ಎಲ್ಲರಿಗೂ ನಮಸ್ಕಾರ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಇನ್ನು ಮಳೆ ಬಾಧಿತ ಈ ಪಂದ್ಯದಲ್ಲಿ 51 ರನ್ ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 213 ರನ್ ಗಳಿಸುವಷ್ಟರಲ್ಲಿ ಒಂಬತ್ತು ವಿಕೆಟ್ ಕಳೆದುಕೊಳ್ತು ಅತ್ತ ಆಸ್ಟ್ರೇಲಿಯಾ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 445 ರನ್ ಗಳಿಸಿದ್ದರಿಂದ ಟೀಮ್ ಇಂಡಿಯಾ ಫಾಲೋ ಆನ್ ತಪ್ಪಿಸಿಕೊಳ್ಳಲು 246 ರನ್ ಕಲೆಹಾಕುವುದು ಅನಿವಾರ್ಯವಾಗಿತ್ತು ಆದರೆ ಕೊನೆಯ ವಿಕೆಟ್ಗೆ ಜೊತೆಯಾದ ಜಸ್ಪ್ರೀತ್ ಬುಮ್ರಾ ಹಾಗೂ ಆಕಾಶ್ ದೀಪ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಇನ್ನು ಅತ್ತ ಆಸ್ಟ್ರೇಲಿಯನ್ನರು ಕೊನೆಯ ವಿಕೆಟ್ಗಾಗಿ ಹರಸಾಹಸ ಪಟ್ಟರೆ ಇತ್ತ ಟೀಮ್ ಇಂಡಿಯಾ ಫಾಲೋ ಆನ್ ತಪ್ಪಿಸಲು 33 ರನ್ಗಳ ಲೆಕ್ಕಾಚಾರಕ್ಕೆ ಇಳಿದಿತ್ತು.
ಇನ್ನು ಪ್ಯಾಟ್ ಕಮಿನ್ಸ್ ಎಸೆದ 75ನೇ ಓವರ್ ನ ಎರಡನೇ ಎಸೆತದಲ್ಲಿ ಆಕಾಶ್ ದೀಪ್ ಫೋರ್ ಬಾರಿಸ್ತಾ ಇದ್ದಂತೆ ಟೀಮ್ ಇಂಡಿಯಾದ ಮೊತ್ತವು 246 ಕ್ಕೆ ತಲುಪಿದೆ ಇತ್ತ ಭಾರತ ತಂಡವು ಫಾಲೋ ಆನ್ ತಪ್ಪಿಸಿಕೊಳ್ಳುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್ನಲ್ಲಿ ಭಾರತೀಯರ ಸಂಭ್ರಮ ಮುಗಿಲುಮುಟ್ಟಿತ್ತು.
ಇನ್ನು ಭಾರತ ತಂಡದ ಮೊತ್ತ 246 ಕ್ಕೆ ಏರ್ತಾ ಇದ್ದಂತೆ ವಿರಾಟ್ ಕೊಹ್ಲಿ ಎದ್ದು ಗೌತಮ್ ಗಂಭೀರ್, ರೋಹಿತ್ ಶರ್ಮ ಹಾಗೂ ಅಭಿಷೇಕ್ ನಾಯರ್ ಅವರೊಂದಿಗೆ ಹೈ ಫೈ ಮಾಡುವ ಮೂಲಕ ಸಂಭ್ರಮಿಸಿದ್ರು.
ಇದನ್ನೂ ಓದಿ: Green ಫಾಸ್ಟ್ ಟ್ಯಾಗ್ ಉದ್ಘಾಟನೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ.!





