Health Insurance ನೀವು ಯಾಕೆ ಇದನ್ನು ಮಾಡಿಸಬೇಕು.! ಇಲ್ಲಿದೆ ಸಂಪೂರ್ಣ ಮಾಹಿತಿ

December 24, 2024 1:48 PM
Health Insurance ನೀವು ಯಾಕೆ ಇದನ್ನು ಮಾಡಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲರಿಗೂ ನಮಸ್ಕಾರ, ವಿಶ್ವಾದ್ಯಂತ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವಂತೆ ಜನರ ವೆಚ್ಚ ಕೂಡ ಹೆಚ್ಚುತ್ತಾ ಇದೆ. ಈ ವೆಚ್ಚಗಳನ್ನು ಕಡಿಮೆ ಮಾಡುವುದಕ್ಕೆ ಆರೋಗ್ಯ ವಿಮೆ ಯೋಜನೆ ಎಂದು ಕರೆಯಲ್ಪಡುವ ಆರೋಗ್ಯ ವಿಮೆಯ ಕುರಿತು ವಿವರವಾದ ಮಾಹಿತಿ. ಪರಿಚಯವಿಲ್ಲದ ನಿಯಮಗಳನ್ನು ಎದುರಿಸುವಾಗ ಆರೋಗ್ಯ ವಿಮಾ ಯೋಜನೆಯು ನಿಮಗೆ ದೊಡ್ಡ ಕೆಲಸವಾಗಿದೆ ಆರೋಗ್ಯ ವಿಮೆಗೆ ಬಂದಾಗ ನೀವು ಮೊದಲ ಬಾರಿಗೆ ಖರೀದಿದಾರರಾಗಿರಲಿ ಅಥವಾ ಅನುಭವಿ ಪಾಲಿಸಿದಾರರಾಗಿರಲಿ ಕೆಲವೊಂದು ಪ್ರಮುಖ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತೆ.

ಹೌದು ಅನೇಕ ಸಂದರ್ಭಗಳಲ್ಲಿ ವಿಮಾ ಕಂಪನಿಗಳು ಮತ್ತು ಏಜೆಂಟ್ ಗಳು ತಮ್ಮ ಮಾರಾಟದ ಗುರಿಯನ್ನು ಸಾಧಿಸುವುದಕ್ಕೆ ಪಾಲಿಸಿದಾರರಿಗೆ ಕೆಲವು ನಿಯಮಗಳು ಮತ್ತು ಶರತ್ತುಗಳನ್ನು ಅಂತ ಹೇಳಲಾಗುತ್ತೆ. ಆದರೆ ವಿಮೆ ನಿಮ್ಮ ಜೀವನದ ರಕ್ಷಾ ಕವಚ ಏಜೆಂಟರು ಮತ್ತು ಕಂಪನಿಗಳಿಗೆ ಸಂಬಂಧಪಟ್ಟಂತೆ ಆರೋಗ್ಯ ವಿಮೆ ಒಂದು ಉತ್ಪನ್ನ ಆದ್ದರಿಂದ ಅವರು ಅದನ್ನ ಮಾರಾಟ ಮಾಡ್ತಾರೆ. ಆದರೆ ಇದು ನಿಮಗೆ ರಕ್ಷಣಾ ಕವಚವಿದ್ದ ಹಾಗೆ ಇದನ್ನ ಗ್ರಾಹಕರು ಅರ್ಥಮಾಡಿಕೊಳ್ಳಬೇಕು ಆದ್ದರಿಂದ ಯಾವುದೇ ವಿಮೆದಾರರಿಂದ ಯಾವುದೇ ಪಾಲಿಸಿಗೆ ಸಹಿ ಮಾಡುವ ಮೊದಲು ನೀವು ಅದರ ಶರತ್ತುಗಳು ಮತ್ತು ಪ್ರಮುಖ ನಿಯಮಗಳನ್ನು ತಿಳಿದಿರಲೇಬೇಕು.

Health Insurance ನೀವು ಯಾಕೆ ಮಾಡಿಸಬೇಕು

ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳು ವೈದ್ಯಕೀಯ ತುರ್ತು ಸ್ಥಿತಿಗಳು ಉತ್ತಮ ಮತ್ತು ಸರಿಯಾದ ಆರೋಗ್ಯ ವಿಮಾ ಯೋಜನೆ ಅತ್ಯಗತ್ಯ ಅನ್ನೋದನ್ನ ಸೂಚಿಸುತ್ತೆ. ಆರೋಗ್ಯ ವೆಚ್ಚಗಳನ್ನು ಪೂರೈಸುವುದಕ್ಕೆ ಸಾಕಷ್ಟು ಇದು ಸಹಾಯ ಮಾಡುತ್ತೆ ಆದ್ದರಿಂದ ಸರಿಯಾದ ನೀತಿಯನ್ನು ಆಯ್ಕೆ ಮಾಡುವುದಕ್ಕೆ ಮತ್ತು ನಿಮ್ಮ ಆರ್ಥಿಕ ಭವಿಷ್ಯವನ್ನು ರಕ್ಷಿಸುವುದಕ್ಕೆ ಅಗತ್ಯ ನಿಯಮಗಳ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು.

ಹೌದು ಪ್ರೀಮಿಯಂ ಬಗ್ಗೆ ಗೊತ್ತಿರಬೇಕು ನಿಮ್ಮ ಪಾಲಿಸಿಯನ್ನ ಸಕ್ರಿಯವಾಗಿ ಇರಿಸುವುದಕ್ಕೆ ನೀವು ಪಾವತಿಸುವ ಶುಲ್ಕ ಪ್ರೀಮಿಯಂ ಆಗಿರುತ್ತೆ. ವಿಮಾ ಮೊತ್ತ ಪಾಲಿಸಿ ವರ್ಷದಲ್ಲಿ ವೈದ್ಯಕೀಯ ವೆಚ್ಚಗಳಿಗಾಗಿ ನಿಮ್ಮ ವಿಮಾದಾರರು ನಿಮಗೆ ಪಾವತಿಸುವ ಗರಿಷ್ಠ ಮೊತ್ತ ಸಹಪಾವತಿ ವಿಮೆ ನಂತರವೂ ನೀವು ವೈದ್ಯಕೀಯ ಬಿಲ್ಗಳಲ್ಲಿ ಪಾವತಿಸುವ ನಿಶ್ಚಿತ ಶೇಕಡವಾರು ಕಾಯುವ ಅವಧಿಯ ಬಗ್ಗೆ ನಾವು ನೋಡಬೇಕು.

ಇದು ಕೆಲವು ಶರತ್ತುಗಳು ಮತ್ತು ಚಿಕಿತ್ಸೆಗಳನ್ನ ಒಳಗೊಂಡಿರದ ಆರಂಭಿಕ ಅವಧಿ ಇನ್ನು ಯಾವೆಲ್ಲಾ ನೆಟ್ವರ್ಕ್ ನ ಆಸ್ಪತ್ರೆಗಳು ಇದನ್ನ ನೋಡ್ತಾ ಹೋಗೋದಾದ್ರೆ ನಗದು ರಹಿತ ಚಿಕಿತ್ಸೆಗಾಗಿ ನಿಮ್ಮ ವಿಮಾದಾರರೊಂದಿಗೆ ಸಂಯೋಜಿತವಾಗಿರುವ ಆಸ್ಪತ್ರೆಗಳು ನೆಟ್ವರ್ಕ್ ಆಸ್ಪತ್ರೆಗಳು ನೋ ಕ್ಲೈಮ್ ಬೋನಸ್ ಇದರ ಬಗ್ಗೆ ತಿಳಿಯಲೇಬೇಕು ಕ್ಲೈಮ್ ಮುಕ್ತ ವರ್ಷಗಳ ಬೋನಸ್ ಇದನ್ನ ಸಾಮಾನ್ಯವಾಗಿ ರಿಯಾಯಿತಿ ಮತ್ತು ಹೆಚ್ಚಿನ ವಿಮಾ ಮೊತ್ತ ಅಂತ ಕರೀತಾರೆ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಹೌದು ಇದರ ಬಗ್ಗೆ ಪರಿವಿರಲೇಬೇಕು ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು ಕವರೇಜ್ ನಿರ್ಬಂಧಗಳು ಇತ್ಯಾದಿಗಳು ಪಾಲಿಸಿಯನ್ನ ಖರೀದಿಸುವ ಮೊದಲು ಅಸ್ತಿತ್ವದಲ್ಲಿ ಇರಬಹುದು ಆಡನ್ ಕವರ್ಗಳು ರೈಡರ್ ಗಳು ಗಂಭೀರ ಕಾಯಿಲೆ ಅಥವಾ ಆಕಸ್ಮಿಕ ಕವರ್ ನಂತಹ ಹೆಚ್ಚುವರಿ ಕವರೇಜ್ ಗಾಗಿ ನಿಮ್ಮ ಪಾಲಿಸಿಗೆ ಐಚ್ಚಿಕ ಪ್ರಯೋಜನಗಳನ್ನ ಸೇರಿಸಬಹುದು.

ಇನ್ನು ಆಸ್ಪತ್ರೆಗೆ ಅಗತ್ಯವಿಲ್ಲದ ಆದರೆ ವೈದ್ಯಕೀಯ ಆರೈಕೆ ಅಗತ್ಯವಿರುವ ವೈದ್ಯಕೀಯ ವಿಧಾನಗಳು ಅಂದ್ರೆ ಡೇ ಕೇರ್ ಕಾರ್ಯ ವಿಧಾನಗಳ ಬಗ್ಗೆ ಅರಿವಿರಬೇಕು ವಿಮಾದಾರರು ನೇರವಾಗಿ ಆಸ್ಪತ್ರೆಗೆ ಬಿಲ್ ಪಾವತಿಸುವ ಕ್ಲೈಮ್ ಮಾಡುವ ಪ್ರಕ್ರಿಯೆ ಅದನ್ನ ನಗುದು ರಹಿತ ಕ್ಲೈಮ್ ಅಂತ ಕರೀತಾರೆ ಇನ್ನು ವೈದ್ಯಕೀಯ ಬಿಲ್ಗಳನ್ನು ಮುಂಗಡವಾಗಿ ಪಾವತಿಸುವ ಮತ್ತು ವಿಮಾದಾರರಿಗೆ ನಿರ್ದಿಷ್ಟ ಮೊತ್ತವನ್ನು ಮರಳಿ ಪಡೆಯುವ ವಿಧಾನದ ಬಗ್ಗೆ ಅರಿವಿರಬೇಕು ಇನ್ನು ಒಂದಕ್ಕಿಂತ ಹೆಚ್ಚು ಪಾಲಿಸಿಗಳನ್ನ ಈ ದಿನಗಳಲ್ಲಿ ಹಲವರು ತೆಗೆದುಕೊಳ್ಳುತ್ತಿದ್ದಾರೆ.

ಕೆಲಸ ಮಾಡುವ ಕಂಪನಿಗಳು ನೀಡುವ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಜೊತೆಗೆ ಜನ ತಮ್ಮದೇ ಆದ ಮತ್ತೊಂದು ಪಾಲಿಸಿಯನ್ನ ಖರೀದಿಸುತ್ತಿದ್ದಾರೆ ಆದರೆ ಹೀಗೆ ಒಂದಕ್ಕಿಂತ ಹೆಚ್ಚು ಪಾಲಿಸಿಗಳಿರುವಾಗ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದಾಗ ಮೊದಲು ಯಾವ ಪಾಲಿಸಿ ಬಳಸಬೇಕು ಎಂಬ ಅನುಮಾನ ಕಾಡುತ್ತೆ. ಏಕಕಾಲದಲ್ಲಿ ಎರಡು ಪಾಲಿಸಿಗಳನ್ನು ಬಳಸುವುದು ಮತ್ತು ಕ್ಲೇಮ್ ಕೇಳೋದು ವಂಚನೆಯ ಕಾಯ್ದೆಯ ಅಡಿ ಬರುತ್ತೆ. ಆದ್ದರಿಂದ ಯಾವತ್ತೂ ಇಂತಹ ಪ್ರಯತ್ನ ಮಾಡಬೇಡಿ. ಆಸ್ಪತ್ರೆಯ ವೆಚ್ಚಗಳು ಒಂದು ಪಾಲಿಸಿಯ ವಿಮಾ ಮಿತಿಯನ್ನ ಮೆರೆದರೆ ಎರಡನೆಯ ಪಾಲಿಸಿಯನ್ನ ಬಳಸಬೇಕಾಗುತ್ತೆ. ಮೊದಲ ವಿಮಾ ಕಂಪನಿಯು ನಿಮ್ಮ ಕ್ಲೇಮ್ ಅನ್ನ ಸ್ವೀಕರಿಸದೆ ಇದ್ದರೆ ಎರಡನೇ ವಿಮಾ ಕಂಪನಿಗೆ ಅದರ ಬಗ್ಗೆ ಲಿಖಿತವಾಗಿ ತಿಳಿಸಬೇಕು.

ಆಗ ಕ್ಲೇಮ್ ಸಲ್ಲಿಸುವುದಕ್ಕೆ ವಿಳಂಬ ಆದ್ರೂ ವಿಮಾ ಕಂಪನಿ ತಕರಾರು ಎತ್ತೋದಿಲ್ಲ ಇದು ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತೆ. ಆದ್ದರಿಂದ ನಿಮ್ಮ ವಿಮಾ ಕಂಪನಿಯ ಕಸ್ಟಮರ್ ಕೇಂದ್ರವನ್ನ ಮುಂಚಿತವಾಗಿ ಸಂಪರ್ಕಿಸಿ ಮತ್ತು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳುವುದು.

ಅತ್ಯವಶ್ಯಕ ನೋಡಿದ್ರಲ್ಲ ಆರೋಗ್ಯ ವಿಮಾ ಪಾಲಿಸಿ ಖರೀದಿಸುವ ಮುನ್ನ ಅವುಗಳು ನೀಡುವ ಕವರೇಜ್ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ ಹಾಗೆಯೇ ನಿಮ್ಮ ಬಳಿ ಎರಡು ಆರೋಗ್ಯ ವಿಮಾ ಪಾಲಿಸಿಗಳಿದ್ದಾಗ ಅವನ್ನ ಬಳಸಿ ಹೇಗೆ ಕ್ಲೇಮ್ ಮಾಡೋದು ಎಂಬುದು ಸಹ ಗೊತ್ತಿರಬೇಕು.

ಇದನ್ನೂ ಓದಿ: BBMP New Rules 2025.! ಎಲ್ಲೆಲ್ಲಿ ಹೊಸ Rules ಜಾರಿಗೆ ಬಂದಿದೆ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment