ಎಲ್ಲರಿಗೂ ನಮಸ್ಕಾರ, ಬೆಳೆಹಾನಿ ಪರಿಹಾರದ ಬಗ್ಗೆ ನೋಡೋದಾದ್ರೆ ಯಾವ ಜಿಲ್ಲೆಯವರಿಗೆ ಬೆಳೆಹಾನಿ ಪರಿಹಾರ ಜಮಾ ಆಗಿದೆ ಇಲ್ಲಿ ತಿಳಿದುಕೊಳ್ಳಿ.
ರಾಜ್ಯದಂತಹ ಅಕ್ಟೋಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದ ಕಾರಣ ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಕಟಾವಿಗೆ ಬಂದ ಬೆಳೆಯು ಹಾನಿಯಾಗಿದ್ದು ಬೆಳೆ ಹಾನಿಯಿಂದ ನಷ್ಟವನ್ನು ಅನುಭವಿಸಿದ ಅರ ಫಲಾನುಭಾವಿ ರೈತರಿಗೆ ಬೆಳೆ ಪರಿಹಾರವನ್ನು ನೀಡುವ ಕುರಿತು ಕಂದಾಯ ಸಚಿವ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಹೌದು ರಾಜ್ಯದಲ್ಲಿ ಎಷ್ಟು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಬೆಳೆ ಹಾನಿಯಾಗಿದ್ದರೆ? ಎಲ್ಲಿ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳೇನು ಇದರ ಉಪಯುಕ್ತ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಸರಾಸರಿ 10 cm ವಾಡಿಕೆ ಮಳೆ ಆಗಬೇಕಿತ್ತು ಆದರೆ 16 cm ಮಳೆ ಆದ ಕಾರಣ ಅಂದಾಜು 56,993 ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿ ನೀಡಲಾಗಿದೆ. ಕಂದಾಯ ಹಾಗೂ ಕೃಷಿ ಹಾಗೂ ತೋಟಗಾರಿಕ ಇಲಾಖೆ ಜಂಟಿ ಸಮೀಕ್ಷೆ ಇನ್ನು ಇನ್ನು ಮೂರು ನಾಲ್ಕು ದಿನಗಳು ಪೂರ್ಣಗೊಳ್ಳಲಿದ್ದು.
15 ದಿನಗಳಲ್ಲಿ ಪರಿಹಾರ ವಿತರಿಸುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ರೈತರಿಗೆ ಬೆಳೆಹಾನಿ ಪರಿಹಾರದ ಹಣ ಜಮಾ
ಈಗಾಗಲೇ ಹಲವು ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ ಆಗುತ್ತಿದೆ. ನೀವು ನಿಮ್ಮ ಸ್ಟೇಟಸ್ ಅನ್ನ ಚೆಕ್ ಮಾಡಿಕೊಳ್ಳಬಹುದು ಒಂದೊಮ್ಮೆ ಅಕ್ಟೋಬರ್ ತಿಂಗಳಲ್ಲಿ ಬಂದ ಮಳೆಯಿಂದ ನಿಮ್ಮ ಜಮೀನಿನ ಬೆಳೆ ಹಾನಿಯಾಗಿದ್ದರೆ ಅರ್ಜಿದಾರರು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಹಾನಿಯಾದ ಜಮೀನಿನ ಪಹನಿ
- ಉತಾರ
- RTC
ತೆಗೆದುಕೊಂಡು ನಿಮ್ಮ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆಯ ಗ್ರಾಮ ಚಾವಡಿಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿಯವರನ್ನ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಯಾವ ಬೆಳೆಗೆ ಎಷ್ಟು ಬೆಳೆ ಪರಿಹಾರ ಜಮಾ ಆಗುತ್ತದೆ:
- ಮಳೆಯಾರಿಸಿದ ಬೆಳೆಗೆ 8,500 ಜಮಾ ಆಗುತ್ತದೆ
- ನೀರಾವರಿ ಬೆಳೆಗೆ 17,000 ಬೆಳೆ ಹಾನಿ ಜಮಾ ಆಗುತ್ತದೆ
- ಬಹುವಾರ್ಷಿಕ ಬೆಳೆಗೆ 22,500 ಬೆಳೆ ಹಾನಿ ಪರಿಹಾರ ಜಮಾ ಆಗುತ್ತದೆ
ಯಾವ ಜಿಲ್ಲೆಗೆ ಜಮಾ ಆಗಲಿದೆ ಎಂಬುದನ್ನ ನೋಡೋದಾದ್ರೆ:
ದಾವಣಗೆರೆ
ಕಲಬುರ್ಗಿ ಜಿಲ್ಲೆಯ ಜಿಲ್ಲಾಡಳಿತ ಅಧಿಕೃತ ಮಾಹಿತಿಯ ಪ್ರಕಾರ
ಕಲಬುರ್ಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 33,718 ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ನೀಡಲು 138 ಕೋಟಿ ಅನುದಾನಕ್ಕೆ ಜಿಲ್ಲಾಧಿಕಾರಿ ಬಿ ಫೌಜಿಯ ತರುಣ್ ಅವರು ಅನುಮೋದನೆ ನೀಡಿದ್ದಾರೆ.
ಇನ್ನು ಎರಡು, ಮೂರು ದಿನಗಳಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ರೈತರ ಖಾತೆಗೆ ಪರಿಹಾರ ಜಮಾ ಆಗಲಿದೆ ಇದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿಯೂ ಮೊದಲ ಹಂತದಲ್ಲಿ ಬೆಳೆಹಾನಿ ಪರಿಹಾರ ವಿತರಣೆಗೆ 1.42 ಕೋಟಿ ಹಣ ಮೀಸಲಿಡಲಾಗಿದ್ದು ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸಿದ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಅತಿಯಾದ ಮಳೆ ಅಥವಾ ಮಳೆ ಕೊರತೆಯಿಂದ ಬೆಳೆ ಹಾನಿಯಾದ ಸಮಯದಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಒದಗಿಸಲು ಪರಿಹಾರ ತಂತ್ರಾರ್ಶವನ್ನ ಬಳಕೆ ಮಾಡಲಾಗುತ್ತಿದೆ.
ಈ ತಂತ್ರಾಷ್ಟದಲ್ಲಿ ರೈತರ ಅರ್ಜಿಯನ್ನು ಅಪ್ಲೋಡ್ ಮಾಡಿ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳಿಗೆ ಬೆಳೆನಷ್ಟ ಪರಿಹಾರವನ್ನ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಇದನ್ನೂ ಓದಿ: PM ಕಿಸಾನ್ e-KYC List ಬಿಡುಗಡೆ ಮಾಡಿದ್ದಾರೆ










