ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ದೊಡ್ಡ ಶಾಕಿಂಗ್ ನ್ಯೂಸ್ ಅನ್ನು ನೀಡಿದೆ. ಬಿಪಿಎಲ್ ಕಾರ್ಡ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಕರ್ನಾಟಕ ರಾಜ್ಯ ಸರ್ಕಾರವು ಹೊಸ ಒಂದು ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ.
ಸ್ನೇಹಿತರೆ ಆಹಾರ ಇಲಾಖೆಯಿಂದ ಕರ್ನಾಟಕ ಜನರಿಗೆ ದೊಡ್ಡ ಶಾಕ್ ಸಿಗುವಂತ ಸಾಧ್ಯತೆ ಇದೆ. ರಾಜ್ಯದಲ್ಲಿ ಆಹಾರ ಇಲಾಖೆಯು ಸಾಕಷ್ಟು ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ದಾರರ ಕಾರ್ಡ್ಗಳನ್ನು ರದ್ದು ಮಾಡುತ್ತೇವೆ ಹಾಗೂ ಇದನ್ನು ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆ ಎಂದು ಇಲ್ಲಿ ತಿಳಿಸಿ ಕೊಡುತ್ತೇವೆ.
ರಾಜ್ಯದಲ್ಲಿ BPL ಹಾಗೂ APL ಕಾರ್ಡ್ ಗಳನ್ನು ಅಮಾನತು
ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಗಳನ್ನು ಹೊಂದಿರುವವರಿಗೆ ಒಂದು ಶಾಕಿಂಗ್ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಆಧಾರ್ ಚೋಡಣೆಯಾಗದಿರುವ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳನ್ನು ಅಮಾನತು ಮಾಡಲಾಗುತ್ತಿದೆ.
ಇದರ ಜೊತೆ e-KYC ಆಗದಿರುವ ರೇಷನ್ ಕಾರ್ಡ್ ಗಳನ್ನು ಕೂಡ ಆಹಾರ ಇಲಾಖೆಯ ಅಮಾನತು ಮಾಡುತ್ತಿದೆ. ಆಹಾರ ಇಲಾಖೆ ಇದೀಗ ಎಲ್ಲಾ ಕಾರ್ಡ್ಗಳನ್ನು ಪರಿಶೀಲನೆ ಮಾಡುತ್ತಿದೆ. ಹಾಗೂ ಸದ್ಯದಲ್ಲೇ ಅಮಾನತು ಆಗಿರುವ ವಿಷಯ ಕೂಡ ಕಾರ್ಡ್ ಹೊಂದಿರುವವರಿಗೆ ತಿಳಿದು ಬರುತ್ತದೆ.
ಸುಮಾರು 22 ಲಕ್ಷ ಕಾರ್ಡ್ ಗಳು ಅಮಾನತು ಆಗುವ ಸಾಧ್ಯತೆ ಇದೆ:
ಆಹಾರ ಇಲಾಖೆಯು ಸುಮಾರು 22 ಲಕ್ಷ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳನ್ನು ಅಮಾನತು ಮಾಡುವ ಸಾಧ್ಯತೆ ಇದೆ. ಇದರ ಜೊತೆ ಸುಮಾರು 60,000 BPL ಕಾರ್ಡ್ ಗಳಿಗೆ APL ಕಾರ್ಡ್ಗಳನ್ನು ಶಿಫ್ಟ್ ಮಾಡಲಾಗುತ್ತದೆ.
ಆಹಾರ ಇಲಾಖೆ ತುಂಬಾ ಸ್ಟ್ರಿಕ್ಟ್ (Strict) ಆಗಿ ಇದನ್ನು ಪರಿಶೀಲನೆ ಮಾಡುತ್ತಿದೆ. ಹಾಗೂ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇದನ್ನು ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಇದರಿಂದ ಸಾಕಷ್ಟು ಯೋಜನೆಗಳ ಫಲಾನುಭವಿಗಳಿಗೆ ಕಷ್ಟ ಆಗುವ ಸಾಧ್ಯತೆ ಇದೆ.
BPL ಕಾರ್ಡ್ ಅಮಾನತು ಆದರೆ ಈ ಸೌಲಭ್ಯಗಳು ಸಿಗುವುದಿಲ್ಲ:
- ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.
- ಅನ್ನಭಾಗ್ಯ ಯೋಜನೆಯ ಮೂಲಕ ರಿಯಾಯಿತಿ ದರದಲ್ಲಿ ಅಕ್ಕಿ ಸಿಗುವುದಿಲ್ಲ.
- ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಲು ಕಷ್ಟ ಆಗುತ್ತದೆ.
- ವಿವಿಧ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ.
- ಆಯುಷ್ಮಾನ್ ಭಾರತ್ ಯೋಜನೆ ಸಿಗುವುದಿಲ್ಲ.
- ಕುಟುಂಬದ ಐಡಿ ಕಾರ್ಡ್ ಮಾಡಿಸಿಕೊಳ್ಳಲು ಕಷ್ಟ ಆಗುತ್ತದೆ.
BPL ನಿಂದ APL ಗೆ ಕಾರ್ಡ್ ಗಳು ಯಾಕೆ ಶಿಫ್ಟ್ ಆಗುತ್ತದೆ:
- ಸರ್ಕಾರಿ ನೌಕರರಾಗಿದ್ದರು BPL ಕಾರ್ಡ್ ಹೊಂದಿದ್ದರೆ ಶಿಫ್ಟ್ ಆಗುತ್ತದೆ.
- IT ಪಾವತಿದಾರರಾಗಿದ್ದರು APL ಕಾರ್ಡ್ ಶಿಫ್ಟ್ ಆಗುತ್ತದೆ.
- GST ಪಾವತಿದಾರರಾಗಿದ್ದರೆ, ಬಿಪಿಎಲ್ ಕಾರ್ಡಿನಿಂದ APL ಗೆ ಶಿಫ್ಟ್ ಆಗುತ್ತದೆ.
ಇದನ್ನೂ ಓದಿ: 10,000 ರಾಜ್ಯಾದ್ಯಂತ BPL ಕಾರ್ಡ್ ರದ್ದು!!





