ಎಲ್ಲರಿಗೂ ನಮಸ್ಕಾರ, ಇವತ್ತಿನ ಸಂದರ್ಭದಲ್ಲಿ ಯಾರಿಗೆ ಯಾವಾಗ ಏನು ಬೇಕಾದರೂ ಜರುಗಬಹುದು ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಮೊದಲಾದ ಕಾರಣದಿಂದ ಜನರು ಅಕಾಲಿಕ ಮರಣಕ್ಕೆ ಒಳಗಾಗ್ತಾ ಇದ್ದಾರೆ. ಇವರ ಪ್ರಾಣ ಹೋಗೋದರ ಜೊತೆಗೆ ಇವರನ್ನ ನಂಬಿಕೊಂಡ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತೆ.
ಹೀಗಾಗಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ PM ಜೀವನ್ ಜ್ಯೋತಿ ಭೀಮಾ ಯೋಜನೆ ಜಾರಿಗೆ ತರಲಾಯಿತು ಇನ್ನು ಈ ಯೋಜನೆಯ ಅನುಕೂಲ ಏನು ಅದರ ಡೀಟೇಲ್ಸ್ ಇಲ್ಲಿದೆ.
ಪ್ರಧಾನ ಮಂತ್ರಿ Jeevan Jyoti Bima Yojana
ಹೌದು ಕೇಂದ್ರ ಸರ್ಕಾರ ಜನರಿಗೆ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ ಹೆಸರಿನಲ್ಲಿ ವಿಮಾ ಯೋಜನೆಯನ್ನ ನಡೆಸುತ್ತಿದೆ ಈ ಯೋಜನೆಯಲ್ಲಿ ಯಾವುದೇ ಕಾರಣದಿಂದ ಫಲಾನುಭಾವಿಯ ಮರಣ ಸಂದರ್ಭದಲ್ಲಿ ನಾಮಿನಿ ಅಥವಾ ಕುಟುಂಬವು 2 ಲಕ್ಷ ರೂಪಾಯಿ ಆರ್ಥಿಕ ಪರಿಹಾರ ಸಿಗಲಿದೆ.
ಅಂದ್ರೆ ಒಬ್ಬ ವ್ಯಕ್ತಿಯು ಅನಾರೋಗ್ಯ ಅಥವಾ ಆಘಾತದಿಂದ ಸಾವನಪ್ಪಿದ್ರೆ ವಿಮಾದಾರನ ನಾಮಿನಿ ಅಥವಾ ಕುಟುಂಬಕ್ಕೆ ವಿಮೆಯಾಗಿ ಎರಡು ಲಕ್ಷ ರೂಪಾಯಿ ನೀಡಲಾಗುತ್ತದೆ.
PMJJBY ಒಂದು ಅವಧಿಯ ವಿಮಾ ಯೋಜನೆಯಾಗಿದೆ. ಅವಧಿ ವಿಮೆಯಲ್ಲಿ ಪಾಲಿಸಿ ತೆಗೆದುಕೊಳ್ಳುವವರ ಮರಣದ ನಂತರ ಮಾತ್ರ ಯೋಜನೆಗಳು ಲಭ್ಯವಿದೆ ಅವಧಿ ಮುಗಿದ ನಂತರ ಪಾಲಿಸಿದಾರನು ಆರೋಗ್ಯಕರವಾಗಿದ್ದರೆ ಅವನಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. 18 ರಿಂದ 50 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
How To Apply For PMJJBY:
PMJJBY ಪ್ರಯೋಜನವನ್ನ ಪಡೆಯಲು ಪ್ರತಿ ವರ್ಷ ರೂಪಾಯಿ 436 ಪ್ರೀಮಿಯಂ ಪಾವತಿ ಬೇಕು. ಈ ಮೊತ್ತದ ಪ್ರೀಮಿಯಂ ಅನ್ನ ಮೇ 25 ರಿಂದ ಮೇ 31 ರವರೆಗೆ ಖಾತೆಯಿಂದ ಸ್ವಯಂಚಾಲಿತವಾಗಿ ತೆಗೆದುಕೊಳ್ಳಲಾಗುತ್ತದೆ.
ಇದಕ್ಕಾಗಿ ಅರ್ಜಿದಾರನು ತನ್ನ ಒಪ್ಪಿಗೆಯನ್ನ ನೀಡಬೇಕಾಗುತ್ತದೆ. ಬ್ಯಾಂಕ್ ಖಾತೆಯನ್ನು ಹೊಂದಿರುವುದು ಅವಶ್ಯಕ PMJJBY ಪ್ರಯೋಜನಗಳನ್ನ ಪಡೆಯಲು ಅರ್ಜಿದಾರರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಈ ಬ್ಯಾಂಕ್ ಖಾತೆ ಸರ್ಕಾರಿ ಅಥವಾ ಖಾಸಗಿ ಬ್ಯಾಂಕಿನಲ್ಲಿ ಇರಬಹುದು, ಇದರ ನಂತರ ಅರ್ಜಿದಾರರು PMJJBY ವೈಯ ಪ್ರಯೋಜನಗಳನ್ನ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ.
ನಾಮಿನಿಯ ಸಂಬಂಧಪಟ್ಟ ವ್ಯಕ್ತಿ ವಿಮೆ ಮಾಡಿರುವ ವಿಮಾ ಕಂಪನಿ ಅಥವಾ ಬ್ಯಾಂಕ್ ನಲ್ಲಿ ಕ್ಲೈಮ್ ಮಾಡಬೇಕು ಮರಣ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ ಡಿಸ್ಚಾರ್ಜ್ ರಶೀದಿಯೊಂದಿಗೆ ಇತರ ಅಗತ್ಯ ದಾಖಲೆಗಳನ್ನ ನೀಡಬೇಕು ನಿಯಮಗಳ ಪ್ರಕಾರ ಆಘಾತವಾದ 30 ದಿನಗಳ ಒಳಗಡೆ ಕ್ಲೈಮ್ ಮಾಡಬೇಕು.
PMJJBY ಯೋಜನೆಯನ್ನ ಎಲ್ಐಸಿ ಮತ್ತು ಇತರ ಖಾಸಗಿ ಜೀವ ವಿಮಾ ಕಂಪನಿಗಳ ಮೂಲಕ ನಡೆಸಲಾಗುತ್ತದೆ ಒಬ್ಬ ವ್ಯಕ್ತಿಯು ತನ್ನ ಬ್ಯಾಂಕಿಗೆ ಹೋಗುವ ಮೂಲಕ ಮಾಹಿತಿಯನ್ನ ಪಡೆಯಬಹುದು.
ಅನೇಕ ಬ್ಯಾಂಕುಗಳು ವಿಮಾ ಕಂಪನಿಗಳೊಂದಿಗೆ ಟೈ ಅಪ್ ಗಳನ್ನ ಹೊಂದಿವೆ ಪೋಸ್ಟ್ ಆಫೀಸ್ ಮತ್ತು ಯಾವುದೇ ಬ್ಯಾಂಕುಗಳಲ್ಲಿ PM ಜೀವನ ಜ್ಯೋತಿ ಬೀಮಾ ಯೋಜನೆ ಪಡೆಯಬಹುದು ಆದರೆ ಈ ಖಾತೆ ಆಧಾರ್ ಲಿಂಕ್ ಆಗಿರಬೇಕು ಬ್ಯಾಂಕ್ ಶಾಖೆಗೆ ಹೋಗಿ ಇತರ ಒಂದು ಅರ್ಜಿಯನ್ನ ಭರ್ತಿ ಮಾಡಿ.
ಇದನ್ನೂ ಓದಿ: ಈ ಬಾರಿಯ RCB Captain ಯಾರು.! ಇಲ್ಲಿದೆ ಮಾಹಿತಿ










