ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ BPL ಕಾರ್ಡ್ ದಂಗಲ್ ನಡೆಯುತ್ತಿದೆ. ವಿಜಯಪುರದಲ್ಲಿ ಸಂಕಷ್ಟಕ್ಕೀಡಾದ ಅಲ್ಪಸಂಖ್ಯಾತರ ಕುಟುಂಬ ಎಲ್ಲಾ ಕಡೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇಷ್ಟು ದಿನ ವಕ್ಫ್ ದಂಧೆ ರಾಜ್ಯದ ಎಲ್ಲಾ ಕಡೆ ಸುದ್ದಿಯಾಗಿತ್ತು ಹಾಗೂ ಎಲ್ಲಾ ಕಡೆ ಕಿಡಿ ಹೆಚ್ಚಿಸಿತ್ತು.
ಆದರೆ ಈಗ BPL ಕಾರ್ಡಿನ ದಂಗಲ್ ರಾಜ್ಯದಲೆಲ್ಲ ಹರಡಿದೆ.
ರಾಜ್ಯದಲ್ಲಿ ಅನರ್ಹ BPL ಕಾರ್ಡ್ಗಳನ್ನು ರದ್ದು ಮಾಡುವುದು ಹಾಗೂ APL ಗೆ ಟ್ರಾನ್ಸ್ಫರ್ ಮಾಡುವುದು ಆಹಾರ ಇಲಾಖೆಯ ಕಡೆಯಿಂದ ಜೋರಾಗಿ ನಡೆಯುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ ಕಾರ್ಡಿನ ದಂಗಲ್:
ಸ್ನೇಹಿತರೆ ಕರ್ನಾಟಕದಲ್ಲಿ ಸುಮಾರು ದಿನಗಳಿಂದ ವಕ್ಫ್ ಜನರಿಗೆ ಮಾಡಿದ್ದ ಮೋಸದ ಸುದ್ದಿಯು ಎಲ್ಲಾ ಕಡೆ ಕಿಡಿ ಹೆಚ್ಚಿಸಿತ್ತು. ಇದೀಗ ಆಹಾರ ಇಲಾಖೆಯು ಮಾಡುತ್ತಿರುವ ಬಿಪಿಎಲ್ ಕಾರ್ಡಿನ ಅಪ್ಡೇಟ್ ಎಲ್ಲಾ ಕಡೆ ಸುದ್ದಿಯಾಗಿದೆ.
ಕರ್ನಾಟಕ ರಾಜ್ಯದ ಆಹಾರ ಇಲಾಖೆಯು ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿ ಅವುಗಳನ್ನು ರದ್ದು ಮಾಡುತ್ತಿದೆ ಹಾಗೂ ಕೆಲವು BPL ಕಾರ್ಡ್ ಗಳನ್ನು ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡುತ್ತಿದೆ. ಪ್ರತಿಪಕ್ಷಗಳು ಈ ವಿಷಯವನ್ನ ಅಸ್ತ್ರವಾಗಿ ಇಟ್ಟುಕೊಂಡು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದೆ.
ಅರ್ಹ BPL ಕಾರ್ಡ್ಗಳನ್ನು ನಾವು ರದ್ದು ಮಾಡುತ್ತಿಲ್ಲ:
ರಾಜ್ಯದಲ್ಲಿ BPL ಕಾರ್ಡ್ ವಿಷಯವಾಗಿ ಸರ್ಕಾರದ ವಿರುದ್ಧ ಎಲ್ಲಾ ಕಡೆ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರವು ಮಾತ್ರ ನಾವು ಅರ್ಹರ BPL ಕಾರ್ಡ್ಗಳನ್ನು ರದ್ದು ಮಾಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದೆ.
ಈ ವಿಷಯವು ಈಗ ರಾಜ್ಯದಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದ್ದು ವಿವಾದಕ್ಕೆ ಗುರಿಯಾಗಿದೆ.
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದ ಎಡವಟ್ಟು:
ಕಾಂಗ್ರೆಸ್ ಸರ್ಕಾರದ ಮುಖ್ಯವಾದ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಬಹು ಮುಖ್ಯವಾಗಿದೆ. ಈ ಯೋಜನೆಗಳಲ್ಲಿ ಯಾವಾಗಲೂ ಯಾವುದಾದರೂ ಒಂದು ಎಡವಟ್ಟು ಅಥವಾ ಸಮಸ್ಯೆ ರಾಜ್ಯ ಸರ್ಕಾರದ ಕಡೆಯಿಂದ ಬರುತ್ತಲೇ ಇದೆ.
ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರವು 16,000 ಮಹಿಳೆಯರ ಐಡಿಗಳನ್ನು ಕ್ಯಾನ್ಸಲ್ ಮಾಡಿ ಗೃಹಲಕ್ಷ್ಮಿ ಯೋಜನೆಯಿಂದ ತೆಗೆದು ಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಸುಮಾರು 10,000 ಫಲಾನುಭವಿಗಳ ಬಿಪಿಎಲ್ ಕಾರ್ಡನ್ನು ರದ್ದು ಮಾಡಿದೆ.
ವಕ್ಫ್ ಆಯ್ತು ಈಗ ವಿಜಯಪುರದಲ್ಲಿ BPL ಕಾರ್ಡ್ ನ ಸಮಸ್ಯೆ:
ವಿಜಯ್ಪುರದಲ್ಲಿ ವಕ್ಫ್ ದಂಗಲ್ ಮುಗಿಯುವ ಅಷ್ಟರಲ್ಲಿ ಇದೀಗ ಬಿಪಿಎಲ್ ಕಾರ್ಡಿನ ಸಮಸ್ಯೆ ಜನರಿಗೆ ದೂರ ಆಗಿದೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಸುಮಾರು ನಾಲ್ಕು ಸಾವಿರದ 4,400 ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ.
IT ರಿಟರ್ನ್ ಮಾಡಿದ್ದ 1,932 ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಬಿಪಿಎಲ್ ಕಾರ್ಡನ್ನು ಆಹಾರ ಇಲಾಖೆ ರದ್ದು ಮಾಡಿದೆ ಹಾಗೂ ಸರ್ಕಾರಿ ನೌಕರಿ ಅಥವಾ 1,20,000ಕ್ಕೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ 2256 ಜನರ ಬಿಪಿಎಲ್ ಕಾರ್ಡ್ಗಳನ್ನು ಆಹಾರ ಇಲಾಖೆಯು ರದ್ದು ಮಾಡಿದೆ.
ಆದರೆ ಇದರಲ್ಲಿ ಕೆಲವು ಬಡಜನರ ಬಿಪಿಎಲ್ ಕಾರ್ಡ್ ಗಳು ಕೂಡ ರದ್ದಾಗಿದೆ. ಈ ವಿಷಯವಾಗಿ ಜಿಲ್ಲೆಯಲ್ಲಿ ಜನರು ಎಲ್ಲಾ ಕಡೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಹಾಗೂ ಸರ್ಕಾರದ ಮೇಲೆ ಕಿಡ ಕಾರುತ್ತಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ರದ್ದಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಸ್ಪಷ್ಟನೆ!!





