KCET 2026 ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಗುಡ್‌ನ್ಯೂಸ್ ನೀಡಿದೆ. ವಿಶೇಷ ವರ್ಗಗಳ ದಾಖಲೆ ಪರಿಶೀಲನೆಗೆ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಮೇ 5 ರಿಂದ 15 ರವರೆಗೆ ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಪರಿಶೀಲನೆ ನಡೆಯಲಿದೆ.
ಡಾಕ್ಯುಮೆಂಟ್ ವೆರಿಫಿಕೇಶನ್ ಸ್ಲಿಪ್ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಅತ್ಯಂತ ಪ್ರಮುಖ ದಾಖಲೆಯಾಗಿದೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ನಮೂದಿಸಿದ ಕೋಟಾ, ಮೀಸಲಾತಿ ಹಾಗೂ ರ್ಯಾಂಕ್ ಕುರಿತ ಮಾಹಿತಿ ಈ ಸ್ಲಿಪ್‌ನಲ್ಲಿರುತ್ತದೆ. ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ರ್ಯಾಂಕ್ ಘೋಷಿಸಿದ ನಂತರ ಈ ಸ್ಲಿಪ್ ದೊರೆಯುತ್ತದೆ.
ರ್ಯಾಂಕ್ ಪ್ರಕಟವಾದ ತಕ್ಷಣ ಮತ್ತು ಆಪ್ಷನ್ ಎಂಟ್ರಿ ಆರಂಭವಾಗುವ ಮೊದಲು ಈ ಸ್ಲಿಪ್ ಬಿಡುಗಡೆಯಾಗುತ್ತದೆ. ಕೌನ್ಸಿಲಿಂಗ್‌ನಿಂದ ಹಿಡಿದು, ಸೀಟ್ ಆಯ್ಕೆ ಮತ್ತು ಅಂತಿಮ ಕಾಲೇಜು ಅಡ್ಮಿಷನ್‌ಗೂ ಈ ಸ್ಲಿಪ್ ಕಡ್ಡಾಯವಾಗಿದೆ ಎಂದು ಕೆಇಎ ತಿಳಿಸಿದೆ. ವಿದ್ಯಾರ್ಥಿಗಳು ಇದನ್ನು ಡೌನ್‌ಲೋಡ್ ಮಾಡಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ.
ಯಾವ ವಿದ್ಯಾರ್ಥಿಗಳು ಈ ಹಿಂದೆ ದಾಖಲೆ ಪರಿಶೀಲನೆಯಲ್ಲಿ ತಪ್ಪುಗಳನ್ನು ಮಾಡಿದ್ದಾರೋ ಅಥವಾ ಕೆಲವು ತಪ್ಪು ದಾಖಲೆಗಳನ್ನು ಅಪ್ಲೋಡ್ ಮಾಡಿದ್ದಾರೋ, ಅಂತಹವರಿಗೆ ಎಡಿಟಿಂಗ್ ಆಯ್ಕೆಯನ್ನು ನೀಡಲಾಗಿದೆ. ಹಿಂದಿನ ಅಪ್ಲಿಕೇಶನ್ ಲಿಂಕ್ ಮೂಲಕ ಲಾಗಿನ್ ಆಗಿ ತಮ್ಮ ಅರ್ಜಿಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಕನ್ನಡ ಮೀಡಿಯಂ ಅಥವಾ ರೂರಲ್ ಕೋಟಾವನ್ನು ಕ್ಲೇಮ್ ಮಾಡದವರು ಅಥವಾ ತಪ್ಪು ಮಾಹಿತಿ ನೀಡಿದವರು ಈಗಲೂ ಎಡಿಟ್ ಮಾಡಿ ಕ್ಲೇಮ್ ಮಾಡಬಹುದು. ಇದಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು (ಸರ್ಟಿಫಿಕೇಟ್) ತಮ್ಮ ಪಿಯು ಕಾಲೇಜಿನಿಂದ ಪರಿಶೀಲಿಸಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಕೆಇಎ ಸೂಚಿಸಿದೆ.
ಕ್ರೀಡಾ ಕೋಟಾದ ಅಡಿಯಲ್ಲಿ ದಾಖಲೆ ಪರಿಶೀಲನೆ ಮೇ 5, 6 ಮತ್ತು 7 ರಂದು ನಡೆಯಲಿದೆ. ಸಿಎಪಿಎಫ್ ಹಾಗೂ ಸಿಆರ್‌ಪಿಎಫ್‌ಗೆ ಮೇ 8 ರಂದು ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಪರಿಶೀಲನೆ ನಡೆಯಲಿದೆ.
ಇದೇ ರೀತಿ, ಮಾಜಿ ರಕ್ಷಣಾ ಸಿಬ್ಬಂದಿ ಹಾಗೂ ಮಾಜಿ ಸಿಎಪಿಎಫ್‌ಗೆ ಮೇ 9 ಮತ್ತು 10 ರಂದು ದಿನಾಂಕ ನಿಗದಿಪಡಿಸಲಾಗಿದೆ. ರಕ್ಷಣಾ ಸಿಬ್ಬಂದಿಗೆ ಮೇ 11 ಮತ್ತು 12 ರಂದು, ಸ್ಕೌಟ್ಸ್ ಮತ್ತು ಗೈಡ್ಸ್ ಅವರಿಗೆ ಮೇ 13 ರಂದು ಪರಿಶೀಲನೆ ನಡೆಯಲಿದೆ.
ಎನ್‌ಸಿಸಿ ವಿದ್ಯಾರ್ಥಿಗಳಿಗೆ ಮೇ 14 ಮತ್ತು 15 ರಂದು ದಾಖಲೆ ಪರಿಶೀಲನೆ ನಡೆಯಲಿದೆ. ಎಲ್ಲಾ ವಿಶೇಷ ವರ್ಗಗಳ ವಿದ್ಯಾರ್ಥಿಗಳು ನಿಗದಿತ ದಿನಾಂಕಗಳಂದು ಬೆಂಗಳೂರಿನ ಕೆಇಎ ಆಫೀಸ್‌ಗೆ ಭೇಟಿ ನೀಡಿ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು.
KCET ದಾಖಲೆ ಪರಿಶೀಲನಾ ಸ್ಲಿಪ್ ಎಂದರೇನು?
- ಅರ್ಜಿ ಸಲ್ಲಿಸುವಾಗ ನಮೂದಿಸಿದ ಕೋಟಾ, ಮೀಸಲಾತಿ ಮತ್ತು ಆದಾಯದ ಮಾಹಿತಿಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳು ಯಾವ ಮೀಸಲಾತಿಗೆ ಅರ್ಹರು ಎಂಬುದನ್ನು ಈ ಸ್ಲಿಪ್ ಸ್ಪಷ್ಟಪಡಿಸುತ್ತದೆ.
- ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಪಡೆದ ರ್ಯಾಂಕ್ ಮಾಹಿತಿ ಕೂಡ ಈ ಸ್ಲಿಪ್‌ನಲ್ಲಿರುತ್ತದೆ.
- ಕೆಸಿಇಟಿ ಕೌನ್ಸಿಲಿಂಗ್, ಸೀಟ್ ಆಯ್ಕೆ ಮತ್ತು ಅಂತಿಮ ಕಾಲೇಜು ಅಡ್ಮಿಷನ್‌ಗೆ ಇದು ಕಡ್ಡಾಯ ದಾಖಲೆಯಾಗಿದೆ.
ಉತ್ತಮ ಭವಿಷ್ಯಕ್ಕಾಗಿ ಪರ್ಯಾಯ ಆಯ್ಕೆಗಳು
- ಕೆಸಿಇಟಿ ರ್ಯಾಂಕ್ ಬಗ್ಗೆ ತೃಪ್ತಿ ಇಲ್ಲದ ವಿದ್ಯಾರ್ಥಿಗಳಿಗೆ ಟಾಪ್ 10 ಕಾಲೇಜುಗಳಲ್ಲಿ ಬಿ.ಟೆಕ್ ಮಾಡಲು ಪೊಲಾರಿಸ್ ಸ್ಕೂಲ್ ಆಫ್ ಟೆಕ್ನಾಲಜಿ (ಪಿಎಟಿ) ಎಕ್ಸಾಂ ಒಂದು ಅವಕಾಶವಾಗಿದೆ.
- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಬಿಗ್ ಡೇಟಾ, ಕ್ಲೌಡ್ ಇಂಜಿನಿಯರಿಂಗ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್‌ನಂತಹ ಹೊಸ ಯುಗದ ಕೋರ್ಸ್‌ಗಳು ಇಲ್ಲಿ ಲಭ್ಯವಿವೆ.
- ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಗೂಗಲ್, ಅಮೆಜಾನ್‌ನಂತಹ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಪಡೆದು ಉತ್ತಮ ಸ್ಟೈಪೆಂಡ್ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
- ವಿಶೇಷ ವರ್ಗದ ವಿದ್ಯಾರ್ಥಿಗಳು ನಿಗದಿತ ದಿನಾಂಕಗಳಂದು ತಮ್ಮ ಮೂಲ ದಾಖಲೆಗಳೊಂದಿಗೆ ಬೆಂಗಳೂರಿನ ಕೆಇಎ ಕಚೇರಿಗೆ ತಪ್ಪದೆ ಹಾಜರಾಗಬೇಕು.
- ಸರಿಯಾದ ದಾಖಲೆಗಳನ್ನು ಸಲ್ಲಿಸಿ ಡಾಕ್ಯುಮೆಂಟ್ ವೆರಿಫಿಕೇಶನ್ ಸ್ಲಿಪ್ ಪಡೆಯುವುದು ಕೌನ್ಸಿಲಿಂಗ್ ಪ್ರಕ್ರಿಯೆಗೆ ಅತ್ಯಗತ್ಯ.
- ಹೆಚ್ಚಿನ ಮಾಹಿತಿ ಹಾಗೂ ಸ್ಪಷ್ಟನೆಗಳಿಗಾಗಿ ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಇದನ್ನು ಓದಿ:
ಬೆಳಗಾವಿ PUC ವಿಜ್ಞಾನ ವಿದ್ಯಾರ್ಥಿಗಳೇ: ಕೃಷಿ ಇಂಜಿನಿಯರಿಂಗ್ ತೆಗೆದುಕೊಳ್ಳಿ – ಉತ್ತಮ ವೃತ್ತಿ ಅವಕಾಶ ಇಲ್ಲಿದೆ..!
ಬೆಳಗಾವಿ ಪದವೀಧರರೇ ಗಮನಿಸಿ: ಭಾರತದ ಉದ್ಯೋಗ ಬಿಕ್ಕಟ್ಟು – ನಿಮ್ಮ ಡಿಗ್ರಿ ಯಾಕೆ ಕೆಲಸಕ್ಕೆ ಬರುತ್ತಿಲ್ಲ..?






