ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ!! ಈ ಕಾರಣಕ್ಕೆ ಯೋಜನೆಗಳ ಹಣ ಪೆಂಡಿಂಗ್ ಅಲ್ಲಿ ಇತ್ತು!! ಇಲ್ಲಿದೆ ಮಾಹಿತಿ 

November 17, 2024 5:55 AM
ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ!! ಈ ಕಾರಣಕ್ಕೆ ಯೋಜನೆಗಳ ಹಣ ಪೆಂಡಿಂಗ್ ಅಲ್ಲಿ ಇತ್ತು!! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದ ಸರ್ಕಾರವು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪ್ರಮುಖವಾದ ಗುಡ್ ನ್ಯೂಸ್ ಅನ್ನು ಬಿಡುಗಡೆ ಮಾಡಿದೆ. ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ನಲ್ಲಿ ಇದ್ದ ಅಕ್ಕಿ ಬದಲಿನ ಹಣವು ಕರ್ನಾಟಕದಾದ್ಯಂತ ಬಿಡುಗಡೆಯಾಗಲು ಪ್ರಾರಂಭವಾಗಿದೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ  ಹಣದವರೆಗೂ ಸರ್ಕಾರವು ಫಲಾನುಭವಿಗಳಿಗೆ ಹಾಕಿದ್ದಾರೆ.  ಸರ್ಕಾರದ ಕಡೆಯಿಂದ ಅನ್ನಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡಲು ತಡವಾದರೂ ಕೂಡ ಈಗ ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಇದರ ಬಗ್ಗೆ ವಿವರವಾಗಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ನಲ್ಲಿರುವ ಹಣ ಬಿಡುಗಡೆ:

ಸ್ನೇಹಿತರೆ ಸರ್ಕಾರವು ಅನ್ನಭಾಗ್ಯ ಯೋಜನೆಯ ಬಿಡುಗಡೆ ಮಾಡದಿರುವ ಹಣವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. 

ಯಾವ ಕಾರಣಕ್ಕೆ ಯೋಜನೆಗಳ ಹಣ ಪೆಂಡಿಂಗ್ ಅಲ್ಲಿ ಇತ್ತು:

ಮಹಾರಾಷ್ಟ್ರ ಎಲೆಕ್ಷನ್ ನಡೆಯುತ್ತಿರುವ ಕಾರಣ ಕಾಂಗ್ರೆಸ್ ಸರ್ಕಾರವೇ ತಮ್ಮ ಯೋಜನೆಗಳ ಪೆಂಡಿಂಗ್ ಇಟ್ಟಿರುವ ಹಣವನ್ನು  ಈಗಾಗಲೇ ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. 15ನೇ ಕಂತಿನ ಹಣವನ್ನು ಕೂಡ ನವೆಂಬರ್ ಅಂತ್ಯದಲ್ಲಿ ಅಥವಾ ಡಿಸೆಂಬರ್ ಪ್ರಾರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳು ಇದೆ. 

ಆಗಸ್ಟ್ ತಿಂಗಳಿನ ಅನ್ನ ಭಾಗ್ಯ ಯೋಜನೆಯ ಅಕ್ಕಿ ಬದಲಿನ ಹಣವು  ಸುಮಾರು 30ರಷ್ಟು ಜನರಿಗೆ ಮಾತ್ರ ಬಿಡುಗಡೆಯಾಗಿತ್ತು. ಇದೀಗ ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ ಬಾಕಿ ಇರುವ ಎಲ್ಲಾ ಫಲಾನುಭವಿಗಳಿಗೆ ಹಣವನ್ನು ಖಾತೆಗೆ ಜಮಾ ಮಾಡಲು ಶುರು ಮಾಡಿದ್ದಾರೆ.

ಜುಲೈ ತಿಂಗಳಿನ ಹಣ ಬರೆದಿರುವವರಿಗೆ ಒಟ್ಟಿಗೆ ಜುಲೈ ಮತ್ತು ಆಗಸ್ಟ್ ತಿಂಗಳಿನ ಹಣ ಜಮಾ ಆಗುತ್ತದೆ. 

ಗೃಹಲಕ್ಷ್ಮಿ ಯೋಜನೆ 14ನೇ ಕಂತಿನ ಹಣವು ಬಹುತೇಕ ಜನರಿಗೆ ಬಿಡುಗಡೆ:

ಸ್ನೇಹಿತರೆ ಸುಮಾರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣವನ್ನು ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಬಿಡುಗಡೆ ಮಾಡಿರಲಿಲ್ಲ. 

ಇದೀಗ ಸುಮಾರು 90ರಷ್ಟು ಫಲಾನುಭವಿಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿದ್ದಾರೆ.

ಒಂದು ವೇಳೆ ನಿಮಗೆ 13ನೇ ಮತ್ತು 14ನೇ ಕಂತಿನ  ಗೃಹಲಕ್ಷ್ಮಿ ಹಣ  ಬಂದಿಲ್ಲ ಎಂದರೆ ಸಮಸ್ಯೆ ಇಲ್ಲ. 

ನಿಮ್ಮ ಸ್ಟೇಟಸ್ಅನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ” PUSHED TO DBT “ಎಂದು ತೋರಿಸುತ್ತಿದ್ದಾರೆ. ನಿಮಗೆ ಖಂಡಿತವಾಗಿಯೂ ಹಣ ಬರುತ್ತದೆ. 

ನಿಮಗೆ 15ನೇ ಕತ್ತಿನ ಹಣವನ್ನು ಜಮಾ ಮಾಡಿದಾಗ ಒಟ್ಟಿಗೆ ಪೆಂಡಿಂಗ್  ಹಣವು ಕೂಡ ಜಮಾ ಆಗುತ್ತದೆ. 

ಇದನ್ನೂ ಓದಿ: ಈ ಶ್ರಮ ಕಾರ್ಡ್ ಇದ್ದರೆ 2 ದಿನಗಳಲ್ಲಿ BPL ಕಾರ್ಡ್ ಪಡೆಯಬಹುದು!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment