ಹಲೋ ಸ್ನೇಹಿತರೆ, ಇತ್ತೀಚೆಗೆ ಸೆಕೆಂಡ್ ಪಿಯುಸಿ ರಿಸಲ್ಟ್ ಬಂದಿದೆ ಅಲ್ವಾ? ಈಗ ಎಲ್ಲರೂ ‘ಮುಂದೇನು ಮಾಡ್ತೀಯಾ’ ಅಂತ ಕೇಳ್ತಾ ಇರಬಹುದು.
ಇಂಜಿನಿಯರಿಂಗ್, ಮೆಡಿಕಲ್ ಅಥವಾ ಕಾಮನ್ ಡಿಗ್ರಿ ಅಂತ ಆಪ್ಷನ್ ಹೇಳ್ತಾರೆ. ಆದ್ರೆ ಎಲ್ಲರಿಗೂ ಕಾಲೇಜ್ ಹೋಗೋ ಪರಿಸ್ಥಿತಿ ಇರಲ್ಲ, ಕೆಲವು ಸಲ ಮನೆಯ ಜವಾಬ್ದಾರಿ ಅಥವಾ ಆರ್ಥಿಕ ಸಂಕಷ್ಟ ಇರುತ್ತೆ.
ಬೇಗ ಕೆಲಸಕ್ಕೆ ಸೇರಿ ಅಪ್ಪ-ಅಮ್ಮನಿಗೆ ಹೆಗಲಾಗ್ಬೇಕು ಅಂತ ಹಲವರಿಗೆ ಆಸೆ.
ಪಿಯುಸಿ ಪಾಸ್ ಆದವರಿಗೆ ಗೌರವಯುತ, ಒಳ್ಳೆ ಸಂಬಳದ ಕೆಲಸ ಸಿಗುತ್ತಾ ಅನ್ನೋ ಪ್ರಶ್ನೆ ನಿಮ್ಮಲ್ಲಿದ್ರೆ, ಖಂಡಿತಾ ಸಿಗುತ್ತೆ ಅಂತ ಹೇಳ್ತೀವಿ.
ಸರಿಯಾದ ಸ್ಕಿಲ್, ಮಾರ್ಗದರ್ಶನ ಇದ್ರೆ 30ರಿಂದ 50 ಸಾವಿರದವರೆಗೆ ಸ್ಯಾಲರಿ ಬರುವ ಕೆಲಸಗಳು ಸಿಗುತ್ತವೆ.
ಭಾರತೀಯ ರೈಲ್ವೆಯಲ್ಲಿ ಉತ್ತಮ ಉದ್ಯೋಗಗಳು
ಪಿಯುಸಿ ನಂತರ ಕೆಲಸ ಹುಡುಕ್ತಿದ್ರೆ, ನಿಮ್ಮ ಮೊದಲ ಆಯ್ಕೆ ಭಾರತೀಯ ರೈಲ್ವೆ ಇಲಾಖೆ ಆಗಿರಬಹುದು. ಇದು ಪ್ರಪಂಚದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆ.
ಇಲ್ಲಿ NTPC ಅಡಿಯಲ್ಲಿ ನೇಮಕಾತಿ ನಡೆಯುತ್ತೆ. ಅಕೌಂಟ್ ಕ್ಲರ್ಕ್, ಟಿಕೆಟ್ ಕ್ಲರ್ಕ್, ಜೂನಿಯರ್ ಟೈಪಿಸ್ಟ್ ಅಥವಾ ಅಸಿಸ್ಟೆಂಟ್ ಲೋಕೋ ಪೈಲಟ್ ಆಗಿ ಸೇರಬಹುದು.
ಕೆಲಸಕ್ಕೆ ಸೇರಿದ ಮೊದಲ ದಿನವೇ 30ರಿಂದ 45 ಸಾವಿರದವರೆಗೆ ಸ್ಯಾಲರಿ ಸಿಗುತ್ತೆ. ವಾರ್ಷಿಕವಾಗಿ ಸುಮಾರು 5.5 ಲಕ್ಷದ ಪ್ಯಾಕೇಜ್ ನಿರೀಕ್ಷಿಸಬಹುದು.
ರೈಲ್ವೆಯಲ್ಲಿ ಕೆಲಸ ಅಂದ್ರೆ ಲೈಫ್ಗೆ ಸೆಕ್ಯೂರಿಟಿ ಅಂತಾನೆ ಅರ್ಥ ಅಲ್ವಾ?
ದೇಶ ಸೇವೆಗೆ ಎನ್ಡಿಎ ಮೂಲಕ ಸೇನೆಗೆ ಸೇರಿಕೊಳ್ಳಿ
ನಿಮ್ಮಲ್ಲಿ ದೇಶಸೇವೆಯ ಕಿಚ್ಚಿದ್ರೆ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ನಿಮಗೆ ಬೆಸ್ಟ್ ದಾರಿ. ಇದು ಬರೀ ಕೆಲಸ ಅಲ್ಲ, ಇದೊಂದು ದೊಡ್ಡ ಜವಾಬ್ದಾರಿ.
ಪಿಯುಸಿಯಲ್ಲಿ ಫಿಸಿಕ್ಸ್, ಮ್ಯಾಥ್ಸ್ ಓದಿದವರು UPSC ನಡೆಸುವ NDA ಪರೀಕ್ಷೆ ಬರೆದು ಭೂಸೇನೆ, ನೌಕಾಸೇನೆ ಅಥವಾ ವಾಯುಸೇನೆಗೆ ಆಫೀಸರ್ ಆಗಿ ಸೇರಬಹುದು.
ಟ್ರೈನಿಂಗ್ ಟೈಮ್ನಲ್ಲೇ 50 ಸಾವಿರ ರೂಪಾಯಿ ಸ್ಟೈಪೆಂಡ್ ಸಿಗುತ್ತೆ.
ಲೆಫ್ಟಿನೆಂಟ್ ಆಗಿ ವೃತ್ತಿ ಆರಂಭಿಸಿದ್ರೆ, ಮುಂದೆ 2.5 ಲಕ್ಷದವರೆಗೆ ಸ್ಯಾಲರಿ ಪಡೆಯೋ ಅವಕಾಶವಿದೆ.
ಗೌರವ ಮತ್ತು ಉತ್ತಮ ಆದಾಯ ಎರಡೂ ಇಲ್ಲಿ ಸಿಗುತ್ತವೆ.
ಕೇಂದ್ರ ಸರ್ಕಾರದ ಆಡಳಿತಾತ್ಮಕ ಹುದ್ದೆಗಳು: SSC CHSL
ಕೇಂದ್ರ ಸರ್ಕಾರದ ವಿವಿಧ ಮಿನಿಸ್ಟ್ರಿಗಳಲ್ಲಿ ಕೆಲಸ ಮಾಡೋ ಕನಸು ನಿಮ್ಮದಾಗಿದ್ರೆ, SSC CHSL ಪರೀಕ್ಷೆ ಸೂಕ್ತ. ಇಲ್ಲಿ LDC, JSA, DEO ಹುದ್ದೆಗಳು ಸಿಗುತ್ತವೆ.
7ನೇ ವೇತನ ಆಯೋಗದ ಪ್ರಕಾರ, 25,500 ರೂಪಾಯಿಂದ 81,100 ವರೆಗೆ ಸ್ಯಾಲರಿ ಇರುತ್ತೆ.
ಪೋಸ್ಟಿಂಗ್ ಸಿಟಿಯ ಮೇಲೆ ಸಂಬಳ ನಿರ್ಧಾರ ಆಗುತ್ತೆ.
ಶಾರ್ಟ್ಹ್ಯಾಂಡ್ ಗೊತ್ತಿದ್ರೆ, ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಹಾಕಿ. ಇಲ್ಲಿ ಕಾಂಪಿಟಿಷನ್ ಕಡಿಮೆ ಇದ್ದು, 35 ಸಾವಿರಕ್ಕೂ ಹೆಚ್ಚು ಸ್ಟಾರ್ಟಿಂಗ್ ಸ್ಯಾಲರಿ ಪಡೆಯಬಹುದು.
ಕೇಂದ್ರ ಸರ್ಕಾರದ ಕೆಲಸಕ್ಕೆ ಒಳ್ಳೆ ಭದ್ರತೆ ಇರುತ್ತೆ.
ಅಗ್ನಿಪಥ್ ಮತ್ತು ಅರೆಸೇನಾ ಪಡೆಗಳಲ್ಲಿ ಉದ್ಯೋಗ
ಯುವಜನತೆಗಾಗಿ ತಂದಿರುವ ಅಗ್ನಿಪಥ್ ಯೋಜನೆ ಬಗ್ಗೆ ನಿಮಗೆ ಗೊತ್ತಿದೆ ಅಲ್ವಾ? ಪಿಯುಸಿ ಪಾಸ್ ಆದ ತಕ್ಷಣವೇ ಅಗ್ನಿವೀರಾಗಿ ದೇಶಸೇವೆಗೆ ಸೇರಬಹುದು. ಪಿಯುಸಿ ಕನಿಷ್ಠ ಅರ್ಹತೆ.
ಮೊದಲ ವರ್ಷವೇ 30 ಸಾವಿರ ಸಂಬಳ ಸಿಗುತ್ತೆ, ಪ್ರತಿವರ್ಷ ಜಾಸ್ತಿ ಆಗುತ್ತೆ. ನಾಲ್ಕು ವರ್ಷದ ನಂತರ ದೊಡ್ದ ಮೊತ್ತದ ಸೇವಾನಿಧಿ ಕೈ ಸೇರುತ್ತೆ. ಇದು ನಿಮ್ಮ ಮುಂದಿನ ಜೀವನಕ್ಕೆ ಹೆಲ್ಪ್ ಆಗುತ್ತೆ.
ಬಿಎಸ್ಎಫ್, ಸಿಐಎಸ್ಎಫ್, ಸಿಆರ್ಪಿಎಫ್, ಐಟಿಬಿಪಿಗಳಲ್ಲಿ ಹೆಡ್ ಕಾನ್ಸ್ಟೇಬಲ್ ಆಗೋದಕ್ಕೂ ಪಿಯುಸಿ ಆಗಿರಬೇಕು. ಇಲ್ಲಿ ಸ್ಟಾರ್ಟಿಂಗ್ ಸ್ಯಾಲರಿ 32 ಸಾವಿರದಿಂದ ಶುರುವಾಗುತ್ತೆ.
ಭಾರತೀಯ ಕರಾವಳಿ ಪಡೆ (Indian Coast Guard) ಯಲ್ಲಿ ಅವಕಾಶ
ಸಮುದ್ರ ತೀರದ ರಕ್ಷಣೆ ಮತ್ತು ಕಡಲ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳೋ ಇಂಡಿಯನ್ ಕೋಸ್ಟ್ ಗಾರ್ಡ್ನಲ್ಲೂ ಪಿಯುಸಿ ಆದವರಿಗೆ ಅವಕಾಶಗಳಿವೆ.
ಸಮುದ್ರ ತೀರದ ರಕ್ಷಣೆಯಲ್ಲಿ ಆಸಕ್ತಿ ಇದ್ರೆ, ನಾವಿಕ್ ಜನರಲ್ ಡ್ಯೂಟಿ ಹುದ್ದೆಗೆ ಹೋಗಬಹುದು.
ಪಿಯುಸಿ ವಿಜ್ಞಾನ ಓದಿದವರಿಗೆ ಇಲ್ಲಿ ಆದ್ಯತೆ. ಎಲ್ಲ ಭತ್ಯೆಗಳನ್ನೂ ಸೇರಿಸಿ ತಿಂಗಳಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಸಂಬಳ ಪಡೆಯೋ ಅವಕಾಶ ಇದೆ.
ಇದು ಗೌರವಯುತವಾದ ಕೆಲಸವಾಗಿದ್ದು, ದೇಶದ ಸಮುದ್ರ ಗಡಿಯನ್ನು ರಕ್ಷಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿರುತ್ತೀರಿ. ಒಂದು ಅದ್ಭುತ ವೃತ್ತಿಜೀವನಕ್ಕೆ ಇಲ್ಲಿ ಸುವರ್ಣ ಅವಕಾಶವಿದೆ.
ಖಾಸಗಿ ವಲಯದಲ್ಲಿ ಸ್ಕಿಲ್ ಆಧಾರಿತ ಕೆಲಸಗಳು
ಸರ್ಕಾರಿ ಕೆಲಸ ಬೇಡ, ಪರೀಕ್ಷೆ ಬರೆಯೋಕೆ ಆಗಲ್ಲ ಅನ್ನೋರು ಬೇಜಾರಾಗ್ಬೇಡಿ. ಡಿಗ್ರಿ ಇಲ್ಲದೆ ಇದ್ರೂ ನಿಮ್ಮ ಟ್ಯಾಲೆಂಟ್ ಮತ್ತೆ ಸ್ಕಿಲ್ ಮೇಲೆ ಲಕ್ಷಾಂತರ ರೂಪಾಯಿ ಕೊಡೋಕೆ ಪ್ರೈವೇಟ್ ಕಂಪನಿಗಳು ರೆಡಿ.
ಕಾರ್ಪೊರೇಟ್ ಪ್ರಪಂಚಕ್ಕೆ ನಿಮ್ಮ ಡಿಗ್ರಿ ಸರ್ಟಿಫಿಕೇಟ್ಗಿಂತ ಕೈಲಿರೋ ಸ್ಕಿಲ್ ಮುಖ್ಯ.
ಗ್ರಾಫಿಕ್ ಡಿಸೈನಿಂಗ್ ಮತ್ತು ವಿಡಿಯೋ ಎಡಿಟಿಂಗ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
ಅಡೋಬ್ ಪ್ರೀಮಿಯರ್ ಪ್ರೋ, ಫೋಟೋಶಾಪ್ ಕಲಿತು ಫ್ರೀಲ್ಯಾನ್ಸ್ ಮಾಡಿದ್ರು ತಿಂಗಳಿಗೆ 25ರಿಂದ 60 ಸಾವಿರದವರೆಗೂ ಗಳಿಸಬಹುದು, ಆದ್ರೆ ಕ್ರಿಯೇಟಿವಿಟಿ ಇರಬೇಕು.
ಕಲಿಕೆಯ ಜೊತೆ ಗಳಿಕೆಯ ಉತ್ತಮ ಆಯ್ಕೆ ಇದು.
IT ಮತ್ತು BPO ಕ್ಷೇತ್ರದಲ್ಲಿ ಭರ್ಜರಿ ಸಂಬಳ
ಖಾಸಗಿ ವಲಯದಲ್ಲಿ ಐಟಿ ಮತ್ತು ಸಾಫ್ಟ್ವೇರ್ ಡೆವಲಪ್ಮೆಂಟ್ ಫೀಲ್ಡ್ನಲ್ಲೂ ಪಿಯುಸಿ ಆದವರಿಗೆ ಅವಕಾಶವಿದೆ. ಪಿಯುಸಿ ನಂತರ ಪೈಥಾನ್, ಜಾವಾ, ವೆಬ್ ಡೆವಲಪ್ಮೆಂಟ್ ಕಲಿಯಿರಿ.
ಸ್ಟಾರ್ಟಪ್ ಕಂಪನಿಗಳು ಡಿಗ್ರಿಗಿಂತ ಕೆಲಸದ ಅನುಭವಕ್ಕೆ ಬೆಲೆ ಕೊಡುತ್ತವೆ. ಬಿಪಿಓ ಮತ್ತು ಕಸ್ಟಮರ್ ಸಪೋರ್ಟ್ ವಲಯದಲ್ಲೂ ಅವಕಾಶಗಳಿವೆ.
ಕನ್ನಡದ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಚೆನ್ನಾಗಿ ಮಾತನಾಡೋಕೆ ಬಂದ್ರೆ, ದೊಡ್ಡ MNC ಕಂಪನಿಗಳು ಸ್ವಾಗತಿಸ್ತಾವೆ. ನೈಟ್ ಶಿಫ್ಟ್ ಅಲೊವೆನ್ಸ್ ಸೇರಿ ಆರಂಭಿಕ ಸ್ಯಾಲರಿ 30ರಿಂದ 45 ಸಾವಿರದವರೆಗೆ ಸಿಗಬಹುದು.
ಬೆಂಗಳೂರಿನಲ್ಲಿ ಇಂತಹ ಅವಕಾಶಗಳು ಹೇರಳವಾಗಿವೆ.
ರಿಯಲ್ ಎಸ್ಟೇಟ್ ಮತ್ತು ಸೇಲ್ಸ್ನಲ್ಲಿ ಲಾಭದಾಯಕ ವೃತ್ತಿ
ಮಾತಿನ ಚಾತುರ್ಯ ಇದ್ದು, ಜನರನ್ನ ಆಕರ್ಷಿಸುವ ಶಕ್ತಿ ಇದೆ ಅನ್ನೋರು ರಿಯಲ್ ಎಸ್ಟೇಟ್ ಫೀಲ್ಡ್ಗೆ ಬರಬಹುದು. ಇಲ್ಲಿ ಸಂಬಳಕ್ಕಿಂತ ಹೆಚ್ಚಾಗಿ ಸಿಗುವ ಕಮಿಷನ್ ನಿಮ್ಮನ್ನ ಲಕ್ಷಾಧಿಪತಿಯನ್ನಾಗಿ ಮಾಡಬಹುದು. ಒಂದು ಸೈಟ್ ಅಥವಾ ಮನೆ ಮಾರಾಟ ಮಾಡಿದ್ರೆ ಬರುವ ಕಮಿಷನ್ ನಿಮ್ಮ ಒಂದು ವರ್ಷದ ಸಂಬಳಕ್ಕೆ ಸಮನಾಗಿರಬಹುದು.
ಇನ್ನೊಂದು ಸ್ವಲ್ಪ ಎಕ್ಸ್ಟ್ರಾ ಎಫರ್ಟ್ ಹಾಕಿದ್ರೆ ಜಾಸ್ತಿನೂ ಆಗಬಹುದು. ಇದು ತುಂಬಾ ಡೈನಾಮಿಕ್ ಫೀಲ್ಡ್ ಆಗಿದ್ದು, ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ಚೆನ್ನಾಗಿದ್ರೆ ದೊಡ್ಡ ಮಟ್ಟಿಗೆ ಬೆಳೆಯಬಹುದು.
ಬೆಂಗಳೂರಿನಲ್ಲಿ ಇದಕ್ಕೆ ಎಷ್ಟೋ ಡಿಮ್ಯಾಂಡ್ ಇದೆ!
ಈ ಕೆಲಸಗಳನ್ನು ಪಡೆಯಲು ಬೇಕಾದ ತಯಾರಿ ಏನು?
ಕೆಲಸ ಅಷ್ಟು ಸುಲಭವಾಗಿ ಸಿಗಲ್ಲ, ಅದಕ್ಕೆ ತಯಾರಿ ಮಾಡ್ಕೊಳ್ಳಬೇಕು. ಸರ್ಕಾರಿ ಕೆಲಸ ಬೇಕು ಅಂದ್ರೆ ಜನರಲ್ ನಾಲೆಡ್ಜ್, ಮ್ಯಾಥ್ಸ್, ರೀಸನಿಂಗ್ ಅಭ್ಯಾಸನ ಇವತ್ತಿನಿಂದಲೇ ಶುರು ಮಾಡಿ.
ದಿನ ನ್ಯೂಸ್ ಪೇಪರ್ ಓದೋದು, ನ್ಯೂಸ್ ನೋಡೋದು ಮರಿಬೇಡಿ, ಕರೆಂಟ್ ಅಫೇರ್ಸ್ ತುಂಬಾ ಇಂಪಾರ್ಟೆಂಟ್. ನಮ್ಮ ಕನ್ನಡದ ಜೊತೆಗೆ ಇಂಗ್ಲಿಷ್ ಕಮ್ಯುನಿಕೇಶನ್ ಸ್ಕಿಲ್ ಬೆಳೆಸಿಕೊಳ್ಳಿ, ಪ್ರೈವೇಟ್ ಕಂಪನಿಗಳಲ್ಲಿ ಕಿಮ್ಮತ್ತು ಜಾಸ್ತಿ.
ಬೇಸಿಕ್ ಕಂಪ್ಯೂಟರ್ ಜೊತೆಗೆ ಎಕ್ಸೆಲ್ ಕಲಿಯಿರಿ.
ಸರ್ಕಾರಿ ಕೆಲಸದ ನೋಟಿಫಿಕೇಶನ್ಗಳನ್ನ ಆಫೀಶಿಯಲ್ ವೆಬ್ಸೈಟ್ಗಳಲ್ಲಿ ಚೆಕ್ ಮಾಡೋ ಅಭ್ಯಾಸ ಇಟ್ಟುಕೊಳ್ಳಿ.
ಕಡಿಮೆ ಮಾರ್ಕ್ಸ್ ಬಂದಿದ್ರೆ ಚಿಂತೆ ಬೇಡ!
ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್ ಬಂದಿದೆ, ನನಗೂ ಸರ್ಕಾರಿ ಕೆಲಸ ಸಿಗುತ್ತಾ ಅಂತ ಚಿಂತೇನಾ? ಖಂಡಿತಾ ಸಿಗುತ್ತೆ ಸ್ನೇಹಿತರೆ! SSC ಮತ್ತು ರೈಲ್ವೆ ಅಂತಹ ಬಹುತೇಕ ಪರೀಕ್ಷೆಗಳಿಗೆ ಬರೀ ಪಿಯುಸಿ ಪಾಸ್ ಆಗಿದ್ರೆ ಸಾಕು.
ಅಲ್ಲಿ ನಿಮ್ಮ 90% ಅಥವಾ 95% ಮಾರ್ಕ್ಸ್ ಮುಖ್ಯ ಆಗಲ್ಲ.
ಪ್ರವೇಶ ಪರೀಕ್ಷೆಯಲ್ಲಿ ನೀವು ಎಷ್ಟು ಮಾರ್ಕ್ಸ್ ತಗೋತೀರಾ ಅನ್ನೋದರ ಮೇಲೆನೇ ನಿಮಗೆ ಉದ್ಯೋಗ ಸಿಗೋದು. ಹಾಗಾಗಿ, ಕಡಿಮೆ ಮಾರ್ಕ್ಸ್ ಬಂದಿದೆ ಅಂತ ಬೇಜಾರಾಗ್ಬೇಡಿ.
ಇವತ್ತೇ ತಯಾರಿ ಶುರುಮಾಡಿ, ಒಳ್ಳೆಯ ಅವಕಾಶಗಳು ನಿಮಗೆ ಸಿಗುತ್ತವೆ. ಆತ್ಮವಿಶ್ವಾಸದಿಂದ ಮುನ್ನುಗ್ಗಿ!
ಕೊನೆಯ ಮಾತು:
ನೋಡಿದ್ರಲ್ಲ ಸ್ನೇಹಿತರೆ, ಸೆಕೆಂಡ್ ಪಿಯುಸಿ ನಂತರ ನಿಮ್ಮ ಮುಂದೆ ಸಾವಿರಾರು ಅವಕಾಶಗಳಿವೆ. ಸುಮ್ಮನೆ ಮನೆಯಲ್ಲೇ ಕೂತು ಟೈಮ್ ವೇಸ್ಟ್ ಮಾಡ್ಬೇಡಿ.
ಇವತ್ತಿನಿಂದಲೇ ಕೆಲಸ ಹುಡುಕೋಕೆ ಶುರು ಮಾಡಿ, ಅದಕ್ಕೆ ಬೇಕಾದ ಪ್ರಯತ್ನಗಳನ್ನ ಮಾಡಿ. ಖಂಡಿತಾ ನಿಮಗೆ ಒಳ್ಳೆಯ ಕೆಲಸ ಸಿಗುತ್ತೆ, ಅದು ನಿಮ್ಮ ಭವಿಷ್ಯಕ್ಕೆ ದೊಡ್ಡ ಹೆಲ್ಪ್ ಮಾಡುತ್ತೆ.
ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಅನ್ಕೋತೀವಿ. ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಶೇರ್ ಮಾಡಿ, ಎಷ್ಟೋ ಜನರಿಗೆ ಇದು ಖಂಡಿತಾ ಹೆಲ್ಪ್ ಆಗುತ್ತೆ.
ನಮ್ಮ ಬೆಳಗಾವಿ ವಾಯ್ಸ್ ಬ್ಲಾಗ್ ಮೂಲಕ ಇಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮನ್ನ ಫಾಲೋ ಮಾಡಿ.
ಇದನ್ನು ಓದಿ:
ಬೆಳಗಾವಿ ವಿದ್ಯಾರ್ಥಿಗಳೇ: ಡಿಪ್ಲೋಮಾ ಇನ್ MI– ಪ್ರವೇಶ, ಉದ್ಯೋಗ ಮತ್ತು ಭವಿಷ್ಯದ ಸಂಪೂರ್ಣ ಮಾಹಿತಿ










