Yeshasvini Card: ₹5 ಲಕ್ಷದ ಉಚಿತ ಚಿಕಿತ್ಸೆ, ಅರ್ಜಿ ಸಲ್ಲಿಕೆಗೆ ಮಾ. 31 ಕೊನೆ ದಿನ! ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

Belagavi Voice Author
March 12, 2026 3:39 PM
Yeshasvini Card: ₹5 ಲಕ್ಷದ ಉಚಿತ ಚಿಕಿತ್ಸೆ, ಅರ್ಜಿ ಸಲ್ಲಿಕೆಗೆ ಮಾ. 31 ಕೊನೆ ದಿನ! ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

ರಾಜ್ಯದ ಲಕ್ಷಾಂತರ ಸಹಕಾರಿ ಸದಸ್ಯರಿಗೆ ನೆರವಾಗಲಿರುವ ಯಶಸ್ವಿನಿ ಆರೋಗ್ಯ ಯೋಜನೆಯನ್ನು 2025-26ನೇ ಸಾಲಿಗೂ ಮುಂದುವರಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ.

ಈ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ಗರಿಷ್ಠ 5 ಲಕ್ಷ ರೂಪಾಯಿ ನಗದು ರಹಿತ ಚಿಕಿತ್ಸೆ ಉಚಿತವಾಗಿ ಲಭ್ಯವಾಗಲಿದೆ. ಹೊಸ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ.

2025-26ನೇ ಸಾಲಿಗೂ ಈ ಯೋಜನೆಯನ್ನು ಮುಂದುವರಿಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಹೊಸ ನೋಂದಣಿ ಕೂಡ ಶುರುವಾಗಿದೆ.

ಯಾರಿಗೆಲ್ಲ ಈ ಸೌಲಭ್ಯ ಸಿಗುತ್ತೆ, ಹೇಗೆ ಅಪ್ಲೈ ಮಾಡೋದು, ಏನೆಲ್ಲಾ ದಾಖಲೆಗಳು ಬೇಕು ಅನ್ನೋದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮಿಸ್ ಮಾಡದೆ ಓದಿ!

Table of Contents

Yeshasvini ಆರೋಗ್ಯ ಯೋಜನೆ ಅಂದ್ರೆ ಏನು?

ಸ್ನೇಹಿತರೆ, ಯಶಸ್ವಿನಿ ಯೋಜನೆ ಅನ್ನೋದು ಸಾಮಾನ್ಯ ಇನ್ಶೂರೆನ್ಸ್ ಪ್ಲಾನ್ ತರ ಅಲ್ಲ.

ಇದು ಸಹಕಾರಿ ಸಂಘಗಳ ಸದಸ್ಯರಿಗೋಸ್ಕರ ಸರ್ಕಾರ ಜಾರಿಗೊಳಿಸಿರುವ ಒಂದು ಸ್ವಯಂ ನಿಧಿ ಯೋಜನೆ.

ಸದಸ್ಯರು ನೀಡುವ ಕಾಂಟ್ರಿಬ್ಯೂಷನ್ ಮತ್ತು ಸರ್ಕಾರದ ಅನುದಾನದಿಂದ ಈ ಯೋಜನೆ ನಡೆಯುತ್ತೆ.

ಒಂದು ಬಾರಿ ನಿಗದಿತ ಶುಲ್ಕ ಪಾವತಿಸಿ ಸದಸ್ಯರಾದ್ರೆ, ವರ್ಷಪೂರ್ತಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್ ಟ್ರೀಟ್‌ಮೆಂಟ್‌ ಸಿಗುತ್ತೆ.

ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಆಸರೆ ಆಗಿದೆ.

Yeshasvini Card ಎಲ್ಲಿ ಮಾಡಿಕೊಡಲಾಗುತ್ತದೆ:

ಯಶಸ್ವಿನಿ ಕಾರ್ಡ್ ಇದು ಏನಿದೆ ಇದನ್ನು ಹಳ್ಳಿಗಳಲ್ಲಿ ಹಾಗೂ ಸಹಕಾರಿ ಸಂಘಗಳಲ್ಲಿ ಇದನ್ನು ಮಾಡಿಕೊಡಲಾಗುತ್ತದೆ. 

ಹಾಲು ಉತ್ಪಾದಕ ಸಂಘಗ ಮತ್ತು ಸಹಕಾರಿ ಸಂಘ,  ಎಲ್ಲಾ ಸದಸ್ಯರಿಗೆ ಇದು ಉಪಯೋಗವಾಗುತ್ತದೆ.

ಸಿಟಿಗಳಲ್ಲಿ ನೀವು

  • ಕೋ ಆಪರೇಟಿವ್
  • Society

ಮೆಂಬರ್ ಆಗಿದ್ದರೆ ಅಂಥವರಿಗೂ ಕೂಡ ಯಶಸ್ವಿನಿ ಕಾರ್ಡ್ ಸೌಲಭ್ಯ ಇರುತ್ತದೆ.

ಯಾರಿಗೆಲ್ಲ ಈ ಯೋಜನೆ ಅನ್ವಯ? ಹೊಸ ರೂಲ್ಸ್ ಏನು?

ಈ ಯೋಜನೆಯ ಲಾಭ ಸಹಕಾರಿ ಸಂಘಗಳ ಸದಸ್ಯರಿಗೆ ಸಿಗುತ್ತೆ.

ಅಂದ್ರೆ

  • ರೈತರು
  • ಮೀನುಗಾರರು
  • ನೇಕಾರರು

ಹೀಗೆ ಬೇರೆ ಬೇರೆ ಸಹಕಾರಿ ಸಂಘಗಳ ಸದಸ್ಯರು ಅರ್ಜಿ ಸಲ್ಲಿಸಬಹುದು.

ಕನಿಷ್ಠ ಮೂರು ತಿಂಗಳಿಂದ ಸಹಕಾರಿ ಸಂಘದ ಆಕ್ಟಿವ್ ಸದಸ್ಯರಾಗಿರೋದು ಕಡ್ಡಾಯ.

ಈ ವರ್ಷದ ದೊಡ್ಡ ಅಪ್ಡೇಟ್ ಅಂದ್ರೆ, ಹುಟ್ಟಿದ ಮಗು ಕೂಡ ತಾಯಿಯ ಯಶಸ್ವಿನಿ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆಯನ್ನ ಪಡೆಯಬಹುದು.

ಇದು ಹೊಸದಾಗಿ ಮಕ್ಕಳಿಗೆ ಜನ್ಮ ನೀಡಿದವರಿಗು ಕೂಡ ನಿಜಕ್ಕೂ ಖುಷಿ ಕೊಡೋ ಸುದ್ದಿ.

ಚಿಕಿತ್ಸಾ ವೆಚ್ಚದ ಮಿತಿ ಮತ್ತು Yeshasvini Card Benefits

ಪ್ರತಿ ಕುಟುಂಬಕ್ಕೆ ವಾರ್ಷಿಕ ಗರಿಷ್ಠ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು.

ಈ ಸೌಲಭ್ಯ ಪಡೆಯೋಕೆ ಸಹಕಾರಿ ಸಂಘದ ಸದಸ್ಯತ್ವ ಕಡ್ಡಾಯ.

ಸಹಕಾರಿ ಸಂಘಗಳ ನೌಕರರಿಗೆ ಕೆಲವು ನಿಯಮಗಳಿವೆ:

ಅವರು ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು, ಹಾಗೂ ಅವರ ಮಾಸಿಕ ವೇತನ 30,000 ರೂಪಾಯಿ ಮೀರಿರಬಾರದು.

30,000 ಕ್ಕಿಂತ ಹೆಚ್ಚು ಸಂಬಳ ಪಡೆಯುವ ಸಹಕಾರಿ ನೌಕರರಿಗೆ ಯಶಸ್ವಿನಿ ಯೋಜನೆ ಅನ್ವಯ ಆಗೋದಿಲ್ಲ, ಇದನ್ನು ನೆನಪಿನಲ್ಲಿಡಿ.

ಚಿಕಿತ್ಸೆಗಳು ಮತ್ತು Hospitals ಕವರೇಜ್ ವಿವರ

ಚಿಕಿತ್ಸೆಗಳ ಸಂಖ್ಯೆ: ಯಶಸ್ವಿನಿ ಯೋಜನೆಯಡಿ ಒಟ್ಟು 2128 ವಿವಿಧ ರೀತಿಯ ಚಿಕಿತ್ಸೆಗಳು ಲಭ್ಯವಿವೆ.

ಐಸಿಯು ಸೌಲಭ್ಯ: ಲಭ್ಯವಿರುವ ಚಿಕಿತ್ಸೆಗಳಲ್ಲಿ 478 ಐಸಿಯು (ICU) ಚಿಕಿತ್ಸೆಗಳೂ ಸೇರಿವೆ.

ವಾರ್ಡ್ ಸೌಲಭ್ಯ: ಫಲಾನುಭವಿಗಳಿಗೆ ಜನರಲ್ ವಾರ್ಡ್‌ನಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಹೆಚ್ಚುವರಿ ವೆಚ್ಚ: ಸೆಮಿ-ಸ್ಪೆಷಲ್ ಅಥವಾ ಸ್ಪೆಷಲ್ ವಾರ್ಡ್ ಸೌಲಭ್ಯ ಬೇಕಿದ್ದಲ್ಲಿ, ಅದರ ಹೆಚ್ಚುವರಿ ವೆಚ್ಚವನ್ನು ಫಲಾನುಭವಿಗಳೇ ಪಾವತಿಸಬೇಕು.

ಮಾಹಿತಿ ಪಡೆಯುವ ಮೂಲ: ಚಿಕಿತ್ಸೆಗಳ ಪಟ್ಟಿ ಮತ್ತು ಆಸ್ಪತ್ರೆಗಳ ವಿವರಗಳಿಗಾಗಿ ‘ಸಹಕಾರ ಸಿಂಧು’ ಪೋರ್ಟಲ್ ಅಥವಾ ಯಶಸ್ವಿನಿ ಟ್ರಸ್ಟ್ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.

Yeshasvini ಯೋಜನೆ ಅರ್ಹತೆಗಳು ಮತ್ತು ದಾಖಲೆಗಳು

ಕುಟುಂಬದ ಸದಸ್ಯರು: ಕುಟುಂಬದ ಮುಖ್ಯ ಅರ್ಜಿದಾರರು, ಅವರ ತಂದೆ, ತಾಯಿ, ಪತಿ/ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳು ಒಂದೇ ಕಾರ್ಡ್ ಅಡಿಯಲ್ಲಿ ಲಾಭ ಪಡೆಯಬಹುದು.

ಸದಸ್ಯತ್ವದ ಅವಧಿ: ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಕನಿಷ್ಠ ಮೂರು ತಿಂಗಳಿಂದ ಸಹಕಾರಿ ಸಂಘದ ಸದಸ್ಯರಾಗಿರುವುದು ಕಡ್ಡಾಯ.

ದಾಖಲೆಗಳ ಹೊಂದಾಣಿಕೆ: ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಮಾಹಿತಿ ಸರಿಯಾಗಿ ಹೊಂದಾಣಿಕೆ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.

ಸದಸ್ಯತ್ವದ ಸ್ಥಿತಿ: ನಿಮ್ಮ ಸಹಕಾರಿ ಸದಸ್ಯತ್ವವು ಆಕ್ಟಿವ್ (Active) ಆಗಿರುವುದು ಅತ್ಯಂತ ಮುಖ್ಯವಾಗಿದೆ.

ತಾಂತ್ರಿಕ ತೊಂದರೆ ನಿವಾರಣೆ: ಮಾಹಿತಿ ಸರಿಯಾಗಿದ್ದರೆ ಆಸ್ಪತ್ರೆಗೆ ದಾಖಲಾದಾಗ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಎದುರಾಗುವುದಿಲ್ಲ.

ಯಶಸ್ವಿನಿ ಕಾರ್ಡ್ ವಂತಿಗೆ ಶುಲ್ಕ 2026 ಗ್ರಾಮೀಣ vs ನಗರ ಪ್ರದೇಶ

ಗ್ರಾಮೀಣ ಪ್ರದೇಶ (Rural Area): ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹500 ವಂತಿಗೆ ಇರುತ್ತದೆ.

ಗ್ರಾಮೀಣ ಹೆಚ್ಚುವರಿ ಸದಸ್ಯರು: ನಾಲ್ವರಿಗಿಂತ ಹೆಚ್ಚಿನ ಪ್ರತಿ ಸದಸ್ಯರಿಗೆ ತಲಾ ₹100 ಹೆಚ್ಚುವರಿ ಹಣ ಪಾವತಿಸಬೇಕು.

ನಗರ ಪ್ರದೇಶ (Urban Area): ನಾಲ್ವರು ಸದಸ್ಯರ ಕುಟುಂಬಕ್ಕೆ ವಾರ್ಷಿಕ ₹1000 ವಂತಿಗೆ ನಿಗದಿಪಡಿಸಲಾಗಿದೆ.

ನಗರ ಹೆಚ್ಚುವರಿ ಸದಸ್ಯರು: ನಾಲ್ವರಿಗಿಂತ ಹೆಚ್ಚಿನ ಪ್ರತಿ ಸದಸ್ಯರಿಗೆ ತಲಾ ₹200 ಹೆಚ್ಚುವರಿ ಶುಲ್ಕವಿರುತ್ತದೆ.

SC/ST ಸಮುದಾಯ: ಈ ಸಮುದಾಯದ ಸದಸ್ಯರ ವಂತಿಕೆಯನ್ನು ಸರ್ಕಾರವೇ ಭರಿಸುವುದರಿಂದ, ಅವರು ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ.

ಯಶಸ್ವಿನಿ ಯೋಜನೆ ಅಪ್ಲೈ ಮಾಡಲು ಮುಖ್ಯ ದಿನಾಂಕಗಳು

ವಿವರ (Details)ದಿನಾಂಕ / ಮಾಹಿತಿ (Dates & Info)
ನೋಂದಣಿ ಆರಂಭ (Starting Date)ಜನವರಿ 3, 2026
ಅರ್ಜಿ ಸಲ್ಲಿಸಲು ಕೊನೆಯ ದಿನ (Last Date)ಮಾರ್ಚ್ 31, 2026
ಚಿಕಿತ್ಸಾ ಸೌಲಭ್ಯದ ಅವಧಿ (Benefit Period)ಏಪ್ರಿಲ್ 1, 2026 ರಿಂದ ಮಾರ್ಚ್ 31, 2027 ರವರೆಗೆ
ನೋಂದಣಿ ಮಾಡುವ ಸ್ಥಳ (Where to Apply)ನಿಮ್ಮ ಹತ್ತಿರದ ಸಹಕಾರಿ ಸಂಘಗಳು

 ಅರ್ಜಿ ಸಲ್ಲಿಸುವಾಗ ಸುಳ್ಳು ಮಾಹಿತಿ ನೀಡಿದರೆ ಎಚ್ಚರಿಕೆ!

ಯೋಜನೆಗೆ ನೋಂದಾಯಿಸುವಾಗ ಯಾವುದೇ ಸುಳ್ಳು ಮಾಹಿತಿ ನೀಡಿದರೆ ಅಥವಾ ಅರ್ಹತೆ ಇಲ್ಲದೆ ಕಾರ್ಡ್ ಮಾಡಿಸಿಕೊಂಡರೆ ಸದಸ್ಯತ್ವ ರದ್ದಾಗುತ್ತೆ.

ಜೊತೆಗೆ, ನೀವು ಪಾವತಿಸಿದ ಹಣವನ್ನ ಜಪ್ತಿ ಮಾಡಲಾಗುತ್ತೆ ಅಂತ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಹಾಗಾಗಿ, ಅರ್ಹ ಫಲಾನುಭವಿಗಳು ಮಾತ್ರ, ತಮ್ಮ ಆಧಾರ್ ಕಾರ್ಡ್ ಮತ್ತು ಸಕ್ರಿಯ ಮೊಬೈಲ್ ಸಂಖ್ಯೆಯೊಂದಿಗೆ ಸರಿಯಾದ ಮಾಹಿತಿಯನ್ನ ನೀಡಿ ನೋಂದಣಿಯನ್ನ ಮಾಡಿಸಿಕೊಳ್ಳಿ.

ಯಾವುದೇ ಕಾರಣಕ್ಕೂ ಸುಳ್ಳು ಮಾಹಿತಿ ನೀಡಬೇಡಿ.

ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

ಏಪ್ರಿಲ್ 1, 2026 ರಿಂದ ಪ್ಲಾಸ್ಟಿಕ್ ಯಶಸ್ವಿನಿ ಕಾರ್ಡ್ ವಿತರಣೆ ಶುರುವಾಗುತ್ತೆ.

ಇದು ನಿಮ್ಮ ಆಧಾರ್ ಕಾರ್ಡ್ ತರಾನೇ ಯೂನಿಕ್ ಐಡಿ ಹೊಂದಿರುತ್ತೆ.

ಒಂದು ವೇಳೆ ಕಾರ್ಡ್ ಕಳೆದುಹೋದ್ರೆ, 250 ರೂಪಾಯಿ ಶುಲ್ಕ ಪಾವತಿಸಿ ಡೂಪ್ಲಿಕೇಟ್ ಕಾರ್ಡ್ ಪಡಿಬಹುದು.

ತುರ್ತು ಸಂದರ್ಭಗಳಲ್ಲಿ ಕಾರ್ಡ್ ಇಲ್ಲದಿದ್ದರೂ ಸಹಕಾರಿ ಸಂಘದ ದಾಖಲೆಗಳ ಆಧಾರದ ಮೇಲೆ ಟೆಂಪರರಿ ಇ-ಕಾರ್ಡ್ ಪಡೆದು ಚಿಕಿತ್ಸೆ ಪಡೆಯಲು ಅವಕಾಶ ಇದೆ.

ಇದು ಕೇವಲ ಎಮರ್ಜೆನ್ಸಿ ಪರಿಸ್ಥಿತಿಯಲ್ಲಿ ಮಾತ್ರ ಅನ್ವಯ ಆಗುತ್ತೆ.

FAQ

1. ಯಶಸ್ವಿನಿ ಯೋಜನೆಯಡಿ ಎಷ್ಟು ಮೊತ್ತದ ಚಿಕಿತ್ಸೆ ಸಿಗುತ್ತದೆ?

ಈ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕವಾಗಿ ಗರಿಷ್ಠ ₹5 ಲಕ್ಷದವರೆಗೆ ನಗದು ರಹಿತ (Cashless) ಚಿಕಿತ್ಸೆ ಉಚಿತವಾಗಿ ಲಭ್ಯವಿರುತ್ತದೆ.

2. Yeshasvini Card ನೋಂದಣಿಗೆ ಕೊನೆಯ ದಿನಾಂಕ ಯಾವುದು?

ಯಶಸ್ವಿನಿ ಕಾರ್ಡ್ ಪಡೆಯಲು ಅಥವಾ ನವೀಕರಿಸಲು ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ.

3. ನವಜಾತ ಶಿಶುಗಳಿಗೆ ಈ ಯೋಜನೆಯ ಲಾಭ ಸಿಗುತ್ತದೆಯೇ?

ಹೌದು, ತಾಯಿಯ ಯಶಸ್ವಿನಿ ಕಾರ್ಡ್ ಆಧಾರದ ಮೇಲೆ ನವಜಾತ ಶಿಶುಗಳಿಗೂ ಚಿಕಿತ್ಸೆ ಪಡೆಯುವ ಹೊಸ ಅವಕಾಶ ಕಲ್ಪಿಸಲಾಗಿದೆ.

4. ಯಶಸ್ವಿನಿ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

ಕಾರ್ಡ್ ಕಳೆದುಹೋದರೆ ₹250 ಶುಲ್ಕ ಪಾವತಿಸಿ ನೀವು ಡ್ಯೂಪ್ಲಿಕೇಟ್ ಯಶಸ್ವಿನಿ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

5. ಎಷ್ಟು ವಿಧದ ಚಿಕಿತ್ಸೆಗಳು ಈ ಯೋಜನೆಯಲ್ಲಿ ಲಭ್ಯವಿವೆ?

ಒಟ್ಟು 2128 ವಿವಿಧ ಚಿಕಿತ್ಸೆಗಳು ಲಭ್ಯವಿದ್ದು, ಇದರಲ್ಲಿ 478 ಐಸಿಯು (ICU) ಚಿಕಿತ್ಸೆಗಳು ಸೇರಿವೆ.

6. ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು?

ಸಹಕಾರಿ ಸಂಘಗಳಲ್ಲಿ ಕನಿಷ್ಠ 3 ತಿಂಗಳ ಸದಸ್ಯತ್ವ ಹೊಂದಿರುವ ರೈತರು, ಮೀನುಗಾರರು, ನೇಕಾರರು ಮತ್ತು ಸಹಕಾರಿ ಸಂಘಗಳ ಸದಸ್ಯರು ಅರ್ಹರು.

7. ಎಸ್‌ಸಿ/ಎಸ್‌ಟಿ (SC/ST) ಸಮುದಾಯದವರಿಗೆ ವಂತಿಗೆ ಶುಲ್ಕ ಎಷ್ಟು?

SC/ST ಸಮುದಾಯದ ಸದಸ್ಯರ ವಂತಿಗೆಯನ್ನು ಸರ್ಕಾರವೇ ಭರಿಸುವುದರಿಂದ, ಅವರು ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ.

8. ಯಾವ ವಾರ್ಡ್‌ನಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ?

ಫಲಾನುಭವಿಗಳಿಗೆ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತ. ಸ್ಪೆಷಲ್ ವಾರ್ಡ್ ಬಯಸಿದರೆ ಹೆಚ್ಚುವರಿ ವೆಚ್ಚವನ್ನು ಫಲಾನುಭವಿಯೇ ಭರಿಸಬೇಕು.

9. ಚಿಕಿತ್ಸಾ ಸೌಲಭ್ಯದ ಅವಧಿ (Benefit Period) ಯಾವಾಗ ಇರುತ್ತದೆ?

ನೋಂದಾಯಿತ ಸದಸ್ಯರಿಗೆ ಏಪ್ರಿಲ್ 1, 2026 ರಿಂದ ಮಾರ್ಚ್ 31, 2027 ರವರೆಗೆ ಚಿಕಿತ್ಸಾ ಸೌಲಭ್ಯ ಲಭ್ಯವಿರುತ್ತದೆ.

10. ಸಹಕಾರಿ ಸಂಘಗಳ ನೌಕರರಿಗೆ ಇರುವ ಮಾನದಂಡವೇನು?

ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು ಮತ್ತು ಮಾಸಿಕ ವೇತನ ₹30,000 ಕ್ಕಿಂತ ಕಡಿಮೆ ಇರಬೇಕು.

Read More:

Aadhaar Update 2026: ದಾಖಲೆ ಇಲ್ಲದಿದ್ದರೂ Aadhaar Address ಬದಲಾವಣೆ ಸುಲಭ! ಇಲ್ಲಿದೆ ಡೈರೆಕ್ಟ್ ಲಿಂಕ್

ಹೊಸ PF UAN ಪೋರ್ಟಲ್: PF UAN ಪೋರ್ಟಲ್‌ನಲ್ಲಿ ಭಾರೀ ಬದಲಾವಣೆ! ನಾಮಿನಿ ಕಡ್ಡಾಯ ಸಂಪೂರ್ಣ ಮಾರ್ಗದರ್ಶಿ 2026

belagavivoice - writeups

Pavan CS

Pavan CS is a final year Robotics Engineering student with a passion for writing. He contributes to the blog with a focus on Education and Government Schemes, helping Karnataka people stay informed about opportunities that matter to them

Leave a Comment