ಎಲ್ಲರಿಗೂ ನಮಸ್ಕಾರ, ರಾಜ್ಯದಲ್ಲಿ ಜೋರಾಗ್ತಾ ಇದೆ. BPL ಕಾರ್ಡ್ ನ ಕೋಲಾಹಲ ಅನರ್ಹ BPL ಕಾರ್ಡ್ ರದ್ದಿಗೆ ಈಗ ಸರ್ಕಾರ ಮಹತ್ವದ ಹೆಜ್ಜೆಯನ್ನ ಇಟ್ಟಿದೆ. ಹಲವು ಮಾನದಂಡವನ್ನ ಇಟ್ಟು ಬಿಪಿಎಲ್ ಕಾರ್ಡ್ ಗೆ ಕೊಕ್ಕೆ ಹಾಕೋದಕ್ಕೆ ಸರ್ಕಾರ ಮುಂದಾಗಿದೆ ಜಿಎಸ್ಟಿ, ಐಟಿ ಕಟ್ಟುತ್ತಾ ಇದ್ರೆ ಬಿಪಿಎಲ್ ಕಾರ್ಡ್ ರದ್ದಾಗಲಿದೆ.
ರೇಷನ್ ಕಾರ್ಡ್ ಗೆ ಸದ್ದಿಲ್ಲದೆ ಸರ್ಕಾರದಿಂದ ಆಪರೇಷನ್ ಆಗ್ತಾ ಇದೆ. ಹಲವು ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಿದ್ದು ಜನ ಕಂಗಾಲಾಗಿದ್ದಾರೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗಿದೆ ಹಾಗಾಗಿ ಸಹಜವಾಗಿ ಜನ ಕಂಗಾಲಾಗಿ ಹೋಗಿದ್ದಾರೆ.
ಇನ್ನು ನಮ್ದು BPL ಕಾರ್ಡ್ ಯಾವಾಗ ಕ್ಯಾನ್ಸಲ್ ಆಗುತ್ತೆ
ಇದರಿಂದ ಆತಂಕದಲ್ಲೇ ಸಾಕಷ್ಟು ಜನ ಇದ್ದಾರೆ. ಅನರ್ಹ ಬಿಪಿಎಲ್ ಕಾರ್ಡ್ ರದ್ದಿಗೆ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿರುವ ಹಿನ್ನೆಲೆಯಲ್ಲಿ ಹಲವು ಮಾನದಂಡವನ್ನು ಇಟ್ಕೊಂಡು ಬಿಪಿಎಲ್ ಕಾರ್ಡ್ ಗಳನ್ನ ರದ್ದು ಮಾಡುವುದಕ್ಕೆ ಈಗ ಸರ್ಕಾರ ಸರ್ಕಾರ ಚಿಂತನೆ ಮಾಡಿದೆ ಅದರಲ್ಲೂ ಪ್ರಮುಖವಾಗಿ ಜಿಎಸ್ಟಿ ಐಟಿ ಕಟ್ಟುತ್ತಾ ಇದ್ರೆ ಬಿಪಿಎಲ್ ಕಾರ್ಡ್ ರದ್ದು ಮಾಡೋದಕ್ಕೆ ಮುಂದಾಗಿದೆ ಸರ್ಕಾರ.
ರೇಷನ್ ಕಾರ್ಡ್ ಗೆ ಈ ರೀತಿಯಾಗಿ ಸರ್ಕಾರ ಸದ್ದಿಲ್ಲದೆ ಆಪರೇಷನ್ ಮಾಡ್ತಾ ಇದೆ. ರಾಜ್ಯಾದ್ಯಂತ 10,000 ಬಿಪಿಎಲ್ ಕಾರ್ಡ್ಗಳು ರದ್ದಾಗಿದೆ ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದು ಮಾಡಿದ್ದೀವಿ ಅಂತ ಕಾರ್ಡ್ ರದ್ದು ಬಗ್ಗೆ ಬೆಂಗಳೂರಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
ಅರ್ಹ ಅವರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಬಡವರಿಗೆ ಸಿಗಬೇಕು ಅನ್ನಭಾಗ್ಯ ಮಾಡಿದ್ದು ನಾನು ಬಿಜೆಪಿ ಅವರು ಕೊಟ್ಟಿದ್ದಾರ ಅಂತ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅರ್ಹ ರೇಷನ್ ಕಾರ್ಡ್ ಕೂಡ ರದ್ದಾಗುತ್ತಿದೆ
ಈ ಪ್ರಶ್ನೆಗೆ CM ಸಿದ್ದರಾಮಯ್ಯನವರು ಸ್ಪಷ್ಟವಾದ ಮಾಹಿತಿ ನೀಡಿದ್ದಾರೆ:
“ಯಾರು ಹೇಳಿದವರು ಅಂತವರಿಗೆ ನಾವು ಯಾರಿಗೂ ಕೂಡ ಯಾರಿಗೂ ಕೂಡ ಅನರ್ಹರು ಇದ್ದಾರೆ. ಅನರ್ಹರ ಕಾರ್ಡ್ ಮಾತ್ರ ರದ್ದು ಮಾಡೋದು ಅರ್ಹರು ಇದ್ದಾರಲ್ಲ ಅವರು ಯಾರಿಗೂ ತಪ್ಪಿಸಲ್ಲ ಒಟ್ಟಾರೆ ಬಡವರಿಗೆ ಕೊಡಬೇಕು.
ನಾವು ಬಡವರಿಗೆ ಸಹಾಯ ಮಾಡಬೇಕು ಅಂತ ಕೊಡ್ತಾ ಇರೋದು ಅನ್ನಭಾಗ್ಯ ಕೊಡ್ತಾ ಇರೋದು ಯಾರು ಯಾರಮ್ಮ ಯಾರು ಅನ್ನಭಾಗ್ಯ ಕೊಟ್ಟವರು ಬಿಜೆಪಿ ಅವರು ಕೊಟ್ಟಿದ್ರಾ ಬಿಜೆಪಿ ಅವರು ಕೊಟ್ಟಿದ್ರಾ ಅನ್ನಭಾಗ್ಯ ಬೇರೆ ಜೆಡಿಎಸ್ ನವರು ಮಾಡಿದ್ರಾ ನಾನು ಮಾಡಿದ್ದು ಸಿದ್ದರಾಮಯ್ಯ ಮಾಡಿದ್ದು ಮುಖ್ಯಮಂತ್ರಿ ಆಗಿರುವಾಗ 2013 18 ನಾನು 17 ರಲ್ಲಿ ಫ್ರೀಯಾಗಿ ಅಕ್ಕಿ ಕೊಡೋದು ಒಂದು ರೂಪಾಯಿಗೆ ಅಕ್ಕಿ ಕೊಡ್ತಿದ್ದೆ. ಆಮೇಲೆ ಫ್ರೀಯಾಗಿ ಕೊಡೋದು ಮಾಡಿದೆ ಇದನ್ನ ಮಾಡಿದ್ರಾ ಬಿಜೆಪಿ ಅವರು ಮಾಡಿದ್ರಾ ಈಗ ಮಾತಾಡ್ತಾರೆ ಅಷ್ಟೇ. ಯಾವ ರಾಜ್ಯದಲ್ಲಿ ಮಾಡಿದ್ದಾರೆ ಬಿಜೆಪಿ ಅಧಿಕಾರದಲ್ಲಿ ಇರತಕ್ಕಂತದ್ದು ರಾಜ್ಯಗಳಲ್ಲಿ ಹಿಂದೆ ಯಾವ ರಾಜ್ಯದಲ್ಲಿ ಮಾಡಿದ್ರು ಗುಜರಾತ್ ನಲ್ಲಿ ಮಾಡಿದ್ರಾ ಮಧ್ಯಪ್ರದೇಶದಲ್ಲಿ ಮಾಡಿದ್ರಾ ಉತ್ತರಪ್ರದೇಶದಲ್ಲಿ ಮಾಡಿದ್ರಾ ಬಿಹಾರ್ನಲ್ಲಿ ಮಾಡಿದ್ರಾ ಹರಿಯಾಣದಲ್ಲಿ ಮಾಡಿದ್ರಾ ಎಲ್ಲಿ ಮಾಡಿದ್ರು? ಅರ್ಹರಿಗೆ ನಾವು ಯಾವುದೇ ಕಾರಣಕ್ಕೂ ತಪ್ಪಿಸಲ್ಲ”.
ರೇಷನ್ ಕಾರ್ಡ್ ರದ್ದಾಗುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯನವರು ಈ ಕೆಲವು ಮೇಲಿನ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಆಹಾರ ಇಲಾಖೆ BPL ಕಾರ್ಡ್ ಗಳನ್ನು ರದ್ದು ಮಾಡುತ್ತಾರೆ!!





