ಎಲ್ಲರಿಗೂ ನಮಸ್ಕಾರ, ಶೇರುಪೇಟೆಯ ಏರಳತಕ್ಕೆ ಬೆಸೆದುಕೊಂಡಿರೋ ಹೊಸ ಪಿಂಚಣಿ ವ್ಯವಸ್ಥೆಯು ನಮಗೆ ಬೇಡವೇ ಬೇಡ ತಿಂಗಳು ತಿಂಗಳು ನಿಗತಿತ ಹಣ ಕೈ ಸೇರೋ ಹಳೆಯ ಪಿಂಚಣಿ ಯೋಜನೆಯನ್ನೇ ಕೊಡಿ ಅಂತ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರರು ನಿರಂತರ ಹೋರಾಟ ನಡೆಸಿದರು.
ಅದಕ್ಕೆ ಫಲವಾಗಿ ಈಗ ಕೇಂದ್ರ ಸರ್ಕಾರವು ಮತ್ತೊಂದು ಹೊಸ ಪಿಂಚಣಿಗೆ ಅನುಮೋದನೆ ಕೊಟ್ಟಿದೆ ಅದು UPS ಅಥವಾ ಏಕೀಕೃತ ಪಿಂಚಣಿ ವ್ಯವಸ್ಥೆ. NPS ಜೊತೆ ಬಂತು UPS ಹಳೆಯ ಪಿಂಚಣಿ ಯೋಜನೆ.
OPS ಯೋಜನೆ ಕಳೆದು ಹೋಯಿತು ಹೊಸ ಪಿಂಚಣಿ ವ್ಯವಸ್ಥೆ NPS ವಿರುದ್ಧ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದು NPS ಮತ್ತು OPS ಸಂಘರ್ಷದ ಮಧ್ಯೆ ಕೇಂದ್ರ ಸರ್ಕಾರವು ಶನಿವಾರ ಮಹತ್ವದ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರಿ ನೌಕರರಿಗೆ 3 ಬಗೆಯ ಪಿಂಚಣಿ ಲಾಭವಾಗಲಿದೆ
- ಸರ್ಕಾರಿ ಉದ್ಯೋಗಿಗಳಿಗೆ ಖಚಿತ ಪಿಂಚಣಿ
- ಕುಟುಂಬ ಪಿಂಚಣಿ
- ಖಚಿತ ಕನಿಷ್ಠ ಪಿಂಚಣಿ
ಆ 3 ಲಾಭಗಳು ಇಲ್ಲಿವೆ: ಏಕೀಕೃತ ಪಿಂಚಣಿ ಯೋಜನೆ ಬಹುತೇಕ ಹಳೆಯ ಪಿಂಚಣಿ ಯೋಜನೆಯನ್ನೇ ಹೋಲ್ತೆ ಆದರೂ ಅದಕ್ಕಿಂತ ಹೆಚ್ಚಿನ ಲಾಭ ಯುಪಿಎಸ್ ನಲ್ಲಿ ಸಿಗುತ್ತೆ ಅಂತ ಹೇಳಲಾಗಿದೆ. ಸರ್ಕಾರಿ ಉದ್ಯೋಗಿಗಳಿಗೆ ಸೇವೆಯ ಬಳಿಕ ಖಚಿತ ಪಿಂಚಣಿ ಇದರಲ್ಲಿ ಸಿಗುತ್ತೆ.
ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರು ಅಕಸ್ಮಾತ್ ಸಾವಿಗಿಡಾದರೆ ಅವರ ಕುಟುಂಬದವರಿಗೆ ಪಿಂಚಣಿ ಕೈ ಸೇರುತ್ತೆ ಹಾಗೆ ಸೇವಾ ಬದಿಕ್ಕೆ ತಕ್ಕಂತೆ ಖಚಿತವಾದ ಕನಿಷ್ಠ ಪಿಂಚಣಿ ಯೋಜನೆ ಇದರಲ್ಲಿ ಸಿಗುತ್ತೆ.
ಈ ಯೋಜನೆಯು 23 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಪ್ರಯೋಜನ ಒದಗಿಸುತ್ತೆ ಅಂತ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಯುಪಿಎಸ್ ಗೆ ಅನುಮೋದನೆ ದೊರಕಿದೆ.
ಈ ನೂತನ ಪಿಂಚಣಿ ಯೋಜನೆಯು 2025ರ ಏಪ್ರಿಲ್ 1 ರಿಂದ ಅಸ್ತಿತ್ವಕ್ಕೆ ಬರುತ್ತೆ ಈ ವ್ಯವಸ್ಥೆಯಲ್ಲಿ ಮೂಲ ವೇತನದ ಶೇಕಡ 50% ರಷ್ಟು ಪಿಂಚಣಿಯಾಗಿ ಸಿಗುತ್ತೆ.
UPS ಆಯ್ಕೆಯು ಕೇಂದ್ರ ಸರ್ಕಾರಿ ನೌಕರರಿಗೆ ಕಡ್ಡಾಯ ಆಗಿರೋದಿಲ್ಲ
NPS ಮತ್ತೆ ಏಕೀಕೃತ ಪಿಂಚಣಿ ಯೋಜನೆ ನಡುವೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಉದ್ಯೋಗಿಗಳಿಗೆ ಅವಕಾಶ ಇರುತ್ತೆ ಸರ್ಕಾರಿ ಹುದ್ದೆಯಲ್ಲಿ ಕನಿಷ್ಠ 25 ವರ್ಷ ಸೇವೆ ಸಲ್ಲಿಸಿರೋ ನೌಕರರಿಗೆ ಅವರ ಬೇಸಿಕ್ ಸ್ಯಾಲರಿಯಲ್ಲಿ ಶೇಕಡ 50 ರಷ್ಟು ಪಿಂಚಣಿಯಾಗಿ ಸಿಗುತ್ತೆ. ಅವರ ನಿವೃತ್ತಿಗೂ ಕೊನೆಯ 12 ತಿಂಗಳಿಗೂ ಮುನ್ನ ಪಡೆದಿರೋ ಸರಾಸರಿ ಮೂಲ ವೇತನದ ಶೇಕಡ 50 ರಷ್ಟು ಮೊತ್ತವನ್ನ ಪಿಂಚಣಿಯಾಗಿ ಪಡೆಯುತ್ತಾರೆ 25 ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದವರಿಗೆ ಪಿಂಚಣಿಯ ಮೊತ್ತವು ಕಡಿಮೆಯಾಗುತ್ತೆ.
ಪಿಂಚಣಿ ಪಡೆಯೋಕೆ ಕನಿಷ್ಠ 10 ವರ್ಷ ಸೇವೆ
ಈ ಏಕೀಕೃತ ಪಿಂಚಣಿ ಯೋಜನೆಯ ಲಾಭ ಪಡೆಯೋಕೆ ಸರ್ಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕಾಗುತ್ತೆ ಅಂತ ನೌಕರರು ನಿವೃತ್ತರಾದ ಮೇಲೆ ಕನಿಷ್ಠ 10,000 ರೂಪಾಯಿಯನ್ನ ತಿಂಗಳಿಗೆ ಪೆನ್ಶನ್ ಆಗಿ ಪಡಿತಾರೆ ಇನ್ನು ಪಿಂಚಣಿದಾರರು ಸಾವಿನ ನಂತರ ಅವರ ಕುಟುಂಬಕ್ಕೆ ಪಿಂಚಣಿ ಕೈ ಸೇರುತ್ತೆ.
ಸಾವಿಗೂ ಮುನ್ನ ಕೊನೆಯ ತಿಂಗಳು ಪಡೆದಿರೋ ಪಿಂಚಣಿ ಮೊತ್ತದಲ್ಲಿ ಶೇಕಡ 60% ರಷ್ಟು ಮೊತ್ತವನ್ನ ಕುಟುಂಬಕ್ಕೆ ಪೆನ್ಶನ್ ರೂಪದಲ್ಲಿ ಕೊಡಲಾಗುತ್ತೆ. ಪ್ರಸ್ತುತ ಇರೋ ಪಿಂಚಣಿ ಯೋಜನೆ ಅನ್ವಯ ಉದ್ಯೋಗಿಗಳು ತಮ್ಮ ವೇತನದ ಶೇಕಡ 10 ರಿಂದ 14% ರಷ್ಟು ಪಾಲನ್ನ NPS ಖಾತೆಗೆ ಕೊಡ್ತಿದ್ದಾರೆ ಅದಕ್ಕೆ ಕೇಂದ್ರ ಸರ್ಕಾರ ಶೇಕಡ 14 ರಷ್ಟು ಪಾಲನ್ನ ಕೊಡ್ತಿದೆ ಈ ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇಕಡ 18.5 ಕ್ಕೆ ಹೆಚ್ಚಿಸಲಾಗುತ್ತೆ ನೌಕರರ ಕೊಡುಗೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ.
ರಾಜ್ಯ ಸರ್ಕಾರದ ನೌಕರರು ಸಹ ಈ ಯೋಜನೆಯ ಬಯಸಿದರೆ?
ಇದರ ಪ್ರಯೋಜನ ಪಡೆಯುವವರ ನೌಕರರ ಸಂಖ್ಯೆ 90 ಲಕ್ಷಕ್ಕೆ ಏರಿಕೆಯಾಗುತ್ತೆ ರಾಜ್ಯ ಸರ್ಕಾರಗಳು ಹೆಚ್ಚುವರಿ ಹೊರೆಯನ್ನ ಬರಿಸಬೇಕಾಗುತ್ತೆ. ಈ ಹೊಸ ಯೋಜನೆಯಲ್ಲಿ ನಿವೃತ್ತಿಯ ಸಂದರ್ಭದಲ್ಲಿ ಗ್ರಾಚುಟಿ ಜೊತೆಗೆ ಒಂದು ದೊಡ್ಡ ಮೊತ್ತ ಹಣ ಕೈ ಸೇರುತ್ತೆ ನೌಕರರು ಪ್ರತಿ 6 ತಿಂಗಳು ಸೇವೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಒಂದು ತಿಂಗಳ ಬೇಸಿಕ್ ಸ್ಯಾಲರಿ ಮತ್ತು ತುಟ್ಟಿಬತ್ತಿ ಅಂದ್ರೆ DA ನಲ್ಲಿ 10ನೇ ಒಂದು ಭಾಗದ ಜೊತೆಗೆ ಒಟ್ಟು ಮೊತ್ತವನ್ನು ನಿವೃತ್ತಿ ದಿನಾಂಕದಂದು ಪಾವತಿಸಲಾಗುತ್ತೆ. ಈಗಾಗಲೇ ನಿವೃತ್ತಿ ಹೊಂದಿರುವವರು ಹಾಗೂ 2025ರ ಮಾರ್ಚ್ 31 ರವರೆಗೂ ನಿವೃತ್ತಿ ಆಗಲಿರುವ ನೌಕರರಿಗೆ ಈ UPS ಅನ್ವಯವಾಗುತ್ತೆ.
ಇದನ್ನೂ ಓದಿ: ಹೊಸ ಯೋಜನೆ NPS ವಾತ್ಸಲ್ಯ Scheme!!










