ಎಲ್ಲರಿಗೂ ನಮಸ್ಕಾರ, ಹೊಲವನ್ನು ಹೊಂದಿರುವವರು ತಮ್ಮ ಹೊಲದ ಪಹಣಿ ಜೊತೆ ತಮ್ಮ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಿರಲೇಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಅನುದಾನವನ್ನು ಪಡೆಯಲು ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.
ಹೊಲದ ಪಹಣಿ ತಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವುದು ಕಡ್ಡಾಯ ಎಂದು ಈಗಲೂ ಸಾಕಷ್ಟು ಜನರಿಗೆ ಗೊತ್ತಿಲ್ಲ ಹಾಗೂ ಲಿಂಕ್ ಕೂಡ ಆಗಿರುವುದಿಲ್ಲ. ಈ ಲೇಖನದಲ್ಲಿ ಹೊಲದ ಪಹಣಿಗೆ ಆಧಾರ್ ಕಾರ್ಡನ್ನು ಹೇಗೆ ಲಿಂಕ್ ಮಾಡಿಕೊಳ್ಳುವುದು ಎಂದು ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ.
ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ:
- ಮೊದಲಿಗೆ ಬ್ರೌಸರ್ ನಲ್ಲಿ RTC ಆಧಾರ್ ಲಿಂಕ್ ಎಂದು ಸರ್ಚ್ ಮಾಡಿ.
- ಅಲ್ಲಿ ಮೊದಲಿಗೆ ನಿಮಗೆ ಕರ್ನಾಟಕ ಸರ್ಕಾರದ RTC ಆಧಾರ್ ಲಿಂಕ್ ಎಂಬ ಒಂದು ವೆಬ್ಸೈಟ್ ಸಿಗುತ್ತದೆ ಅದನ್ನು ಓಪನ್ ಮಾಡಿಕೊಳ್ಳಿ.
- ಅಲ್ಲಿ ನಿಮಗೆ ಮೊದಲಿಗೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿರುವ ಕ್ಯಾಪ್ಚ ಎಂಟ್ರಿ ಮಾಡಿದರೆ ನಮೂದಿಸಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ನಂತರ ಓಟಿಪಿ ವೆರಿಫಿಕೇಶನ್ ಮಾಡಿಕೊಂಡು ಲಾಗಿನ್ ಆಗಿ.
- ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೈಕ್ರೋಫೈಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- ಮುಂದೆ ನಿಮಗೆ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವಂತೆ ನಿಮ್ಮ ಹೆಸರು ನಮೂದಿಸಲು ಕೇಳುತ್ತದೆ. ಈ ಎಲ್ಲಾ ಡೇಟಾ ಅನ್ನು ಫಿಲ್ ಮಾಡಿ ವೆರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲೇ ಕೆಳಗಿರುವ ಫೇಚ್ ಆಧಾರ್ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ..
- ಈಗ ಹೊಸ ವೆಬ್ ಪೇಜ್ ನಲ್ಲಿ ನಿಮಗೆ ಆಧಾರ ಸಂಖ್ಯೆ ನಮೂದಿಸಲು ಕೇಳುತ್ತದೆ. ಅಲ್ಲಿ ಆಧಾರ್ ಸಂಖ್ಯೆನ ನಮೂದಿಸಿದರೆ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಆ ಒಟಿಪಿಯನ್ನು ಅಲ್ಲಿ ಫಿಲ್ ಮಾಡಿ ವೆರಿಫಿಕೇಶನ್ ಮಾಡಿಕೊಳ್ಳಿ.
- ಇದಾದ ನಂತರ ಸೈಡಲ್ಲಿ ಇರುವ ಲಿಂಕ್ ಆಧಾರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ನಿಮ್ಮ ಭೂಮಿಯ ವಿವರಗಳನ್ನು ನಮೂದಿಸಲು ಕೇಳುತ್ತದೆ.
- ನಿಮ್ಮ ಭೂಮಿಯ ಸರ್ವೇ ನಂಬರ್ ಸೇರಿದಂತೆ ಅಲ್ಲಿ ಕೇಳಿರುವ ಎಲ್ಲಾ ಡೀಟೇಲ್ಸ್ ಅನ್ನು ಸರಿಯಾಗಿ ಫೀಲ್ ಮಾಡಿ.
- ಕೇಳಿರುವ ಎಲ್ಲಾ ಆಪ್ಷನ್ ಗಳನ್ನು ಫೇಲ್ ಮಾಡಿ ಮುಂದೆ ನಿಮ್ಮ ಡೇಟಾ ಅಲ್ಲಿ ಬರುತ್ತದೆ. ಆಗ ಲಿಂಕ್ ಎಂಬ ಆಪ್ಷನ್ ಕೂಡ ಬರುತ್ತದೆ.
- ನೀವು ಲಿಂಕ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ.
ಇದನ್ನೂ ಓದಿ: FID ಅಂದರೆ ಏನು? ಇದರ ಬಗೆ ಸಂಪೂರ್ಣ ವಿವರ ರೈತರಿಗೆ ಇಲ್ಲಿದೆ.!










