ಎಲ್ಲರಿಗೂ ನಮಸ್ಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ ವಿಚಾರವಾಗಿ ಒಂದು ಹೊಸ ಅಪ್ಡೇಟ್ ಬಂದಿದೆ. ಈಗಾಗಲೇ ಎಲ್ಲಾ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಇನ್ನು ನಮಗೆ ಯಾಕೆ ಬಿಡುಗಡೆಯಾಗಿಲ್ಲ ಅಥವಾ ಜಮಾ ಆಗಿಲ್ಲ ಎಂದು ಚಿಂತೆಗೆ ಒಳಗಾಗಿದ್ದಾರೆ.
15ನೇ ಕಂತಿನ ಹಣದ ಬಿಡುಗಡೆ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಮುಖ್ಯವಾದ ಅಪ್ಡೇಟ್ ಅನ್ನು ನೀಡಿದ್ದಾರೆ. ಹಾಗಾದರೆ ಲಕ್ಷ್ಮಿ ಹೆಬ್ಬಾಳ್ಕರ್ ಏನು ಹೇಳಿದ್ದಾರೆ.
ಹಾಗೂ ಗೃಹಲಕ್ಷ್ಮಿ ಯೋಜನೆಯ15ನೇ ಕಂತಿನ ಹಣ ಯಾವಾಗ ಎಲ್ಲರಿಗೂ ಜಮಾ ಆಗುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಗೃಹಲಕ್ಷ್ಮಿ ಹಣ ಬಿಡುಗಡೆ ವಿಚಾರವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಂಗ್ಯ ಹೇಳಿಕೆ:
ಸ್ನೇಹಿತರೆ ಗೃಹಲಕ್ಷ್ಮಿಯ ಯೋಜನೆಯ 15ನೇ ಕಂತಿನ ಹಣ ಇನ್ನೂ ಕೂಡ ಫಲಾನುಭವಿಗಳಿಗೆ ಖಾತೆಗೆ ಜಮಾ ಆಗಿಲ್ಲ. ಈ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ರನ್ನು ಯಾಕೆ ಹಣ ಬಂದಿಲ್ಲ ಹಾಗೂ ಹಣ ಬರೋದು ಏಕೆ ತಡವಾಗುತ್ತಿದೆ ಎಂದು ಪ್ರಶ್ನಿಸಿದಾಗ ಅವರು ಒಂದು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರನ್ನು ಹಣ ಬರಲು ಏಕೆ ತಡವಾಗುತ್ತಿದೆ ಎಂದು ಪ್ರಶ್ನಿಸಿದಾಗ ನಿಮಗೆ ಪ್ರತಿ ತಿಂಗಳು ಸಂಬಳ ಸರಿಯಾಗಿ ಬರುತ್ತದ ಎಂದು ವ್ಯಂಗ್ಯವಾಗಿ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕೂಡ ಬಹುಮುಖ್ಯವಾದ ಯೋಜನೆಯಾಗಿದೆ. ಆದರೆ ಫಲಾನುಭವಿಗಳಿಗೆ ಯೋಜನೆ ಹಣವು ಜಮಾ ಆಗಲು ಪ್ರತಿ ತಿಂಗಳು ವಿಳಂಬ ಆಗುತ್ತಿದೆ ಹಾಗೂ ಇದರ ಆರೋಪವು ಕರ್ನಾಟಕದಲ್ಲಿ ಎಲ್ಲಾ ಕಡೆ ಕೇಳಿಬರುತ್ತದೆ.
ನಿಮಗೆ ಪ್ರತಿ ತಿಂಗಳು ಸಂಬಳ ಸರಿಯಾಗಿ ಬಂದುಬಿಡುತ್ತದ – ಲಕ್ಷ್ಮಿ ಹೆಬ್ಬಾಳ್ಕರ್:
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಬರಲು ಹಾಗೂ ಕಾಂಗ್ರೆಸ್ ಇಂದು ಅಧಿಕಾರದಲ್ಲಿ ಇರಲು ಗೃಹಲಕ್ಷ್ಮಿ ಯೋಜನೆ ಹಾಗೂ ಇತರ ಗ್ಯಾರಂಟಿ ಯೋಜನೆಗಳು ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸಿದೆ. ಆದರೆ ಇದರ ಬಗ್ಗೆ ಈಗ ವೋಟ್ ಹಾಕಿರುವ ಫಲಾನುಭವಿಗಳು ಕೇಳಲು ಹೋದರೆ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಂಗ್ಯವಾಗಿ ಉತ್ತರವನ್ನು ನೀಡಿದ್ದಾರೆ.
ನಿಮಗೆ ಪ್ರತಿ ತಿಂಗಳು ಸಂಬಳ ಸರಿಯಾಗಿ ಬಂದುಬಿಡುತ್ತದ ಎಂದು ಕೇಳಿದ್ದಾರೆ ಹಾಗೂ ಇದಲ್ಲದೆ ಸರ್ಕಾರದ ಸಂಬಳ ಕೂಡ ಸಾಕಷ್ಟು ಬಾರಿ ವಿಳಂಬವಾಗುತ್ತದೆ.
ಈ ರೀತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರತಿ ತಿಂಗಳು ಹಣ ಯಾಕೆ ಬರಲು ತಡ ಆಗುತ್ತಿದೆ. ಎಂದು ಫಲಾನುಭವಿಗಳಿಗೆ ಉತ್ತರಿಸಲು ಹೋಗಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಹಾಗೂ ಇದರ ಜೊತೆ ಹಣ ಬಿಡುಗಡೆ ಮಾಡುವುದು ಒಂದು ದಿನ ವಿಳಂಬವಾದರೂ ನನಗೆ ಸುಮಾರು ಐನೂರು ಕರೆಗಳು ಬರುತ್ತದೆ ಎಂದು ಕೂಡ ಹೇಳಿದ್ದಾರೆ.
ಇದನ್ನೂ ಓದಿ: ಈ ಯೋಜನೆ ಜಾರಿಗೆ ಬಂದರೆ ATM ಮೂಲಕ PF ಹಣ ತೆಗೆಯಬಹುದು.!










