ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಯಾಕೆ ಬರುತ್ತಿಲ್ಲ? ಈ 2 ಕಾರಣದಿಂದ ಸರಿಯಾಗಿ ವಿದ್ಯಾರ್ಥಿ ವೇತನ ಬರುತ್ತಿಲ್ಲ!!

September 28, 2024 7:25 AM
Labor Card Scholarship 2024

ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿ ವೇತನ ಎಲ್ಲರಿಗೂ ಬರ್ತಾ ಇದೆ ಕೆಲವರಿಗೆ ಮಾತ್ರ ಬರ್ತಾ ಇಲ್ಲ ಇಲ್ಲಿ ಏನಾದರೂ ಅಪ್ಡೇಟ್ ಗಳನ್ನು ಮಾಡಿಸಬೇಕಾ ಏನಾದರೂ ತಪ್ಪುಗಳಾಗಿದೆಯಾ ಏನು ಮಾಡಬೇಕು? ಈ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಥವಾ ಲೇಬರ್ ಸ್ಕಾಲರ್ಶಿಪ್ ಪಡೆಯುವಲ್ಲಿ ನಾವು ಯಾಕೆ ವಿಫಲರಾಗ್ತಾ ಇದ್ದೀವಿ ಇದನ್ನ ಪಡಿಬೇಕು ಅಂದ್ರೆ ನಾವು ಏನು ಮಾಡಬೇಕು? ಅನ್ನುವಂತಹ ಯೋಚನೆ ನಿಮ್ಮದಾಗಿತ್ತು ಅಂದ್ರೆ ಅಥವಾ ಲೇಬರ್ ಸ್ಕಾಲರ್ಶಿಪ್ ಅನ್ನ ತಪ್ಪದೇ ಪಡಿಬೇಕು ಅನ್ನುವಂತಹ ವಿಚಾರ ನಿಮಗೆ ಏನಾದರೂ ಇದ್ದರೆ ಖಂಡಿತವಾಗಿಯೂ ಈ ಲೇಖನದಲ್ಲಿ ನಿಮಗೆ ಸಹಾಯಕಾರಿಯಾಗಲಿದೆ.

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೀಡ್ತಾ ಇರುವಂತಹ ಶೈಕ್ಷಣಿಕ ಧನ ಸಹಾಯವನ್ನು ಪಡೆಯುವಲ್ಲಿ ಕೆಲವೊಂದಿಷ್ಟು ಅಡಚಣೆಗಳು ಆಗ್ತಾ ಇರುವುದನ್ನ ನಾವು ಗಮನಿಸುತ್ತಾ ಇದ್ದೀವಿ ಈ ಅಡಚನೆಗಳನ್ನು ನಿವಾರಿಸಿಕೊಂಡು.

ಈ ವಿದ್ಯಾರ್ಥಿ ವೇತನವನ್ನ ತಪ್ಪದೆ ಪಡೆಯುವುದಕ್ಕೆ ನಮಗೆ 2 ಮಾರ್ಗಗಳಿವೆ ಆ 2 ಮಾರ್ಗಗಳ ಬಗ್ಗೆ ಡಿಪಾರ್ಟ್ಮೆಂಟ್ ಸ್ವತಃ 2022/23 ರಿಂದನೇ ಬಾಕಿ ಉಳಿದುಕೊಂಡಿರುವಂತಹ ವಿದ್ಯಾರ್ಥಿ ವೇತನಗಳನ್ನ ಈಗಷ್ಟೇ ಪ್ರೊಸೀಡ್ ಮಾಡ್ತಾ ಇರೋದ್ರಿಂದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾರೆಲ್ಲ ಈ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿಲ್ಲ ಅಂತವರಿಗೆ ಒಂದು ಗುಡ್ ನ್ಯೂಸ್ ಅನ್ನ ಕೊಟ್ಟು ಕೆಲವು ದಿನಗಳ ಕಾಲಾವಕಾಶವನ್ನ ಕೊಟ್ಟು ವಿದ್ಯಾರ್ಥಿ ವೇತನವನ್ನ ಪಡೆಯುವುದಕ್ಕೂ ಕೂಡ ಅವಕಾಶವನ್ನ ಮಾಡಿಕೊಡ್ತಾ ಇದೆ.

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ 2 ಸಮಸ್ಯೆ 2024

ಮೊದಲನೆಯದು: ಕೆಲವು ಜನ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಈ ಲೇಬರ್ ಸ್ಕಾಲರ್ಶಿಪ್ ಗೆ ಸಂಬಂಧಪಟ್ಟಂತೆ ಅವರ ಬ್ಯಾಂಕು ಗಳಿಗೆ ಅವರ ಬ್ಯಾಂಕ್ ಖಾತೆ ಮತ್ತು ಆಧಾರ್ ಗೆ ಲಿಂಕ್ ಇಲ್ಲ ಅನ್ನುವಂತಹ ಒಂದು ಸಮಸ್ಯೆಯಿಂದಾಗಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುತ್ತಿಲ್ಲ ಸೋ ಮೊದಲನೆಯದಾಗಿ ತಮ್ಮ ಬ್ಯಾಂಕ್ ಜೊತೆಗೆ ಆಧಾರ್ ಸಂಖ್ಯೆ ಲಿಂಕ್ ಇದೆಯೋ ಇಲ್ವೋ ಅನ್ನೋದನ್ನ ಕನ್ಫರ್ಮ್ ಮಾಡಿಕೊಳ್ಳಿ.

ವಿದ್ಯಾರ್ಥಿಯ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಒಂದು ಸಲ ಚೆಕ್ ಮಾಡಿಕೊಳ್ಳಿ ಹಾಗೆ ಯಾರು ಫಲಾನುಭವಿ ಇದ್ದಾರೆ ಲೇಬರ್ ಕಾರ್ಡ್ ಯಾರ್ದು ಇದೆ ಅವರದನ್ನು ಕೂಡ ನೀವು ಒಂದು ಸಲ ಬ್ಯಾಂಕಿಗೆ ಹೋಗಿ ಚೆಕ್ ಮಾಡಿಸಿ ಮೊದಲನೆಯದು

ಎರಡನೆಯದು: ಸ್ಯಾಟ್ಸ್ ಐಡಿ ಅಥವಾ ಸ್ಟೂಡೆಂಟ್ ಐಡಿ ಏನಿದೆ ಅಥವಾ SSP ಐಡಿ ಏನಿದೆ ಆ ಎಸ್ ಎಸ್ ಪಿಯ ಐಡಿಯನ್ನ ನಾವು ನಮ್ಮ ಲೇಬರ್ ಸ್ಕಾಲರ್ಶಿಪ್ ನ ಜೊತೆಗೆ ಟ್ಯಾಗ್ ಮಾಡಬೇಕಾದಂತಹ ಒಂದು ಅನಿವಾರ್ಯತೆ ಇತ್ತು ಕಳೆದ ವರ್ಷವೇ ಇದಕ್ಕೆ ಸಂಬಂಧಪಟ್ಟಂತೆ ಒಂದು ನೋಟೀಸ್ ಅನ್ನ ಕೂಡ ಡಿಪಾರ್ಟ್ಮೆಂಟ್ ಬಿಡುಗಡೆ ಮಾಡಿತ್ತು ಆಗ ತುಂಬಾ ಜನ ಏನು ಮಾಡಿದ್ರು ಅಂದ್ರೆ ತಮ್ಮ SSP ಐಡಿಯನ್ನ ಅಥವಾ ಸ್ಯಾಟ್ಸ್ ಐಡಿಯನ್ನ ಈ ವಿದ್ಯಾರ್ಥಿ ವೇತನದ ಜೊತೆಗೆ ಟ್ಯಾಗ್ ಮಾಡುವಲ್ಲಿ ವಿಫಲರಾದರು.

ಆ ಎರಡು ಕಾರಣಗಳಿಂದ ಈಗ ವಿದ್ಯಾರ್ಥಿ ವೇತನ ಬರ್ತಾ ಇಲ್ಲ ಅಂತಹ ಯಾವ ವಿದ್ಯಾರ್ಥಿಗಳಿದ್ದಾರೆ ನಿಮ್ಮೆಲ್ಲರ ಲಿಸ್ಟ್ ಅನ್ನ ಕೂಡ ಬಿಟ್ಟಿದ್ದಾರೆ ಈಗ ಯಾವ ವಿದ್ಯಾರ್ಥಿಗೆ ಸ್ಕಾಲರ್ಶಿಪ್ ಬಂದಿಲ್ಲ ಯಾರದು ಎಸ್ ಎಸ್ ಪಿ ಐಡಿ ಅಥವಾ ಸ್ಟೂಡೆಂಟ್ ಐಡಿ ಇನ್ನು ಕೂಡ ಲಿಂಕ್ ಆಗಿಲ್ಲ ನಿಮ್ಮ ಅಕೌಂಟ್ ಜೊತೆಗೆ ಅಂತಹ ವಿದ್ಯಾರ್ಥಿಗಳ ಲಿಸ್ಟ್ ಅನ್ನ ಬಿಟ್ಟಿದ್ದಾರೆ.

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಲಿಸ್ಟ್ ನಲ್ಲಿ ನಿಮ್ಮ ಹೆಸರು

karbwwb.karnataka.gov.in – ನೇರವಾದ ಲಿಂಕನ್ನ ನಿಮಗೆ ಕೊಡ್ತೀನಿ. ನಿಮ್ಮ ಜಿಲ್ಲೆ ಯಾವುದು ಇದೆ ಆ ಜಿಲ್ಲೆಯ ಲಿಸ್ಟ್ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿ.

ನಿಮ್ಮ ಹೆಸರು ಏನಾದ್ರು ಇತ್ತು ಅಂದ್ರೆ ನೀವು ಇಮ್ಮಿಡಿಯೇಟ್ಲಿ ಏನ್ ಮಾಡಬೇಕಾಗುತ್ತೆ ಅಂದ್ರೆ ನಿಮ್ಮ ಲೇಬರ್ ಕಾರ್ಡ್ ನಲ್ಲಿ ಇರುವಂತಹ ಅಡ್ರೆಸ್ ಗೆ ನಿಮ್ಮ ಡಿಸ್ಟ್ರಿಕ್ಟ್ ಆಫೀಸ್ ಆಗಿದ್ರೆ ಡಿಸ್ಟ್ರಿಕ್ಟ್ ತಾಲೂಕ್ ಆಫೀಸ್ ಆಗಿದ್ರೆ ತಾಲೂಕ್ ಆಫೀಸ್ ಗೆ ಹೋಗಿ ಇಮ್ಮಿಡಿಯೇಟ್ಲಿ ನೀವು ನಿಮ್ಮ ಎಸ್ ಎಸ್ ಪಿ ಐಡಿಯನ್ನ ನಿಮ್ಮ ಲೇಬರ್ ಸ್ಕಾಲರ್ಶಿಪ್ ನ ಜೊತೆಗೆ ಅದನ್ನ ಲಿಂಕ್ ಮಾಡಬೇಕಾಗುತ್ತೆ.

ನಿಮ್ಮ ಲೇಬರ್ ಕಾರ್ಡ್ ಅನ್ನ ತಗೊಂಡು ಹೋಗಿ ಅದನ್ನ ನೀವು ಕೊಟ್ಟು ಅದನ್ನ ಲಿಂಕ್ ಮಾಡಿಸಬಹುದು ಸೋ ಉದಾಹರಣೆಗೆ ನೀವು ಬೇರೆ ಜಿಲ್ಲೆದು ನಿಮ್ಮದು ಯಾವುದು ಜಿಲ್ಲೆ ಇದೆ ಆ ಜಿಲ್ಲೆಯ ಲಿಸ್ಟ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ಲಿಸ್ಟ್ ಅನ್ನ ಡೌನ್ಲೋಡ್ ಮಾಡ್ಕೊಂಡು.

ನಿಮ್ಮ ಹೆಸರು ಇತ್ತು ಅಂದ್ರೆ ಹೋಗಿ ಅದನ್ನ ಅಪ್ಡೇಟ್ ಮಾಡಿಸಿ ಇಮ್ಮಿಡಿಯೇಟ್ಲಿ ನಿಮಗೆ ಒಂದು ತಿಂಗಳಲ್ಲಿ ವಿದ್ಯಾರ್ಥಿ ವೇತನ ಕೂಡ ಜಮಾ ಆಗುತ್ತೆ. ಕಳೆದ ಬಾರಿ ಯಾರೆಲ್ಲ ಮಿಸ್ ಮಾಡಿಕೊಂಡಿದ್ದೀರಿ ಈ ಬಾರಿ ನಿಮಗೆ ಮತ್ತೆ ಸ್ಟಾಟ್ಸ್ ಐಡಿ ಅಥವಾ ಸ್ಟೂಡೆಂಟ್ ಐಡಿಯನ್ನ ನಿಮ್ಮ ಸ್ಕಾಲರ್ಶಿಪ್ ನ ಜೊತೆಗೆ ಲಿಂಕ್ ಮಾಡಿಸಿಕೊಳ್ಳುವುದಕ್ಕೆ ಅವಕಾಶ ಇದೆ ಲಿಂಕ್ ಆದ ನಂತರ ನಿಮಗೆ ವಿದ್ಯಾರ್ಥಿ ವೇತನ ಕೂಡ ದೊರೆಯುತ್ತೆ.

ಇದನ್ನೂ ಓದಿ: HSRP ನಂಬರ್ ಪ್ಲೇಟ್ ದಿನಾಂಕ ಮುಂದೂಡಿಕೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

1 thought on “ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಯಾಕೆ ಬರುತ್ತಿಲ್ಲ? ಈ 2 ಕಾರಣದಿಂದ ಸರಿಯಾಗಿ ವಿದ್ಯಾರ್ಥಿ ವೇತನ ಬರುತ್ತಿಲ್ಲ!!”

Leave a Comment