Indexation ಪ್ರಯೋಜನವನ್ನು ತೆಗೆದುಹಾಕುವುದು ಹೇಗೆ ಪರಿಣಾಮ ಬೀರುತ್ತದೆ!! ಇಲ್ಲಿದೆ ಮಾಹಿತಿ 

November 3, 2024 1:59 AM
Indexation ಪ್ರಯೋಜನವನ್ನು ತೆಗೆದುಹಾಕುವುದು ಹೇಗೆ ಪರಿಣಾಮ ಬೀರುತ್ತದೆ!! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಇನ್ಮುಂದೆ ನೀವು ನಿಮ್ಮ Site, Flat ಅಥವಾ ಮನೆಯನ್ನು ಮಾರಾಟ ಮಾಡಿದಾಗ ಸಿಗುವ ಆದಾಯದ ಮೇಲೆ ಭಾರಿ ಪ್ರಮಾಣದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತಾ? ಹೊಸದಾಗಿ ಜಾರಿಯಾಗಲಿರುವ ಭಾರಿ ತೆರಿಗೆ ಪದ್ಧತಿಯಿಂದಾಗಿ ಭವಿಷ್ಯದಲ್ಲಿ Real Estate ಮೇಲೆ ಹೂಡಿಕೆ ಮಾಡುವುದರಿಂದ ಮಧ್ಯಮ ವರ್ಗದ ಹೂಡಿಕೆದಾರರಿಗೆ ಯಾವುದೇ ಪ್ರಯೋಜನ ಸಿಗಲ್ವಾ? ಸೈಟು ಮನೆಯ ಮೇಲೆ ಇನ್ವೆಸ್ಟ್ ಮಾಡುವುದಕ್ಕಿಂತ ಮ್ಯೂಚುವಲ್ ಫಂಡ್ ಮೇಲೆ ಹೂಡಿದರೆ ಅದು ಇದೆ? ಮುಂಬರುವ ದಿನಗಳಲ್ಲಿ ರಿಯಲ್ ಎಸ್ಟೇಟ್ ನ ಹಣಕಾಸು ವರ್ಗಾವಣೆಗಳಲ್ಲಿ ನಗದು ಬಳಕೆ ಹೆಚ್ಚಬಹುದೇ ಎಂಬಿತ್ಯಾದ ಪ್ರಶ್ನೆಗಳು? ಈಗ ಕಾಡ್ತಾ ಇದೆ.

ಇದಕ್ಕೆ ಕಾರಣ ಈ ಸಲದ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಆಸ್ತಿ ಮಾರಾಟಕ್ಕೆ ಸಂಬಂಧಪಟ್ಟ ಹಾಗೆ ಇದುವರೆಗೆ ಸಿಗ್ತಾ ಇದ್ದ ಇಂಡಕ್ಷನ್ ಬೆನಿಫಿಟ್ ಅನ್ನ ರದ್ದುಪಡಿಸಿರುವಂತದ್ದು ಆಸ್ತಿಯ ಮಾರಾಟಕ್ಕೆ ಸಮಸ್ಯೆ ಕ್ಯಾಪಿಟಲ್ ಗೈನ್ ತೆರಿಗೆಯನ್ನ 20% ದಿಂದ 12.5% ಗೆ ಇಳಿಸಿದ್ರು ಕೂಡ ಈ ಇಂಡೆಕ್ಸೆಶನ್ ಬೆನಿಫಿಟ್ ಅನ್ನ ರದ್ದುಪಡಿಸಿರುವಂತದ್ದು ಮಧ್ಯಮ ವರ್ಗದ ಜನರಿಗೆ ಚಿಂತೆಗೆ ಕಾರಣ ಆಗಿದೆ.

ಇದರ ಪರಿಣಾಮವಾಗಿ ಭವಿಷ್ಯದ ದಿನಗಳಲ್ಲಿ ಮನೆಯನ್ನು, ಸೈಟನ್ನು ಮಾರಾಟ ಮಾಡುವ ಸಂದರ್ಭ ಭಾರಿ ತೆರಿಗೆಯನ್ನ ಅವರು ಕೊಡಬೇಕಾಗುತ್ತೆ. ಇನ್ಮುಂದೆ

ಮನೆ, ಸೈಟ್ಗಳಲ್ಲಿ ಹೂಡಿಕೆ ಮಾಡಿದರೆ ಪ್ರಯೋಜನ ಏನು?

ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಕೂಡ ಇದು ದೂರಗಾಮಿ ಪರಿಣಾಮವನ್ನ ಬೀರುವಂತಹ ನಿರೀಕ್ಷೆ ಇದೆ ಅಂತ ಹೇಳಲಾಗ್ತಾ ಇದೆ ಹಾಗಾದ್ರೆ ಏನಿದು ಈ ಇಂಡಕ್ಷನ್ ಬೆನಿಫಿಟ್ ಇದರಿಂದ ನಿಮ್ಮ ಪ್ರಾಪರ್ಟಿ ಮಾರಾಟದಲ್ಲಿ ಇದುವರೆಗೆ ಯಾವ ರೀತಿ ಪ್ರಯೋಜನ ಆಗ್ತಾ ಇತ್ತು ಇದನ್ನ ಈಗ ರದ್ದುಪಡಿಸುವುದರಿಂದ ಇನ್ನು ಮುಂದೆ ಆಸೆ ಮಾರಾಟದಲ್ಲಿ ತೆರಿಗೆ ಹೊರೆ ಹೇಗೆ ಹೆಚ್ಚಳ ಆಗುತ್ತೆ ಉದಾಹರಣೆಯೊಂದಿಗೆ ನೋಡೋಣ.

ಮೊದಲಿಗೆ ಇಂಡೆಕ್ಸೆಶನ್ ಲೆಕ್ಕಾಚಾರ ಹೇಗೆ ನಡೆಯುತ್ತೆ ಎಂಬುದನ್ನು ತಿಳಿಯೋಣ ನೀವು 2002 ರಲ್ಲಿ 50 ಲಕ್ಷ ರೂಪಾಯಿಗೆ ಒಂದು ಸೈಟ್ ಅಥವಾ ಮನೆ ಖರೀದಿಸಿದ್ದೀರಿ ಅಂತ ಇಟ್ಕೊಳ್ಳೋಣ ಹಾಗೂ ಅದನ್ನ 2024 ರಲ್ಲಿ ಅಂದ್ರೆ ಈ ವರ್ಷ 70 ಲಕ್ಷ ರೂಪಾಯಿಗೆ ಮಾರಾಟ ಮಾಡ್ತಾ ಇದ್ದೀರಿ ಅಂತ ಇಟ್ಕೊಳ್ಳಿ ಹಣದುಬ್ಬರವನ್ನು ಆಧರಿಸಿದ ಇಂಡೆಕ್ಸೇಶನ್ ಹೊಂದಾಣಿಕೆಯ ಲೆಕ್ಕದಲ್ಲಿ ಪ್ರಾಪರ್ಟಿಯ ಖರೀದಿ ದರ 64.82 ಲಕ್ಷ ರೂಪಾಯಿ ಆಗಿರುತ್ತೆ.

ಮಾರಾಟ ದರ 70 ಲಕ್ಷ ರೂಪಾಯಿ ಆಗಿರುವುದರಿಂದ ಲಾಂಗ್ ಟರ್ಮ್ ಕ್ಯಾಪಿಟಲ್ ಗೈನ್ ಅಥವಾ ಎಲ್ ಟಿಸಿ ಜಿ 5.18 ಲಕ್ಷ ಆಗಿರುತ್ತೆ ಹೀಗಾಗಿ 20% ಎಲ್ ಟಿಸಿ ಜಿ ಟ್ಯಾಕ್ಸ್ ಪ್ರಕಾರ ಪ್ರಕಾರ 1.03 ಲಕ್ಷ ರೂಪಾಯಿ ಆಗಿರುತ್ತೆ ನೆನಪಿಡಿ ಹಳೆಯ ಪದ್ಧತಿಯಲ್ಲಿ ಇಂಡಕ್ಸೇಶನ್ ಬೆನಿಫಿಟ್ ಪಡೆಯುವುದರಿಂದ ನೀವು ಕೊಡಬೇಕಾದ ತೆರಿಗೆ ಮೊತ್ತ 1.03 ಲಕ್ಷ ರೂಪಾಯಿ ಮಾತ್ರ ಆಗಿರುತ್ತೆ ಆದರೆ ಇಂಡೆಕ್ಸೇಷನ್ ಬೆನಿಫಿಟ್ ರದ್ದಾದ ಬಳಿಕ ನೀವು ಇದೇ Deal ಗೆ ಎರಡುವರೆ ಲಕ್ಷ ರೂಪಾಯಿ ಟ್ಯಾಕ್ಸ್ ಅನ್ನು ಕೊಡಬೇಕಾಗುತ್ತೆ.

ಇದು ಹೇಗೆ ಅನ್ನುತ್ತೀರಾ?

ಹೊಸ ತೆರಿಗೆ ಲೆಕ್ಕಾಚಾರದ ಪ್ರಕಾರ ಆಸ್ತಿಯ ಖರೀದಿ ದರ 50 ಲಕ್ಷ ರೂಪಾಯಿ ಆಗಿರುತ್ತೆ 2024 ರಲ್ಲಿ ಮಾರಾಟ ದರ ಸುಮಾರು 70 ಲಕ್ಷ ರೂಪಾಯಿ ಆಗಿರೋದ್ರಿಂದ ಕ್ಯಾಪಿಟಲ್ ಗೈನ್ 20 ಲಕ್ಷ ರೂಪಾಯಿ ಆಗಿರುತ್ತೆ ಹಾಗೂ ಇದಕ್ಕೆ 12 .5% ಲೆಕ್ಕದಲ್ಲಿ ಎಲ್ ಟಿಸಿ ಟ್ಯಾಕ್ಸ್ ರಿಯಾಲೆಬಿಲಿಟಿ 25 ಲಕ್ಷ ರೂಪಾಯಿ ಆಗಿರುತ್ತೆ. ನೀವು ಇಲ್ಲಿ ಇನ್ನೊಂದು ಪ್ರಶ್ನೆಯನ್ನು ಕೂಡ ಕೇಳಬಹುದು ಈ ಸಲದ ಬಜೆಟ್ ನಲ್ಲಿ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅನ್ನ 20% ದಿಂದ 12.5% ಗೆ ಇಳಿಕೆ ಮಾಡಿದ್ರಿಂದ ಸೈಟ್ ಅಥವಾ ಫ್ಲಾಟ್ ಮಾರಾಟ ಮಾಡುವಾಗ ಟ್ಯಾಕ್ಸ್ ಕಡಿಮೆ ಆಗುತ್ತೆ ಅಲ್ವೇ ಅಂತ?

ಆದರೆ ಅದು ಹಾಗೆ ಆಗೋದಿಲ್ಲ ಯಾಕಂದ್ರೆ ಖರೀದಿ ದರದ ಮೇಲೆ ಇಂಡೆಕ್ಸೇಶನ್ ಅಥವಾ ಹಣದುಬ್ಬರದ ಹೊಂದಾಣಿಕೆಯ ಬೆನಿಫಿಟ್ ನಿಮಗೆ ಇಲ್ಲಿ ಸಿಗಲ್ಲ ಹೀಗೆ ತೆರಿಗೆ ತಜ್ಜರಿ ಈ ಒಂದು ಲೆಕ್ಕಾಚಾರವನ್ನು ಹೇಳ್ತಾರೆ.

ಸಚಿವೆ ನಿರ್ಮಲ ಸೀತಾರಾಮನ್ ಅವರು ನೀಡಿರುವ ಒಂದು ವಿವರಣೆ

ಕ್ಯಾಪಿಟಲ್ ಟ್ಯಾಕ್ಸ್ ದರವನ್ನ 12.5% ಗೆ ಇಳಿಕೆ ಮಾಡಿದ್ರಿಂದ ಜನರಿಗೆ ಆಸ್ತಿ ಮಾರಾಟದ ಸಂದರ್ಭ ತೆರಿಗೆ ಹೊರೆ ಆಗದು ಅಂತ ಅವರು ಹೇಳ್ತಾರೆ ತೆರಿಗೆ ಪದ್ಧತಿಯನ್ನ ಸರಳಗೊಳಿಸುವುದೇ ಹೊಸ ಬದಲಾವಣೆ ಒಂದು ಉದ್ದೇಶ ಆಗಿದ್ದು ಹೊರತು ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ತೆರಿಗೆ ಸಂಗ್ರಹ ಹೆಚ್ಚಿಸುವಂತದ್ದು ಅಂತ ಉದ್ದೇಶ ಇಲ್ಲ ಅಂತ ಅವರು ಹೇಳಿದ್ದಾರೆ ಸರ್ಕಾರಿ ಅಧಿಕಾರಿಗಳ ಪ್ರಕಾರ ಇಂಡೆಕ್ಸ್ ರದ್ದುಪಡಿಸುವುದರಿಂದ ಬಹುತೇಕ ಪ್ರಕರಣಗಳಲ್ಲಿ ಲಾಭ ಆಗುತ್ತೆ.

ನೀವು ಒಂದು ಆಸ್ತಿಯನ್ನ 5 ವರ್ಷಗಳ ಕಾಲ ಇಟ್ಕೊಂಡಿದ್ರೆ ಮತ್ತು ಅದರ ಬೆಲೆ 1.7 ಪಟ್ಟು ಏರಿಕೆಯಾಗಿದ್ರೆ ಲಾಭ ಆಗುತ್ತೆ ಅಂತ ಅವರು ಹೇಳ್ತಾರೆ ನೀವು ಪ್ರಾಪರ್ಟಿಯನ್ನ 10 ವರ್ಷಗಳ ಕಾಲ ಇಟ್ಕೊಂಡು 2.4 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೆ ಆಗ ಹೊಸ ತೆರಿಗೆ ಸಿಸ್ಟಮ್ ನಿಂದ ಪ್ರಯೋಜನ ಸಿಗುತ್ತೆ. ಅಂತ ಅವರು ಹೇಳ್ತಾರೆ ಪ್ರಾಪರ್ಟಿ ದರಗಳಲ್ಲಿ ವಾರ್ಷಿಕ ಒಂಬತ್ತರಿಂದ 11% ನಷ್ಟು ಏರಿಕೆ ಆಗದೆ ಇದ್ರೆ ಮಾತ್ರ ಈ ಬಜೆಟ್ ಪ್ರಸ್ತಾಪದಿಂದ ಅಂತಹ ಪ್ರಯೋಜನ ಸಿಗಲಿಕ್ಕಿಲ್ಲ ಅಂತ ಅವರು ಹೇಳ್ತಾರೆ.

ಮತ್ತೊಂದು ಕಡೆ ರಿಯಲ್ ಎಸ್ಟೇಟ್ ವಲಯದ ತಜ್ಜರ ಪ್ರಕಾರ ಭವಿಷ್ಯದಲ್ಲಿ ಜನ ಹೂಡಿಕೆಯ ಉದ್ದೇಶಕ್ಕೆ ಪ್ರಾಪರ್ಟಿ ಖರೀದಿ ಮಾಡಿದ್ರೆ ಅದನ್ನ ಮೂರರಿಂದ ಐದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಇಟ್ಟುಕೊಳ್ಳುವಂತಹ ಒಂದು ಚಾನ್ಸಸ್ ಕಡಿಮೆ ಹೀಗಾಗಿ ಈ ಎಲ್ಲಾ ವಾದ ವಿವಾದಗಳನ್ನ ಗಮನಿಸಿದರೆ ಹೂಡಿಕೆಯ ದೃಷ್ಟಿಯಿಂದ ಸೈಟ್, ಮನೆ ಖರೀದಿಸುವವರು ಮತ್ತೊಮ್ಮೆ ಯೋಚಿಸಬೇಕಾಗಿದೆ. ತಮ್ಮ ಎಲ್ಲಾ ಅಥವಾ ಬಹುಪಾಲ ಹಣವನ್ನು ರಿಯಲ್ ಎಸ್ಟೇಟ್ ಮೇಲೆ ಇನ್ವೆಸ್ಟ್ ಮಾಡುವುದರ ಬದಲಿಗೆ ರಿಯಲ್ ಎಸ್ಟೇಟ್ ಜೊತೆಗೆ ಮ್ಯೂಚುವಲ್ ಫಂಡ್, ಸ್ಟಾಕ್ಸ್ ಬಾಂಡ್, ಇಟಿಎಫ್ ಪಿ ಪಿಎಫ್ ಮತ್ತು ಇತರ ಹೂಡಿಕೆ ಒಂದು ಸಾಧನೆಗಳಲ್ಲಿ ಹಾಕುವಂತದ್ದು ಸೂಕ್ತ ಅಂತ ತಜ್ಞರು ಹೇಳ್ತಾರೆ.

ಇದನ್ನೂ ಓದಿ: OLA Electric IPO: 849 ಲಕ್ಷ ಶೇರುಗಳನ್ನ ಕಂಪನಿ ಮಾರಾಟಕ್ಕೆ ಇಟ್ಟಿದೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment