ನೀವು ಒಂದು ಬಾರಿ ಹಣ ಹೂಡಿಕೆ ಮಾಡಿ ಪ್ರತೀ ತಿಂಗಳು ಖಚಿತ ಆದಾಯ ಪಡೆಯಲು ಬಯಸುತ್ತೀರಾ? ಬ್ಯಾಂಕ್ FD ಗಿಂತ ಹೆಚ್ಚು ನಿಯಮಿತ ಆದಾಯ ಬೇಕೇ? ಹಾಗಿದ್ದರೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme – MIS) ನಿಮ್ಮಗಾಗಿ ಉತ್ತಮ ಆಯ್ಕೆಯಾಗಬಹುದು.
ಈ ಯೋಜನೆಯನ್ನು India Post ಭಾರತ ಸರ್ಕಾರದ ಬೆಂಬಲದೊಂದಿಗೆ ನಡೆಸುತ್ತದೆ. ಆದ್ದರಿಂದ ಇದು ಅತ್ಯಂತ ಸುರಕ್ಷಿತ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ.
Post Office MIS ಎಂದರೇನು?
ಈ ಯೋಜನೆಯಲ್ಲಿ ನೀವು ಒಮ್ಮೆಲೇ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬೇಕು. ಆ ಹೂಡಿಕೆಗೆ ಸರ್ಕಾರ ನಿಗದಿಪಡಿಸಿರುವ ಬಡ್ಡಿದರದಂತೆ ಪ್ರತೀ ತಿಂಗಳು ಬಡ್ಡಿ ಹಣವನ್ನು ಪಡೆಯಬಹುದು.
ಇದು ವಿಶೇಷವಾಗಿ ನಿವೃತ್ತರು, ಗೃಹಿಣಿಯರು ಹಾಗೂ ಸ್ಥಿರ ಆದಾಯ ಬಯಸುವವರಿಗೆ ಸೂಕ್ತವಾಗಿದೆ.
ಬಡ್ಡಿದರ ಮತ್ತು ಆದಾಯ
ಪೋಸ್ಟ್ ಆಫೀಸ್ MIS ಬಡ್ಡಿದರವನ್ನು ಸರ್ಕಾರ ತ್ರೈಮಾಸಿಕವಾಗಿ ಪರಿಷ್ಕರಿಸುತ್ತದೆ. ಪ್ರಸ್ತುತ ಬಡ್ಡಿದರವು ಸುಮಾರು 7% ಕ್ಕಿಂತ ಹೆಚ್ಚು (ಸರ್ಕಾರದ ತೀರ್ಮಾನಕ್ಕೆ ಒಳಪಟ್ಟಿರುತ್ತದೆ).
ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಪ್ರತೀ ತಿಂಗಳು ಬಡ್ಡಿ ನಿಮ್ಮ ಪೋಸ್ಟ್ ಆಫೀಸ್ ಸೇವಿಂಗ್ ಖಾತೆಗೆ ಜಮಾ ಆಗುತ್ತದೆ.
ಹೂಡಿಕೆ ಮಿತಿ
ಈ ಯೋಜನೆಯಲ್ಲಿ ಕನಿಷ್ಠ ₹1,000 ರಿಂದ ಹೂಡಿಕೆ ಪ್ರಾರಂಭಿಸಬಹುದು. ವೈಯಕ್ತಿಕ (Single) ಖಾತೆಯಲ್ಲಿ ಗರಿಷ್ಠ ₹9 ಲಕ್ಷವರೆಗೆ ಹೂಡಿಕೆ ಮಾಡಲು ಅವಕಾಶ ಇದೆ, ಜಂಟಿ (Joint) ಖಾತೆಯಲ್ಲಿ ಗರಿಷ್ಠ ₹15 ಲಕ್ಷವರೆಗೆ ಹೂಡಿಕೆ ಮಾಡಬಹುದು. ನೀವು ವೈಯಕ್ತಿಕ ಖಾತೆ, ಮೂವರು ವಯಸ್ಕರ ತನಕ ಜಂಟಿ ಖಾತೆ ಅಥವಾ ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ (Guardian ಮೂಲಕ) ಖಾತೆ ತೆರೆಯಬಹುದು.
MIS ಖಾತೆ ತೆರೆಯಲು ಬೇಕಾಗುವ ದಾಖಲೆಗಳ:
ಹೊಸ ಖಾತೆ ತೆರೆಯುವಾಗ ಕೆಳಗಿನ ದಾಖಲೆಗಳು ಅಗತ್ಯ:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವಿಳಾಸದ ಪ್ರಮಾಣಪತ್ರ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಪೋಸ್ಟ್ ಆಫೀಸ್ ಸೇವಿಂಗ್ ಖಾತೆ ವಿವರಗಳು
ಪೋಸ್ಟ್ ಆಫೀಸ್ MIS ಖಾತೆ ತೆರೆಯುವ ವಿಧಾನ
ಹಂತ 1:
ನಿಮ್ಮ ಸಮೀಪದ ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ.
ಹಂತ 2
MIS ಅರ್ಜಿ ನಮೂನೆ ಪಡೆದು ಸರಿಯಾಗಿ ಭರ್ತಿ ಮಾಡಿ.
ಹಂತ 3
KYC ದಾಖಲೆಗಳನ್ನು ಸಲ್ಲಿಸಿ.
ಹಂತ 4
ನೀವು ಹೂಡಿಕೆ ಮಾಡಬೇಕಾದ ಮೊತ್ತವನ್ನು ನಗದು / ಚೆಕ್ / ಬ್ಯಾಂಕ್ ಟ್ರಾನ್ಸ್‌ಫರ್ ಮೂಲಕ ಜಮಾ ಮಾಡಿ.
ಹಂತ 5
ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ಖಾತೆ ಸಕ್ರಿಯವಾಗುತ್ತದೆ ಮತ್ತು ಪ್ರತೀ ತಿಂಗಳು ಬಡ್ಡಿ ಜಮಾ ಆಗಲು ಪ್ರಾರಂಭವಾಗುತ್ತದೆ.
Post Office ಮಾಸಿಕ ಆದಾಯ ಯೋಜನೆ (MIS) Availability Check ಮಾಡಿ
* ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯ
ಹೌದು ಇಲ್ಲ
ಹೌದು ಇಲ್ಲ
ಹೌದು ಇಲ್ಲ
ಹೌದು ಇಲ್ಲ
ಹೌದು ಇಲ್ಲ
ಹೌದು ಇಲ್ಲ
ಯೋಜನೆಯ ಅವಧಿ ಮತ್ತು ಮುಂಗಡ ಹಣ ತೆಗೆಯುವ ನಿಯಮ
- ಯೋಜನೆಯ ಅವಧಿ: 5 ವರ್ಷ
- 1 ವರ್ಷದ ನಂತರ ಮುಂಗಡ ಹಣ ತೆಗೆಯಬಹುದು (ದಂಡ ಅನ್ವಯಿಸುತ್ತದೆ)
- 3 ವರ್ಷಗಳ ನಂತರ ಕಡಿಮೆ ದಂಡದೊಂದಿಗೆ ಮುಂಗಡ ಹಣ ಪಡೆಯಬಹುದು
ಪ್ರಮುಖ ಲಾಭಗಳು
1.ಸರ್ಕಾರದ ಭದ್ರತೆ
2 ಪ್ರತೀ ತಿಂಗಳು ಖಚಿತ ಆದಾಯ
3 ಕಡಿಮೆ ಅಪಾಯ
4 ನಿವೃತ್ತರಿಗೆ ಸೂಕ್ತ ಯೋಜನೆ
5 ಜಂಟಿ ಖಾತೆ ತೆರೆಯುವ ಅವಕಾಶ
Read More:
ಕರ್ನಾಟಕ ಆರೋಗ್ಯ ಸಂಜೀವಿನಿ 2026: ಕರ್ನಾಟಕ ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ, Zero ಬಿಲ್!
PMFME ಯೋಜನೆ 2026: ಸ್ವಂತ ಉದ್ಯೋಗ ಮಾಡುವವರಿಗೆ ಕೇಂದ್ರ ಸರ್ಕಾರದಿಂದ 10 ಲಕ್ಷದವರೆಗೆ ಆರ್ಥಿಕ ನೆರವು











