ಎಲ್ಲರಿಗೂ ನಮಸ್ಕಾರ, 2024 ಕ್ಕೆ ಗುಡ್ ಬಾಯ್ ಹೇಳಲು ಕೌಂಟ್ ಡೌನ್ ಶುರುವಾಗಿದೆ ಬೆಂಗಳೂರು ಜನರು 2025ರ ಹೊಸ ವರ್ಷವನ್ನ ಸ್ವಾಗತಿಸಲು ಕಾತುರರಾಗಿದ್ದಾರೆ ಇತ್ತ BBMP ಹಾಗೂ ಪೊಲೀಸ್ ಇಲಾಖೆ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅವಘಡ ಸಂಭವಿಸದಂತೆ ತಡೆಯಲು ಪ್ಲಾನ್ ನಡೆಸಿದೆ. ಈಗಾಗಲೇ ಜಂಟಿ ಸಭೆ ನಡೆಸಿರುವ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಹೊಸ ವರ್ಷಾಚರಣೆಗೆ ನಿಯಮಗಳನ್ನು ಸಿದ್ಧಪಡಿಸಿದ್ದಾರೆ.
ಹೊಸ ವರ್ಷ ಆಚರಣೆಯ ಕೇಂದ್ರಬಿಂದುವಾಗಿರುವ ಬೆಂಗಳೂರಿನ MG ರೋಡ್ ಬ್ರಿಗೇಡ್ ರೋಡ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸಂಖ್ಯೆಯನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ.
ಇನ್ನು ಈ ಹಿಂದೆ ಕೇವಲ 200 ರಿಂದ 300 ಸಿಸಿಟಿವಿ ಕ್ಯಾಮೆರಾಗಳನ್ನ ಮಾತ್ರ ಅಳವಡಿಸಲಾಗಿತ್ತು ಆದರೆ ಈ ಬಾರಿ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರೋದ್ರಿಂದ ಸುಮಾರು 800 ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸುವಂತೆ ಪೊಲೀಸ್ ಇಲಾಖೆ ಬಿಬಿಎಂಪಿ ಗೆ ಸೂಚಿಸಿದೆ ಇನ್ನು ಇದರ ಜೊತೆಗೆ ಇನ್ನು ಹಲವು ನಿಯಮಗಳನ್ನ ಜಾರಿ ಮಾಡಲು ತಯಾರಿ ನಡೆದಿದೆ ಹಾಗಿದ್ರೆ ಹೊಸ ವರ್ಷಾಚಾರಣೆಗೆ ಏನೆಲ್ಲಾ ನಿಯಮಗಳಿವೆ ಅನ್ನೋದನ್ನ ನೋಡೋದಾದ್ರೆ ರಾತ್ರಿ ಒಂದು ಗಂಟೆಯೊಳಗೆ ಹೊಸ ವರ್ಷಾಚಾರಣೆಯನ್ನ ಮುಗಿಸಬೇಕು.
ಎಲ್ಲೆಲ್ಲಿ ಹೊಸ Rules ಜಾರಿಗೆ ಬಂದಿದೆ
MG ರಸ್ತೆ ಬ್ರಿಗೇಡ್ ರಸ್ತೆ ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ ರಾತ್ರಿ 10:00 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್ ಗಳು ಬಂದ್ ಎಂ ಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು ಸಿಸಿ ಟಿವಿ ಅಳವಡಿಕೆ ಇನ್ನು ರಾತ್ರಿ 8:00 ಗಂಟೆ ಬಳಿಕ ಎಂ ಜಿ ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಚರಣೆಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇನ್ನು ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ.
ಬಾರ್ ಪಬ್ ಗಳಿಗೂ ರಾತ್ರಿ ಒಂದು ಗಂಟೆ ಬಳಿಕ ಬಂದ್ಗೆ ಸೂಚನೆ ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ ಹೀಗೆ ಲೌಡ್ ಸ್ಪೀಕರ್ ಪಟಾಕಿ ಸಿಡಿಸಲು ನಿರ್ಬಂಧ ಇನ್ನು ನಗರದಲ್ಲಿನ ಕಸ ವಿಲೆವಾರಿ ಮಾಡುವುದು ಬ್ಯಾರಿಕೇಡ್ ಅಳವಡಿಕೆಗೆ ಪೊಲೀಸ್ ಇಲಾಖೆ ಸೂಚಿಸಿದ ಜಾಗದಲ್ಲಿ ಲೈಟಿಂಗ್ ವ್ಯವಸ್ಥೆ ಮಾಡೋದು ಇನ್ನು ಹೊಸ ವರ್ಷಾಚರಣೆಗೆ ಬಂದ ಜನರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಆರೋಗ್ಯ ತಪಾಸಣೆಗೆ ನಮ್ಮ ಸಿಬ್ಬಂದಿಗಳನ್ನ ನಿಯೋಜನೆ ಮಾಡ್ತೇವೆ ಅಂತ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ಹೊಸ ವರ್ಷ ಆಚರಣೆಗೆ ಯಾವುದೇ ಅಡೆತಡೆ ಆಗದಂತೆ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ.
ಇದನ್ನೂ ಓದಿ: ಹೊಸ ಪ್ಯಾನ್ ಕಾರ್ಡ್ 2.0 ಖರೀದಿಸುವುದು ಹೇಗೆ.!





