SM Krishna Death: ಎಲ್ಲರಿಗೂ ನಮಸ್ಕಾರ, ನಾಳೆ ಸರ್ಕಾರಿ ರಜೆಯನ್ನ ಘೋಷಣೆ ಮಾಡಲಾಗಿದೆ ನಾಳೆ ಬೆಳಗ್ಗೆ 8:00 ಗಂಟೆ ತನಕ ಇಲ್ಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಯನ್ನ ಮಾಡಿಕೊಡಲಾಗುತ್ತೆ. ಅಂತ ಹೇಳ್ತಾ ಇದ್ರು ಡಿಸಿಎಂ ಡಿ ಕೆ ಶಿವಕುಮಾರ್ ಹಾಗೆ ಮದ್ದೂರಿನಲ್ಲಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ ಮೂರು ಗಂಟೆ ತನಕ ಕೂಡ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ ಹಾಗೆ ನಾಳೆ ಸಂಜೆ 4:00 ಗಂಟೆಯ ನಂತರ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆಯನ್ನ ಮಾಡಿಕೊಡುವುದರ ಬಗ್ಗೆ ಕೂಡ ಮಾಹಿತಿಯನ್ನ ಹಂಚಿಕೊಳ್ಳುತ್ತಿದ್ದರು.
ಇದು ಕುಟುಂಬ ಹಾಗೂ ಸರ್ಕಾರದ ವತಿಯಿಂದ ನಾವು ಎಸ್ ಎಂ ಕೃಷ್ಣ ಅವರ ವಿಚಾರದಲ್ಲಿ ಕೈಗೊಳ್ಳುತ್ತಿರುವಂತಹ ಹೆಜ್ಜೆ ಅನ್ನೋದನ್ನ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳ್ತಾ ಇದ್ದಾರೆ ನಾಳೆ ಸರ್ಕಾರಿ ರಜೆಯನ್ನ ಎಸ್ ಎಂ ಕೃಷ್ಣ ಅವರಿಗೆ ಗೌರವವನ್ನ ಸಲ್ಲಿಸುವಂತಹ ಭಾಗವಾಗಿ ಮಾಡಲಾಗ್ತಾ ಇದೆ ಹಾಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್ ಎಂ ಕೃಷ್ಣ ಅವರಿಗೆ ಅಂತಿಮ ವಿಧಾಯವನ್ನು ಕೂಡ ಹೇಳಲಾಗುತ್ತೆ. ಸರ್ಕಾರದ ವತಿಯಿಂದ ಅನ್ನೋದನ್ನ ತಿಳಿಸ್ತಾ ಇದ್ರು ಮೂರು ದಿನಗಳ ಕಾಲ ಶೋಕಾಚರಣೆಗೂ ಕೂಡ ಈಗಾಗಲೇ ಸರ್ಕಾರ ಘೋಷಣೆಯನ್ನ ಮಾಡಿದೆ.
ಇದನ್ನೂ ಓದಿ: Pan Card 2.0 Update.!





