ಈ ಯೋಜನೆ ಜಾರಿಗೆ ಬಂದರೆ ATM ಮೂಲಕ PF ಹಣ ತೆಗೆಯಬಹುದು.! ಇಲ್ಲಿದೆ ಮಾಹಿತಿ  

December 3, 2024 11:17 AM
ಈ ಯೋಜನೆ ಜಾರಿಗೆ ಬಂದರೆ ATM ಮೂಲಕ PF ಹಣ ತೆಗೆಯಬಹುದು.! ಇಲ್ಲಿದೆ ಮಾಹಿತಿ  

ಎಲ್ಲರಿಗೂ ನಮಸ್ಕಾರ, EPFO 3.0 ಮಹತ್ವದ ಬದಲಾವಣೆಗೆ ಸಿದ್ಧತೆ ನಡೆಸಿದೆ. ನಿವೃತ್ತಿಯ ನಂತರ ಖಾಸಗಿ ವಲಯದ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ವ್ಯವಸ್ಥೆಯು ಶೀಘ್ರದಲ್ಲೇ ದೊಡ್ಡ ಬದಲಾವಣೆಗೆ ಒಳಗಾಗಬಹುದು. ಈ ಬದಲಾವಣೆ ಉದ್ಯೋಗಿಗಳ ಸಮಸ್ಯೆಗೆ ಪರಿಹಾರವಾಗಬಹುದು.

EPFO ಅಡಿಯಲ್ಲಿ ಸರ್ಕಾರ ಒಂದು ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ ಅದರ ಮೂಲಕ ನೌಕರರ ಭವಿಷ್ಯ ನಿಧಿ ಸಂಘಟನೆ ಸದಸ್ಯರು ತಮಗೆ ಹಣದ ಅಗತ್ಯವಿರುವಾಗ ATM ಗಳ ಮೂಲಕ ಡೆಬಿಟ್ ಕಾರ್ಡ್ ಗಳನ್ನ ಬಳಸಿಕೊಂಡು ಪಿಎಫ್ ಹಣವನ್ನು ಹಿಂಪಡೆಯಬಹುದು. ನಿಮ್ಮ PF ಹಣವನ್ನು ಬ್ಯಾಂಕಿಗೆ ಹೋಗದೆ ನೀವು ಹತ್ತಿರದ ಎಟಿಎಂ ನಿಂದಲೇ ತೆಗೆಯಬಹುದು ಸರ್ಕಾರ ಈ ಹೊಸ ಸೌಲಭ್ಯವನ್ನ ಶೀಘ್ರದಲ್ಲೇ ಜಾರಿಗೆ ತರಲಿದೆ.

ಉದ್ಯೋಗಿಗಳ ಭವಿಷ್ಯ ನಿಧಿ:

PF ಸಂಗ್ರಹವು ಭಾರತದಲ್ಲಿ ಉದ್ಯೋಗಿಗಳಿಗೆ ಮಹತ್ವದ ಆರ್ಥಿಕ ಭದ್ರತೆ ನೀಡುತ್ತೆ. ಇದನ್ನ ಪ್ರತಿ ತಿಂಗಳ ಸಂಬಳದಿಂದ ಶೇಕಡಾ 12 ರಷ್ಟನ್ನ ಕಡಿತಗೊಳಿಸಿ ಭವಿಷ್ಯ ನಿಧಿ ಖಾತೆಗೆ ಜಮೆ ಮಾಡಲಾಗುತ್ತೆ. ನಿಯಮಾವಳಿಗಳ ಪ್ರಕಾರ ಪೂರ್ಣವಾಗಿ ಅಥವಾ ಭಾಗಶಹ ಹಿಂಪಡೆಯಲು ಕೆಲವೊಂದು ನಿಯಮಗಳು ಮತ್ತು ಸಮಯಾವಧಿಯ ನಿಯಮಾವಳಿಗಳ ಅಡಿಯಲ್ಲಿ ಅವಕಾಶವಿತ್ತು. ಆದರೆ ಇನ್ನು ಮುಂದೆ ಪಿ ಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಹೊಸ ಯೋಜನೆ ತರುವ ಯೋಜನೆ ಹಾಕಿಕೊಂಡಿದೆ.

ATM ಮೂಲಕ PF ಹಿಂಪಡೆಯುವ ಹೊಸ ಪರಿಹಾರ:

ನಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಬಳಸುವ ರೀತಿಯಲ್ಲಿಯೇ ಪಿಎಫ್ ಹಿಂಪಡೆಯಲು ವಿಶೇಷ ಕಾರ್ಡ್ಗಳನ್ನ ಪರಿಚಯಿಸುವ ಯೋಜನೆಯನ್ನ ಕೇಂದ್ರ ಸರ್ಕಾರ ಮತ್ತು ಕಾರ್ಮಿಕ ಸಚಿವಾಲಯ ಪ್ರಸ್ತಾಪಿಸಿದೆ ಇದರಿಂದ ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನ ಡಿಜಿಟಲ್ ಮತ್ತು ಸುಲಭಗೊಳಿಸುವುದು ಗುರಿಯಾಗಿದೆ.

ಈ ಯೋಜನೆ ಇಪಿಎಫ್ ಓ 3.0 ಹೆಸರಿನಲ್ಲಿ ಅನೇಕ ಹೊಸ ತಂತ್ರಜ್ಞಾನಗಳನ್ನ ಪರಿಚಯಿಸುವ ನಿರೀಕ್ಷೆ ಇದೆ. ಪಿ ಎಫ್ ಸದಸ್ಯರು ತಮ್ಮ ಖಾತೆಯಲ್ಲಿರುವ ಹಣವನ್ನು ನೇರವಾಗಿ ATM ನಿಂದ ಹಿಂಪಡೆಯಬಹುದು. ಇದಕ್ಕಾಗಿ ಸರ್ಕಾರ ವಿಶಿಷ್ಟ ಪಿಎಫ್ ಕಾರ್ಡ್ ನೀಡುವ ಯೋಜನೆ ರೂಪಿಸುತ್ತಾ ಇದೆ. ಪ್ರಸ್ತುತ ಉದ್ಯೋಗಿಗಳು ತಮ್ಮ ವೇತನದ ಶೇಕಡಾ 12 ರಷ್ಟು ಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗಿದೆ.

ಈ ಹೊಸ ಯೋಜನೆಯ ಅಡಿಯಲ್ಲಿ ಕೊಡುಗೆಯ ಶ್ರೇಣಿಯನ್ನ ಉದ್ಯೋಗಿಯ ಆದ್ಯತೆಯ ಆಧಾರದ ಮೇಲೆ ಹೊಂದಿಸುವ ಪ್ರಸ್ತಾಪ ಕೂಡ ಚರ್ಚೆಯಲ್ಲಿದೆ. ಈಗಿನಂತಿಲ್ಲದೆ ಹೊಸ ಯೋಜನೆಯಡಿ ತಕ್ಷಣದ ಅವಶ್ಯಕತೆಗಳಿಗೆ ಪಿಎಫ್ ಹಣವನ್ನು ಪಡೆಯಲು ಅನಾವಶ್ಯಕವಾದ ನಿರೀಕ್ಷೆಗಳ ಅವಧಿಯನ್ನ ಕಡಿಮೆ ಮಾಡಲಾಗುತ್ತೆ.

ಈ ಹೊಸ ಕಾರ್ಡುಗಳ ಮೂಲಕ ನೊಂದಣ ಪ್ರಕ್ರಿಯೆ, ಲಾಗಿನ್, ಬಾಕಿ ಮೊತ್ತದ ಪರಿಶೀಲನೆ, ಪಿ ಎಫ್ ಹಿಂಪಡೆಯುವ ಮಾಹಿತಿಯನ್ನ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ತಕ್ಷಣಕ್ಕೆ ಪಡೆಯಬಹುದು.

Benefits of EPFO 3.0 Scheme:

EPFO ಕಚೇರಿಗೆ ತೆರಳಿ ಅರ್ಜಿಯನ್ನ ಸಲ್ಲಿಸುವ ಅವಶ್ಯಕತೆಯನ್ನ ಈ ಯೋಜನೆ ಸಂಪೂರ್ಣವಾಗಿ ನಿರ್ವಹಿಸುತ್ತೆ ತುರ್ತು ಪರಿಸ್ಥಿತಿಗಳಲ್ಲಿ ಹಣವನ್ನು ಹಿಂಪಡೆಯಲು ಸುಲಭವಾದ ಮಾರ್ಗ ದೊರೆಯುತ್ತದೆ.

ಇದು ಹೆಚ್ಚಿನ ಲಾಭ ನೀಡುತ್ತೆ ಇಡೀ ಪ್ರಕ್ರಿಯೆಯನ್ನ ಡಿಜಿಟಲ್ ಮಾಡಿದ ಮೂಲಕ ಭಾರತ ಡಿಜಿಟಲ್ ಇಂಡಿಯಾ ದೃಷ್ಟಿಯತ್ತ ಮತ್ತೊಂದು ಹೆಜ್ಜೆ ಇಡ್ತಾ ಇದೆ.

ಪ್ರಸ್ತುತ ಉದ್ಯೋಗಿಯ ಪ್ರತಿ ತಿಂಗಳ ಸಂಬಳದ ಶೇಕಡಾ 12 ರಷ್ಟು ಮೊತ್ತವನ್ನ ಪಿಎಫ್ ಗೆ ಕಡಿತಗೊಳಿಸಲಾಗ್ತಾ ಇದೆ ಇದೇ ಪ್ರಮಾಣವನ್ನ ಉದ್ಯೋಗದಾತರು ಕೊಡುಗೆಯಾಗಿ ನೀಡುತ್ತಾನೆ. ಇದರಲ್ಲಿ ಶೇಕಡಾ 8.33 ರಷ್ಟು ಇಪಿಎಸ್ ಎಂಪ್ಲಾಯಿಸ್ ಪೆನ್ಶನ್ ಸ್ಕೀಮ್ ಮತ್ತು ಉಳಿದ ಶೇಕಡಾ 3.67 ರಷ್ಟು ಇಪಿಎಫ್ ಖಾತೆಗೆ ಜಮೆಯಾಗುತ್ತೆ.

ಸರ್ಕಾರವು ನೌಕರರ ಪಿಂಚಣಿ ಯೋಜನೆ 1995:

ಇದರಲ್ಲಿ ಸುಧಾರಣೆಯನ್ನ ಮಾಡ್ತಾ ಇದೆ ಪ್ರಸ್ತುತ 8.33 ಶೇಕಡ ಉದ್ಯೋಗದಾತ ಕೊಡುಗೆಯನ್ನ ಇಪಿಎಸ್ 95 ನಲ್ಲಿ ಪಾವತಿಸಲಾಗುತ್ತಿದೆ ಪ್ರಸ್ತಾವಿತ ಬದಲಾವಣೆಗಳು ನೌಕರರು ತಮ್ಮ ಪಿಂಚಣಿ ಪ್ರಯೋಜನಗಳನ್ನು ಹೆಚ್ಚಿಸುವುದಕ್ಕೆ ಯೋಜನೆಗೆ ನೇರವಾಗಿ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.

ಪ್ರಸ್ತುತ ಪಿಎಫ್ ಹಣವನ್ನು ಹಿಂಪಡೆಯುವುದಕ್ಕೆ ಆನ್ಲೈನ್ ಅಥವಾ ಆಫ್ಲೈನ್ ಪ್ರಕ್ರಿಯೆಗಳನ್ನು ಅನುಸರಿಸಬೇಕು ಈ ಪಿಎಫ್ ಓ ಪೋರ್ಟಲ್ ನಲ್ಲಿ ನೊಂದಾಯಿತ ಖಾತೆ ಮತ್ತು ಯುಎ ಎನ್ ಅಂದ್ರೆ ಯೂನಿವರ್ಸಲ್ ಅಕೌಂಟ್ ನಂಬರ್ ಇರುವ ಸದಸ್ಯರು ತಮ್ಮ ಖಾತೆಗೆ ಲಾಗಿನ್ ಆಗಿ ಹಣದ ಬೇಡಿಕೆಯನ್ನು ಸಲ್ಲಿಸಬೇಕು.

ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಕೆಲವು ದಿನಗಳು ಕಾಯಬೇಕಾಗುತ್ತೆ ಈ ಹೊಸ ಯೋಜನೆಯ ಮೂಲಕ ಸಾಮಾಜಿಕ ಭದ್ರತೆಯೊಂದಿಗೆ ದೇಶದ ಆರ್ಥಿಕತೆಯನ್ನು ಚುರುಕು ಮಾಡುವುದಕ್ಕೆ ಕೇಂದ್ರ ಸರ್ಕಾರ ಗಮನಹರಿಸಿದೆ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಉದ್ಯೋಗಿಗಳ ಮತ್ತು ಉದ್ಯೋಗದಾತರ ನಡುವೆ ಹೆಚ್ಚಿನ ಪಾರದರ್ಶಕತೆ ಮತ್ತು ಅನುಕೂಲತೆ ಉಂಟಾಗಲಿದೆ ಯೋಜನೆ ಮುಂದಿನ ಕೆಲ ತಿಂಗಳುಗಳಲ್ಲಿ ಪರಿಚಯಗೊಂಡರೆ ದೇಶದ ನೂರಾರು ಪಿಎಫ್ ಸದಸ್ಯರು ಇದರ ಲಾಭ ಪಡೆಯಲಿದ್ದಾರೆ.

ಈ ಮೂಲಕ ಪಿಎಫ್ ವ್ಯವಸ್ಥೆಯ ತಂತ್ರಜ್ಞಾನ ಪೂರ್ಣಗೊಂಡ ಹೊಸ ಅಧ್ಯಾಯ ಪ್ರಾರಂಭವಾಗಲಿದೆ ಈ ಕ್ರಮಗಳು ಇಪಿಎಫ್ ಓ ವ್ಯವಸ್ಥೆಯಲ್ಲಿ ಸೀಮಿತ ಪ್ರವೇಶ ಮತ್ತು ನಮ್ಯತೆಯ ಬಗ್ಗೆ ದೀರ್ಘಕಾಲದ ಕಾಳಜಿಯನ್ನು ಪರಿಹರಿಸುವ ಮೂಲಕ ದೀರ್ಘಾವಧಿಯ ಆರ್ಥಿಕ ಭದ್ರತೆಯೊಂದಿಗೆ ತಕ್ಷಣದ ದ್ರವ್ಯತೆ ಅಗತ್ಯತೆ ಗಳನ್ನ ಸಮತೋಲನಗೊಳಿಸುವ ಗುರಿ ಹೊಂದಿದೆ ಇಪಿಎಫ್ 30 ಸುಧಾರಣೆಗಳನ್ನ 2025ರ ಆರಂಭದಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದು ಭಾರತದ ಉದ್ಯೋಗಿಗಳಿಗೆ ತಮ್ಮ ಉಳಿತಾಯವನ್ನು ನಿರ್ವಹಿಸುವ ಮತ್ತು ಬಳಸಿಕೊಳ್ಳುವ ರೀತಿಯಲ್ಲಿ ಪರಿವರ್ತನೆಯ ಬದಲಾವಣೆಯನ್ನು ಮಾಡಲು ಅನುವು ಮಾಡಿಕೊಡುತ್ತೆ.

ಇದನ್ನೂ ಓದಿ: PMAY 2.0 Urban: 2024-25 ಆನ್ಲೈನ್ ಅರ್ಜಿ ಆರಂಭ.!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment