PF Rejection ಆಗುವ ಕೆಲವು ಕಾರಣಗಳು!! ಕ್ಲೇಮ್ ರಿಜೆಕ್ಷನ್ ಅನ್ನ ತಪ್ಪಿಸುವುದು ಹೇಗೆ? ಇಲ್ಲಿದೆ ಮಾಹಿತಿ 

November 14, 2024 2:14 AM
PF Rejection ಆಗುವ ಕೆಲವು ಕಾರಣಗಳು!! ಕ್ಲೇಮ್ ರಿಜೆಕ್ಷನ್ ಅನ್ನ ತಪ್ಪಿಸುವುದು ಹೇಗೆ? ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ, ನಾವು ಈ PF ರಿಜೆಕ್ಷನ್ ಬಗ್ಗೆ ಒಂದಷ್ಟು ಡೀಟೇಲ್ ಆಗಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನ ಮಾಡ್ತಾ ಹೋಗೋಣ PF ಯಾಕಾಗಿ ತಿರಸ್ಕೃತಗೊಳ್ಳುತ್ತೆ ಎಂಬುದರ ಬಗ್ಗೆ ನಾವೀಗ ಫೋಕಸ್ ಮಾಡೋಣ ನೋಡಿ Karan ಎಂಬ ವ್ಯಕ್ತಿ ಮೈಸೂರಿನ ಒಂದು ಕಂಪನಿಯಿಂದ ನಿವೃತ್ತರಾಗಿದ್ದಾರೆ ಕಳೆದ ಮೂರು ವರ್ಷಗಳಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಂದ್ರೆ PF ಕಚೇರಿಯಲ್ಲಿ ಹೋರಾಟ ಮಾಡ್ತಾ ಇದ್ದಾರೆ.

ಆದರೂ ಕೂಡ ಅವರು ತಮ್ಮ ಪಿಎಫ್ ನ ಅಂತಿಮ ಕ್ಲೇಮ್ ಅನ್ನ ಪಡೆಯುವುದಕ್ಕೆ ಸಾಧ್ಯ ಆಗ್ತಿಲ್ಲ ಪ್ರತಿ ಬಾರಿ ಅವರು ಕ್ಲೇಮ್ ಗೆ ಅರ್ಜಿಯನ್ನು ಸಲ್ಲಿಸಿದಾಗ ಅದು ತಿರಸ್ಕೃತ ಆಗ್ತಾನೆ ಇದೆ. ಪ್ರತಿ ಬಾರಿ ನೀಡಲಾದ ಕಾರಣ ಏನಪ್ಪಾ ಅಂದ್ರೆ ಅದು ದಾಖಲೆ ಸರಿ ಇಲ್ಲ ಅಂತಾನೆ ಹೇಳ್ತಾ ಇದೆ. Karan ಅವರು ಬೆಂಗಳೂರು ಮತ್ತು ಮೈಸೂರಿಗೆ ಪ್ರಯಾಣ ಮಾಡುವುದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ.

ಆದರೆ ಅವರ ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹಿಂಪಡೆಯುವುದಕ್ಕೆ ಅವರಿಗೆ ಸಾಧ್ಯ ಆಗ್ತಾನೆ ಇಲ್ಲ ಹಾಗಾದರೆ Karan ಅವರಂತೆ ಅನೇಕ ಮಂದಿ ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಸದ್ಯ ಕಳೆದ 5 ವರ್ಷ ಗಳಲ್ಲಿ ಈ PF ನ ಫೈನಲ್ ಸೆಟಲ್ಮೆಂಟ್ ಕ್ಲೇಮ್ ಗಳ ರಿಜೆಕ್ಷನ್ ರೇಟ್ ಶೇಕಡಾ 13 ರಿಂದ ಶೇಕಡ 34 ರಷ್ಟು ಹೆಚ್ಚಾಗಿ ಬಿಟ್ಟಿದೆ ಇದರ ಅರ್ಥ 3 ಕ್ಲೇಮ್ ಗಳಲ್ಲಿ ಒಂದನ್ನ ತಿರಸ್ಕರಿಸಲಾಗ್ತಾ ಇದೆ.

PF Rejection Ratio 2022-23

PF ದ ಮಾಹಿತಿಯ ಪ್ರಕಾರ 2022-23 ರಲ್ಲಿ PF ಫೈನಲ್ ಸೆಟಲ್ಮೆಂಟ್ ಗೆ ಒಟ್ಟು 73.87 ಲಕ್ಷ ಕ್ಲೇಮ್ ಗಳನ್ನ ಸ್ವೀಕರಿಸಲಾಗಿದೆ ಅದರಲ್ಲಿ ಸರಿಸುಮಾರು ಶೇಕಡ 34 ರಷ್ಟು ಅಂದ್ರೆ 24.93 ಲಕ್ಷ ಕ್ಲೇಮ್ ಗಳನ್ನ ತಿರಸ್ಕರಿಸಿ ಸಲಾಗಿದೆ ನಿಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯುವುದಕ್ಕೆ ನೀವು ಕ್ಲೇಮ್ ಗಾಗಿ ಅರ್ಜಿಯನ್ನು ಸಲ್ಲಿಸಿದಾಗ ಹೆಸರು ಯುಎ ಎನ್ ಇಪಿಎಫ್ ಓ ನಲ್ಲಿ ಸೇರ್ಪಡೆಗೊಂಡ ದಿನಾಂಕ ಬ್ಯಾಂಕ್ ಖಾತೆ ಮತ್ತು ಕೆವೈಸಿ ಗೆ ಸಂಬಂಧಿಸಿದ ದಾಖಲೆಗಳಂತಹ ಎಲ್ಲ ವಿವರಗಳನ್ನ ಕೇಳಲಾಗುತ್ತೆ.

ಯಾವುದೇ ಮಾಹಿತಿಯು ಇಪಿಎಫ್ ಓ ನಲ್ಲಿರುವ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ. ಆಗ ನಿಮ್ಮ ಕ್ಲೇಮ್ ಅನ್ನ ತಿರಸ್ಕರಿಸಲಾಗುತ್ತೆ.

ನಿಮ್ಮ PF ಕ್ಲೇಮ್ ತಿರಸ್ಕೃತ ಆಗುವುದಕ್ಕೆ ಕಾರಣಗಳಾದರೂ ಏನು

ಕ್ಲೇಮ್ ರಿಜೆಕ್ಷನ್ ಅನ್ನ ತಪ್ಪಿಸುವುದು ಹೇಗೆ? ವಂಚನೆಗೆ ಸಂಬಂಧಿಸಿದ ಘಟನೆಗಳನ್ನು ತಡೆಯುವುದಕ್ಕೆ ಸರ್ಕಾರ ಕೆವೈಸಿ ಗೆ ವಿಶೇಷ ಒತ್ತನ್ನ ನೀಡುತ್ತಿದೆ ಪಿಎಫ್ ಖಾತೆಗಳಲ್ಲಿ ಕೆವೈಸಿ ಯನ್ನ ಅಪ್ಡೇಟ್ ಮಾಡಿಸುವುದು ಅಗತ್ಯ ಆಗಿದೆ ನಿಮ್ಮ ಪಿ ಎಫ್ ಖಾತೆಯಲ್ಲಿ ನಿಮ್ಮ ಕೆವೈಸಿ ಅಪೂರ್ಣವಾಗಿದ್ದರೆ ಮತ್ತು ನೀವು ಹಿಂಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿದರೆ ಅದನ್ನ ತಿರಸ್ಕರಿಸಲಾಗುತ್ತೆ ಆದ್ದರಿಂದ ಕ್ಲೇಮ್ ಗಾಗಿ ಅರ್ಜಿಯನ್ನು ಸಲ್ಲಿಸುವ ಮೊದಲು ಕೆವೈಸಿ ಯನ್ನ ಅಪ್ಡೇಟ್ ಮಾಡೋದು ಅವಶ್ಯಕ ಆಗಿರುತ್ತೆ. ಇನ್ನು ನಿಮ್ಮ ಆಧಾರ್ ಕಾರ್ಡ್ ಮತ್ತು PF ದಾಖಲೆಗಳಲ್ಲಿ ಕೊಟ್ಟ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ನಿಮ್ಮ ಪಿ ಎಫ್ ಕ್ಲೇಮ್ ಅನ್ನ ತಿರಸ್ಕರಿಸಲಾಗುತ್ತೆ.

ಆದ್ದರಿಂದ ಕ್ಲೇಮ್ ಗಾಗಿ ಅರ್ಜಿಯನ್ನ ಸಲ್ಲಿಸುವ ಮೊದಲು ನಿಮ್ಮ ಹೆಸರನ್ನ ಅಪ್ಡೇಟ್ ಮಾಡಿ.

ನೀವು ಜಂಟಿ ಘೋಷಣೆಯ ಫಾರ್ಮ್ ಅನ್ನ ಭರ್ತಿ ಮಾಡಬೇಕಾಗುತ್ತೆ:

ನೀವು ಇದನ್ನ ಆನ್ಲೈನ್ ಅಲ್ಲಿಯೂ ಕೂಡ ಮಾಡಬಹುದು ಇತ್ತೀಚಿನ ದಿನಗಳಲ್ಲಿ ಕೆವೈಸಿ ಗಾಗಿ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಮೂದಿಸಲಾದ ಜನ್ಮ ದಿನಾಂಕ ಪಿಎಫ್ ಖಾತೆಯೊಂದಿಗೆ ಹೊಂದಿಕೆ ಆಗದಿದ್ದರೂ ಕೂಡ ನಿಮ್ಮ ಕ್ಲೇಮ್ ಅನ್ನ ತಿರಸ್ಕಾರ ಮಾಡಲಾಗುತ್ತೆ. ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ಅಥವಾ ಪಿಎಫ್ ಖಾತೆಯಲ್ಲಿನ ಜನ್ಮ ದಿನಾಂಕ ತಪ್ಪಾಗಿದ್ದರೆ, ಅದನ್ನ ನೀವು ಸರಿಪಡಿಸಿ.

ಇನ್ನು ನೀವು PF ಹಿಂಪಡೆಯುವುದಕ್ಕೆ ಅರ್ಜಿ ಸಲ್ಲಿಸಿದಾಗ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆ ಮತ್ತು ಬ್ಯಾಂಕ್ ನ ಐಎಫ್ಎಸ್ಸಿ ಕೋಡನ್ನ ನೀವು ನಮೂದಿಸಬೇಕಾಗುತ್ತೆ. ನೀವು ಚೆಕ್ ಅಥವಾ ಪಾಸ್ ಬುಕ್ ನ ನಕಲನ್ನ ಸಹ ಇಲ್ಲಿ ಸಲ್ಲಿಸಬೇಕು ಬ್ಯಾಂಕ್ ಖಾತೆಗೆ ವಿವರಗಳನ್ನ ಒದಗಿಸುವಾಗ ಯಾವುದೇ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದರೆ ನಿಮ್ಮ ಕ್ಲೇಮ್ ಅನ್ನ ತಿರಸ್ಕರಿಸಲಾಗುತ್ತೆ. ಅದೇ ರೀತಿ ಕ್ಲೇಮ್ ನೊಂದಿಗೆ ಲಗತಿಸಲಾದ ಚೆಕ್ ನ ಫೋಟೋ ಮಸುಕಾಗಿದ್ದರೆ. ಕ್ಲೇಮ್ ಅನ್ನ ಅನುಮೋದಿಸಲಾಗುತ್ತೆ.

ಇದನ್ನ ತಪ್ಪಿಸುವುದಕ್ಕೆ EPFO ದಾಖಲೆಗಳಲ್ಲಿ ಯಾವಾಗಲೂ ಕೂಡ ಬ್ಯಾಂಕ್ ವಿವರಗಳನ್ನ ಅಪ್ಡೇಟ್ ಮಾಡಿ ಬ್ಯಾಂಕ್ ಖಾತೆಯ ವಿವರಗಳನ್ನ ನಮೂದಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತೆ.

ನೀವು Cheque ಅಥವಾ ಪಾಸ್ ಬುಕ್ ನ ಫೋಟೋವನ್ನ ಅಪ್ಲೋಡ್ ಮಾಡ್ತಾ ಇದ್ರೆ ಅದು ಸ್ಪಷ್ಟವಾಗಿ ಇರಬೇಕು ಇನ್ನು ನೀವು ಇಪಿಎಫ್ ಓ ನಲ್ಲಿ ಜಂಟಿ ಬ್ಯಾಂಕ್ ಖಾತೆಯನ್ನು ಒದಗಿಸಿದರೆ ಮತ್ತು ಅದು ಸಂಗಾತಿಯೊಂದಿಗೆ ಇಲ್ಲದೆ ಇದ್ರೆ ನಿಮ್ಮ ಕ್ಲೇಮ್ ಅನ್ನ ರಿಜೆಕ್ಟ್ ಮಾಡಲಾಗುತ್ತೆ.

ಇಪಿಎಫ್ ಓ ನಿಮ್ಮ ಕ್ಲೇಮ್ ನ ಹಣವನ್ನು ನಿಮ್ಮ ವೈಯಕ್ತಿಕ ಖಾತೆಗೆ ಅಥವಾ ನಿಮ್ಮ ಸಂಗಾತಿಯೊಂದಿಗಿನ ಜಂಟಿ ಖಾತೆಗೆ ಮಾತ್ರ ಗಾಯಿಸುತ್ತೆ ನಿಮ್ಮ ಯುಎನ್ ನಂಬರನ್ನ ಆಧಾರ್ ನೊಂದಿಗೆ ಲಿಂಕ್ ಮಾಡದಿದ್ದರೂ ನಿಮ್ಮ ಕ್ಲೇಮ್ ಅನ್ನ ತಿರಸ್ಕರಿಸಲಾಗುತ್ತೆ ಅನೇಕ ಬಾರಿ ಉದ್ಯೋಗಿ ಸೇರುವ ಮತ್ತು ಬಿಡುವ ದಿನಾಂಕವನ್ನ ಪೋರ್ಟಲ್ ನಲ್ಲಿ ಅಪ್ಡೇಟ್ ಮಾಡಿರಲ್ಲ ಅಥವಾ ಅದು ಸರಿಯಾಗಿರಲ್ಲ ಕೆಲವೊಂದು ಬಾರಿ ಜಾಯಿನಿಂಗ್ ಡೇಟ್ ಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದರೂ ಕೂಡ ನಿಮ್ಮ ಕ್ಲೇಮ್ ತಿರಸ್ಕಾರ ಆಗುತ್ತೆ.

ಅದಕ್ಕೆ ಡೇಟಾ ಮಿಸ್ ಮ್ಯಾಚ್ ಎನ್ನುವ ಕಾರಣವನ್ನ ನೀಡಲಾಗುತ್ತೆ ಹೀಗೆ ಲಾಲ್ ಸಿಂಗ್ ಎದುರಿಸ್ತಾ ಇರುವ ಸಮಸ್ಯೆಗಳನ್ನು ತಪ್ಪಿಸುವುದಕ್ಕೆ ನಿಮ್ಮ ಪಿಎಫ್ ಖಾತೆಯಲ್ಲಿ ಯಾವಾಗಲೂ ಕೂಡ ಆಧಾರ್ ಬ್ಯಾಂಕ್ ಜನ್ಮ ದಿನಾಂಕ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನ ಅಪ್ಡೇಟ್ ಮಾಡಿ ಕೆವೈಸಿ ಅಪೂರ್ಣವಾಗಿದ್ದರೆ ಅದನ್ನ ಪೂರ್ಣಗೊಳಿಸಿ ನಿಮ್ಮ ಕ್ಲೇಮ್ ಪದೇ ಪದೇ ರಿಜೆಕ್ಟ್ ಆಗ್ತಾ ಇದ್ರೆ ನೀವು ನಿಮ್ಮ ಕಂಪನಿಯ ಹೆಚ್ ಆರ್ ಅನ್ನ ಸಂಪರ್ಕಿಸಿ ಆಗ ನೀವು ನಿಮ್ಮ ಸಮಸ್ಯೆಗೆ ಪರಿಹಾರವನ್ನ ಕಂಡುಕೊಳ್ಳಬಹುದು.

ಇದನ್ನೂ ಓದಿ: ಕೊನೆಗೂ 14ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ!!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment