ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ KPTCL ನಲ್ಲಿ ಭರ್ಜರಿ ನೇಮಕಾತಿಗಳು ನಡೆಯುತ್ತಿದೆ. ಸದ್ಯಕ್ಕೆ KPTCL ನಲ್ಲಿ ಒಟ್ಟು 2,975 ಹುದ್ದೆಗಳಿಗೆ ಕಾಲ್ ಮಾಡಿದ್ದಾರೆ. ಸ್ನೇಹಿತರೆ KPTCL ನಾ ಈ ಹುದ್ದೆಗಳಿಗೆ ಯಾವುದೇ ರೀತಿಯ ಪರೀಕ್ಷೆಗಳು ಇರುವುದಿಲ್ಲ. ನೀವು SSLC ಪಾಸಾಗಿದ್ದರೆ ಸಾಕು, ಈ ಹುದ್ದೆಗಳನ್ನು ಪಡೆಯಲು ನೀವು ಯೋಗ್ಯರಾಗಿರುತ್ತೀರಾ.
ಸ್ನೇಹಿತರೆ KPTCLನ ಈ ಹುದ್ದೆಗಳಿಗೆ ನೀವು ಈಗ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳ ಆಯ್ಕೆ ವಿಧಾನ ಹೇಗೆ ಇರುತ್ತದೆ? ಅರ್ಜಿ ಸಲ್ಲಿಸಲು ಶುಲ್ಕ ಎಷ್ಟು ಪಾವತಿಸಬೇಕಾಗುತ್ತದೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಹುದ್ದೆಯನ್ನು ಪಡೆಯಲು ವಯೋಮಿತಿ ಏನು ಇದೆ ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು ಪೂರ್ತಿಯಾಗಿ ಓದಿ.
NON ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ KPTCL ಖಾಲಿ ಇರುವ ಹುದ್ದೆಗಳು
- 411 ಹುದ್ದೆಗಳು – ಕಿರಿಯ ಸ್ಟೇಷನ್ ಪರಿಚಯಾರಕ
- 81 ಹುದ್ದೆಗಳು – ಕಿರಿಯ ಪವರ್ ಮ್ಯಾನ್
- 2268 ಹುದ್ದೆಗಳು – ಕಿರಿಯ ಪವರ್ ಮ್ಯಾನ್ (ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ)
ಈ ಹುದ್ದೆಗಳ ಸಂಭಾವನೆ ಪಟ್ಟಿ, ಮೊದಲ ಮೂರು ವರ್ಷಗಳು :
- ಮೊದಲನೇ ವರ್ಷ – 17000 ರೂಪಾಯಿಗಳು ಮಾಸಿಕ
- ಎರಡನೇ ವರ್ಷ – 19,000 ರೂಪಾಯಿ ಮಾಸಿಕ
- ಮೂರನೇ ವರ್ಷ – 21,000 ರೂಪಾಯಿ ಮಾಸಿಕ
ಮೂರು ವರ್ಷಗಳ ತರಬೇತಿ ತೃಪ್ತೀಕರಣವಾಗಿ ಮುಗಿಸಿದ ನಂತರ ಅಭ್ಯರ್ಥಿಗಳ ವೇತನ 28,000 ದಿಂದ 61000 ಸಾವಿರ ವರೆಗೆ ಏರಿಕೆಯಾಗುತ್ತದೆ. ಸರ್ಕಾರದ ನಿಯಮಗಳ ಮೇಲೆ ಅಭ್ಯರ್ಥಿಗಳ ವೇತನ ಹೆಚ್ಚು ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅಗತ್ಯ ವಿದ್ಯಾರ್ಹತೆ:
- SSLC ಅಥವ 10ನೇ ತರಗತಿಯನ್ನು ಪಾಸ್ ಮಾಡಿರಬೇಕು
- ಕನ್ನಡ ಓದಲು ಮತ್ತು ಬರೆಯಲು ಬರಬೇಕು
- ಕಣ್ಣಿನ ದೃಷ್ಟಿ ತೃಪ್ತಿಕರವಾಗಿ ಹೊಂದಿರತಕ್ಕದ್ದು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕವಿಪ್ರನಿನಿ ಅಥವಾ ವಿದ್ಯುತ್ ಸರಬರಾಜು ಕಂಪನಿಗಳು , ಇವುಗಳಲ್ಲಿ ಯಾವುದಾದರು ಒಂದು ಕಂಪನಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಕೊನೆಯದಾಗಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುತ್ತದೆ.
ಆಯ್ಕೆ ವಿಧಾನ ಸಹನ ಶಕ್ತಿ ಪರೀಕ್ಷೆ ಇರುತ್ತದೆ ಹಾಗೂ ಯಾವುದೇ ರೀತಿಯ ಥಿಯರಿ ಎಕ್ಸಾಮ್ ಇರುವುದಿಲ್ಲ. ಸಹನಾ ಶಕ್ತಿ ಪರೀಕ್ಷೆಯಲ್ಲಿ ವಿದ್ಯುತ್ ಕಂಬ ಹತ್ತುವುದು ಹಾಗೂ 100 ಮೀಟರ್ ಓಟ, ಶಾರ್ಟ್ ಪುಟ್, 800 ಮೀಟರ್ ಓಟ ಇತ್ಯಾದಿ ಇರುತ್ತದೆ.
KPTCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಪಾವತಿಸಬೇಕಾಗಿರುವ ಶುಲ್ಕ:
ಸ್ನೇಹಿತರೆ ಇಲ್ಲಿ ತಿಳಿಸಿರುವ KPTCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 20ನೇ ತಾರೀಕು 2024 ಆಗಿದೆ. ಈ KPTCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ 25 ನವೆಂಬರ್ 2024.
ಅರ್ಜಿ ಸಲ್ಲಿಸಲು ಶುಲ್ಕಗಳು:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 614 ರೂಪಾಯಿ
- ಪ್ರವರ್ಗ 1 2A 3A 2B 3B ತಿಗಳಿಗೆ – 614 ರೂಪಾಯಿ
- ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ – 378 ರೂಪಾಯಿ
| Apply Now | KPTCL Application Site |
ಇದನ್ನೂ ಓದಿ: BCM 2024 ಹಾಸ್ಟೆಲ್ ಅರ್ಜಿ ಆಹ್ವಾನ!! ಇದೇ ತಿಂಗಳು 30ನೇ ತಾರೀಕು ಕೊನೆಯ ದಿನಾಂಕ










