ಎಲ್ಲರಿಗೂ ನಮಸ್ಕಾರ, ಬಿಗ್ ಬಾಸ್ ಸೀಸನ್ 10 ನಲ್ಲಿ ಡ್ರೋನ್ ಪ್ರತಾಪ್ ಅವರು ಭಾಗಿಯಾಗುವ ಮೊದಲು ಅವರ ಇಮೇಜ್ ಯಾವ ರೀತಿ ಇತ್ತು ಭಾಗಿಯಾದ ನಂತರ ಅವರ ಇಮೇಜ್ ಯಾವ ರೀತಿ ಬದಲಾಯಿತು ಈಗ ಅವರಿಗೆ ಯಾವ ರೀತಿ ಫ್ಯಾನ್ಸ್ ಇದ್ದಾರೆ ಅನ್ನೋದು ನಿಮಗೆಲ್ಲ ಗೊತ್ತೇ ಇದೆ ಎಲ್ಲವೂ ಚೆನ್ನಾಗಿದೆ ಎಲ್ಲವೂ ಚೆನ್ನಾಗಿ ನಡೀತಾ ಇದೆ ಅನ್ನುವಷ್ಟರಲ್ಲಿ ಡ್ರೋನ್ ಪ್ರತಾಪ್ ದೊಡ್ಡ ಎಡವಟ್ಟೊಂದನ್ನ ಮಾಡಿದ್ದಾರೆ.
ಇದೇ ಎಡವಟ್ಟಿನ ಪರಿಣಾಮ ಇದೀಗ ಅವರು ಅರೆಸ್ಟ್ ಆಗಿದ್ದಾರೆ. ಮೊನ್ನೆ ಮೊನ್ನೆ ಸಿನಿಮಾದಲ್ಲಿ ನಾನು ನಾಯಕನಾಗಿ ಅಭಿನಯಿಸ್ತಾ ಇದ್ದೀನಿ ಅನ್ನೋ ಸಿಹಿ ಸುದ್ದಿಯನ್ನ ಫ್ಯಾನ್ಸ್ ಗೆ ಕೊಟ್ಟಿದ್ದ ಡ್ರೋನ್ ಪ್ರತಾಪ್ ಇದೀಗ ನಾನು ಅರೆಸ್ಟ್ ಆಗಿದ್ದೇನೆ ಅನ್ನೋ ಸುದ್ದಿಯನ್ನ ಕೊಡಬೇಕಾಗಿರೋದು ನಿಜಕ್ಕೂ ವಿಪರ್ಯಾಸ. ಹೌದು ಸೋಶಿಯಲ್ ಮೀಡಿಯಾದಲ್ಲಿ ಕಳೆದ ಎರಡು ದಿನಗಳ ಹಿಂದೆ ಡ್ರೋನ್ ಪ್ರತಾಪ್ ವಿಡಿಯೋ ಒಂದನ್ನ ಹರಿಬಿಟ್ಟಿದ್ರು ಸೈನ್ಸ್ ವಿಡಿಯೋ ಅನ್ನೋ ಹೆಸರಲ್ಲಿ ವಿಡಿಯೋ ಒಂದನ್ನ ಅಪ್ಲೋಡ್ ಮಾಡಿ ಭಾರಿ ಬಿಲ್ಡಪ್ ಅನ್ನ ಕೊಟ್ಟಿದ್ರು ಡ್ರೋನ್ ಪ್ರತಾಪ್ ಅವರು ಅದೇ ಬಿಲ್ಡಪ್ ಇದೀಗ ಅವರನ್ನ ಕಂಬಿ ಹಿಂದೆ ಸೇರುವಂತೆ ಮಾಡಿದೆ.
ಸೈನ್ಸ್ ವಿಡಿಯೋ ಹೆಸರಲ್ಲಿ ನೀರಿಗೆ ಕೆಮಿಕಲ್
ಸೈನ್ಸ್ ವಿಡಿಯೋ ಹೆಸರಲ್ಲಿ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಯಾವ ರೀತಿ ಬ್ಲಾಸ್ಟ್ ಮಾಡಬಹುದು ಅನ್ನೋದನ್ನ ಅವರು ವಿವರಿಸಿದ್ರು ಅಲ್ಲದೆ ಈ ರೀತಿ ಬ್ಲಾಸ್ಟ್ ಮಾಡೋದಕ್ಕೆ ಯಾವ ರೀತಿಯ ಕೆಮಿಕಲ್ ಗಳನ್ನ ಬಳಸಬಹುದು ಅನ್ನೋದರ ಕುರಿತಾಗಿಯೂ ಕೂಡ ಒಂದಷ್ಟು ಮಾಹಿತಿಯನ್ನ ಕೊಟ್ಟಿದ್ರು, ಇದು ಕೆಟ್ಟ ಕೆಲಸ ಮಾಡುವವರಿಗೆ ಪ್ರೇರಣೆ ಅನ್ನೋ ರೀತಿಯಲ್ಲಿ ಇತ್ತು ಅಲ್ಲದೆ ಪರಿಸರಕ್ಕೂ ಕೂಡ ಮಾರಕ ಅನ್ನೋ ಸಾಮಾನ್ಯ ಜ್ಞಾನ ಇಲ್ಲದೆ ಅವರು ವರ್ತಿಸಿದ್ರು ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದ್ದು, ಅಲ್ಲದೆ ಪರಿಸರವಾದಿಗಳು ಕೂಡ ಒಂದಷ್ಟು ಆಕ್ಷೇಪವನ್ನು ವ್ಯಕ್ತಪಡಿಸಿದರು. ಈ ರೀತಿ ಮಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಪ್ರಶ್ನೆಯನ್ನ ಮಾಡಿದ್ರು ಅದರ ಬೆನ್ನಲ್ಲೇ ಇದೀಗ ಅವರಿಗೆ ಕಂಟಕ ಎದುರಾಗಿದೆ ಅವರನ್ನ ಅರೆಸ್ಟ್ ಮಾಡಿದ್ದಾರೆ.
ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಂಡ ಅನ್ನೋ ರೀತಿ ಏನೋ ಬಿಲ್ಡಪ್ ತೋರಿಸೋದಕ್ಕೆ ಹೋಗಿ ಇದೀಗ ಅವರು ಅರೆಸ್ಟ್ ಆಗಿದ್ದಾರೆ ನಿರ್ಜನರ ಪ್ರದೇಶದಲ್ಲಿ ಕೃಷಿ ಹೊಂಡಿದಂತಹ ಆಳವಾದ ಗುಂಡಿಯಲ್ಲಿ ನೀರಿಗೆ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಅವರು ಬ್ಲಾಸ್ಟ್ ಅನ್ನ ಮಾಡಿದರು ಸೋಡಿಯಂ ನೀರಿನಲ್ಲಿ ಎಸೆದು ಬ್ಲಾಸ್ಟ್ ಮಾಡಿದರು ಪ್ರತಾಪ್ ಈ ಬಗ್ಗೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ತೀವ್ರ ಹೊರಹಾಕಿದ್ರು ಇದು ಎಷ್ಟರ ಮಟ್ಟಿಗೆ ಸರಿ ಅಂತ ಪ್ರಶ್ನೆಯನ್ನ ಮಾಡಿದ್ರು ಒಬ್ಬ ಸೆಲೆಬ್ರಿಟಿ ಒಬ್ಬ ಸಾಮಾಜಿಕ ಕಳಕಳಿ ಇರುವಂತಹ ವ್ಯಕ್ತಿ ಎಷ್ಟರ ಮಟ್ಟಿಗೆ ಈ ರೀತಿ ವರ್ತಿಸುವುದು ಸರಿ ಇದರಿಂದ ನೀವೇನು ಮೆಸೇಜ್ ಕೊಡ್ತಾ ಇದ್ದೀರಾ ಅಂತ ಪ್ರಶ್ನೆಯನ್ನ ಮಾಡಿದ್ರು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ಕೂಡ ದಾಖಲಾಗಿತ್ತು ಅದರಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್ ಅವರನ್ನ ಅರೆಸ್ಟ್ ಮಾಡಿದ್ದಾರೆ.
Drone Prathap Blast Viral Video
ಇನ್ನು ಆ ವಿಡಿಯೋ ನೋಡಿದ್ರೆ ನೀವು ಗಮನಿಸಿರ್ತೀರಾ ಕೆಮಿಕಲ್ ಅನ್ನ ಡ್ರೋನ್ ಪ್ರತಾಪ್ ಅವರು ಆ ನೀರಿಗೆ ಎಸಿತಾ ಇದ್ದಂತೆ ಅದು ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗುತ್ತೆ ಬೆಂಕಿ ಕೂಡ ಕಾಣಿಸಿಕೊಳ್ಳುತ್ತೆ. ಅಲ್ಲದೆ ಬಾಂಬ್ ಬ್ಲಾಸ್ಟ್ ಆದ ರೀತಿ ಅಲ್ಲಿ ದೃಶ್ಯ ಕಂಡುಬರುತ್ತೆ ಈ ವಿಡಿಯೋ ನೋಡಿ ಡ್ರೋನ್
ಪ್ರತಾಪ್ ಅವರೇ ಒಂದು ಬಿಲ್ಡಪ್ ಅನ್ನ ಕೊಡ್ತಾರೆ ತಾನೇನು ಸಾಧಿಸಿದ್ದೀನಿ ಅನ್ನೋ ರೇಂಜ್ ಗೆ ಅವರು ನಗ್ತಾರೆ ನೋಡಿ ನೋಡಿ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ ಅಂತ ಖುಷಿಯನ್ನ ವ್ಯಕ್ತಪಡಿಸುತ್ತಾರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸಾರ್ವಜನಿಕರಿಂದ ಟೀಕೆಗೂ ಕೂಡ ಗುರಿಯಾಗಿತ್ತು ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ ಹೀಗಾಗಿ ಪ್ರತಾಪ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಪರಿಸರವಾದಿ ವಿಜಯ್ ನಿಶಾಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ರು ಯಾವೆಲ್ಲಾ ಕೆಮಿಕಲ್ ಹಾಕಿದ್ರೆ ಬ್ಲಾಸ್ಟ್ ಆಗುತ್ತೆ ಅಂತ ಅವರು ಲೈವ್ ನಲ್ಲಿ ಹೇಳಿದ್ದಾರೆ ಇದನ್ನ ಕಿಡಿಗೇಡಿಗಳು ತಮ್ಮ ಕೆಲಸಕ್ಕೆ ಬಳಸುವಂತಹ ಸಾಧ್ಯತೆ ಇದೆ.
ಜೊತೆಗೆ ನೀರು ಕೂಡ ಹಾಳಾಗುತ್ತೆ ಅದರಲ್ಲಿ ಇರುವಂತಹ ಜಲಚರಗಳ ಜೀವಕ್ಕೂ ಕೂಡ ಕುತ್ತು ಬರುತ್ತೆ ಅಂತ ಒಂದು ಆಕ್ಷೇಪವನ್ನ ವ್ಯಕ್ತಪಡಿಸಿದರು ಈ ಸಂಬಂಧ ಮಿಡಿಗೇಶಿ ಪೊಲೀಸರು ಬಿಎನ್ ಎಸ್ ಸೆಕ್ಷನ್ 288 ಸ್ಪೋಟಕ ವಸ್ತು ನಿಯಂತ್ರಣ ಕಾಯ್ದೆ ಮೂರರ ಅಡಿ ಪ್ರಕರಣ ದಾಖಲಿಸಿಕೊಂಡು ಇದೀಗ ಡ್ರೋನ್ ಪ್ರತಾಪ್ ಅವರನ್ನ ಅರೆಸ್ಟ್ ಮಾಡಿದ್ದಾರೆ ಬಿಗ್ ಬಾಸ್ ಮನೆಯೊಳಗೆ ಹೋದಂತಹ ಸಂದರ್ಭದಲ್ಲಿ ಅವರ ಇಮೇಜ್ ಯಾವ ರೀತಿ ಇತ್ತು ಹೊರಗಡೆ ಬಂದ ಬಳಿಕ ಯಾವ ರೀತಿ ಬದಲಾಯಿತು ಯಾವ ರೇಂಜ್ ಗೆ ಅವರನ್ನ ಇದೀಗ ಜನ ಪ್ರೀತಿಸೋದಕ್ಕೆ ಶುರು ಮಾಡಿದ್ದಾರೆ ಅನ್ನೋದು ನಿಮಗೆಲ್ಲ ಗೊತ್ತೇ ಇದೆ.
ಎಲ್ಲವೂ ಚೆನ್ನಾಗಿದೆ ಅನ್ನುವಾಗ ಅದಕ್ಕೆ ತಕ್ಕದಾಗಿ ವರ್ತಿಸೋದು ಬಿಟ್ಟು ಏನೇನೋ ಎಡವಟ್ಟು ಕೆಲಸಗಳನ್ನ ಮಾಡೋದಕ್ಕೆ ಹೋಗಿ ಡ್ರೋನ್ ಪ್ರತಾಪ್ ಅವರು ಇದೀಗ ಅರೆಸ್ಟ್ ಆಗಿದ್ದಾರೆ ಸುಮ್ನೆ ತಮ್ಮ ಪಾಡಿಗೆ ಏನೋ ಒಳ್ಳೆ ಕೆಲಸ ಮಾಡಿಕೊಂಡು ಸುಮ್ಮನಿರೋದು ಬಿಟ್ಟು ಯಾವುದೋ ವಿಡಿಯೋ ಮೂಲಕ ಬಿಲ್ಡಪ್ ಕೊಡೋದಕ್ಕೆ ಹೋದಂತಹ ಡ್ರೋನ್ ಪ್ರತಾಪ್ ಅವರು ಇದೀಗ Arrest ಆಗಿದ್ದಾರೆ.
ಇದೆಲ್ಲ ಬೇಕಿತ್ತಾ ಅಂತ ಇದೀಗ ಜನ ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ: Pushpa 2 The Rule 1,000 ಕೋಟಿ ಗಡಿಯನ್ನು ದಾಟಿದೆ





