Aadhaar Centre ಬಿಸಿನೆಸ್ ಪ್ರಾರಂಭ ಮಾಡುವುದು ಹೇಗೆ.! ಇಲ್ಲಿದೆ ಮಾಹಿತಿ 

December 22, 2024 9:11 AM
Aadhaar Centre ಬಿಸಿನೆಸ್ ಪ್ರಾರಂಭ ಮಾಡುವುದು ಹೇಗೆ.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಎಲ್ಲಾ ಕೆಲಸಕ್ಕೂ ಮೊದಲು ಕೇಳೋದು ಆಧಾರ್ ಕಾರ್ಡ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಕಲ್ಯಾಣ ಯೋಜನೆಗಳು ಸರ್ಕಾರಿ ಕಚೇರಿಗಳು ಬ್ಯಾಂಕುಗಳು ಹೀಗೆ ಯಾವುದೇ ಕೆಲಸ ಮಾಡಬೇಕು ಅಂದ್ರು ಆಧಾರ್ ಕಾರ್ಡ್ ಹೊಂದಿರಬೇಕು. ನೀವು ಸ್ವಂತ ಬಿಸಿನೆಸ್ ಮಾಡಬೇಕು ಅಂತ ಏನಾದರೂ ಯೋಚನೆಯನ್ನ ಮಾಡಿದ್ರೆ ನಿಮಗಾಗಿ ಈ ಸುದ್ದಿ ಆಧಾರ್ ಗೆ ಬೇಡಿಕೆ ಇರುವಂತೆಯೇ ಆಧಾರ್ ಕೇಂದ್ರಗಳಿಗೂ ಬೇಡಿಕೆ ಇದೆ ಹೀಗಾಗಿ ಈ ಕೇಂದ್ರ ನೀವು ತೆರೆದರೆ ಲಾಭ ಪಡೆಯುವುದು ಕಟ್ಟಿಟ್ಟ ಬುದ್ದಿ.

How to start an Aadhaar Center Business

ಆಧಾರ್ ಕಾರ್ಡ್ ಇಂದಿನ ದಿನಗಳಲ್ಲಿ ಬಹಳ ಮುಖ್ಯವಾದದ್ದು ಇದು ನಿಮ್ಮ ಹೆಸರು ವಿಳಾಸ ಮತ್ತು ಫಿಂಗರ್ ಪ್ರಿಂಟ್ ನಂತಹ ವಿವರಗಳನ್ನ ಒಳಗೊಂಡಿರುತ್ತದೆ ಆಧಾರ್ ಕಾರ್ಡ್ ಇಲ್ಲದೆ ನೀವು ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನಗಳನ್ನ ಪಡೆಯಲು ಸಾಧ್ಯವಿಲ್ಲ ಗ್ಯಾಸ್ ಸಂಪರ್ಕದಿಂದ ಹಿಡಿದು ಇತರ ಅನೇಕ ಸಬ್ಸಿಡಿಗಳನ್ನ ಪಡೆಯಲು ಆಧಾರನ್ನ ಬಳಸಲಾಗುತ್ತೆ ಎಲ್ಲಾ ಕೆಲಸಕ್ಕೂ ಮೊದಲು ಕೇಳೋದು ಆಧಾರ್ ಕಾರ್ಡ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಕಲ್ಯಾಣ ಯೋಜನೆಗಳು ಸರ್ಕಾರಿ ಕಚೇರಿಗಳು ಬ್ಯಾಂಕುಗಳು ಹೀಗೆ ಯಾವುದೇ ಕೆಲಸ ಮಾಡಬೇಕೆಂದರೂ ಆಧಾರ್ ಕಾರ್ಡ್ ಹೊಂದಿರಬೇಕು.

ಇಂತಹ ಆಧಾರ್ ಕಾರ್ಡ್ ನಲ್ಲಿ ಚಿಕ್ಕದೊಂದು ತಪ್ಪುಗಳಿದ್ದರೆ. ಹೊಸ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅಥವಾ ಅಪ್ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ಹೋಗಬೇಕು ಮೊದಲು ಅದಕ್ಕೆ ಯುಐ ಡಿಐಎ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅದರ ನಂತರವೇ ಈ ಸೇವಾ ಕೇಂದ್ರವನ್ನ ಪ್ರಾರಂಭಿಸಲು ನಿಮಗೆ ಪರವಾನಗಿ ನೀಡಲಾಗುವುದು ಬಳಿಕ ನೀವು ಆಧಾರ್ ನೊಂದಣಿ ಸಂಖ್ಯೆ ಬಯೋಮೆಟ್ರಿಕ್ ಪರಿಶೀಲನೆಯನ್ನ ಮಾಡಬೇಕು. ನಂತರ ನೀವು ಸಾಮಾನ್ಯ ಸೇವಾ ಕೇಂದ್ರದಿಂದ ನೊಂದಾಯಿಸಿಕೊಳ್ಳಬೇಕು ಮೊದಲು ಎನ್ ಎಸ್ಸಿ ಐಟಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅಲ್ಲಿ ಕ್ರಿಯೇಟ್ ನ್ಯೂ ಯೂಸರ್ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಹೊಸ ಫೈಲ್ ತೆರೆಯುತ್ತದೆ ಅದರಲ್ಲಿ ಶೇರ್ ಕೋಡ್ ಅನ್ನ ನಮೂದಿಸಲು ನಿಮ್ಮನ್ನ ಕೇಳಲಾಗುತ್ತೆ.

ಆ ಶೇರ್ ಕೋಡ್ ಗಾಗಿ ನೀವು ಆಫ್ಲೈನ್ ಈ ಆಧಾರ್ ಗೆ ಹೋಗಿ ಅದನ್ನ ಡೌನ್ಲೋಡ್ ಮಾಡಬೇಕು ಈ ರೀತಿಯಾಗಿ ನೀವು ಶೇರ್ ಕೋಡ್ ಮತ್ತು ಎಕ್ಸ್ ಎಂಎಲ್ ಫೈಲ್ ಎರಡನ್ನ ಡೌನ್ಲೋಡ್ ಮಾಡುತ್ತೀರಿ ನಂತರ ಪ್ರಕ್ರಿಯೆಯು ಈ ರೀತಿಯಾಗಿ ಇರುತ್ತದೆ ಅರ್ಜಿ ಸಲ್ಲಿಸುವಾಗ ಕಂಪ್ಯೂಟರ್ ಅಥವಾ ಮೊಬೈಲ್ ಪರದಿಯ ಮೇಲೆ ಒಂದು ಫಾರ್ಮ್ ತೆರೆಯುತ್ತೆ ಅದರಲ್ಲಿ ನೀಡಿರುವ ಬಾಕ್ಸ್ ಗಳಲ್ಲಿ ಎಲ್ಲಾ ಮಾಹಿತಿಯನ್ನ ಸರಿಯಾಗಿ ನಮೂದಿಸಿ ಸಲ್ಲಿಸಬೇಕು ಅದರೊಂದಿಗೆ ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ನಿಮ್ಮ ಮೊಬೈಲ್ ಮತ್ತು ಇಮೇಲ್ ಗೆ ಬರುತ್ತದೆ.

ಅದರ ನಂತರ ಆಧಾರ್ ಪರೀಕ್ಷಿಸಲು ಮತ್ತು ಪ್ರಮಾಣೀಕರಣ ಪೋರ್ಟಲ್ ಗೆ ಸುಲಭವಾಗಿ ಲಾಗಿನ್ ಮಾಡಲು ನೀವು ಅವುಗಳನ್ನು ಬಳಸಬಹುದು ನಂತರ ಕಂಟಿನ್ಯೂ ಆಯ್ಕೆಯನ್ನ ನೋಡುತ್ತೀರಿ ಅದರ ಮೇಲೆ ಒತ್ತಿದಾಗ ಮತ್ತೊಂದು ಫಾರ್ಮ್ ತೆರೆಯುತ್ತದೆ ಈಗ ಅದರಲ್ಲಿ ಕೇಳಿರುವ ಮಾಹಿತಿಯನ್ನ ನೀಡಬೇಕು. ಅದರ ನಂತರ ನಿಮ್ಮ ವಿವರಗಳು ಸರಿಯಾಗಿವೆಯೇ ಅಥವಾ ಇಲ್ಲವೇ ಅನ್ನೋದನ್ನ ಪರಿಶೀಲಿಸಿ ಮತ್ತು ಪ್ರಕ್ರಿಯೆಯನ್ನ ಪೂರ್ಣಗೊಳಿಸಲು ಪ್ರೊಸೀಡ್ ಆಯ್ಕೆಯನ್ನ ಕ್ಲಿಕ್ ಮಾಡಿ ಇದೆಲ್ಲವೂ ಆದ ನಂತರ ನೀವು ಗ್ರಾಹಕರಿಗೆ ಸೇವೆಗಳನ್ನು ಒದಗಿಸಲು ಪ್ರಾರಂಭಿಸಬಹುದು.

ಇದನ್ನೂ ಓದಿ: ಹೊಸ ಪ್ಯಾನ್ ಕಾರ್ಡ್ 2.0 ಖರೀದಿಸುವುದು ಹೇಗೆ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment