ಎಲ್ಲರಿಗೂ ನಮಸ್ಕಾರ, 2025 ರಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನ ಈಗ ಬಿಡುಗಡೆ ಮಾಡಿದೆ. ಐಸಿಸಿ ವಾಸ್ತವವಾಗಿ ಈ ಟೂರ್ನಿಯ ವೇಳಾಪಟ್ಟಿ ಈಗಾಗಲೇ ಬಿಡುಗಡೆಯಾಗಬೇಕಾಗಿತ್ತು.
ಆದರೆ ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ಭಾರತ ಹಾಗೂ ಆತಿತ್ಯೆಯ ಪಾಕಿಸ್ತಾನದ ನಡುವೆ ಉಂಟಾಗಿದ್ದ ಗೊಂದಲಗಳಿಂದಾಗಿ ಈ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ ಕೊನೆಗೂ ಈ ಎರಡು ದೇಶಗಳ ಬೇಡಿಕೆಯಂತೆಯೇ ಪಂದ್ಯಾವಳಿಯನ್ನ ಆಯೋಜಿಸುವ ನಿರ್ಧಾರಕ್ಕೆ ಬಂದಿದ್ದ ICC ಇದೀಗ ಈ ಮಹತ್ವದ ಟೂರ್ನಿಯ ವೇಳಾಪಟ್ಟಿಯನ್ನ ಬಿಡುಗಡೆಗೊಳಿಸಿದೆ.
ಇನ್ನು ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯು ಫೆಬ್ರವರಿ 19 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಕರಾಚಿಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಆತಿತೆಯ ಪಾಕಿಸ್ತಾನ ನಡುವೆ ನಡೆಯಲಿದೆ.
ಇನ್ನು ಮಾರ್ಚ್ ಒಂಬತ್ತರಂದು ಫೈನಲ್ ನಡೆಯಲಿದೆ ಇನ್ನು ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನ ದುಬೈನಲ್ಲಿ ಆಡಲಿದೆ ಇದಲ್ಲದೆ ಇಡೀ ಟೂರ್ನಿಯ ಹೈ ವೋಲ್ಟೇಜ್ ಕದನವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ದುಬೈನಲ್ಲಿ ಫೆಬ್ರವರಿ ಫೆಬ್ರವರಿ 23 ರಂದು ನಡೆಯಲಿದೆ.
ಇದನ್ನೂ ಓದಿ: ಡ್ರೋನ್ ಪ್ರತಾಪ್ ಬಿಡುಗಡೆ ಸಾಧ್ಯತೆ.!





