬಳಸಿಕೊಂಡು ಗೂಗಲ್ ಇದನ್ನ ಸಾಧಿಸಿದೆ ಗೂಗಲ್ ಮ್ಯಾಪ್ ನಲ್ಲಿ ಎಕ್ಯುಐ ಒಳನೋಟಗಳಿಗಾಗಿ ಹೋಂ ಸ್ಕ್ರೀನ್ ನಲ್ಲಿರುವ ಲೇಯರ್ ಬಟನ್ ಇಂದ ಏರ್ ಕ್ವಾಲಿಟಿ ಲೇಯರ್ ಆಯ್ಕೆ ಮಾಡಿ ಬಳಿಕ ನೀವು ಮ್ಯಾಪ್ ನಲ್ಲಿ ಯಾವುದೇ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು ಆಗ ಅದು ಆ ಸ್ಥಳದ ಎಕ್ಯುಐ ಮಾಹಿತಿ ನೀಡುತ್ತೆ.

ಇದನ್ನೂ ಓದಿ: BPL Card Update: ರದ್ದಾಗಿರುವ BPL ಕಾರ್ಡ್ ಗಳು ವಾಪಸ್ ರಿಲೀಸ್.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment