ಎಲ್ಲರಿಗೂ ನಮಸ್ಕಾರ, ಈ Personal Loan ಗಳ ಮುಂಗಡ ಪಾವತಿಗಳಿಗೆ ವಿಧಿಸುವ ವಿವಿಧ ರೀತಿಯ ಚಾರ್ಜಸ್ ಬಗ್ಗೆ ಒಂದಷ್ಟು ಡೀಟೇಲ್ ಆಗಿ ತಿಳಿದುಕೊಳ್ಳುವಂತಹ ಪ್ರಯತ್ನ ಮಾಡೋಣ. ಜನರಿಗೆ ತುರ್ತಾಗಿ ಹಣದ ಅಗತ್ಯವಿದ್ದಾಗ ಅವರು ಸಾಮಾನ್ಯವಾಗಿ ವೈಯಕ್ತಿಕ ಸಾಲಗಳಿಗೆ ಅರ್ಜಿ ಸಲ್ಲಿಸುತ್ತಾರೆ. ಅಂತಹ ಸಾಲಗಳು ಅಸುರಕ್ಷಿತ ಸಾಲಗಳಾಗಿವೆ ಯಾವುದೇ ಆಸ್ತಿಯನ್ನ ಮೇಲಾಧಾರವಾಗಿ ಇಟ್ಟುಕೊಳ್ಳುವ ಅಗತ್ಯವಿಲ್ಲ ಅಂತಹ ಸಾಲಗಳು ಸುಲಭವಾಗಿ ಲಭ್ಯವಿರುತ್ತವೆ ಮತ್ತು ಪೇಪರ್ ವರ್ಕ್ ಕಡಿಮೆ ಇರುತ್ತೆ.
ಆದರೆ ವೈಯಕ್ತಿಕ ಸಾಲಗಳು ದುಬಾರಿ ಆದ್ದರಿಂದ ಸಾಲದ ಪೂರ್ವ ಪಾವತಿಯು ಕಷ್ಟವಾಗಬಹುದು ವೈಯಕ್ತಿಕ ಸಾಲಗಳ ಪೂರ್ವ ಪಾವತಿಗಾಗಿ ಬ್ಯಾಂಕುಗಳು ವಿವಿಧ ಶುಲ್ಕಗಳನ್ನ ವಿಧಿಸುತ್ತವೆ ಆದರೆ ಪೂರ್ವ ಪಾವತಿಯು ಹಲವಾರು ಪ್ರಯೋಜನಗಳನ್ನು ಕೂಡ ಹೊಂದಿವೆ.
ವೈಯಕ್ತಿಕ ಸಾಲದ ಮುಂಗಡ ಪಾವತಿ ಎಂದರೆ?
ನೀವು ಸಂಪೂರ್ಣ ಬಾಕಿ ಉಳಿದಿರುವ ಮೊತ್ತವನ್ನು ಪಾವತಿಸುತ್ತೀರಿ ಅಥವಾ ಅವಧಿ ಮುಗಿಯುವ ಮೊದಲು ನೀವು ಅದರ ಒಂದು ಭಾಗವನ್ನು ಪಾವತಿಸುತ್ತೀರಿ ನಿಗದಿತ ದಿನಾಂಕದ ಮೊದಲು ನೀವು ಸಾಲವನ್ನ ಮರುಪಾವತಿಸಿದಾಗ ಬ್ಯಾಂಕ್ ಬಾಕಿ ಇರುವ ಮೊತ್ತದ ಮೇಲೆ ದಂಡ ಅಥವಾ ಪ್ರಿಕ್ಲೋಜರ್ ಶುಲ್ಕವನ್ನ ವಿಧಿಸುತ್ತೆ.
ಲೋನ್ ಗಳ ಸಂದರ್ಭದಲ್ಲಿ ನೀವು ಪ್ರೋಸೆಸ್ಸಿಂಗ್ ಫೀಸ್ ಪಾವತಿ ಮಾಡುವಂತೆ ಕ್ಲೋಸ್ ಮಾಡುವಾಗ ಪ್ರೀ ಕ್ಲೋಜರ್ ಶುಲ್ಕವನ್ನು ಕೂಡ ಪಾವತಿಸಬೇಕಾಗುತ್ತೆ ಪೂರ್ವ ಪಾವತಿಯ ಮೇಲಿನ ಶುಲ್ಕಗಳು ಸಾಲದ ನಿಯಮಗಳು ಮತ್ತು ಸಾಲದಾತರನ್ನ ಅವಲಂಬಿಸಿರುತ್ತದೆ. ಅಂದರೆ ಹೆಚ್ಚಿನ ಬ್ಯಾಂಕುಗಳು ಮತ್ತು ಎನ್ ಬಿಎಫ್ಸಿ ಗಳು ಸಾಲದ ಪೂರ್ವ ಪಾವತಿಗಾಗಿ ಲಾಕಿನ್ ಅವಧಿಯನ್ನ ಹೊಂದಿವೆ.
ಈ ಅವಧಿಯ ನಂತರ ಬಾಕಿ ಮೊತ್ತದ ಮೇಲೆ ಶೇಕಡಾ ಎರಡರಿಂದ ಐದರವರೆಗೆ ದಂಡ ಅಥವಾ ಪ್ರೀ ಕ್ಲೋಜರ್ ಶುಲ್ಕವನ್ನ ವಿಧಿಸಲಾಗುತ್ತೆ. ICICI ಬ್ಯಾಂಕ್ ನ ವೆಬ್ಸೈಟ್ ಪ್ರಕಾರ 12 ಅಥವಾ ಅದಕ್ಕಿಂತ ಹೆಚ್ಚಿನ ಇಎಂಐ ಗಳನ್ನ ಪಾವತಿಸಿದ ಗ್ರಾಹಕರು ಯಾವುದೇ ಪ್ರೀ ಕ್ಲೋಜರ್ ಶುಲ್ಕವನ್ನ ಹೊಂದಿರುವುದಿಲ್ಲ ಅದಾಗಿಯೂ 12 EMI ಗಳಿಗಿಂತ ಕಡಿಮೆ ಪಾವತಿಸುವ ಗ್ರಾಹಕರಿಗೆ ಶೇಕಡಾ ಮೂರರಷ್ಟು ಶುಲ್ಕ ಹಾಕಲಾಗುತ್ತೆ.
ನೀವು 24 ಇಎಂಐ ಗಳಿಗಿಂತ ಕಡಿಮೆ ಪಾವತಿಸಿದರೆ:
HDFC ಬ್ಯಾಂಕ್ ಲೋನ್ ಮರುಪಾವತಿಗೆ ಶೇಕಡಾ ನಾಲ್ಕರಷ್ಟು ಶುಲ್ಕ ವಿಧಿಸುತ್ತೆ 24 ರಿಂದ 36 ಇಎಂಐ ಗಳ ನಂತರ ಮರುಪಾವತಿಗಾಗಿ ಶೇಕಡಾ ಮೂರರಷ್ಟು ಶುಲ್ಕ ವಿಧಿಸಲಾಗುತ್ತೆ ಮತ್ತು ನೀವು 36 ಇಎಂಐ ಗಳಿಗಿಂತ ಹೆಚ್ಚು ಪಾವತಿಸಿದ ನಂತರ ಮರುಪಾವತಿಗೆ ಶೇಕಡಾ ಎರಡರಷ್ಟು ಪ್ರೀ ಕ್ಲೋಜರ್ ಶುಲ್ಕ ಅನ್ವಯಿಸುತ್ತೆ. 2 ಬ್ಯಾಂಕ್ ಗಳಲ್ಲಿ ನೀವು ಮೊದಲ ಇಎಂಐ ಅನ್ನ ಪಾವತಿಸಿದ ನಂತರ ನೀವು ಸಾಲವನ್ನ ಪೂರ್ವಪಾವತಿ ಮಾಡಬಹುದು ಹೆಚ್ಚುವರಿಯಾಗಿ ನೀವು ಪ್ರೀ ಕ್ಲೋಜರ್ ಶುಲ್ಕದ ಮೇಲೆ ಶೇಕಡಾ 18 ರಷ್ಟು ಜಿಎಸ್ಟಿ ಯನ್ನ ಪಾವತಿಸಬೇಕಾಗುತ್ತೆ.
ವೈಯಕ್ತಿಕ ಸಾಲವನ್ನ ಪಾವತಿಸುವುದರಿಂದ ಬಡ್ಡಿಗೆ ಖರ್ಚು ಮಾಡುವ ಮೊತ್ತವನ್ನ ತ್ವರಿತವಾಗಿ ಕಡಿಮೆ ಮಾಡುತ್ತದೆ ನೀವು ಎಷ್ಟು ಬೇಗ ಸಾಲವನ್ನ ಮರುಪಾವತಿಸುತ್ತೀರಿ ನೀವು ಕಡಿಮೆ ಬಡ್ಡಿಯನ್ನ ಪಾವತಿಸಬೇಕಾಗುತ್ತೆ bankbazar.com ಪ್ರಕಾರ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ವಿವಿಧ ಬ್ಯಾಂಕ್ ಗಳಲ್ಲಿ ಶೇಕಡ 9.99 ರಿಂದ 44 ರ ವರೆಗೆ ಬದಲಾಗುತ್ತವೆ. ಅಂತಹ ಸಾಲಗಳನ್ನ ತ್ವರಿತವಾಗಿ ಮರುಪಾವತಿ ಮಾಡುವುದು ಪ್ರಯೋಜನ ಕಾರಿಯಾಗಿದೆ.
ವೈಯಕ್ತಿಕ ಸಾಲವನ್ನ ಪೂರ್ವ ಪಾವತಿ ಮಾಡುವ ಮೂಲಕ ನೀವು ಎಷ್ಟು ಬಡ್ಡಿಯನ್ನ ಉಳಿಸಬಹುದು:
ಉದಾಹರಣೆ: ಮೂಲಕ ಅರ್ಥಮಾಡಿಕೊಳ್ಳೋಣ ನೀವು ಎರಡು ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನ ಐದು ವರ್ಷಗಳವರೆಗೆ 15% ವಾರ್ಷಿಕ ಬಡ್ಡಿಗೆ ತೆಗೆದುಕೊಂಡಿದ್ದೀರಿ ಅಂತ ಭಾವಿಸೋಣ ಆಗ ನಿಮ್ಮ ಇಎಂಐ 4758 ಆಗಿರುತ್ತೆ ನೀವು ಐದು ವರ್ಷಗಳಲ್ಲಿ ಒಟ್ಟು 285 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತೆ ಇದು 85,479 ರೂಪಾಯಿಗಳ ಬಡ್ಡಿ ಮೊತ್ತವನ್ನ ಒಳಗೊಂಡಿರುತ್ತೆ ಈಗ ನೀವು ಸಾಲವನ್ನ ಒಂದು ವರ್ಷದಲ್ಲಿ ಮರುಪಾವತಿ ಮಾಡ್ತೀರಿ ಅಂತ ಅಂದುಕೊಳ್ಳೋಣ ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಪ್ರಕಾರ ನೀವು ಮೊದಲ ವರ್ಷದ ಅಂತ್ಯದವರೆಗೆ ಸಾಲವನ್ನ ಮರುಪಾವತಿ ಮಾಡಿದ ನಂತರ ಬಾಕಿ ಮೊತ್ತವು 1,70,961 ಆಗಿರುತ್ತದೆ ಈಗ ಈ ಸಾಲವನ್ನ ಸಂಪೂರ್ಣವಾಗಿ ಮರುಪಾವತಿ ಮಾಡಿದ್ರೆ ಸುಮಾರು 57,000 ಬಡ್ಡಿ ಉಳಿತಾಯವಾಗುತ್ತೆ.
ಉದಾಹರಣೆಗೆ: ನಿಮ್ಮ ಲೋನ್ ICICI ಬ್ಯಾಂಕ್ ನಿಂದ ಆಗಿದ್ರೆ ನೀವು 12 ಇಎಂಐ ಗಳನ್ನ ಪೂರ್ಣಗೊಳಿಸಿರುವ ಕಾರಣ ನೀವು ಯಾವುದೇ ಪ್ರೀ ಕ್ಲೋಜರ್ ಶುಲ್ಕವನ್ನ ಪಾವತಿಸಬೇಕಾಗಿಲ್ಲ ಸಮಯಕ್ಕೆ ಮುಂಚಿತವಾಗಿ ಸಾಲವನ್ನ ಮರುಪಾವತಿ ಮಾಡುವುದು ನಿಮ್ಮ ಮಾಸಿಕ ಬಜೆಟ್ ಅನ್ನ ಸುಧಾರಿಸುತ್ತದೆ ಯಾಕೆಂದರೆ ಮರುಪಾವತಿಗೆ ಹೋಗುವ ಹಣವನ್ನು ಅಂದ್ರೆ ಇಎಂಐ ಅನ್ನ ಉಳಿಸಲಾಗುತ್ತೆ ಉಳಿತಾಯ ಸಂಪತ್ತು ಸೃಷ್ಟಿ ಅಥವಾ ನಿವೃತ್ತಿ ಯೋಜನೆಗಳಂತಹ ನಿಮ್ಮ ಇತರ ಹಣಕಾಸಿನ ಗುರಿಗಳಾಗಿ ನೀವು ಈ ಹಣವನ್ನು ಬಳಸಬಹುದು.
ವೈಯಕ್ತಿಕ ಸಾಲದ ಪೂರ್ವ ಅವಧಿಯು ತಕ್ಷಣವೇ ನಿಮ್ಮ ಕ್ರೆಡಿಟ್ ಸ್ಕೋರ್ ನ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ದೀರ್ಘಾವಧಿಯಲ್ಲಿ ಇದು ಧನಾತ್ಮಕ ಪರಿಣಾಮವನ್ನ ಬೀರಬಹುದು ನೀವು ಸಾಲವನ್ನ ಸಮಯಕ್ಕೆ ಮುಂಚಿತವಾಗಿ ಮರುಪಾವತಿ ಮಾಡಿರೋದ್ರಿಂದ ಭವಿಷ್ಯದಲ್ಲಿ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡಿಬಹುದು ಪೂರ್ಣ ಪೂರ್ವ ಪಾವತಿಗಾಗಿ ನೀವು ಒಂದೇ ಬಾರಿಗೆ ದೊಡ್ಡ ಮೊತ್ತ ಪಾವತಿ ಮಾಡಬೇಕಾಗಿರುವುದರಿಂದ ನಿಮಗೆ ಹಣಕಾಸಿನ ತೊಂದರೆ ಎದುರಾಗಬಹುದು ಹೀಗಾಗಿ ನೀವು ಪಾರ್ಟ್ ಪೇಮೆಂಟ್ ಆರಿಸಿಕೊಳ್ಳಬಹುದು.
ಅಂದ್ರೆ ನೀವು ಸಾಲದ ಒಂದು ಭಾಗವನ್ನ ಪಾವತಿ ಸುತ್ತೀರಿ ಬಾಕಿ ಮೊತ್ತ ಕಡಿಮೆಯಾದಂತೆ ಇಎಂಐ ಅಥವಾ ಅವಧಿಯು ಕೂಡ ಕಡಿಮೆಯಾಗುತ್ತೆ ಇದು ಬಡ್ಡಿಯ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ ಇನ್ನು ನೆನಪಿಡಬೇಕಾದ ಒಂದು ವಿಷಯವೇನೆಂದರೆ ನೀವು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೊದಲು ಅದರ ನಿಯಮಗಳನ್ನು ಓದಬೇಕು ಇದರಿಂದ ನೀವು ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಬಹುದು.
ಇದನ್ನೂ ಓದಿ: ಯಾವ ರೀತಿ Online ಬ್ಯಾಂಕ್ ಗಳು Scam ಮಾಡುತ್ತಾರೆ!!





