ಬೆಳೆ ಹಾನಿ ಜಮಾ ಆದವರ ಪಟ್ಟಿ ಬಿಡುಗಡೆ!! ಈ ರೀತಿ ಸುಲಭವಾಗಿ ಮೊಬೈಲ್ ಫೋನ್ ಮೂಲಕ ಚೆಕ್ ಮಾಡಿ

November 19, 2024 10:38 AM
ಬೆಳೆ ಹಾನಿ ಜಮಾ ಆದವರ ಪಟ್ಟಿ ಬಿಡುಗಡೆ!! ಈ ರೀತಿ ಸುಲಭವಾಗಿ ಮೊಬೈಲ್ ಫೋನ್ ಮೂಲಕ ಚೆಕ್ ಮಾಡಿ

ಎಲ್ಲರಿಗೂ ನಮಸ್ಕಾರ, ಬೆಳೆ ಹಾನಿ ಜಮಾ ಆದವರ ಪಟ್ಟಿ ಬಿಡುಗಡೆಯಾಗಿದೆ. ಯಾವ ಯಾವ ರೈತರಿಗೆ ಜಮಾ ಆಗಿದೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಹೇಗೆ ಚೆಕ್ ಮಾಡುವುದು?

ಎಲ್ಲವನ್ನು ಕೂಡ ಈ ಲೇಖನದಲ್ಲಿ ತಿಳಿದುಕೊಳ್ಳೋಣ. 2024 ಮತ್ತು 25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಾರಿ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರ ಖಾತೆಗೆ ಪರಿಹಾರ ಮೊತ್ತ ಮಂಜೂರಾಗಿದೆ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಕ ಬೆಳೆ ಹಾನಿಯ ಮೊದಲ ಕಂತಿನ ಪರಿಹಾರವಾಗಿ 13.2 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ಮಂಜೂರಾಗಿದೆ.

ಹಾನಿಯಾದ ಕೃಷಿ ಮತ್ತು ತೋಟಗಾರಿಕ ಬೆಳೆಗಳ ವಿವರಗಳನ್ನ ಗ್ರಾಮ ಆಡಳಿತ ಅಧಿಕಾರಿಗಳು ತಂತ್ರಾಷ್ಟದಲ್ಲಿ ನಮೂದಿಸಿ ಅನುಮೋದಿಸಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 33,718 ರೈತರಿಗೆ 13 ಕೋಟಿ ರೂಪಾಯಿಗಳನ್ನ NDRF ಹಾಗೂ NDRF ಮಾರ್ಗ ಸೂಚಿ ಅನ್ವಯ ಹಣ ಮಂಜುರಾತಿ ನೀಡಲಾಗಿದೆ.

ನೇರವಾಗಿ ಆಧಾರ್ ಸಂಖ್ಯೆ ಜೋಡಣೆ ಆಗಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಮಾಡಲು ಅನುಮೋದನೆ ನೀಡಲಾಗಿದೆ. ಇನ್ನು ಮೂರು, ನಾಲ್ಕು ದಿನದ ಒಳಗಾಗಿ ಯಾರಿಗೆಲ್ಲ ಜಮಾ ಆಗಿಲ್ವೋ ಅವರಿಗೆ ಇನ್ಪುಟ್ ಸಬ್ಸಿಡಿ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಹಾಗಾದ್ರೆ ಜಮಾ ಆದವರ ಪಟ್ಟಿಯನ್ನ ಚೆಕ್ ಮಾಡುವುದು ಹೇಗೆ ಈ ಲೇಖನದಲ್ಲಿ ತಿಳಿಸಿಕೊಡ್ತಾ ಹೋಗ್ತೀವಿ.

ಬೆಳೆ ಹಾನಿ ಬಿಡುಗಡೆಯಾಗಿರುವ ಪಟ್ಟಿ 2024

Parihara Payment Report Karnataka

parihara.karnataka.gov.in ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಈ ರೀತಿ ಪೇಜ್ ಕಾಣಿಸುತ್ತದೆ.

  • ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.
  • ನಿಮ್ಮ ಋತುವನ್ನ ಆಯ್ಕೆ ಮಾಡಿಕೊಳ್ಳಬೇಕು.
  • ಕಾಲಾಮಿಟಿ ಟೈಪ್ ನಲ್ಲಿ ವಿಪತ್ತಿನ ವಿಧವನ್ನ ಆಯ್ಕೆ ಮಾಡಿಕೊಳ್ಳಬೇಕು.
  • ನಿಮ್ಮ ಜಿಲ್ಲೆ ತಾಲೂಕು ಹೋಬಳಿ, ನಿಮ್ಮ ಗ್ರಾಮವನ್ನ ಆಯ್ಕೆ ಮಾಡಿಕೊಳ್ಳಬೇಕು.

ಎಲ್ಲಾ ಮಾಡಿಕೊಂಡು ಅಲ್ಲಿ ಪೇಮೆಂಟ್ ಸಕ್ಸಸ್ ಕೇಸಸ್ ಮೇಲೆ ಸೆಲೆಕ್ಟ್ ಮಾಡಿಕೊಳ್ಳಬೇಕು ನಂತರ ಗೆಟ್ ಡಾಟಾ (Get Data) ಮೇಲೆ ಕ್ಲಿಕ್ ಮಾಡಬೇಕು ಆಗ ಅಲ್ಲಿ ಹೊಸ ಪಟ್ಟಿ ತೆರೆದುಕೊಳ್ಳುತ್ತದೆ.

ಆ ಪಟ್ಟಿಯಲ್ಲಿ ಹೆಸರು ಇದ್ದವರಿಗೆ ಮಾತ್ರ ಬೆಳೆ ಹಾನಿ ಪರಿಹಾರ ಜಮಾ ಆಗಿರುತ್ತದೆ.

ಒಂದು ವೇಳೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ:

ನೀವು ಕೃಷಿ ಇಲಾಖೆಗೆ ಹೋಗಿ ಸಂಪರ್ಕಿಸಬೇಕಾಗುತ್ತದೆ.

FID ಇದ್ದವರಿಗೆ ಮಾತ್ರ ಈ ಬೆಳೆ ಹಾನಿ ಪರಿಹಾರ ಜಮಾ:

FID ಇದ್ದವರಿಗೆ ಮಾತ್ರ ಈ ಬೆಳೆ ಹಾನಿ ಪರಿಹಾರ ಜಮಾ ಆಗುತ್ತದೆ ಹೌದು ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರೂಟ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾಶದ ಮೂಲಕ ಹಂತಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದೆ.

ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮಾ ಮಾಡಲಾಗಿದೆ.

ಬಾಕಿ ಉಳಿದ ರೈತರಿಗೆ ಹಂತಹಂತವಾಗಿ ಪರಿಹಾರ ಪಾವತಿಸುವ ಕಾರ್ಯಕ್ರಮ ಕೂಡ ಪ್ರಗತಿಯಲ್ಲಿ ಹಂತದಿದ್ದು ತುರತಾಗಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಈಗಾಗಲೇ ಅನುಮೋದನೆ ನೀಡಿರುವ ರೈತರ ಮಾಹಿತಿಯ ಪಟ್ಟಿಯನ್ನ ನಾಡಕಚೇರಿಗಳು ಹಾಗೂ ಗ್ರಾಮ ಪಂಚಾಯತಿಗಳು ರೈತ ಸಂಪರ್ಕ ಕೇಂದ್ರಗಳು ಹಾಗೂ ತಹಸೀಲ್ದಾರ್ ಕಾರ್ಯಾಲಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಬೆಳೆಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ ಅಡಿ ಕಡ್ಡಾಯ ಮಾಡಿರುವುದರಿಂದ ಇದುವರೆಗೆ ಫ್ರೂಟ್ ಅಡಿ ಮಾಡಿಸಿಕೊಳ್ಳದೆ. ಇರುವ ರೈತರು ನಿಗದಿತ ಅವಧಿಯಲ್ಲಿ ತಮ್ಮ ಆಧಾರ್, ಬ್ಯಾಂಕ್ ಖಾತೆ ವಿವರ ಹಾಗೂ ಹಾಗೂ ಪಹನಿ ಮಾಹಿತಿಯನ್ನ ಗ್ರಾಮ ಆಡಳಿತ ಅಧಿಕಾರಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನೀವು ನಿಮ್ಮ ಫ್ರೂಟ್ ಐಡಿಯನ್ನ ಮಾಡಿಸಿಕೊಳ್ಳಬೇಕು.

ಫ್ರೂಟ್ ಐಡಿ ಇಲ್ಲ ಅಂದ್ರೆ ನಿಮ್ಮ ಖಾತೆಗೆ ಯಾವುದೇ ರೀತಿಯ ಬೆಳೆ ಹಾನಿ ಪರಿಹಾರ ಜಮಾ ಆಗುವುದಿಲ್ಲ

ಇದನ್ನೂ ಓದಿ: ಈ ಶ್ರಮ ಕಾರ್ಡ್ ಇದ್ದರೆ 2 ದಿನಗಳಲ್ಲಿ BPL ಕಾರ್ಡ್ ಪಡೆಯಬಹುದು!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment