ಎಲ್ಲರಿಗೂ ನಮಸ್ಕಾರ, Share ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯೊಂದು ಇತ್ತೀಚಿನ ದಿವಸಗಳಲ್ಲಿ ಭಾರಿ ಸುದ್ದಿಯಲ್ಲಿದೆ ಇದು ಭಾರತದ ಎಲೆಕ್ಟ್ರಿಕ್ 2 ವೀಲರ್ ಮಾರ್ಕೆಟ್ ನಲ್ಲಿ 52% ಪಾಲನ್ನ ಹೊಂದಿದೆ ಹೌದು ನಿಮ್ಮ ಊಹೆ ನಿಜ ನಾನೀಗ ಹೇಳ್ತಾ ಇರುವಂತದ್ದು ಬೆಂಗಳೂರಿನ ಕೋರಮಂಗಲದಲ್ಲಿ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಹೊಂದಿರುವಂತದ್ದು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಉತ್ಪಾದನಾದ ಘಟಕವನ್ನು ಸ್ಥಾಪಿಸಿರುವ Ola ಎಲೆಕ್ಟ್ರಿಕ್ ಕಂಪನಿಯ IPO ಬಗ್ಗೆ.
ರಿಟೇಲ್ ಹೂಡಿಕೆದಾರರು ಆಗಸ್ಟ್ ಎರಡರಿಂದ 6ರ ತನಕ ಈ IPO ದಲ್ಲಿ ಶೇರುಗಳನ್ನು ಖರೀದಿಸಬಹುದು ಪ್ರತಿ ಶೇರಿಗೆ 72 ರಿಂದ 75 ರೂಪಾಯಿಗಳ ದರದ ಸ್ಲ್ಯಾಬ್ ಅನ್ನ ಕಂಪನಿ ನಿಗದಿಪಡಿಸಿದೆ ola ಎಲೆಕ್ಟ್ರಿಕ್ ನ ಪ್ರತಿ ಶೇರಿನ ಮುಖಬೆಲೆ ಅಥವಾ ಫೇಸ್ ವ್ಯಾಲ್ಯೂ ಅನ್ನುವಂತದ್ದು 10 ರೂಪಾಯಿ ಆಗಿದೆ.
Grey ಮಾರ್ಕೆಟ್ ಅಲ್ಲಿ ಈಗಾಗಲೇ ಜೆಎಂ ಪಿ ಅಥವಾ ಗ್ರೇ ಮಾರ್ಕೆಟ್ ಪ್ರೀಮಿಯಂ 12 ರಿಂದ 13 ರೂಪಾಯಿಗೆ ಏರಿಕೆಯಾಗಿದೆ ಅಂದರೆ ಈ ಶೇರಿನ IPO ಇಶ್ಯೂ ದರದಲ್ಲಿ 16% ಏರಿಕೆ ಆಗುವಂತಹ ಒಂದು ಸಿಗ್ನಲ್ ಅನ್ನ ಗ್ರೇ ಮಾರ್ಕೆಟ್ ಇವಾಗ ಕೊಟ್ಟಿದೆ. ಈ IPO ಮೂಲಕ 6145 ಕೋಟಿ ರೂಪಾಯಿಗಳನ್ನ ಸಂಗ್ರಹಿಸುವ ಗುರಿಯನ್ನ ola ಎಲೆಕ್ಟ್ರಿಕ್ ಹೊಂದಿದೆ. ಇನ್ನು ಲಾಟ್ ಸೈಜ್ ಬಗ್ಗೆ ಹೇಳುವುದಿದ್ರೆ 195 ಶೇರ್ಗಳನ್ನ ಖರೀದಿಸಬೇಕಾಗುತ್ತೆ ಅಂದ್ರೆ ರಿಟೇಲ್ ಇಂದ ಇನ್ವೆಸ್ಟರ್ಸ್ ಕನಿಷ್ಠ 14,820 ರೂಪಾಯಿಯನ್ನ ಹೂಡಿಕೆ ಮಾಡಬೇಕಾಗುತ್ತೆ.
ಆಗಸ್ಟ್ ಒಂಬತ್ತರಂದು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಓಲಾ ಎಲೆಕ್ಟ್ರಿಕ್ ಶೇರ್ಗಳು ಲಿಸ್ಟ್ ಆಗುತ್ತೆ ಬಳಿಕ ರಿಟೇಲ್ ಹೂಡಿಕೆದಾರರು ಸೆಕೆಂಡರಿ ಮಾರ್ಕೆಟ್ ಅಲ್ಲಿ ಲಭ್ಯವಿರುವಂತದ್ರಲ್ಲಿ ತಮಗೆ ಬೇಕಾದಷ್ಟು ಶೇರ್ಗಳನ್ನ ಖರೀದಿಸಬಹುದು ಒಟ್ಟು 849 ಲಕ್ಷ ಶೇರುಗಳನ್ನ ಕಂಪನಿ ಮಾರಾಟಕ್ಕೆ ಇಟ್ಟಿದೆ.
Ola 3 ವಿಧದ EV ಸ್ಕೂಟರ್ ಮಾರಾಟ ಮಾಡ್ತಾ ಇದೆ
- S1 Pro
- S1 Air
- S1x+
S1 pro ಗೆ 1,29,000, s1 Air ಗೆ 1,25,000 ಹಾಗೂ s1x+ ಗೆ 85,000 Price ಇದೆ.
ಹೆಚ್ಚುವರಿ ಖರ್ಚು ಇಲ್ಲದೆ ಎಲ್ಲಾ ಸ್ಕೂಟರ್ ಗಳಿಗೆ 8 ವರ್ಷಗಳ ಅಥವಾ 80,000 km ತನಕ ಬ್ಯಾಟರಿ ವಾರಂಟಿಯನ್ನ ಕಂಪನಿ ನೀಡುತ್ತೆ ola ಎಲೆಕ್ಟ್ರಿಕ್ ನ ಆದಾಯ 2023-24 ರಲ್ಲಿ 5,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಹೀಗಿದ್ದರೂ ಕಂಪನಿಯ ನಷ್ಟ ಕೂಡ 1,584 ಕೋಟಿ ರೂಪಾಯಿಗೆ ಏರಿಕೆಯಾಗಿರುವಂತದ್ದನ್ನ ನಾವು ನೋಡ್ತೀವಿ ಮತ್ತೊಂದು ಕಡೆ ಈ ಸ್ಕೂಟರ್ಸ್ ಸೇಲ್ಸ್ ಕೂಡ ಹೆಚ್ಚುತ್ತಾ ಇದೆ. ಆದ್ದರಿಂದ ಸಾಕಷ್ಟು ಸಂಶೋಧನೆ ನಡೆಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ನಾವು ಇಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಈ IPO ಕಂಪನಿ ಮತ್ತು ಮಾರ್ಕೆಟ್ ಟ್ರೆಂಡ್ ಏನಿದೆ ಎಂಬುದರ ಬಗ್ಗೆ ವಿಶ್ಲೇಷಣೆಯನ್ನು ಮಾಡ್ತಾ ಇದ್ದೀವಿ.
ಶೇರುಗಳ ಖರೀದಿ ನಿರ್ಧಾರ ಇದು ನಿಮ್ಮ ವಿವೇಚನೆಗೆ ಬಿಟ್ಟದ್ದು.
Ola ಎಲೆಕ್ಟ್ರಿಕ್ IPO ಮೂಲಕ ಸಂಗ್ರಹಿಸುವ ಈ ಸಾವಿರಾರು ಕೋಟಿ ರೂಪಾಯಿಗಳನ್ನ ಹೇಗೆ ಖರ್ಚು ಮಾಡುತ್ತೆ ಯಾವುದಕ್ಕೆಲ್ಲ ಅದು ಬಳಕೆಯಾಗುತ್ತೆ?
ಈ ಪ್ರಶ್ನೆ ಶೇರ್ದಾರರಿಗೆ ಬಹಳ ಮುಖ್ಯ ಆಗುತ್ತೆ ಯಾಕಂತಂದ್ರೆ ಅದು ಅವರಿಗೆ ತಮ್ಮ ಹೂಡಿಕೆ ಭವಿಷ್ಯದ Returns ಬಗ್ಗೆ ಅಂದಾಜು ಮಾಡಲಿಕ್ಕೆ ಹೆಲ್ಪ್ ಮಾಡುತ್ತೆ ಸಾಬಿಗೆ ಸಲ್ಲಿಸಿದ ಡಿಆರ್ ಎಚ್ ಪಿ ವರದಿಯಲ್ಲಿ ola ಕಂಪನಿ ತನ್ನ ಉದ್ದೇಶಗಳನ್ನ ಪಟ್ಟಿ ಮಾಡಿದೆ. ಮೊದಲನೆಯದಾಗಿ ola ಎಲೆಕ್ಟ್ರಿಕ್ ತನ್ನ ಅಧೀನ ಸಂಸ್ಥೆಯಾದ ಓ ಸಿಟಿಯ ಯೋಜನೆಗೆ ಬೇಕಾದಂತಹ ಬಂಡವಾಳ ವೆಚ್ಚವನ್ನು ಹೊಂದಿಸಲಿಕ್ಕೆ 1,226 ಕೋಟಿ ರೂಪಾಯಿಗಳ ಅಗತ್ಯ ಇದೆ ಅಂತ ಹೇಳಿದೆ ಎರಡನೆಯದಾಗಿ ತನ್ನ ಅಧೀನ ಕಂಪನಿ ಓ ಇಟಿಯ ಸಾಲದ ಮರುಪಾವತಿಗೆ 800 ಕೋಟಿ ರೂಪಾಯಿಗಳನ್ನ ಖರ್ಚು ಮಾಡ್ತೀನಿ ಅಂತ ಹೇಳಿದೆ ಹಾಗೂ ಸಂಶೋಧನೆ ಮತ್ತು ಉತ್ಪನ್ನ ಒಂದು ಅಭಿವೃದ್ಧಿ ಆರ್ ಎಂ ಡಿ ಅಂತ ನಾವೇನು ಹೇಳ್ತೀವಿ ಅದಕ್ಕೆ 1,600 ಕೋಟಿ ರೂಪಾಯಿಗಳನ್ನ ಬಳಕೆ ಮಾಡ್ತೀವಿ ಅಂತ ತಿಳಿಸಿದೆ.
ಕಂಪನಿಯ ಆರ್ಗಾನಿಕ್ ಬೆಳವಣಿಗೆಗೆ ಸುಮಾರು 350 ಕೋಟಿ ರೂಪಾಯಿಗಳನ್ನ ಖರ್ಚು ಮಾಡಲಿಕ್ಕೆ ಇದೆ ಅಂತ ಕಂಪನಿ ಹೇಳಿದೆ
Ola ಎಲೆಕ್ಟ್ರಿಕ್ ಕಂಪನಿಯ ವಿಶೇಷತೆಗಳನ್ನು ಮತ್ತು ಸವಾಲುಗಳನ್ನ
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 52% ಪಾಲನ್ನ ola ಎಲೆಕ್ಟ್ರಿಕ್ ಹೊಂದಿದೆ ಸದ್ಯಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾತ್ರ ಉತ್ಪಾದನೆ ಮಾಡ್ತಾ ಇದ್ದು ಮುಂಬರುವ ದೇಶಗಳಲ್ಲಿ ಎಲೆಕ್ಟ್ರಿಕ್ ಬೈಕ್ ಗಳನ್ನ ಕೂಡ ಈ ಕಂಪನಿ ತಯಾರಿಸಲಿಕ್ಕೆ ಇದೆ ಆದರೆ ಎಲೆಕ್ಟ್ರಿಕ್ ಕಾರು ಗಳನ್ನ ತಯಾರಿಸುವಂತಹ ಉದ್ದೇಶ ಸದ್ಯಕ್ಕೆ ಇಲ್ಲ ಅಂತ ಕಂಪನಿ ಹೇಳಿದೆ ಸರ್ಕಾರದ ವಾಹನ ಪೋರ್ಟಲ್ ಪ್ರಕಾರ 2024ರ ಏಪ್ರಿಲ್ ನಲ್ಲಿ 34,000 ಸ್ಕೂಟರ್ ಗಳನ್ನ ಕಂಪನಿ ರಿಜಿಸ್ಟರ್ ಮಾಡಿದೆ. ಜಪಾನ್ ನ ಸಾಫ್ಟ್ ಬ್ಯಾಂಕ್ ಅನ್ನುವಂತದ್ದು ola ದಲ್ಲಿ ಇನ್ವೆಸ್ಟ್ ಮಾಡಿದೆ.
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸದ್ಯಕ್ಕೆ ola ದ ಪ್ರಾಬಲ್ಯ ಇದ್ದರೂ ಕೂಡ ಕೆಲವೊಂದು ಸವಾಲುಗಳನ್ನು ಅಥವಾ Internal Risk ಗಳನ್ನು ಕೂಡ ಈ ಕಂಪನಿ ಒಳಗೊಂಡಿದೆ ಅದು ಏನು ಅಂತ ನೋಡೋಣ:
ಉದ್ಯಮ ವಲಯದಲ್ಲಿ ಕಂಪನಿಯ ಕಾರ್ಯಾಚರಣೆಗೆ ಇರುವ ಇತಿಹಾಸ ಸೀಮಿತಾವಧಿಯಾದಾಗಿದೆ ಅಂದ್ರೆ 2017 ರಲ್ಲಿ ಶುರುವಾದ Ola ಎಲೆಕ್ಟ್ರಿಕ್ ಇವಿ ಸ್ಕೂಟರ್ ಅನ್ನ ಬಿಡುಗಡೆಗೊಳಿಸಿದ್ದು 2021ರ ಡಿಸೆಂಬರ್ ನಲ್ಲಿ ಇದುವರೆಗೂ ಕಂಪನಿ ನಷ್ಟದಲ್ಲಿ ಇದೆ ಅನ್ನುವಂತದ್ದು ಕೂಡ ಇಲ್ಲಿ ನಾವು ಗಮನಿಸಬೇಕಾಗುತ್ತೆ. ಬಿಸಿನೆಸ್ ಮತ್ತು ಉತ್ಪನ್ನಗಳ ಅಭಿವೃದ್ಧಿ ಸಾಮರ್ಥ್ಯ ಹೆಚ್ಚಳ ಮತ್ತು ಕಾರ್ಯಾಚರಣೆಗೆ ಹೆಚ್ಚಿನ ಹಣ ಖರ್ಚಾಗಿರುವುದು ಇದಕ್ಕೆ ಕಾರಣ ಅಂತ ಕಂಪನಿ ಸಾಬಿಗೆ ತಿಳಿಸಿದೆ ಕಂಪನಿ EV ಬಿಡಿಬಾಗಗಳ ಕಚ್ಚಾ ಸಾಮಗ್ರಿಗಳ ಪೂರೈಕೆ ಸಂಬಂಧಪಟ್ಟ ಹಾಗೆ ಇತರರನ್ನು ಅವಲಂಬಿಸಬೇಕಾದಂತಹ ಅನಿವಾರ್ಯತೆ ಕೂಡ ಇದೆ ಬ್ಯಾಟರಿಗಳ ಲಭ್ಯತೆ ಗುಣಮಟ್ಟ ದೀರ್ಘಕಾಲೀನ ಪೂರೈಕೆಯ ಒಪ್ಪಂದಗಳಿಗೆ ಸಂಬಂಧಪಟ್ಟ ಹಾಗೆ ಕಂಪನಿ ಮುಂದೆ ಸಾಕಷ್ಟು ಸವಾಲು ಕೂಡ ಇದೆ.
ಭಾರತದಲ್ಲಿ ಈಗ ola ಎಲೆಕ್ಟ್ರಿಕ್ ಗೆ ಪ್ರತಿಸ್ಪರ್ಧಿಗಳು ಕೂಡ ಇದ್ದಾರೆ
TVS ಮೋಟಾರ್ ಈಗಾಗಲೇ ಇವಿ ಸ್ಕೂಟರ್ ಅನ್ನ ಬಿಡುಗಡೆಗೊಳಿಸಿದೆ Hero ಮೋಟಾರ್ ಕಾರ್ಪ್ ಕೂಡ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಿಕ್ಕೆ ಮುಂದಾಗಿದೆ ಹಲವಾರು ಸ್ಟಾರ್ಟ್ ಅಪ್ ಗಳು ಕೂಡ ಮುಂದಿದೆ ಬೆಂಗಳೂರಿನಲ್ಲಿ ಕೂಡ ಸ್ಟಾರ್ಟ್ ಅಪ್ ಗಳು ಇದಾವೆ ಹೀಗಾಗಿ ಇದರ ಪರಿಣಾಮಗಳನ್ನು ನಾವು ಗಮನಿಸಬೇಕಾಗುತ್ತೆ.
ಸಕಾರಾತ್ಮಕ ಅಂಶ ಏನು ಅಂತ ಅಂದ್ರೆ ola ಎಲೆಕ್ಟ್ರಿಕ್ ಕಚ್ಚಾ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದ ಮುಟ್ಟಾಗ ಮಾತ್ರ ಇತರನ್ನು ಅವಲಂಬಿಸಿದೆ ಉತ್ಪಾದನೆ ಇರಬಹುದು ಮಾರುಕಟ್ಟೆ ವಿತರಣೆಗೆ ತಂದೆ ನೆಟ್ವರ್ಕ್ ಅನ್ನ ಇರುವಂತದ್ದು ಇದೆಲ್ಲ ಕೂಡ ಅದು ಸಾಕಷ್ಟು ಮುಂಚೂಣಿಯಲ್ಲಿದೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ola ಗಿಗಾ ಫ್ಯಾಕ್ಟರಿಯನ್ನು ನಿರ್ಮಿಸುತ್ತಿದೆ ಇಲ್ಲಿ ಸೆಲ್ ಉತ್ಪಾದನೆ ಕೂಡ ನಡೆಯುತ್ತೆ ನಮಗೆಲ್ಲ ola ಕ್ಯಾಪ್ಸ್ ಗೊತ್ತೇ ಇದೆ ಅದರ ಸ್ಥಾಪಕ ಭವೀಶ್ ಅಗರ್ವಾಲ್ ಅವರೇ ಈ ola ಎಲೆಕ್ಟ್ರಿಕ್ ಅನ್ನು ಸಂಸ್ಥಾಪನೆ ಮಾಡಿ ಈ ಮಟ್ಟಕ್ಕೆ ಬಿಡಿಸಿದ್ದಾರೆ.
1985 ರಲ್ಲಿ ಪಂಜಾಬ್ನಲ್ಲಿ ಜನಿಸಿದ ಭವಿಷ್ ಅಗರ್ವಾಲ್ ಅವರಿಗೆ ಈಗ ಜಸ್ಟ್ ಒಂದು 39 ವರ್ಷ ವಯಸ್ಸು ಮಾತ್ರ ಐಟಿ ಬಾಂಬೆಯ ಹಳೆ ವಿದ್ಯಾರ್ಥಿಯಾಗಿರುವ ಭವಿಷ್ಯ ಅಗರ್ವಾಲ್ ಗೆ ಭಾರತೀಯ ಗ್ರಾಹಕರು ಹಾಗೂ ಮಾರ್ಕೆಟ್ ಟ್ರೆಂಡ್ ಬಗ್ಗೆ ಸಾಕಷ್ಟು ಅರಿವಿದೆ ಹೀಗಾಗಿ ತಮ್ಮ ಕಂಪನಿಯ ಮೊದಲ IPO ಬಹಳ ಯಶಸ್ವಿಯಾಗುತ್ತೆ.
ಭಾರತೀಯ ರಿಟೇಲ್ ಶೇರ್ ಹೂಡಿಕೆದಾರರು ನಮ್ಮ ಜೊತೆ ಬೆಳಿಬೇಕು ಎಂಬ ಉದ್ದೇಶದಿಂದ ಈ IPO ಮಾಡ್ತಾ ಇದ್ದೀನಿ ಭವಿಷ್ಯದಲ್ಲಿ ನನ್ನ ಹೂಡಿಕೆಯ ಲಾಭ ಗಳಿಸುತ್ತೆ ಅದೇ ರೀತಿ ರಿಟೇಲ್ ಇನ್ವೆಸ್ಟರ್ಸ್ ಕೂಡ ಲಾಭ ಮಾಡ್ತಾರೆ ಅಂತ ಭವಿಷ್ಯ ಅಗ್ರವಾಲ್ ತಮ್ಮ ತುಂಬಾ ಒಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಇದನ್ನೂ ಓದಿ: Budget 2024: ಆಸ್ತಿ ಮಾರಾಟದ ಮೇಲೆ ಬಜೆಟ್ನ ಪ್ರಭಾವ!! 12.5% ಗೆ ಸ್ಲ್ಯಾಬ್ ಇಳಿಸಿದ್ದಾರೆ





