ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗಳಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ದ್ವಿತೀಯ ಪಿಯುಸಿ ಪಾಸಾಗಿದ್ದರೆ ಸಾಕು, ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಅರ್ಹರಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಕರ್ನಾಟಕದ ಲೋಕಾಯುಕ್ತ ಸಂಸ್ಥೆಗಳ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.
ಇದರ ಅರ್ಹತೆಗಳು ಬೇಕಾಗಿರುವ ದಾಖಲಾತಿಗಳು ಕೊನೆಯ ದಿನಾಂಕ ಹಾಗೂ ಅಪ್ಲಿಕೇಶನ್ ನಿಲ್ಲಿ ಸಲ್ಲಿಸಬಹುದು ಎಂದು ಎಲ್ಲಾ ವಿವರಗಳು ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
ಅರ್ಜಿ ಸಲ್ಲಿಸಲು ವಯೋಮಿತಿ:
- ಕನಿಷ್ಠ 18 ವರ್ಷಗಳು
- ಸಾಮಾನ್ಯ ವರ್ಗದವರಿಗೆ – ಗರಿಷ್ಠ 38 ವರ್ಷಗಳು
- 2A 2B 3A 3B – ಗರಿಷ್ಠ 41 ವರ್ಷಗಳು
- ಪರಿಶಿಷ್ಟ ಪಂಗಡ ಅಥವಾ ಪರಿಶಿಷ್ಟ ಜಾತಿ – 43 ವರ್ಷಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ:
- ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 34,100 ರೂಪಾಯಿಯಿಂದ 67,600 ರೂಪಾಯಿಯವರೆಗೆ ವೇತನವನ್ನು ನೀಡಲಾಗುತ್ತದೆ.
ಹುದ್ದೆಗಳಿಗೆ ಆಯ್ಕೆಯ ವಿಧಾನ:
- ನಿಗದಿಪಡಿಸಿರುವ ವಿದ್ಯಾರ್ಥಿಯಲ್ಲಿ ನಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪರೀಕ್ಷೆಯನ್ನು ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳಿಗೆ ಅರ್ಜಿಯ ಶುಲ್ಕ:
- ಸಾಮಾನ್ಯ ವರ್ಗದವರಿಗೆ ಹಾಗೂ 2A 2B 3A 3B ವರ್ಗದವರಿಗೆ – ರೂಪಾಯಿ 250
- ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಹಾಗೂ ಅಂಗವಿಕಲರಿಗೆ ಶುಲ್ಕವನ್ನು ವಿನಾಯಿತಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಸ್ಥೆಯ ಅಫೀಷಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿಯ ಶುಲ್ಕವನ್ನು ಕೂಡ ಆನ್ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಯನ್ನು ಕಡ್ಡಾಯವಾಗಿ ಪಾಸ್ ಆಗಿರಲೇಬೇಕು. ಅರ್ಜಿ ಸಲ್ಲಿಸುವ ಆರಂಭ ದಿನಾಂಕ ಅಕ್ಟೋಬರ್ 30ನೇತಾರೀಕು ಹಾಗೂ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ 29ನೇ ತಾರೀಕು. ನವೆಂಬರ್ 30 ನೇ ತಾರೀಖಿನ ಒಳಗೆ ಅರ್ಜಿಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
| Apply Now | lokayukta.karnataka.gov.in |
ಇದನ್ನೂ ಓದಿ: ಕನ್ನಡಿಗರಿಗೆ Private ಕಂಪನಿಗಳಲ್ಲಿ ಕೆಲಸ ಸಿಗುತ್ತದೆ!!










