ಎಲ್ಲರಿಗೂ ನಮಸ್ಕಾರ, Online ಮೋಸ ಮಾಡೋದು Cyber ಕ್ರಿಮಿನಲ್ ಗಳು ಮಾತ್ರ ಅಂತ ಬಹುತೇಕ ಜನ ಯೋಚನೆ ಮಾಡ್ತಾರೆ ಆದರೆ ಎಲ್ಲಾ ಸಂದರ್ಭಗಳಲ್ಲೂ ಹಾಗಿಲ್ಲ ಇಂದಿನ ಕಾಲದಲ್ಲಿ ಜನರನ್ನ ಬೇರೆ ಬೇರೆ ರೀತಿಯಲ್ಲಿ ಮೋಸ ಮಾಡಲಾಗುತ್ತೆ ಅದರಲ್ಲೂ ಮೋಸ ಮಾಡುವರು ಎಲ್ಲಾ ಬಾರಿಯೂ ಹೊರಗಿನವರೇ ಆಗಿರೋದಿಲ್ಲ ಕಳ್ಳರು ಮಾತ್ರ ನಿಮ್ಮನ್ನ ಮೋಸ ಮಾಡಬೇಕು ಎಂದೇನಿಲ್ಲ, ಇತ್ತೀಚಿನ ದಿನಗಳಲ್ಲಿ ಮೋಸ ಮಾಡುವುದಕ್ಕೆಂದೆ ಡಾರ್ಕ್ ಪ್ಯಾಟರ್ನ್ ಗಳನ್ನ ಬಳಸಲಾಗುತ್ತದೆ.
ಇದೊಂದು ದೊಡ್ಡ ಸಂಸ್ಥೆಗಳು ತಮ್ಮ ಮಾರ್ಕೆಟಿಂಗ್ ತಂತ್ರಗಳನ್ನ ಬಳಸಿ ಮಾಡುವಂತಹ ಸಂಚು. ಈವರೆಗೆ ಈ ಕಾಮರ್ಸ್ ಕಂಪನಿಗಳು ಇಂತಹ ತಂತ್ರಗಳನ್ನ ಬಳಸುತ್ತಿದ್ದವು ಆದರೆ ಈಗ ಇದು ಆನ್ಲೈನ್ ಬ್ಯಾಂಕಿಂಗ್ ಮತ್ತು ಇತರ ಹಣಕಾಸು ಸೇವೆಗಳ ಹೆಸರಿನಲ್ಲೂ ಕೂಡ ನಡೀತಾ ಇದೆ.
ಇಂದು ಆನ್ಲೈನ್ ಬ್ಯಾಂಕಿಂಗ್ ವಲಯದಲ್ಲಿ ಡಾರ್ಕ್ ಪ್ಯಾಟರ್ನ್ ಗಳು ಹೇಗೆ ಬಳಸಲಾಗುತ್ತಿದೆ ಮತ್ತು ಅದರಿಂದ ನೀವು ರಕ್ಷಣೆ ಪಡೆಯುವುದು ಹೇಗೆ ಅಂತ ನೋಡೋಣ.
What Is Dark Pattern
ಡಾರ್ಕ್ ಪ್ಯಾಟರ್ನ್ ಎಂಬ ಶಬ್ದವೇ ಅದರ ಅರ್ಥವನ್ನು ಹೇಳುತ್ತೆ ಡಾರ್ಕ್ ಎಂದರೆ ಕತ್ತಲು ಮತ್ತು ಪ್ಯಾಟರ್ನ್ ಅಂದರೆ ಕೆಲಸ ಮಾಡುವ ವಿಧಾನ ಗ್ರಾಹಕರನ್ನ ಕತ್ತಲಲ್ಲಿಟ್ಟು ಅಸಮರ್ಪಕ ಅಥವಾ ಅಪೂರ್ಣ ಮಾಹಿತಿಯನ್ನ ನೀಡಿದಾಗ ಅದನ್ನ ಡಾರ್ಕ್ ಪ್ಯಾಟರ್ನ್ ಎಂದು ಕರೆಯಲಾಗುತ್ತೆ ಈ ಕಾಮರ್ಸ್ ಕಂಪನಿಗಳು ಈ ತಂತ್ರವನ್ನ ತುಂಬಾ ಬಳಸಿವೆ ಆದರೆ ಈಗ ಇದನ್ನ ಆನ್ಲೈನ್ ಬ್ಯಾಂಕಿಂಗ್ ನಲ್ಲೂ ಕೂಡ ಬಳಸಲಾಗುತ್ತದೆ.
ಕೆಲವು ಸಾರಿ ಸಾಲವನ್ನು ಕೊಡುತ್ತಾರೆ ಆದರೆ ಬಡ್ಡಿ ದರ ಸೇರಿದಂತೆ ಎಲ್ಲಾ ಮಾಹಿತಿಯನ್ನ ಮುಚ್ಚಿಟ್ಟು ಬಿಡುತ್ತಾರೆ ಕೆಲವು ಬಾರಿ ಹಲವು ರೀತಿಯ ಗೌಪ್ಯ ಶುಲ್ಕಗಳನ್ನ ವಿಧಿಸಲಾಗುತ್ತೆ. ಆದರೆ ಹೇಳುವಾಗ ಮಾತ್ರ ಎಲ್ಲವೂ ಉಚಿತ ಎಂದು ಪ್ರಕಟಿಸಲಾಗುತ್ತೆ ಅಷ್ಟೇ ಅಲ್ಲ ಅನಗತ್ಯ ಸಬ್ಸ್ಕ್ರಿಪ್ಷನ್ ಗಳನ್ನ ಖರೀದಿ ಮಾಡಿ ಅಂತ ಜನರನ್ನ ಸಿಕ್ಕಿ ಹಾಕಿಸಲಾಗುತ್ತೆ. ಗ್ರಾಹಕ ಸಮೀಕ್ಷೆಯ ವೇದಿಕೆ ಲೋಕಲ್ ಸರ್ಕಲ್ಸ್ ಒಂದು ಸಮೀಕ್ಷೆಯನ್ನ ಮಾಡಿದೆ.
ಇದರಲ್ಲಿ ಡಾರ್ಕ್ ಪ್ಯಾಟರ್ನ್ ಗಳು ಆನ್ಲೈನ್ ಬ್ಯಾಂಕಿಂಗ್ ವಲಯದಲ್ಲಿ ನಡೀತಾ ಇರೋದು ತಿಳಿದು ಬಂದಿದೆ ಅಂದಾಜು 63% ಜನ ಆನ್ಲೈನ್ ಬ್ಯಾಂಕಿಂಗ್ ನಲ್ಲಿ ಹಿಡನ್ ಶುಲ್ಕಗಳನ್ನ ಪೇ ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.
ಒಂದು ಉದಾಹರಣೆ ಕೊಟ್ಟು ವಿವರಿಸುವುದಾದರೆ:
Karan ಎಂಬ ವ್ಯಕ್ತಿ ಐದು ಲಕ್ಷ ರೂಪಾಯಿ ಪರ್ಸನಲ್ ಲೋನ್ ಅನ್ನ ತೆಗೆದುಕೊಂಡಿದ್ದಾರೆ ಒಂದು ಬ್ಯಾಂಕ್ ನ ಎಕ್ಸಿಕ್ಯೂಟಿವ್ ಅವರಿಗೆ ಕರೆ ಮಾಡಿ ತಕ್ಷಣವೇ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಿ ಎಂದು ಹೇಳ್ತಾರೆ ಬ್ಯಾಂಕ್ ಎಕ್ಸಿಕ್ಯೂಟಿವ್ ಅವರಿಗೆ ಕರೆ ಮಾಡಿ ತಕ್ಷಣವೇ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಿ ನಿಮಗೆ ಶೇಕಡಾ 11ರ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ ಅಂತ ಹೇಳ್ತಾರೆ ಆದರೆ ಬೇರೆ ಬೇರೆ ಶುಲ್ಕ ನಿಯಮ ಮತ್ತು ಶರತ್ತು ಸೇರಿದರೆ. ಶೇಕಡ 36 ರವರೆಗೆ ಬಡ್ಡಿ ಪಾವತಿಯನ್ನ ಮಾಡಬೇಕಾಗುತ್ತೆ ಅಂತ ಅವರು ಹೇಳೋದಿಲ್ಲ, Karan ಅವರು EMI ಪಾವತಿ ಮಾಡುವುದಕ್ಕೆ ಶುರುಮಾಡಿದಾಗ ಇದೆಲ್ಲವೂ ಗೊತ್ತಾಗುತ್ತಾ ಹೋಗುತ್ತೆ.
ಲೋಕಲ್ ಸರ್ಕಲ್ಸ್ 363 ಜಿಲ್ಲೆಗಳಲ್ಲಿ ನಡೆಸಿದ ಮಾದರಿ ಸಮೀಕ್ಷೆಯಲ್ಲಿ 41% ಬಳಕೆದಾರರು ತಾವು ಇಂಟರ್ಫೇಸ್ ಇಂಟರ್ಫಿರೆನ್ಸ್ ಅನ್ನ ಎದುರಿಸಿದ್ದೇವೆ ಎಂದು ಹೇಳಿದ್ದಾರೆ ಗ್ರಾಹಕರು ಟ್ರಾನ್ಸಾಕ್ಷನ್ ನಡೆಸುವ ಸಮಯದಲ್ಲಿ ಆನ್ಲೈನ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ ಗಳು ಮಧ್ಯಪ್ರವೇಶ ಮಾಡುತ್ತವೆ ಬೇರೆ ಪ್ರಾಡಕ್ಟ್ ಅಥವಾ ಸರ್ವಿಸ್ ಸಬ್ಸ್ಕ್ರಿಪ್ಷನ್ ಅಥವಾ ಖರೀದಿ ಮಾಡುವಂತೆ ಗ್ರಾಹಕರನ್ನ ಪ್ರಚೋದಿಸುತ್ತವೆ.
ಉದಾಹರಣೆಗೆ: ನೀವು ಬ್ಯಾಂಕ್ ನ ವೆಬ್ಸೈಟ್ ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪೇ ಮಾಡುವುದಕ್ಕೆ ಪ್ರಯತ್ನ ಮಾಡಿದಾಗ ಬ್ಯಾಂಕ್ ನ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಅಪ್ಗ್ರೇಡ್ ಮಾಡಿ ಅಂತ ಪಾಪ್ ಅಪ್ ಜಾಹಿರಾತುಗಳು ಕಾಣಿಸುವುದಕ್ಕೆ ಶುರುವಾಗುತ್ತೆ ಆಗುತ್ತೆ ಇದರಿಂದ ಗ್ರಾಹಕರು ಆರಾಮವಾಗಿ ಬಿಲ್ ಪಾವತಿ ಮಾಡುವುದಕ್ಕೆ ಸಾಧ್ಯ ಆಗೋದಿಲ್ಲ ಈ POP ಅಪ್ ಗಳ ಮೇಲೆ ಪದೇಪದೇ ಅನಗತ್ಯವಾಗಿ ಕ್ಲಿಕ್ ಮಾಡಿ ಅದನ್ನ ಕ್ಲೋಸ್ ಮಾಡ್ತಾನೆ ಇರಬೇಕಾಗುತ್ತೆ ಇದನ್ನ ಇಂಟರ್ಫೆರೆನ್ಸ್ ಎಂದು ಕರೆಯಲಾಗುತ್ತೆ.
ಅಂದ್ರೆ ನಿಮ್ಮ ಮೇಲೆ ಜಾಹಿರಾತುಗಳನ್ನು ಹೇರುವುದು ಅನಗತ್ಯ ಸೇವೆಗಳನ್ನ ಖರೀದಿಸುವುದಕ್ಕೆ ನಿಮ್ಮನ್ನ ಪ್ರೇರೇಪಿಸುವುದು ಸಮೀಕ್ಷೆಯಲ್ಲಿ 32% ಬಳಕೆದಾರರು ಸಬ್ಸ್ಕ್ರಿಪ್ಷನ್ ಟ್ರಾಪ್ ಗಳನ್ನ ಅನುಭವಿಸಿದ್ದಾರೆ ಎಂದು ಗೊತ್ತಾಗಿದೆ ಗ್ರಾಹಕರು ಹೊಸ ಆನ್ಲೈನ್ ಪ್ರಾಡಕ್ಟ್ ಅಥವಾ ಸರ್ವಿಸ್ ಗೆ ಸುಲಭವಾಗಿ ಸೈನ್ ಅಪ್ ಮಾಡುವಂತೆ ಮಾಡುವುದನ್ನೇ ಸಬ್ಸ್ಕ್ರಿಪ್ಷನ್ ಟ್ರಾಪ್ ಎಂದು ಹೇಳಲಾಗುತ್ತೆ.
What Is This Subscription
ಈ ಸಬ್ಸ್ಕ್ರಿಪ್ಷನ್ ಸಲುವಾಗಿ ಅವರಿಗೆ ಪದೇಪದೇ ಶುಲ್ಕವನ್ನು ವಿಧಿಸಲಾಗುತ್ತೆ ಬೇಡ ಎಂದರೂ ಕೂಡ ಅದನ್ನ ಸುಲಭವಾಗಿ ರದ್ದು ಮಾಡಲು ಆಗುವುದಿಲ್ಲ ಅದನ್ನ ನಿಲ್ಲಿಸುವುದಕ್ಕೆ ರದ್ದು ಮಾಡುವುದಕ್ಕೆ ನೀವು ಬ್ಯಾಂಕ್ ಶಾಖೆಗೆ ಹೋಗಬೇಕಿರುತ್ತೆ ಇದರ ಜೊತೆಗೆ 39% ಬಳಕೆದಾರರು ಬೈಟ್ ಅಂಡ್ ಸ್ವಿಚ್ ಪ್ರಕರಣಗಳನ್ನ ಎದುರಿಸಿದ್ದಾರೆ.
ಇದರಲ್ಲಿ ಸಾಲ ಮತ್ತು ಡೆಪಾಸಿಟ್ ಗಳ ಮೇಲೆ ಆಕರ್ಷಕ ಬಡ್ಡಿ ದರಗಳನ್ನ ನೀಡುತ್ತೇವೆ ಎಂಬ ಭರವಸೆಯನ್ನ ನೀಡಿ ನಂತರ ಹೇಳಿದ್ದಕ್ಕಿಂತ ಬೇರೆ ರೀತಿಯ ಬಡ್ಡಿ ದರಗಳನ್ನ ವಿಧಿಸಲಾಗುತ್ತೆ ಅಷ್ಟೇ ಅಲ್ಲ ಹಿಡನ್ ಚಾರ್ಜಸ್ ಗಳನ್ನ ಪೇ ಮಾಡಬೇಕಾಗುತ್ತೆ ಸರ್ಕಾರವು ಕೂಡ ನಿರಂತರವಾಗಿ ಡಾರ್ಕ್ ಪ್ಯಾಟರ್ನ್ ಗಳನ್ನ ಪತ್ತೆ ಮಾಡಿ ಮಟ್ಟ ಹಾಕುತ್ತಲೇ ಇರುತ್ತೆ ಆದರೆ ಇದು ಯಶಸ್ವಿಯಾಗಲಿಲ್ಲ.
ಡಾರ್ಕ್ ಪ್ಯಾಟರ್ನ್ ಬಳಕೆ ಆಗ್ತಾ ಇರುವ ಬಗ್ಗೆ ಎಚ್ಚರಿಕೆ
ಕಳೆದ ವರ್ಷ ಆರ್ ಬಿಐ ನ ಡೆಪ್ಯೂಟಿ ಗವರ್ನರ್ ಎಂ ರಾಜೇಶ್ವರ ರಾವ್ ಅವರು ಡಿಜಿಟಲ್ ಲೋನ್ ವಿಭಾಗದಲ್ಲಿ ಡಾರ್ಕ್ ಪ್ಯಾಟರ್ನ್ ಬಳಕೆ ಆಗ್ತಾ ಇರುವ ಬಗ್ಗೆ ಎಚ್ಚರಿಕೆಯನ್ನ ನೀಡಿದರು ದುಬಾರಿ ಬಡ್ಡಿ ದರದ ಸಾಲದ ಕಡೆಗೆ ಜನರನ್ನ ದಾರಿ ತಪ್ಪಿಸಿ ಎಳೆದೊಯ್ಯಲಾಗುತ್ತಿದೆ ತೊಂದರೆಗಳು ಹೆಚ್ಚುತ್ತಿರುವುದನ್ನ ಗಮನಿಸಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಅಥವಾ ಸಿಸಿಪಿಎ 2023 ರಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದಕ್ಕೆ ಗ್ಯಾಜೆಟ್ ನೋಟಿಫಿಕೇಶನ್ ಅನ್ನ ಹೊರಡಿಸಿತು ಇದನ್ನು ಡಾರ್ಕ್ ಪ್ಯಾಟರ್ನ್ ಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಮಾರ್ಗ ಸೂಚಿಗಳು ಎಂದು ಕರೆಯಲಾಗುತ್ತೆ. ಇದು ಭಾರತದಲ್ಲಿ ಸರಕು ಮತ್ತು ಸೇವೆಗಳನ್ನು ಒದಗಿಸುವ ಎಲ್ಲಾ ಪ್ಲಾಟ್ಫಾರ್ಮ್ ಗಳು ಜಾಹಿರಾತುದಾರರು ಮತ್ತು ಮಾರಾಟಗಾರರನ್ನ ಒಳಗೊಳ್ಳುತ್ತೆ.
ಬಹುತೇಕ ಎಲ್ಲರೂ ಡಾರ್ಕ್ ಪ್ಯಾಟರ್ನ್ ಗೆ ಬಲಿಯಾಗುತ್ತಿದ್ದಾರೆ ಎಂದು ಬ್ಯಾಂಕಿಂಗ್ ತಜ್ಞ ಅಮಿತ್ ಧನ್ವರ್ ಹೇಳ್ತಾರೆ ಎಸ್ಎಂಎಸ್ WhatsApp ಸಂದೇಶಗಳು ಇಮೇಲ್ ಗಳು ಅಥವಾ ಡೈರೆಕ್ಟ್ ಕಾಲ್ಗಳ ಮೂಲಕ ಜನರನ್ನ ಮೋಸ ಮಾಡಲಾಗ್ತಾ ಇದೆ ಕೆಲವೊಮ್ಮೆ ಗ್ರಾಹಕರು ಹಗ್ಗದ ದರದಲ್ಲಿ ಸಾಲ ಸಿಗುತ್ತೆ ಎಂದು ಆಸೆಗೆ ಬೀಳುತ್ತಾರೆ ಕೆಲವೊಮ್ಮೆ ಅವರನ್ನ ಯಾವುದೋ ಸರ್ವಿಸ್ ಗೆ ಸಬ್ಸ್ಕ್ರಿಪ್ಷನ್ ಮಾಡಿಸಿಕೊಳ್ಳುವಂತೆ ಮನವಲಿಸಲಾಗುತ್ತೆ ಇದು ಅತ್ಯಂತ ಅಗತ್ಯ ಎಂದು ಅವರಿಗೆ ಬಿಂಬಿಸಲಾಗುತ್ತೆ ಈ ರೀತಿ ಜನರು ಕೆಲವೊಮ್ಮೆ ಹಿಡನ್ ಚಾರ್ಜಸ್ ಪಾವತಿ ಮಾಡುವುದಕ್ಕೆ ಬಲಿ ಬೀಳ್ತಾರೆ ಕೆಲವೊಮ್ಮೆ ಸಬ್ಸ್ಕ್ರಿಪ್ಷನ್ ಟ್ರಾಪ್ ಗಳಲ್ಲಿ ಸಿಕ್ಕಿ ಬೀಳ್ತಾರೆ.
ಈ ಸಮಸ್ಯೆ ತುಂಬಾ ಹಳೆಯದಲ್ಲ:
ಯಾಕೆಂದರೆ ಭಾರತದಲ್ಲಿ ಆನ್ಲೈನ್ ಬ್ಯಾಂಕಿಂಗ್ ಕಳೆದ ಎರಡು ದಶಕಗಳಲ್ಲಿ ಜನಪ್ರಿಯವಾಗಿ ಬಿಟ್ಟಿದೆ ಒಂದು ಕಡೆ ಆನ್ಲೈನ್ ಬ್ಯಾಂಕಿಂಗ್ ನಿಂದ ಬ್ಯಾಂಕಿಂಗ್ ಸೌಲಭ್ಯ ಇನ್ನಷ್ಟು ಸುಲಭವಾಗಿದ್ದರೆ ಇನ್ನೊಂದು ಕಡೆ ಈ ರೀತಿಯ ಸಮಸ್ಯೆಗಳು ತಂತ್ರಜ್ಞಾನದ ಮೇಲಿನ ಜನರ ವಿಶ್ವಾಸವನ್ನೇ ಹಾಳು ಮಾಡುತ್ತಿವೆ ಈ ಅಪಾಯವನ್ನ ಗಮನಿಸಿದರೆ ಆರ್ ಬಿಐ ಬ್ಯಾಂಕುಗಳು ಮತ್ತು ಎಲ್ಲಾ ಸ್ಟೇಕ್ ಹೋಲ್ಡರ್ ಗಳು ಹೆಚ್ಚು ಸಕ್ರಿಯವಾಗಿರಬೇಕು ಎಂದು ನಿರ್ಧರಿಸಲಾಗಿದೆ.
ಈ ಕಾಮರ್ಸ್ ಕಂಪನಿಗಳ ವಿಷಯದಲ್ಲಿ ಸರ್ಕಾರ ಕಟ್ಟುನಿಟ್ಟಾಗಿ ವರ್ತಿಸಿದ ಹಾಗೇನೇ ಬ್ಯಾಂಕುಗಳ ವಿಷಯದಲ್ಲೂ ಕೂಡ ಅದೇ ಕಟ್ಟುನಿಟ್ಟಿನ ಕ್ರಮವನ್ನ ಸರ್ಕಾರ ತೋರಿಸುತ್ತೆ ಎಂದು ಭಾವಿಸಲಾಗಿದೆ ಆದರೆ ನಿಯಮಗಳು ಮತ್ತು ನಿಬಂಧನೆಗಳಲ್ಲಿನ ಲೋಪದೋಷಗಳನ್ನ ಸರಿಪಡಿಸುವುದಕ್ಕೂ ಮೊದಲು ಗ್ರಾಹಕರು ಈ ಸಮಸ್ಯೆಯನ್ನ ಅರ್ಥಮಾಡಿಕೊಳ್ಳುವುದು ಕೂಡ ಅಗತ್ಯ ಆನ್ಲೈನ್ ಬ್ಯಾಂಕಿಂಗ್ ನಲ್ಲಿನ ಡಾರ್ಕ್ ಪ್ಯಾಟರ್ನ್ ಗಳನ್ನ ತಪ್ಪಿಸಲು ಗ್ರಾಹಕರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಎಲ್ಲಾ ಶುಲ್ಕಗಳ ಬಗ್ಗೆ ವಿಚಾರ ಮಾಡಿಕೊಳ್ಳುವುದು ಅವಶ್ಯಕ ಸಾಲದ ಮೇಲಿನ ವಾಸ್ತವಿಕ ಬಡ್ಡಿ ದರ ಎಷ್ಟು ಎಂದು ಅವರು ಕೇಳಿ ತಿಳಿದುಕೊಳ್ಳಬೇಕು.
ವಾರ್ಷಿಕ ಶೇಕಡವಾರು ದರ ಅಥವಾ ಎಪಿಆರ್ ಬಗ್ಗೆ ಲಿಖಿತ ಮಾಹಿತಿಯನ್ನ ತಿಳಿದುಕೊಳ್ಳಬೇಕು ಇದು ಬಡ್ಡಿ ಪ್ರೋಸೆಸ್ಸಿಂಗ್ ಫೀ ಇತ್ಯಾದಿ ಸೇರಿದಂತೆ ಎಲ್ಲಾ ರೀತಿಯ ವೆಚ್ಚಗಳನ್ನ ಇದು ಒಳಗೊಂಡಿರುತ್ತದೆ ಎಲ್ಲಾ ನಿಯಮಗಳು ಮತ್ತು ಶರತ್ತುಗಳನ್ನ ಓದಿ ಅನೇಕ ಬಾರಿ ನಿಯಮಗಳು ಮತ್ತು ಶರತ್ತುಗಳ ಜೊತೆಗೆ ಸ್ಟಾರ್ ಚಿನ್ಹೆ ಇರುತ್ತದೆ ಅದರ ಬಗ್ಗೆ ಗಮನ ಕೊಡಿ ನೀವು ಯಾವುದೇ ಡಾರ್ಕ್ ಪ್ಯಾಟರ್ನ್ ನಿಂದ ಮೋಸ ಹೋಗಿದ್ರೆ ಅದರ ಬಗ್ಗೆ ದೂರು ನೀಡಬಹುದು 115 ಸಂಖ್ಯೆ ಡಯಲ್ ಮಾಡಿ ರಾಷ್ಟ್ರೀಯ ಗ್ರಾಹಕ ಸಹಾಯವಾಡಿಗೆ ದೂರು ನೀಡಬಹುದು 88001915 ಕ್ಕೆ WhatsApp ಮೂಲಕ ಕೂಡ ದೂರನ್ನ ನೀಡಬಹುದು.
ಇದನ್ನೂ ಓದಿ: Tax ಯಾವ ರೀತಿ Save ಮಾಡುವುದು ಎಂಬ Tips ಇಲ್ಲಿದೆ!!





