ಎಲ್ಲರಿಗೂ ನಮಸ್ಕಾರ, ಕರ್ನಾಟಕ ಸರ್ಕಾರವು ಬಿಪಿಎಲ್ ಕಾರ್ಡನ್ನು ಹೊಂದಿರುವವರಿಗೆ ಹೊಸ ಅಪ್ಡೇಟ್ ನೊಂದಿಗೆ ಸಿಹಿ ಸುದ್ದಿಯನ್ನು ನೀಡಿದೆ. ಈಗಾಗಲೇ ರದ್ದಾಗಿರುವ ಸಾಕಷ್ಟು ಬಿಪಿಎಲ್ ಕಾರ್ಡ್ ಗಳು ಅರ್ಹರ ಫಲಾನುಭವಿಗಳ ಕೈಗೆ ಮತ್ತೆ ದೊರಕಿದೆ.
ಸರ್ಕಾರವು ಅರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್ಗಳನ್ನು ಮತ್ತೆ ಪರಿಶೀಲನೆ ಮಾಡಿ ಹಿಂದಿರುಗಿಸುತ್ತಿದೆ ಹಾಗೂ ಇದರ ಜೊತೆ ಫಲಾನುಭವಿಗಳು ಕೂಡ ನಿಟ್ಟುಸಿರನ್ನು ಬಿಟ್ಟಿದ್ದಾರೆ. ಈ ಜೊತೆ ವಿಷಯದ ಜೊತೆ ಇದೀಗ ಸರ್ಕಾರವು ಒಂದು ಹೊಸ ಅಪ್ಡೇಟ್ ಹಾಗೂ ಸಿಹಿ ಸುದ್ದಿಯನ್ನು ಜನರಿಗೆ ನೀಡಿದೆ.
ನಾಳೆ ಸಂಜೆ ಒಳಗೆ ಅರ್ಹರ ಎಲ್ಲ BPL ಕಾರ್ಡ್ ವಾಪಸ್ – ಕೆಎಚ್ ಮುನಿಯಪ್ಪ
ಕೆಲವು ದಿನಗಳಿಂದ ಬಿಪಿಎಲ್ ಕಾರ್ಡ್ ರದ್ದು ಆಗುವುದು ಅಥವಾ ಎಪಿಎಲ್ ಗೆ ಬದಲಾಗುವುದು ಬಾರಿ ಸದ್ದನ್ನು ಮಾಡಿದ್ದು. ಆಹಾರ ಇಲಾಖೆಯು ಅನರ್ಹರ ಜೊತೆ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ಕೂಡ ಅಮಾನತುಗೊಳಿಸಿದ್ದು ಇದರಿಂದ ಬಡ ಜನರ ಆಕ್ರೋಶಕ್ಕೆ ಗುರಿಯಾಗಿತ್ತು.
ಈ ವಿಷಯವಾಗಿ ಸುದ್ದಿಗೋಷ್ಠಿಯನ್ನು ನಡೆಸಿ ಕೆ ಎಚ್ ಮುನಿಯಪ್ಪನವರ ಬಡವರ ಬಿಪಿಎಲ್ ಕಾರ್ಡ್ಗಳನ್ನು ಯಾವುದೇ ಕಾರಣಕ್ಕೂ ರದ್ದಾಗಲು ಬಿಡುವುದಿಲ್ಲ. ಒಂದು ವೇಳೆ ಅರ್ಹರ ಬಿಪಿಎಲ್ ಕಾರ್ಡ್ ಗಳು ಅಮಾನತುಗೊಳಿಸಿದ್ದಾರೆ ಅವುಗಳನ್ನು ಆದಷ್ಟು ಬೇಗ ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದೀಗ ನಾಳೆ ಸಂಜೆ ಒಳಗೆ ಎಲ್ಲಾ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ವಾಪಸ್ ಮಾಡುವುದಾಗಿ ಹೇಳಿದ್ದಾರೆ.
ಎರಡು ತಿಂಗಳಿನ ರೇಷನ್ ಬಿಡುಗಡೆ – ಆಹಾರ ಇಲಾಖೆಯಿಂದ ಸಂತಸದ ಸುದ್ದಿ:
ಈಗ ರಾಜ್ಯದಲ್ಲಿ ಬಿಪಿಎಲ್ ಬಡಿದಾಟ ತಣ್ಣಗಾಗಿದೆ ಹಾಗೂ ಅಮಾನತುಗೊಳಿಸಲಾಗಿದ್ದ ಅರ್ಹರ ಬಿಪಿಎಲ್ ಕಾರ್ಡ್ ಗಳು ಮತ್ತೆ ಮರಳಿ ಅವರ ಕೈಗೆ ಸೇರುತ್ತವೆ.
ಕಾರ್ಡ್ ಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಜನರು ಈಗ ಸಂತಸ ಗೊಂಡಿದ್ದಾರೆ. ಇದರ ಜೊತೆ ಇದೀಗ ಸರ್ಕಾರವು ಹಾಗೂ ಆಹಾರ ಇಲಾಖೆಯು ಒಂದು ಹೊಸ ಅಪ್ಡೇಟಿನ ಜೊತೆ ಸಂತಸದ ಸುದ್ದಿ ಅಂತನ್ನು ನೀಡಿದೆ.
ರಾಜ್ಯದಲ್ಲಿ ಕಾರ್ಡುಗಳು ಅಮಾನತು ಆಗುತ್ತಿದ್ದಂತೆ ಪಡಿತರ ವಿತರಣೆ ಕೂಡ ಬಂದಾಗಿತ್ತು. ಎರಡು ತಿಂಗಳಿನಿಂದ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕಾರ್ಡ್ ಮರು ಸ್ಥಾಪನೆ ಆಗುತ್ತಿದ್ದಂತೆ ಎರಡು ತಿಂಗಳ ಆಹಾರ ಧಾನ್ಯ ಫಲಾನುಭವಿಗಳಿಗೆ ಸಿಗಲಿದೆ.
ಆಹಾರ ಇಲಾಖೆಯು ಎರಡು ತಿಂಗಳಿನ ರೇಷನ್ ಅನ್ನು ಫಲಾನುಭವಿಗಳಿಗೆ ಒಟ್ಟಿಗೆ ನೀಡಲು ತೀರ್ಮಾನಿಸಿದೆ. ಡಿಸೆಂಬರ್ ತಿಂಗಳಿನಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನ ಬಾಕಿ ಇರುವ ರೇಷನ್ ಅನ್ನು ವಿತರಣೆ ಮಾಡುವುದಾಗಿ ವಿಚಾರ ಮಾಡಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ Update ಮಾಡುವ ಕೊನೆಯ ದಿನಾಂಕ





