ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಾಕಷ್ಟು ಜನರ ಬಳಿ FID ನಂಬರ್ ಇರುತ್ತದೆ. ಹಾಗೂ ಇದೇ ರೀತಿ ಬಹಳಷ್ಟು ಜನರ ಬಳಿ PM ಕಿಸಾನ್ ID ಕೂಡ ಇರುತ್ತದೆ. ಹಾಗೂ ಈ 2 ಐಡಿಗಳು ಇರುವುದು ಬಹಳಷ್ಟು ಜನರಿಗೆ ಕಡ್ಡಾಯವಾಗಿದೆ.
FID ನಂಬರ್ ಮತ್ತು PM ಕಿಸಾನ್ ಐಡಿ ಗೆ ಇರುವ ವ್ಯತ್ಯಾಸಗಳು ಹಾಗೂ ಈ ಎರಡು ಐಡಿಗಳ ಒಂದಕ್ಕೊಂದು ಇರುವ ಸಂಬಂಧಗಳು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಈ ಐಡಿಗಳು ಏನು? ಈ ಐಡಿ ಗಳಿಗೆ ಏನು ಸಂಬಂಧಗಳಿವೆ ಮತ್ತು ಈ ಐಡಿಗಳಿಂದ ರೈತರಿಗೆ ಹಾಗೂ ಜನರಿಗೆ ಯಾವ ರೀತಿಯ ಉಪಕಾರಗಳು ದೊರೆಯುತ್ತವೆ. ಇದರ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
FID ಅಂದರೆ ಏನು ಆಗೋದರಿಂದ ಆಗುವ ಉಪಯೋಗವೇನು:
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಡೇರಿ ಮುಂತಾದ ಇಲಾಖೆಯ ಸವಲತ್ತುಗಳನ್ನು ಬರೆಯಲು ನಿಮ್ಮ ಬಳಿ FID ಕಡ್ಡಾಯವಾಗಿ ಇರಲೇಬೇಕು. ನಿಮ್ಮ ಎಲ್ಲ ದಾಖಲಾತಿಗಳನ್ನು ಒಟ್ಟಾಗಿ ಕೂಡಿಸಿ ಮೇಲೆ ತಿಳಿಸಿರುವ ರೀತಿಯ ಕೆಲಸಗಳ ದಾಖಲಾತಿಗಳ ಜೊತೆ ಜೋಡಿಸಿ ನಿಮಗೆ ಒಂದು ಐಡಿಯನ್ನು ಮಾಡಿಕೊಡಲಾಗುತ್ತದೆ ಅದೇ FID.
ನಿಮ್ಮ ಬಳಿ FID ಇದ್ದರೆ ನಾಲ್ಕು ತಿಂಗಳಿಗೊಮ್ಮೆ ನಿಮ್ಮ ಖಾತೆಗೆ 2,000 ಬರುತ್ತದೆ. ಹಾಗೂ ಈ ಹಣವು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ. PM ಕಿಸಾನ್ ಯೋಜನೆ ಜೊತೆ ನಿಮಗೆ ಸರ್ಕಾರದ ಸಾಕಷ್ಟು ಯೋಜನೆಗಳ ಲಾಭವನ್ನು ಪಡೆಯಲು FID ಕಡ್ಡಾಯವಾಗಿ ಇರಲೇಬೇಕು.
ಇದನ್ನೂ ಓದಿ: FID ಯಾವ ರೀತಿ ನೋಡುವುದು ಎಂದು ಕೂಡಲೇ ತಿಳಿಯಿರಿ!
ಈ ಎಲ್ಲಾ ಯೋಜನೆಗಳ ಲಾಭವನ್ನು ಪಡೆಯಲು FID ಕಡ್ಡಾಯ:
ಸರ್ಕಾರದ ರೈತ ಶಕ್ತಿ ಯೋಜನೆ ಹಾಗೂ ರೈತ ವಿದ್ಯಾನಿಧಿ ಯೋಜನೆ ರೀತಿಯ ಯೋಜನೆಗಳ ಲಾಭವನ್ನು ಪಡೆಯಲು ಕೂಡ FID ಬೇಕಾಗುತ್ತದೆ. ಇದಲ್ಲದೆ ಬೆಳೆ ಪರಿಹಾರ ಹಾಗೂ ಅತಿವೃಷ್ಟಿ ಪರಿಹಾರಕ್ಕಾಗಿ ಕೂಡ FID ಇರಬೇಕಾಗುತ್ತದೆ. ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕದ ರೈತರಿಗೆ ತೊಗರಿ ಪರಿಹಾರ ನೀಡಲಾಗಿದ್ದು ಹಾಗೂ ಇಲ್ಲಿ FID ಇರದ ಕಾರಣ ಸಾಕಷ್ಟು ರೈತರಿಗೆ ಹಣ ದೊರಕಿರಲಿಲ್ಲ.
FID ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಕೂಡ ಮಾಡಿಸಿಕೊಳ್ಳಬಹುದು. ರೈತರು ಕ್ರಾಪ್ ಇನ್ಸೂರೆನ್ಸ್ ಅಥವಾ ಬೆಳೆ ಇನ್ಸೂರೆನ್ಸ್ ಮಾಡಿಸಲು ಕೂಡ FID ಕಡ್ಡಾಯವಾಗಿ ಬೇಕಾಗುತ್ತದೆ. ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ಸರ್ಕಾರಿ ಸೊಸೈಟಿಯಲ್ಲಿ ಮಾರಾಟ ಮಾಡಬೇಕೆಂದರೆ ಕೂಡ FID ಬೇಕಾಗುತ್ತದೆ.










