ಎಲ್ಲರಿಗೂ ನಮಸ್ಕಾರ, 2025ರ ICC ಟೂರ್ನಿಯ ಆತಿಥ್ಯ ಬಗ್ಗೆ ಗೊಂದಲ ಮುಂದುವರೆದಿದ್ದು ಹಿಂದೆ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧಾರವಾಗಲಿದೆ ಇಂದು ಅಂತರಾಷ್ಟ್ರೀಯ ಕೌನ್ಸಿಲ್ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ದೇಶದ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
ವರ್ಚುವಲ್ ಆಗಿ ಸಭೆ ನಡೆಯಲಿದ್ದು ಐಸಿಸಿ ಮಂಡಳಿಯ 12 ಪೂರ್ಣ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಅಸೋಸಿಯೇಟ್ ರಾಷ್ಟ್ರಗಳ ಮೂರು ಪ್ರತಿನಿಧಿಗಳು ಐಸಿಸಿ ಅಧ್ಯಕ್ಷ ಮತ್ತು ಸಿಇಓ ಜೊತೆಗೆ ಸ್ವತಂತ್ರ ನಿರ್ದೇಶಕರು ಈ ಒಂದು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಮತದಾನದ ಮೂಲಕ ಆದಿತಿ ರಾಷ್ಟ್ರದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಇತ್ತ 2021 ರಲ್ಲಿ ಐಸಿಸಿ ಯು ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವನ್ನ ಪಾಕಿಸ್ತಾನಕ್ಕೆ ನೀಡಿತ್ತು ಆದರೆ ಭಾರತ ತಂಡವನ್ನ ಪಾಕಿಸ್ತಾನಕ್ಕೆ ಕಳಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಇನ್ನು ಟೂರ್ನಿಯನ್ನ ಹೈಬ್ರಿಡ್ ಮಾದರಿಯಲ್ಲಿ ನಡೆಸಬೇಕು ಎಂದು ಐಸಿಸಿ ಗೆ ಒತ್ತಾಯಿಸಿದೆ ಆದರೆ ಪಾಕಿಸ್ತಾನದಲ್ಲಿಯೇ ಟೂರ್ನಿ ನಡೆಸುವುದಾಗಿ ಪಿಸಿಬಿ ಹೇಳ್ತಾ ಇದ್ದು ಇಂದಿನ ಐಸಿಸಿ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಆಧಾರ್ ಕಾರ್ಡ್ Update ಮಾಡುವ ಕೊನೆಯ ದಿನಾಂಕ.!





