ನಮಸ್ಕಾರ ಗೆಳೆಯರೇ, 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಭರ್ಜರಿ ಸಿಹಿ ಸುದ್ದಿ ಬಂದಿದೆ ಅದು ಏನಪ್ಪಾ ಎಂದು ನಿಮಗೆ ಇಲ್ಲಿ ನಾನು ತಿಳಿಸಿಕೊಡುತ್ತೇನೆ.
ಕರ್ನಾಟಕ ಸರ್ಕಾರವು ಉಚಿತ ಸೈಕಲ್ ಯೋಜನೆಯನ್ನು ಪುನರಾರಂಭ ಮಾಡಲು ಯೋಚಿಸಿದೆ. ಹೌದು ಗೆಳೆಯರೇ 2026 ನಲ್ಲಿ ಯೋಜನೆಯನ್ನು ಪುನ ಆರಂಭಗೊಳಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ.
ಇದು ನಮ್ಮ 8ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಭರ್ಜರಿ ಸುದ್ದಿಯಾಗಿದೆ. ನಿಮ್ಮೆಲ್ಲರಿಗೂ ಗೊತ್ತಿರಬಹುದು ಕೋವಿಡ್ 19 ಬಂದ ಸಮಯದಲ್ಲಿ ಈ ಯೋಜನೆಯನ್ನು ನಿಲ್ಲಿಸಿದ್ದರು.
ಯಾಕೆಂದರೆ ಸಾಕಷ್ಟು ಬಜೆಟ್ ಇಶ್ಯೂ ಆಗಿರ ಕಾರಣದಿಂದ ಈ ಯೋಜನೆಯನ್ನು ಮತ್ತೆ ತರಲಿಲ್ಲ ಆದರೆ ನಮ್ಮ ಕರ್ನಾಟಕ ಸರ್ಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅದ್ರಲ್ಲೂ ಮುಖ್ಯವಾದ ಗ್ರಾಮೀಣ ಭಾಗದಲ್ಲಿರುವ ಬಾಲಕಿಯರಿಗೆ ಒಂದು ದೊಡ್ಡ ಸಿಹಿ ಸುದ್ದಿಯಾಗಿದೆ ಎನ್ನಬಹುದು. ಅದು ಏನೆಂದರೆ ನಮ್ಮ ಕರ್ನಾಟಕ ಸರ್ಕಾರವು ಉಚಿತ ಸೈಕಲ್ ಯೋಜನೆಯನ್ನು ಮತ್ತೆ ಪ್ರಾರಂಭಗೊಳಿಸಲು ನಿರ್ಧರಿಸಿದಾರೆ.
ಕರ್ನಾಟಕ ಉಚಿತ ಸೈಕಲ್ ಯೋಜನೆ ಪುನರಾರಂಭ
| ವಿವರ | ಮಾಹಿತಿ |
| ಯೋಜನೆ ಹೆಸರು | ಕರ್ನಾಟಕ ಉಚಿತ ಸೈಕಲ್ ಯೋಜನೆ |
| ರಾಜ್ಯ | ಕರ್ನಾಟಕ |
| ಫಲಾನುಭವಿಗಳು | 8ನೇ ತರಗತಿಯ ವಿದ್ಯಾರ್ಥಿಗಳು |
| ಅರ್ಹ ಶಾಲೆಗಳು | ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು |
| ಮುಖ್ಯ ಉದ್ದೇಶ | ಶಾಲೆಯಿಂದ ಹೊರಗುಳಿಯುವ (Dropout) ಮಕ್ಕಳ ಪ್ರಮಾಣ ತಗ್ಗಿಸುವುದು |
| ಪ್ರಸ್ತುತ ಸ್ಥಿತಿ | ರಾಜ್ಯ ನೀತಿ ಮತ್ತು ಯೋಜನಾ ಆಯೋಗದಿಂದ ಮರುಜಾರಿಗೆ ಶಿಫಾರಸು (2026-27 ಬಜೆಟ್ ನಿರೀಕ್ಷೆ) |
ಈ ಯೋಜನೆಯನ್ನು ಪುನಃ ಆರಂಭಿಸಿದ್ದಾರೆ?
ಈ ಉಚಿತ ಸೈಕಲನ್ನು ನೀಡುವ ಯೋಜನೆಯನ್ನು ನಿಲ್ಲಿಸಿದ ನಂತರ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಗಳನ್ನು ಡ್ರಾಪೌಟ್ ಮಾಡುವ ಸಂಖ್ಯೆ ಹೆಚ್ಚಾಗಿದೆ.
ಅದು ಶೇಕಡ 22 ಪಾರ್ಟ್ 9% ತಲುಪಿದೆ (22.9%) ಅದನ್ನು ಕಂಡ ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿ ನಮ್ಮ ರಾಜ್ಯದ ಮಕ್ಕಳಿಗೆ ಒಂದು ಒಳ್ಳೆಯ ನಿರ್ಧಾರವನ್ನು ತೊಗೊಂಡಿದ್ದಾರೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು (Eligibility Criteria):
- ತರಗತಿ: ಯಾವುದೇ ವಿದ್ಯಾರ್ಥಿ ಆದರೂ ಅವರು 8ನೇ ತರಗತಿಯಲ್ಲಿ ಓದುತ್ತಿರಬೇಕು ಇದು ಕಡ್ಡಾಯವಾಗಿದೆ.
- ಶಾಲೆಯ ವಿಧ: ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ಅಂದರೆ ಗೌರ್ಮೆಂಟ್ ಅಥವಾ ಸರ್ಕಾರಿ ಅನುದಾನಿತ ಶಾಲೆಯ ವಿದ್ಯಾರ್ಥಿ ಆಗಿರಬೇಕು. ಅಕಸ್ಮಾತಾಗಿ ಅವರು ಪ್ರೈವೇಟ್ ಶಾಲೆ ಅವರಾಗಿದ್ದರೆ ಅವರಿಗೆ ಈ ಯೋಜನೆ ಸಿಗುವುದಿಲ್ಲ.
- ಬೇಕಾಗಿರುವ ಡಾಕ್ಯುಮೆಂಟ್: ಮೊದಲು ಬಿಪಿಎಲ್ ಕಾರ್ಡ್ ಎಂದರೆ ಬಡತನ ರೇಖೆಗಿಂತ ಕೆಳಗಿಲ್ಲ ಈ ಕಾರ್ಡ್ ಆ ಮಕ್ಕಳ ಕುಟುಂಬದವರು ಬಂದಿರಬೇಕು ಅಥವಾ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಆ ವಿದ್ಯಾರ್ಥಿ ಇರಬೇಕು ಹಾಲು ಮಾತ್ರ ನೀವು ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿದೆ.
ಈ ಯೋಜನೆಗಳಿಂದ ಆಗುವ ಪ್ರಮುಖ ಲಾಭಗಳು ಬೆನಿಫಿಟ್ಸ್ ಏನು?
- ಹಾಜರಾತಿ ಹೆಚ್ಚಳ, ಅಂದರೆ ಶಾಲೆಗೆ ಹೋಗಲು ಮಕ್ಕಳ ಕೈಯಲ್ಲಿ ಸೈಕಲ್ ಇದ್ದರೆ ಬೇಗ ಹಾಜರಾಗುತ್ತಾರೆ. ಅಷ್ಟೇ ಅಲ್ಲದೆ ಸಮಯ ಕೂಡ ಉಳಿಯುತ್ತದೆ. ಹಾಗೂ ಸಾಕಷ್ಟು ಮಕ್ಕಳು ಸೈಕಲ್ ನಿಂದ ಸ್ಕೂಲ್ಗೆ ಹೋಗಬೇಕಲ್ಲಪ್ಪ ಎಂಬ ಖುಷಿಯಿಂದ ಸೈಕಲನ್ನು ತಗೊಂಡು ಹೋಗುತ್ತಾರೆ.
- ಬಡ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿಗೆ ಬಸ್ ನಿಂದ ಪ್ರಯಾಣ ಮಾಡಲು ಕಷ್ಟ ಆಗ್ತಿರುತ್ತದೆ. ಅವರಿಗೆಲ್ಲರಿಗೂ ಇದು ಒಂದು ಒಳ್ಳೆಯ ವಿಚಾರವಾಗುವುದು ಯಾಕಂದರೆ ಉಚಿತ ಸೈಕಲ್ ಸಿಕ್ಕಿದರೆ ಅವರು ಸೈಕಲ್ ನಿಂದ ಪ್ರತಿ ದಿನ ಶಾಲೆಗೆ ಹೋಗಬಹುದು.
- ಅಷ್ಟೇ ಅಲ್ಲದೆ ಇದು ಒಂದು ಸುರಕ್ಷಿತ ಪ್ರಯಾಣ ಆಗುತ್ತದೆ, ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶನಲ್ಲಿ ಇರುವ ವಿದ್ಯಾರ್ಥಿಗಳಿಗೆ ಅದ್ರಲ್ಲಿ ಹೆಣ್ಣು ಮಕ್ಕಳಿಗೆ ಶಾಲೆಗೆ ಹೋಗಲು ಇದು ಒಂದು ಸುರಕ್ಷಿತ ಹಾಗೂ ಉಚಿತ ಸಾರಿಗೆ ವ್ಯವಸ್ಥೆಯನ್ನು ನಮ್ಮ ಸರ್ಕಾರ ನೀಡಲು ತೀರ್ಮಾನಿಸಿದೆ.
ಈ ಉಚಿತ ಸೈಕಲ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು? (How to Apply)
ಈ ಉಚಿತ ಯೋಜನೆ ಸೈಕಲ್ ಪಡೆಯಲು ಅಪ್ಲಿಕೇಶನ್ ಹೇಗೆ ಸಲ್ಲಿಸಬಹುದು? ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಮಾಹಿತಿ ನೋಡಿ ಗೆಳೆಯರೇ
ಈ ಯೋಜನೆಗೆ ಯಾವುದೇ ವಿದ್ಯಾರ್ಥಿಗಳು ಅಥವಾ ಪೋಷಕರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಯಾಕೆಂದರೆ ನಾನು ನಿಮಗೆ ಇಲ್ಲಿ ಕೆಳಗೆ ತಿಳಿಸಿಕೊಡುತ್ತೇನೆ ನೋಡಿ.
ಮೊದಲು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಅಂದರೆ ಓದುತ್ತಿರುವ ಶಾಲೆಯ ಮುಖ್ಯ ಉಪಾಧ್ಯಾಯರು ಅಂದರೆ ಹೆಡ್ ಮಾಸ್ಟರ್ ರವರು ತಮ್ಮ ಶಾಲೆಯಲ್ಲಿ ಇರುವ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಮಾಡಿ ಅದನ್ನು ಶಿಕ್ಷಣ ಇಲಾಖೆ ಅಂದ್ರೆ ಬಿಇಓ ಆಫೀಸಿಗೆ ಮೊದಲು ಕಳಸಬೇಕು. ಇದು ಎಲ್ಲಾ ಶಾಲೆಗೆ ಕಡ್ಡಾಯವಾಗಿದೆ ಆ ಕಾರಣದಿಂದ ಹೆಡ್ ಮಾಸ್ಟರ್ ಅವರು ಇದನ್ನು ಕಳಿಸಿರುತ್ತಾರೆ.
- ಅನಂತರ ನಮ್ಮ ಸರ್ಕಾರ ಇದನ್ನು ಒಮ್ಮೆ ಪರಿಶೀಲಿಸಿ, ಆ ಶಾಲೆಗೆ ಒಂದು ಭೇಟಿ ನೀಡಿ ಎಲ್ಲ ಮಕ್ಕಳನ್ನು ನೋಡಿ ಪಟ್ಟಿಯನ್ನು ಕ್ರಾಸ್ ಚೆಕ್ ಮಾಡಿದ ನಂತರ ಗೌರ್ಮೆಂಟ್ಗೆ ತಿಳಿಸುತ್ತಾರೆ.
- ಶಾಲೆಯ ಮುಗಿಯುವ ಸಮಯದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ಗಳನ್ನು ಉಚಿತವಾಗಿ ನೀಡುತ್ತಾರೆ.
Read More:
ಕೇಂದ್ರ ಸರ್ಕಾರದ PMVBRY ಯೋಜನೆ: ಅರ್ಹ ಫಲಾನುಭವಿಗಳಿಗೆ ಸಿಗಲಿರುವ ಸೌಲಭ್ಯಗಳೇನು?
Mobile Canteen ಸಬ್ಸಿಡಿ ಯೋಜನೆ 2026: ಸ್ವಂತ ಉದ್ಯೋಗ ಆರಂಭಿಸಲು ಸರ್ಕಾರದಿಂದ ₹3 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ!










