ಚಳಿಗಾಲದಲ್ಲಿ ಜಾಯಿಂಟ್ ಪೈನ್ ಬಂದರೆ ಏನು ಮಾಡಬೇಕು.! ಇಲ್ಲಿದೆ ಮಾಹಿತಿ 

December 24, 2024 1:26 PM
ಚಳಿಗಾಲದಲ್ಲಿ ಜಾಯಿಂಟ್ ಪೈನ್ ಬಂದರೆ ಏನು ಮಾಡಬೇಕು.! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ಚಳಿಗಾಲದಲ್ಲಿಯೇ ಜಾಸ್ತಿ ಆಗುವ ಸಮಸ್ಯೆಗಳಲ್ಲಿ ಕೀಲುನೋವು ಕೂಡ ಒಂದು ಆ ನಿಟ್ಟಿನಲ್ಲಿ ಶೀತ ಋತುವಿನಲ್ಲಿ ಜಾಯಿಂಟ್ ಪೈನ್ ಹೆಚ್ಚಾಗಲು ಯಾವೆಲ್ಲಾ ಅಂಶಗಳು ಕಾರಣವಾಗುತ್ತವೆ ನಿವಾರಣೆ ಹೇಗೆ ನೋಡೋಣ ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆ ಹೆಚ್ಚಳ ಜಾಯಿಂಟ್ ಪೈನ್ ಹೆಚ್ಚಾಗಲು ಈ ಅಂಶಗಳೇ ಕಾರಣ ಶೀತ ಋತುವಿನಲ್ಲಿ ಕೀಲುನೋವು ನಿವಾರಣೆ ಹೇಗೆ ಚಳಿಗಾಲದಲ್ಲಿ ಜಾಸ್ತಿಯಾಗುವ ಸಮಸ್ಯೆಗಳಲ್ಲಿ ಕೀಲುನೋವು ಕೂಡ ಒಂದು ಶೀತ ವಾತಾವರಣದಲ್ಲಿ ಕೀಲುನೋವು ಹೆಚ್ಚಲು ಕಾರಣಗಳು ಹಲವಿವೆ ನಿಮ್ಮ ಕೀಲುನೋವಿಗೆ ಕಾರಣ ಏನು ಅನ್ನೋದನ್ನ ಅರ್ಥಮಾಡಿಕೊಂಡು ಇದಕ್ಕೆ ಸರಿಯಾದ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬೇಕು ಆ ಮೂಲಕ ಚಳಿಗಾಲದಲ್ಲಿ ಕೀಲು ನೋವನ್ನ ತಡೆಯಬಹುದು.

ಚಳಿಯ ವಾತಾವರಣವು ಶೀತ ಕೆಮ್ಮು ನೆಗಡಿ ಮಾತ್ರವಲ್ಲ ಕೀಲು ಮೈಕೈ ನೋವಿಗೂ ಕಾರಣವಾಗುತ್ತೆ. ಸಂಧಿವಾತದ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ನೋವು ಹೆಚ್ಚಾಗುತ್ತೆ. ತಂಪಾಗಿ ಬೀಸುವ ಗಾಳಿ ತಂಪಾದ ವಾತಾವರಣ ಕಾರಣ ಅವರಿಗೆ ಹಿತ ಅನಿಸುವುದಿಲ್ಲ ಚಳಿಗಾಲದಲ್ಲಿ ಕೀಲುನೋವು ಸೇರಿದಂತೆ ದೇಹದ ಇತರ ಭಾಗಗಳಲ್ಲಿ ನೋವು ಉಂಟಾಗಲು ಕಾರಣಗಳು ಹಲವು ಆ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಅದನ್ನ ತಡೆಗಟ್ಟುವ ಕ್ರಮದ ಬಗ್ಗೆ ಯೋಚಿಸಬೇಕು ಅಷ್ಟಕ್ಕೂ ಚಳಿಗಾಲದಲ್ಲಿ ಹೆಚ್ಚಾಗುವ ಕೀಲುನೋವಿಗೆ ಕಾರಣವಾಗುವ ಪ್ರಮುಖ ಅಂಶಗಳೇನು ಅವುಗಳನ್ನು ತಡೆಗಟ್ಟಲು ಇರುವ ಮಾರ್ಗವೇನು ಆ ಕುರಿತ ಮತ್ತಷ್ಟು ಮಾಹಿತಿ ನೋಡೋಣ.

ಚಳಿಗಾಲದಲ್ಲಿ ಕೀಲುನೋವು ಹೆಚ್ಚಲು ಕಾರಣ ತಾಪಮಾನದಲ್ಲಿನ ಕುಸಿತ ಬದಲಾದ ಹವಾಮಾನ ದೈಹಿಕ ಚಟುವಟಿಕೆ ಕಡಿಮೆಯಾಗುವುದು ವಾತಾವರಣದಲ್ಲಿ ಹೆಚ್ಚಿದ ಶೀತದ ಒತ್ತಡ ಕಡಿಮೆಯಾದ ರೋಗ ನಿರೋಧಕ ಶಕ್ತಿ ಮತ್ತು ಸೂರ್ಯನ ಬಿಸಿಲಿನ ಕೊರತೆಯಿಂದ ವಿಟಮಿನ್ ಡಿ ಕೊರತೆಯಿಂದಾಗಿ ಚಳಿಗಾಲದ ಕೀಲುನೋವು ಉಲ್ಬಣಗೊಳ್ಳುತ್ತೆ. ವಿಟಮಿನ್ ಡಿ ಕೊರತೆಯಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ.

ಚಳಿಗಾಲದ ದಿನಗಳಲ್ಲಿ ವಿಟಮಿನ್ ಡಿ ಕೊರತೆ

ವಿಟಮಿನ್ ಡಿ ಕೊರತೆ ನೀಗಿಸಿ ಕೀಲುನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ನೋಡೋಣ ದೇಹವನ್ನ ಬೆಚ್ಚಗಿಟ್ಟುಕೊಳ್ಳುವುದು ಚಳಿಗಾಲದಲ್ಲಿ ದೇಹ ಬೆಚ್ಚಗಿರುವುದರಿಂದ ನಿಮಗೆ ಆರಾಮ ಸಿಗುವುದು ಮಾತ್ರವಲ್ಲ ಕೀಲುನೋವಿಗೂ ಪರಿಹಾರ ಸಿಗುತ್ತೆ.

ಬೆಚ್ಚಗಿನ ಉಡುಪು ಧರಿಸಿ ನಿಮ್ಮ ಕೈ ಕಾಲು ಮೊಣಕಾಲು ಸೊಂಟದ ಭಾಗಗಳು ಸೇರಿದಂತೆ ಸಂಪೂರ್ಣ ದೇಹವನ್ನ ಬೆಚ್ಚಗಿರಿಸುವುದು ಮುಖ್ಯ ಯಾಕಂದ್ರೆ ಈ ಪ್ರದೇಶದಲ್ಲಿ ನೋವು ಸಾಮಾನ್ಯವಾಗಿ ಪ್ರಾರಂಭವಾಗುತ್ತೆ. ಇದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತೆ ಆದರೆ ಬೆಚ್ಚಗಿನ ದೇಹದಲ್ಲಿ ಪರಿಚಲನೆಯು ಸಾಮಾನ್ಯವಾಗಿರುತ್ತೆ.

ಈ ರೀತಿಯಾಗಿ ಸಾಕಷ್ಟು ಪೋಷಣೆ ಮತ್ತು ಆಮ್ಲಜನಕವು ದೇಹದ ಎಲ್ಲಾ ಅಂಗಗಳನ್ನು ತಲುಪುತ್ತದೆ ಇದರಿಂದಾಗಿ ದೇಹವು ಭಾರ ಮತ್ತು ನೋವನ್ನು ಅನುಭವಿಸುವುದಿಲ್ಲ ವಿಟಮಿನ್ ಡಿ ಮಟ್ಟ ಕಾಪಾಡಿಕೊಳ್ಳಿ ಯಾಕಂದ್ರೆ ವಿಟಮಿನ್ ಡಿ ಕೊರತೆಯು ಸಂಧಿವಾತ ನೋವಿನ ಸಂವೇದನೆಯನ್ನ ಹೆಚ್ಚಿಸುತ್ತೆ.

ಚಳಿಗಾಲದಲ್ಲಿ ಜನರು ಬಿಸಿಲಿನಲ್ಲಿ ಹೊರಾಂಗಣದಲ್ಲಿ ಕಡಿಮೆ ಸಮಯವನ್ನ ಕಳೆಯುವುದರಿಂದ ಅಗತ್ಯವಾದ ವಿಟಮಿನ್ ಡಿ ಮಟ್ಟವು ಕಡಿಮೆಯಾಗುತ್ತೆ ಈ ಸಮಯದಲ್ಲಿ ಕತ್ತಲು ಕೂಡ ಬೇಗನೆ ಆಗುತ್ತೆ.

ವಿಟಮಿನ್ ಡಿ ಕೊರತೆಯನ್ನು ಎದುರಿಸಬಹುದು

ವಿಟಮಿನ್ ಡಿ ಹೊಂದಿರುವ ಆಹಾರವನ್ನು ಸೇವಿಸಿ ಹಾಗೆಯೇ ನೀವು ಸಪ್ಲಿಮೆಂಟ್ಸ್ ಗಳನ್ನು ಕೂಡ ತೆಗೆದುಕೊಳ್ಳುವುದನ್ನ ಪರಿಗಣಿಸಬಹುದು ಹೆದ್ದು ಕೂಡ ಯಾವುದೇ ವಿಟಮಿನ್ ಸಪ್ಲಿಮೆಂಟ್ಸ್ ಗಳನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳುವುದು ಅವಶ್ಯಕ ಇನ್ನು ಆಂಟಿ ಆಕ್ಸಿಡೆಂಟ್ ಅಂಶ ಇರುವ ಆಹಾರಗಳ ಸೇವನೆ ಚಳಿಗಾಲದಲ್ಲಿ ಕೀಲುನೋವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೀವು ಮಾಡಬೇಕಾಗಿರುವುದು ಆಂಟಿ ಆಕ್ಸಿಡೆಂಟ್ ಅಂಶ ಇರುವ ಆಹಾರಗಳನ್ನು ಹೆಚ್ಚು ಸೇವಿಸುವುದು ಅವಕಾಡೋ ಡ್ರೈ ಫ್ರೂಟ್ಸ್ ನಟ್ಸ್ ಮತ್ತು ಕೊಬ್ಬಿನ ಮೀನುಗಳಂತಹ ಆಹಾರಗಳು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ.

ಮೀನು ಅಥವಾ ಕ್ರಿಲ್ ಎಣ್ಣೆಯ ಪೂರಕಗಳು ಕೀಲು ನೋವನ್ನು ನಿವಾರಿಸಲು ಕೂಡ ಸಹಕಾರಿ ಇನ್ನು ಅರಿಶಿಣ, ಬೆಳ್ಳುಳ್ಳಿ, ಈರುಳ್ಳಿ, ಗ್ರೀನ್ ಟೀ ದ್ರಾಕ್ಷಿ ಬೆರ್ರಿ ಹಣ್ಣುಗಳು ಪ್ರೊಬಯೋಟಿಕ್ ಅಂಶ ಇರುವ ಮೊಸರಿನಂತಹ ಆಹಾರಗಳು ಇದರ ಜೊತೆಗೆ ಸೊಪ್ಪು ತರಕಾರಿಗಳ ಸೇವನೆಗೂ ಕೂಡ ಒತ್ತು ನೀಡಿ. ಇನ್ನು ನಿಯಮಿತ ವಾಕಿಂಗ್ ನಿಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಚಲಿಸುವಂತೆ ಮಾಡುತ್ತದೆ ವಾಕಿಂಗ್ ಮಾಡುವುದರಿಂದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ನಿಮ್ಮ ಸ್ನಾಯುಗಳನ್ನು ಬಲಪಡಿಸುವುದರಿಂದ ನಿಮ್ಮ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು ಚಳಿಗಾಲದಲ್ಲಿ ಹೊರಗಿನ ಚಳಿಗೆ ನಡೆಯಲು ಕಷ್ಟವಾಗುತ್ತೆ.

ಅಂತಹ ಸಂದರ್ಭದಲ್ಲಿ ಮನೆಯೊಳಗೆ ಚುರುಕಾಗಿ ನಡೆಯಿರಿ ವೇಗದ ನಡಿಗೆಯಿಂದ ಮೈ ಬೆವರುತ್ತದೆ ಮತ್ತು ಇಡೀ ದೇಹವು ಶಾಖವನ್ನು ಉತ್ಪಾದಿಸುತ್ತೆ. ಇದು ಕೂಡ ನೋವು ನಿವಾರಿಸಲು ಸಹಕಾರಿ ಇನ್ನು ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಅಂತ ನೀರು ಕುಡಿಯದೆ ಇರಬೇಡಿ ಶೀತ ವಾತಾವರಣದಲ್ಲಿ ಹೈಡ್ರೇಟ್ ಆಗಿರುವುದರಿಂದ ಹಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು ದೇಹವು ನಿರ್ಜಲೀಕರಣಗೊಂಡಾಗ ಕೀಲುಗಳು ಮತ್ತು ಸ್ನಾಯುಗಳಲ್ಲಿನ ನೋವಿನ ಸಂವೇದನೆ ಹೆಚ್ಚಾಗುತ್ತೆ. ಅಂತಹ ಸಂದರ್ಭಗಳಲ್ಲಿ ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮನ್ನ ಹೈಡ್ರೀಕರಿಸಲು ಪ್ರಯತ್ನಿಸಿ.

ಇದನ್ನೂ ಓದಿ: BBMP New Rules 2025.! ಎಲ್ಲೆಲ್ಲಿ ಹೊಸ Rules ಜಾರಿಗೆ ಬಂದಿದೆ?

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment