PMFME ಯೋಜನೆ 2026: ಸ್ವಂತ ಉದ್ಯೋಗ ಮಾಡುವವರಿಗೆ ಕೇಂದ್ರ ಸರ್ಕಾರದಿಂದ 10 ಲಕ್ಷದವರೆಗೆ ಆರ್ಥಿಕ ನೆರವು

Belagavi Voice Author
February 23, 2026 8:25 AM
PMFME ಯೋಜನೆ 2026: ಸ್ವಂತ ಉದ್ಯೋಗ ಮಾಡುವವರಿಗೆ ಕೇಂದ್ರ ಸರ್ಕಾರದಿಂದ 10 ಲಕ್ಷದವರೆಗೆ ಆರ್ಥಿಕ ನೆರವು

ನಮಸ್ಕಾರ ಗೆಳೆಯರೇ, ಯಾರಾದರೂ ಸ್ವಂತ ಬಿಸ್ನೆಸ್ ಅನ್ನು ಪ್ರಾರಂಭ ಮಾಡಬೇಕು ಎಂದುಕೊಂಡಿದ್ದೀರ?  ಅಂತವರಿಗೆ ನಮ್ಮ ಕೇಂದ್ರ ಸರ್ಕಾರ ಒಂದು ಒಳ್ಳೆಯ ಯುವಜನಿಯನ್ನು ಜಾರಿಗೆ ತಂದಿದ್ದಾರೆ. 

ಯುವಕರೇ,  ಮಹಿಳೆಯರೇ ಅಥವಾ ರೈತರು ಮನೆಯಲ್ಲಿ ಕುಳಿತುಕೊಂಡು ಸಣ್ಣಪುಟ್ಟ ಬಿಸಿನೆಸ್ ಶುರು ಮಾಡಬೇಕು ಅನ್ಕೊಂಡಿದ್ರೆ,  ಅವರಿಗೆ ಮೊದಲು ಎದುರಾಗುವ ಕಷ್ಟ ಏನೆಂದರೆ ಅದು ಹಣದ ಕೊರತೆ. ಕೊರತೆ ಅಂತ ನಮ್ಮ  ಕೇಂದ್ರ ಸರ್ಕಾರವು (PMFMR ಯೋಜನೆ) ಅಂದರೆ ಪ್ರಧಾನಮಂತ್ರಿ ಫಾರ್ಮಲಸೇಷನ್ ಆಫ್ ಮೈಕ್ರೋ ಫುಡ್ ಪ್ರೋಸೆಸಿಂಗ್ ಯನ್ನು ಜಾರಿಗೆ ತಂದಿದ್ದಾರೆ. 

ಈ ಯೋಜನೆಯಡಿ ನೀವು ಆಹಾರಕ್ಕೆ ಸಂಬಂಧಪಟ್ಟಂತ ಉದ್ಯಮವನ್ನು ಪ್ರಾರಂಭಿಸಿದರೆ,  ನಮ್ಮ ಸರ್ಕಾರವೇ ಆ ಬಿಸಿನೆಸ್ ಗೆ ಶೇಕಡ 35 ರಿಂದ ಹಿಡಿದು 50ರಷ್ಟು ಸಬ್ಸಿಡಿಯನ್ನು ಈ ಯೋಜನೆ ಮೂಲಕ ನೀಡುತ್ತಾರೆ. ಹಾಗಾದರೆ ಇದರಿಂದ ಲಾಭವೇನು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು (How to Apply)? ಈ ಎಲ್ಲಾ ಮಾಹಿತಿಗಳನ್ನು ನಾನು ನಿಮಗೆ ಕೆಳಗೆ ನೀಡಿದ್ದಾನೆ. 

PMFME ಯೋಜನೆಯಿಂದ ನಿಮಗೆ ಸಿಗುವ ಲಾಭಗಳು (Benefits): 

  1.  ಸಬ್ಸಿಡಿ ಬೆನಿಫಿಟ್:  ಹೊಸದಾಗಿ ಬ್ಯುಸಿನೆಸ್ ಅನ್ನು ನೀವು ಶುರು ಮಾಡಿದರೆ ಈ ಯೋಜನೆ ಕಡೆಯಿಂದ ಶೇಕಡ 35 ರಷ್ಟು ಅಂದರೆ ಗರಿಷ್ಠ 10 ಲಕ್ಷ ರೂಪಾಯಿ ವರೆಗೂ  ಹಣವನ್ನು ಕೊಟ್ಟು ಸಹಾಯ ಮಾಡುತ್ತಾರೆ.
  2. ಈ ಯೋಜನೆಯಲ್ಲಿ ಮುಖ್ಯವಾದ ವಿಚಾರ ಏನು ಅಂದರೆ  ಸ್ವಸಹಾಯ ಸಂಘಗಳ (SHGs)  ಗೆ ಸೇರಿದ ಮಹಿಳೆಯರು ಈ ಬಿಸಿನೆಸ್ ನಲ್ಲಿ ಉದ್ಯಮವನ್ನು ಮಾಡಿದರೆ. ಮಹಿಳೆಯರಿಗೆ ಒಟ್ಟು 40,000  ರೂಪಾಯಿಯನ್ನು ಆರಂಭಕ್ಕೆ ಬೇಕಾದ ಬಂಡವಾಳ ಎಂದು ನೀಡುತ್ತಾರೆ.
  3. ಅಷ್ಟೇ ಅಲ್ಲದೆ ನೀವು ತಯಾರಿಸುವ ಪ್ರೊಡಕ್ಟ್ ಗಳನ್ನು ಅದಕ್ಕೆ ಬೇಕಾದ ಪ್ಯಾಕಿಂಗ್ , ಬ್ರಾಂಡಿಂಗ್ ಹಾಗೂ ಮಾರ್ಕೆಟಿಂಗ್ ಮಾಡಲು ಶೇಕಡ 50ರಷ್ಟು ಖರ್ಚನ್ನು ಸರ್ಕಾರವೇ ತಗೊಳ್ಳುತ್ತಾರೆ.

PMFME ಯೋಜನೆಗೆ ಅರ್ಜಿ ಸಲ್ಲಿಸಬಹುದು? (Eligibility Criteria):

  • ಈ ಯೋಜನೆಯ ಅರ್ಜಿ ಸಲ್ಲಿಸಲು ನಿಮ್ಮ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು.
  • ಈ ಯೋಜನೆ ಅಡಿಯಲ್ಲಿ ಬಿಸಿನೆಸ್ ಮಾಡಬೇಕು ಎಂದರೆ ನೀವು ಎಂಟನೇ ತರಗತಿ ಪಾಸ್ ಆಗ್ಲೇಬೇಕು ಇದು ಕಡ್ಡಾಯವಾಗಿದೆ.
  • ಒಂದು ಕುಟುಂಬದಲ್ಲಿ ಗಂಡ ಹೆಂಡತಿ ಮಕ್ಕಳು, ಯಾರಿಗಾದರೂ ಒಬ್ಬರಿಗೆ ಮಾತ್ರ ಈ ಯೋಜನೆ ಅಡಿಯಲ್ಲಿ ಬಿಸಿನೆಸ್ ಮಾಡುವ ಅವಕಾಶ ಇರುತ್ತದೆ.
  • ಹಾಗೂ ನಿಮ್ಮ ಬಿಸಿನೆಸ್ ಗೆ ಬೇಕಾದ ಇನ್ವೆಸ್ಟ್ಮೆಂಟ್ ನಲ್ಲಿ 10% ರಷ್ಟು ಹಣವನ್ನು ನಿಮ್ಮ ಸ್ವಂತ ಕೈಯಿಂದ ಹಾಕಲು  ಸಿದ್ಧರಾಗಿರಬೇಕು,  ಇನ್ನು ಉಳಿದ ಅಮೌಂಟ್ ಬ್ಯಾಂಕ್ ನಿಂದ ಸಾಲವಾಗಿ ನೀಡುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾಗಿರುವ  ಡಾಕ್ಯುಮೆಂಟ್ (Required Documents): 

  • ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಜೆರಾಕ್ಸ್.
  • ನಿಮ್ಮ ರೇಷನ್ ಕಾರ್ಡ್ ಅಥವಾ ವೋಟರ್ ಐಡಿ ಕಡ್ಡಾಯ.
  • ನಿಮ್ಮ ಬ್ಯಾಂಕ್ ಅಕೌಂಟ್ ನ ಹಿಂದಿನ ಆರು ತಿಂಗಳ ಸ್ಟೇಟ್ಮೆಂಟ್ ಜೆರಾಕ್ಸ್ ಇರಬೇಕು.
  • ಎಂಟನೇ ತರಗತಿ ಅಥವಾ ನಿಮ್ಮ ಹಿಯರ್ ಎಜುಕೇಶನ್ ನ ಮಾರ್ಕ್ಸ್ ಕಾರ್ಡ್ ಕಡ್ಡಾಯವಾಗಿದೆ.
  • ಪಾಸ್ಪೋರ್ಟ್  ಸೈನ್ಸ್ ಫೋಟೋ.
  • ನಿಮ್ಮ ಬ್ಯುಸಿನೆಸ್ ಪ್ಲಾನ್ ಏನು ಮಾಡುತ್ತಿದ್ದೀರಾ ಬಗ್ಗೆ ಒಂದು ರಿಪೋರ್ಟ್.

ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು? (How to Apply Online):

  1.  ಮೊದಲು (PMFME)  ಯೋಜನೆಯ ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಿ ಅದರ ಲಿಂಕ್ ಇಲ್ಲಿದೆ  Link- pmfme.mofpi.gov.in
  2. ಆನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ರಿಜಿಸ್ಟರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.
  3. . ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ ಇಮೇಲ್ ಐಡಿ, ಹಾಗೂ ಅದು ಕೇಳುವ ಎಲ್ಲಾ ಡಾಕ್ಯುಮೆಂಟ್ಸ್ಗಳು ಅಲ್ಲಿ ಅಪ್ಲೋಡ್ ಮಾಡಿ.
  4.  ಒಮ್ಮೆ ರಿಜಿಸ್ಟರ್ ಆದಮೇಲೆ ನಿಮ್ಮ ಮೊಬೈಲ್ಗೆ ಒಂದು Login ಪಾಸ್ವರ್ಡ್ ಬರುತ್ತದೆ. ಅದನ್ನು ಬಳಸಿ ನೀವು ಮತ್ತೆ ಲಾಗಿನ್ ಆಗಬೇಕು.
  5. ನಿಮ್ಮ ಡ್ಯಾಶ್ ಬೋರ್ಡ್ ನಲ್ಲಿ ಅಪ್ಲೈ ಆನ್ಲೈನ್ ಎಂಬ ಆಪ್ಷನ್ ಕಾಣಿಸುತ್ತದೆ (Apply Online). ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಬಿಸಿನೆಸ್ ಮಾಡಲು ಬೇಕಾದ ಡಾಕ್ಯುಮೆಂಟ್ಸ್ ಗಳನ್ನು ಕೇಳುತ್ತಾರೆ ಅದನ್ನು ಅಲ್ಲಿ ಅಪ್ಲೋಡ್ ಮಾಡಿ.

ಅರ್ಜಿ ಸಲ್ಲಿಸಿದ ನಂತರ ನಿಮ್ಮ ಜಿಲ್ಲೆಗೆ ಸಂಬಂಧ ಪಟ್ಟ ಮೇಲಧಿಕಾರಿಗಳು ಅದನ್ನು ಒಮ್ಮೆ ಪರಿಶೀಲಿಸುತ್ತಾರೆ.  ಆನಂತರ ನಿಮ್ಮ ಬ್ಯಾಂಕ್ ನಿಂದ ಸಾಲ ಮತ್ತು ಸಬ್ಸಿಡಿ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ.

Read More:

PM Awas Yojana 2.0 Status Check ಆನ್‌ಲೈನ್: ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ತಿಳಿಯುವುದು ಹೇಗೆ? ವಿಧಾನ ಇಲ್ಲಿದೆ

ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಆನ್‌ಲೈನ್ ಅರ್ಜಿ 2026: ಮನೆಯಲ್ಲೇ ಕುಳಿತು ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

belagavivoice - writeups

Satwik M kotian

Satwik M is a final year electronic engineering student from Karnataka with a sharp eye for storytelling. He is dedicated to serving the people of Karnataka by publishing trusted news, verified information, and trending content that truly matters to the local community. His mission is simple — to be a reliable voice that Kannadigas can count on for accurate and relevant updates.

Leave a Comment