ಎಲ್ಲರಿಗೂ ನಮಸ್ಕಾರ, ಶೇರು, ಮರು ಖರೀದಿ ಆದಾಯಕ್ಕೂ Tax? ನೀವು ಶೇರ್ ಮಾರ್ಕೆಟ್ ಮೇಲೆ ಹೂಡಿಕೆ ಮಾಡುವರಾಗಿದ್ರೆ ಅಥವಾ ಶೇರುಗಳನ್ನ ಖರೀದಿ ಮಾಡುವವರಾಗಿದ್ರೆ ನಿಮಗೆ ಇದೊಂದು ಬಿಗ್ ಅಲರ್ಟ್ ಅಂತಾನೆ ಹೇಳಬಹುದು ಯಾಕೆಂದರೆ ಅಕ್ಟೋಬರ್ 1 ರಿಂದ ಶೇರ್ ಮಾರುಕಟ್ಟೆಗೆ ಸಂಬಂಧಪಟ್ಟಂತೆ ತೆರಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಬಂದಿದೆ.
ಏನಪ್ಪಾ ಅಂದ್ರೆ ಕೇಂದ್ರ ಸರ್ಕಾರ ಶೇರುಗಳ ಬೈ ಬ್ಯಾಕ್ ಮೇಲೆ ವಿಧಿಸುವಂತಹ ತೆರಿಗೆ ವಿಧಾನದಲ್ಲಿ ಬದಲಾವಣೆ ತಂದಿದೆ ಹಾಗಿದ್ರೆ ಏನಿದು ಹೊಸ ನಿಯಮ ಇದು ಶೇರುದಾರರ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತೆ? ಶೇರು ಖರೀದಿಸದವರ ಮೇಲೆ ಹೇಗೆ ಪರಿಣಾಮ ಬೀರುತ್ತೆ? ಈ ಎಲ್ಲಾ ವಿವರ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ.
ಇತ್ತೀಚಿಗೆ ಶೇರುಗಳ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಹಾಗೇನೇ ಕೇಂದ್ರ ಸರ್ಕಾರ ಶೇರ್ ಮಾರುಕಟ್ಟೆಗೆ ಸಂಬಂಧಪಟ್ಟಂತಹ ನಿಯಮಗಳಲ್ಲಿ ಆಗಾಗೆ ಬದಲಾವಣೆಗಳನ್ನು ತರ್ತಾನೆ ಇದೆ ಈಗಲೂ ಕೂಡ ಇಂತಹದೊಂದು ಮಹತ್ವದ ಬದಲಾವಣೆಯನ್ನು ತಂದಿದೆ.
ಈ ಶೇರುಗಳ ಬೈ ಬ್ಯಾಕ್ ಆದಾಯದ ಮೇಲೆ Tax
ಈ ತೆರಿಗೆಯ ನಿಯಮಗಳಲ್ಲಿ ಈಗ ಬದಲಾವಣೆಯನ್ನು ತಂದಿದೆ ಇಷ್ಟು ದಿನ ತೆರಿಗೆಯನ್ನ ಈ ಬೈ ಬ್ಯಾಕ್ ನಿಂದ ಬಂದಂತಹ ಆದಾಯಕ್ಕೆ ತೆರಿಗೆಯನ್ನ ಕಂಪನಿಗಳೇ ಪಾವತಿ ಮಾಡ್ತಾ ಇದ್ವು ಆದರೆ ಈಗ ಶೇರುದಾರರೇ ತೆರಿಗೆಯನ್ನ ಪಾವತಿ ಮಾಡಬೇಕಾಗಿದೆ ಹಾಗಿದ್ರೆ ಹೊಸ ತೆರಿಗೆ ಪದ್ಧತಿ ಪದ್ಧತಿ ಶೇರುದಾರರ ಮೇಲೆ ಹೇಗೆ ಪರಿಣಾಮ ಬೀರುತ್ತೆ.
ಇದು ಹೊಸ ತೆರಿಗೆ ಪದ್ಧತಿಯಿಂದ ಶೇರುದಾರರಿಗೆ ತೆರಿಗೆಯ ಹೊರೆ ಹೆಚ್ಚಾಗುತ್ತೆ ಹೇಗಪ್ಪಾ ಅಂದ್ರೆ ನೀವು 100 ರೂಪಾಯಿ ಕೊಟ್ಟು ಒಂದು ಶೇರನ್ನ ಖರೀದಿ ಮಾಡಿರ್ತೀರಾ ಅದೇ ಶೇರನ್ನ ಸ್ವಲ್ಪ ದಿನದ ನಂತರ ಕಂಪನಿ ಮತ್ತೆ ಬೈ ಬ್ಯಾಕ್ ಮಾಡುತ್ತೆ 150 ರೂಪಾಯಿಗೆ ಬೈ ಬ್ಯಾಕ್ ಮಾಡುತ್ತೆ ಅಂತ ಇಟ್ಕೊಳ್ಳೋಣ ಆಗ ನಿಮಗೆ 50 ರೂಪಾಯಿ ಲಾಭ ಬರುತ್ತೆ. ಈ ಮೊದಲು ಇದ್ದಂತಹ ನಿಯಮದ ಪ್ರಕಾರ 50 ರೂಪಾಯಿಗೆ ಶೇಕಡಾ 20 ರಷ್ಟು ತೆರಿಗೆಯನ್ನ ಕಂಪನಿನೇ ಪಾವತಿ ಮಾಡ್ತಾ ಇತ್ತು ಆದರೆ ಅಕ್ಟೋಬರ್ 1 ರಿಂದ ಆ ನಿಯಮ ಬದಲಾಗಿದ್ದು.
ಈ 50 ರೂಪಾಯಿ ಲಾಭಕ್ಕೆ ಶೇರುದಾರರೇ ತೆರಿಗೆಯನ್ನ ಪಾವತಿ ಮಾಡಬೇಕು.
ಶೇರುದಾರರು ಎಷ್ಟು ಪಾವತಿ ಮಾಡಬೇಕು
ನೀವು ಯಾವ ತೆರಿಗೆ ಸ್ಲ್ಯಾಬ್ ಗೆ ಒಳಪಡುತ್ತಿರೋ ಆ ತೆರಿಗೆ ಸ್ಲ್ಯಾಬ್ ಗೆ ಆಧಾರವಾಗಿ ನೀವು ತೆರಿಗೆಯನ್ನ ಪಾವತಿ ಮಾಡಬೇಕು ಇದರಿಂದ ಏನಾಗುತ್ತೆ ಶೇರುದಾರರಿಗೆ ತೆರಿಗೆ ಹೊರೆ ಹೆಚ್ಚಾಗುತ್ತೆ ಶೇರುದಾರರ ಮೇಲೆ ಏನೆಲ್ಲಾ ಪರಿಣಾಮ?
ಹೀಗಾಗಿ ಶೇರು ಬೈ ಬ್ಯಾಕ್ ಗೆ ಶೇರುದಾರರು ಒಪ್ಪದೆ ಇರುವಂತಹ ಸಾಧ್ಯತೆ ಹೆಚ್ಚಿದೆ ಅಂತಾನೆ ಹೇಳಬಹುದು 2020 ಇದೇ ರೀತಿ ಡಿವಿಡೆಂಡ್ ಮೇಲಿನ ತೆರಿಗೆ ನಿಯಮದಲ್ಲೂ ಕೂಡ ಕೇಂದ್ರ ಸರ್ಕಾರ ಬದಲಾವಣೆ ಮಾಡಿತ್ತು 2020ಕ್ಕೂ ಮುಂಚೆ ಡಿವಿಡೆಂಡ್ ಪಾವತಿಯನ್ನ ಮಾಡುತ್ತಲ್ಲ ಕಂಪನಿಗಳು ಆಗಾಗೆ ಲಾಭಾಂಶವನ್ನ ಪಾವತಿ ಮಾಡುತ್ತೆ ಶೇರುದಾರಿಗೆ ಈ ಲಾಭಾಂಶಕ್ಕೂ ಕೂಡ 2020ಕ್ಕಿಂತ ಮುಂಚೆ ಕಂಪನಿಗಳೇ ತೆರಿಗೆಯನ್ನ ಪಾವತಿ ಮಾಡ್ತಾ ಇದ್ವು ಆದರೆ 2020ರ ನಂತರ ಈ ಲಾಭಾಂಶದ ಪಾವತಿ ಮೇಲು ಕೂಡ ಶೇರುದಾರರೇ ತೆರಿಗೆ ಪಾವತಿ ಮಾಡುವಂತದ್ದು ಅದೇ ರೀತಿ ಲಾಭಾಂಶ ನೀಡೋದನ್ನ ಸೀಮಿತಗೊಳಿಸುತ್ತಾ ಬಂದ್ವು ಶೇರು ಬೈ ಬ್ಯಾಕ್ ಮಾಡೋದನ್ನ ಹೆಚ್ಚಿಸಿಕೊಳ್ಳುತ್ತಾ ಬಂದ್ವು ಇದನ್ನ ಮನಗಂಡಂತಹ ಸರ್ಕಾರ ಈಗ ಶೇರ್ ಬೈ ಬ್ಯಾಕ್ ಮೇಲು ಕೂಡ ತೆರಿಗೆ ವಿಧಾನವನ್ನ ಬದಲಾವಣೆ ಮಾಡಿದೆ.
ಕೇಂದ್ರ ಬಜೆಟ್ ನಲ್ಲಿ ಈ ನಿಯಮವನ್ನ ಪ್ರಸ್ತಾಪಿಸಲಾಗಿತ್ತು
ಈ ಒಂದು ಆ ಹೊಸ ತೆರಿಗೆ ಪದ್ಧತಿಯನ್ನ Budget ನಲ್ಲೇ ಪ್ರಸ್ತಾಪ ಮಾಡಲಾಗಿತ್ತು ಈ ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ಮಂಡನೆ ಮಾಡಿದಂತಹ ಬಜೆಟ್ ನಲ್ಲೇನೆ ಈ ಒಂದು ಹೊಸ ತೆರಿಗೆ ಪದ್ಧತಿ ಶೇರ್ ಮಾರುಕಟ್ಟೆಗೆ ಸಂಬಂಧಪಟ್ಟ ಹೊಸ ತೆರಿಗೆ ಪದ್ಧತಿಯನ್ನ ಪ್ರಸ್ತಾಪ ಮಾಡಿತ್ತು ಅಲ್ಲಿ ಪ್ರಸ್ತಾಪ ಮಾಡಿದಂತೆ.
ಈಗ ಅಕ್ಟೋಬರ್ 1 ರಿಂದ ಹೊಸ ತೆರಿಗೆ ಪದ್ಧತಿ ಜಾರಿಯಾಗ್ತಾ ಇದೆ ನೀವು ಕೂಡ ಶೇರ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಾಗಿದ್ರೆ ನೀವು ಕೂಡ ಶೇರನ್ನ ಖರೀದಿ ಮಾಡುವವರಾಗಿದ್ರೆ ಈ ಒಂದು ವಿಚಾರ ನಿಮಗೆ ತಿಳಿದಿರಲೇ ಬೇಕಾಗುತ್ತೆ ಈ ಎಲ್ಲವನ್ನು ತಿಳಿದು ನೀವು ಶೇರ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕಾಗುತ್ತೆ.
ಇದನ್ನೂ ಓದಿ: ಈ 5 ಕಾರಣಗಳಿಂದ ಭಾರತದ ಷೇರು ಮಾರ್ಕೆಟ್ ಕೆಳಗೆ ಬಿದ್ದಿದೆ





