ಎಲ್ಲರಿಗೂ ನಮಸ್ಕಾರ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಭಾರಿ ಸುದ್ದಿಯಲ್ಲಿದ್ದ ವಿಷಯವೆಂದರೆ ಅನರ್ಹರ BPL ಕಾರ್ಡ್ ರದ್ದು ಮಾಡುವುದು. ಇದೀಗ ಈ ವಿಷಯವಾಗಿ ರಾಜ್ಯ ಸರ್ಕಾರವು ಹಾಗೂ ಆಹಾರ ಇಲಾಖೆಯು ಒಂದು ಹೊಸ ನಡೆಯನ್ನು ಮಾಡಿದೆ. ಕೆಲವು ದಿನಗಳಿಂದ ಆಹಾರ ಇಲಾಖೆಯು ಹಾಗೂ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ನಕಲಿ ದಾಖಲಾತಿ ನೀಡಿ BPL ಕಾರ್ಡ್ ಮಾಡಿಸಿಕೊಂಡಿರುವ ಅನರ್ಹರ BPL ಕಾರ್ಡನ್ನು ರದ್ದು ಮಾಡುತ್ತಿದ್ದು ಅಥವಾ APL ಗೆ ಬದಲಾಯಿಸಲಾಗುತ್ತಿತ್ತು. ಇದೀಗ ಈ ವಿಷಯವಾಗಿ ರಾಜ್ಯದಲ್ಲಿ ಒಂದು ಹೊಸ ಅಪ್ಡೇಟ್ ಬಿಡುಗಡೆ ಆಗಿದೆ ಹಾಗೂ ಇದರ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ:
ಈ ಹಿಂದೆ ಸಾಕಷ್ಟು ಅನರ್ಹರ ಬಿಪಿಎಲ್ ಕಾರ್ಡನ್ನು ಆಹಾರ ಇಲಾಖೆಯು ಪತ್ತೆ ಮಾಡಿ ರದ್ದು ಮಾಡುತ್ತಿತ್ತು ಅಥವಾ ಎಪಿಎಲ್ ಗೆ ಬದಲಾಯಿಸಲಾಗುತ್ತಿತ್ತು.
ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಬಡವರ ಬಿಪಿಎಲ್ ಕಾರ್ಡ್ ಗಳು ಕೂಡ ಬದಲಾಗಿವೆ ಅಥವಾ ರದ್ದಾಗಿದೆ.
ಈ ವಿಷಯವಾಗಿ ಸಿಎಂ ಸಿದ್ದರಾಮಯ್ಯನವರು ಹೇಳಿಕೆಯನ್ನು ನೀಡಿದ್ದರು – ರಾಜ್ಯದಲ್ಲಿ ಬಡವರ ಬಿಬಿಎಲ್ ಕಾರ್ಡ್ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ.
ಒಂದು ವೇಳೆ ರದ್ದಾಗಿದ್ದರೂ ಕೂಡ ಅದನ್ನು ಸರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಕರ್ನಾಟಕದಲ್ಲಿ ಇಂದಿನಿಂದ ಬಿಪಿಎಲ್ ರದ್ದು ಮಾಡುವ ವಿಷಯವಾಗಿ ಮರುಪರಿಶೀಲನೆ:
ರಾಜ್ಯದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಅನರ್ಹರ ಬಿಪಿಎಲ್ ರದ್ದು ಮಾಡುವ ವಿಷಯವಾಗಿ ಇಂದಿನಿಂದ ಮರುಪರಿಶೀಲನೆ ನಡೆಯಲಿದೆ.
CM ಸಿದ್ದರಾಮಯ್ಯನವರು ಬಡವರ ಕಾರ್ಡುಗಳನ್ನು ರದ್ದು ಮಾಡುವುದಿಲ್ಲ ಹಾಗೂ ಒಂದು ವೇಳೆ ರದ್ದಾಗಿದ್ದರೆ ಸರಿ ಮಾಡುತ್ತೇವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.
ರಾಜ್ಯದಲ್ಲಿ ಅರ್ಹರ ಬಿಪಿಎಲ್ ಕಾರ್ಡ್ಗಳನ್ನು ಮರುಪರಿಶೀಲನೆ ಮಾಡಿ ತಿದ್ದುಪಡಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹಾಗೂ IT ರಸಿದಿ ಮೂಲಕ ಅದೇ ಹೊಂದಿರುವವರು ತಮ್ಮ ಕಾರ್ಡುಗಳನ್ನು ಸರಿಪಡಿಸಿಕೊಳ್ಳಬಹುದು.
ಬೆಂಗಳೂರಿನ ಈ ಜಾಗಗಳಲ್ಲಿ BPL ತಿದ್ದುಪಡಿ ಮಾಡಲಾಗುತ್ತದೆ:
- ಪೂರ್ವ ವಲಯ – ರಾಜಾಜಿನಗರದ ಐ ಆರ್ ಐ ಕಚೇರಿಯಲ್ಲಿ ತಿದ್ದುಪಡಿ ಮಾಡಿಸಬಹುದು
- ಪಶ್ಚಿಮ ವಲಯ – ಬಸವನಗುಡಿಯಲ್ಲಿ ಕಾರ್ಡ್ ತಿದ್ದುಪಡಿ ಮಾಡಿಸಬಹುದು.
- ಉತ್ತರ ವಲಯ – ಮೆಜೆಸ್ಟಿಕ್ ಆಹಾರ ಇಲಾಖೆ ಕಚೇರಿಯಲ್ಲಿ ತಿದ್ದುಪಡಿ ಮಾಡಿಸಬಹುದು.
- ಕೆಂಗೇರಿ, ಬನಶಂಕರಿ, ಯಲಹಂಕ ಹಾಗೂ ಆರ್ ಟಿ ನಗರ ವಲಯದವರು ತಮ್ಮ ವ್ಯಾಪ್ತಿಯ ಆಹಾರ ಕಚೇರಿಯಲ್ಲಿ ತಿದ್ದುಪಡಿ ಮಾಡಿಸಬಹುದು.
BPL ಕಾರ್ಡ್ ರದ್ದು ಮಾಡುವ ವಿಷಯವಾಗಿ ಡಿಕೆ ಶಿವಕುಮಾರ್ ಹೇಳಿಕೆ:
ಡಿಕೆ ಶಿವಕುಮಾರ್ ರವರು ನಾವು ಬಡವರ ಅನ್ನವನ್ನು ಕಿತ್ತುಕೊಳ್ಳುವುದಿಲ್ಲ ಹಾಗೂ ಬಡವರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ. ಹಾಗೂ ಒಂದು ವೇಳೆ ಬಡವರ ಬಿಪಿಎಲ್ ಕಾರ್ಡ್ ಅಥವಾ ಅರ್ಹರ BPL ಕಾರ್ಡ್ ರದ್ದಾಗಿದ್ದರೆ ಅದನ್ನು ಆದಷ್ಟು ಬೇಗ ಸರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅರ್ಹರ ಬಿಪಿಎಲ್ ಕಾರ್ಡನ್ನು ಒಂದು ವಾರದಲ್ಲಿ ಸರಿ ಮಾಡುತ್ತೇವೆ – ಕೆ ಎಚ್ ಮುನಿಯಪ್ಪ
ಈ ಎಲ್ಲಾ ಹೇಳಿಕೆಗಳನ್ನು ಬೆನ್ನಲ್ಲೇ ಆಹಾರ ಸಚಿವರಾಗಿರುವ ಕೆಎಚ್ ಮುನಿಯಪ್ಪನವರು ಸುದ್ದಿಗೋಷ್ಠಿಯನ್ನು ನಡಿಸಿ. ಈ ವಿಷಯವಾಗಿ ಹೇಳಿಕೆಯನ್ನು ನೀಡಿದ್ದರು. ಯಾರೆಲ್ಲಾ ಬಡವರ ಹಾಗೂ ಅರ್ಹರ ಬಿಪಿಎಲ್ ಕಾರ್ಡ್ ಗಳು ಸಮಸ್ಯೆಯಾಗಿದೆ ಒಂದು ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರ Strict ಆಗಿ BPL ಕಾರ್ಡನ್ನು ರದ್ದು ಮಾಡುತ್ತಿದೆ.!





