ರೈತರೇ ಗಮನಿಸಿ FRUITS ಇ-ಕೆವೈಸಿ: ಕೊನೆಯ ದಿನಾಂಕ ಇಲ್ಲಿದೆ! ನಿಮ್ಮ Status ಈ ಕೂಡಲೇ ಚೆಕ್ ಮಾಡಿ.

March 6, 2026 7:35 AM
ರೈತರೇ ಎಚ್ಚರ! ಇ-ಕೆವೈಸಿ (eKYC) ಮರೆತರೆ ಕಟ್ ಆಗಲಿದೆ ವಾರ್ಷಿಕ ₹6,000 ಸಾಹಯಧನ! 1 ಲಕ್ಷಕ್ಕೂ ಹೆಚ್ಚು eKYC ಗಳು ಪೆಂಡಿಂಗ್

Updated: ನಮಸ್ಕಾರ ರೈತ ಬಾಂಧವರೇ, ಬೆಳಗಾವಿ ವಾಯ್ಸ್‌ನಿಂದ ನಿಮಗೆ ಒಂದು ಅತಿ ಮುಖ್ಯ ಮಾಹಿತಿ. ಇವತ್ತು ನಾವು FRUITS eKYC ಬಗ್ಗೆ ಮಾತಾಡ್ತೀವಿ, ಇದು ನಿಮ್ಮೆಲ್ಲರಿಗೂ ಬಹಳ ಇಂಪಾರ್ಟೆಂಟ್.

ಸರ್ಕಾರದಿಂದ ಬರುವ ಯಾವುದೇ ಬೆಳೆ ಪರಿಹಾರ, ಪಿಎಂ ಕಿಸಾನ್ ಹಣ ಅಥವಾ ಬೇರೆ ಸಬ್ಸಿಡಿಗಳು ನಿಮಗೆ ಸಿಗಬೇಕಂದ್ರೆ, eKYC ಕಡ್ಡಾಯ. ಇದನ್ನ ಮಾಡಿಸೋಕೆ ಇನ್ನು ಹೆಚ್ಚು ದಿನ ಬಾಕಿ ಇಲ್ಲ ಪ್ರತಿದಿನ ತಡ ಮಾಡಿದಷ್ಟು ನಿಮಗೆ ತೊಂದರೆ. ಅದಕ್ಕೆ ಆದಷ್ಟು ಬೇಗ ಈ ಕೆಲಸ ಮುಗಿಸಬೇಕು. ಈ ಮಹತ್ವದ ಮಾಹಿತಿ ನಿಮಗೆ ಗೊತ್ತಿರೋ ಎಲ್ಲ ರೈತರಿಗೆ ತಲುಪಲಿ ಅಂತ ಈ ಲೇಖನವನ್ನ ಈಗಲೇ ಶೇರ್ ಮಾಡಿ.

ರೈತರೇ FRUITS eKYC ಅಂದ್ರೆ ಏನು?

ಏನಿದು FRUITS eKYC ಅಂತ ಅನ್ಕೋತಿದ್ದೀರಾ? ಇದು ರೈತರೇ, ನಿಮ್ಮ ಆಧಾರ್ ಕಾರ್ಡ್‌ಗೆ ನಿಮ್ಮ ಜಮೀನಿನ ಪಾಣಿಗಳು ಮತ್ತು ಇತರೆ ಕೃಷಿ ದಾಖಲೆಗಳನ್ನ ಲಿಂಕ್ ಮಾಡುವ ಪ್ರಕ್ರಿಯೆ.

ಅಂದ್ರೆ, ನಿಮ್ಮ ಭೂಮಿಯ ಮಾಹಿತಿ ಮತ್ತು ವೈಯಕ್ತಿಕ ಮಾಹಿತಿ ಸರ್ಕಾರಿ ದತ್ತಾಂಶಕ್ಕೆ (data) ಸರಿಯಾಗಿ ಹೊಂದಾಣಿಕೆ ಆಗಬೇಕು.

ಇದನ್ನ ‘ರಿ-ಅಪ್ಡೇಟ್’ ಮಾಡೋದು ಅಂತಾನೂ ಹೇಳ್ತಾರೆ.

ಈ ಪ್ರಕ್ರಿಯೆ ಮುಗಿಸಿದ ಮೇಲೆ, ನಿಮ್ಮ ಎಲ್ಲ ದಾಖಲೆಗಳು ಅಪ್ಡೇಟ್ ಆಗಿ ಸರ್ಕಾರದ ಜೊತೆ ಸಂಪರ್ಕದಲ್ಲಿ ಇರುತ್ತವೆ.

FRUITS eKYC ಯಾಕೆ ಕಡ್ಡಾಯ?

ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನ ಜಾರಿ ಮಾಡ್ತಿದೆ. ಉದಾಹರಣೆಗೆ, ಪಿಎಂ ಕಿಸಾನ್ ಯೋಜನೆಯ 6,000 ರೂಪಾಯಿ, ಬೆಳೆ ಪರಿಹಾರ, ಕ್ರಾಪ್ ಇನ್ಸೂರೆನ್ಸ್ ಹೀಗೆ ಹಲವು ನೇರ ನಗದು ಸೌಲಭ್ಯಗಳು.

ಇವೆಲ್ಲವೂ ಈಗ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗ್ತವೆ. ಈ FRUITS eKYC ಮಾಡಿಸಿಲ್ಲ ಅಂದ್ರೆ, ಈ ಯಾವುದೇ ಸೌಲಭ್ಯಗಳು ನಿಮಗೆ ತಲುಪಲ್ಲ. ನಿಮ್ಮ ದಾಖಲೆಗಳು ಪಕ್ಕಾ ಇದ್ರೆ ಮಾತ್ರ ಇವು ಸಿಗುತ್ತವೆ.

ನಕಲಿ ರೈತರಿಗೆ ಚೆಕ್ ಹಾಕ್ಲಿಕ್ಕೇ ಈ eKYC!

ಈ eKYC ಕಡ್ಡಾಯ ಮಾಡೋದಕ್ಕೆ ಇನ್ನೊಂದು ಮುಖ್ಯ ಕಾರಣ ಇದೆ. ಅಂದ್ರೆ, ನಕಲಿ ರೈತರನ್ನ ಪತ್ತೆ ಹಚ್ಚಿ, ನಿಜವಾದ ರೈತರಿಗೆ ಮಾತ್ರ ಸೌಲಭ್ಯ ಸಿಗುವಂತೆ ಮಾಡೋದು.

ಒಬ್ಬ ರೈತನ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ಜಮೀನುಗಳು ಅಥವಾ ಬೇರೆ ಬೇರೆ ಯೋಜನೆಯ ಲಾಭ ಪಡೆಯೋದನ್ನ ತಡೆಯೋದು ಮುಖ್ಯ. ನಿಮ್ಮ ಆಧಾರ್‌ಗೆ ದಾಖಲೆಗಳು ಜೋಡಣೆ ಆದ್ರೆ, ನಕಲಿ ಆಗೋ ಚಾನ್ಸೇ ಇರಲ್ಲ. ಇದರಿಂದ ಸರ್ಕಾರದ ಹಣ ದುರುಪಯೋಗ ಆಗೋದು ತಪ್ಪುತ್ತೆ.

ರೈಚೂರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ FRUITS eKYC

ರೈಚೂರು ಜಿಲ್ಲೆಯಲ್ಲಿ ಬಾಕಿ ಉಳಿದಿರುವ FRUITS eKYC

ಕರ್ನಾಟಕದ ಹಲವೆಡೆ FRUITS eKYC ಬಾಕಿ ಇದೆ. ಅದರಲ್ಲೂ ನಮ್ಮ ರೈಚೂರು ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು eKYC ಗಳು ಪೆಂಡಿಂಗ್ ಇವೆ. ಇದು ಒಂದು ದೊಡ್ಡ ಸಂಖ್ಯೆ. ರೈಚೂರಿನಲ್ಲಿ 1,13,339 eKYC ಬಾಕಿ ಉಳಿದಿವೆ. ವಿವಿಧ ತಾಲೂಕುಗಳಲ್ಲಿಯೂ ಪೆಂಡಿಂಗ್ ಸಂಖ್ಯೆ ಹೆಚ್ಚಾಗಿಯೇ ಇದೆ. ಇದರಿಂದ ಬಹಳಷ್ಟು ರೈತರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಸೌಲಭ್ಯಗಳು ಸಿಗದೆ ಇರಬಹುದು ಅನ್ನೋ ಆತಂಕ ಇದೆ.

ಸಿಂಧನೂರು ತಾಲೂಕಿನಲ್ಲಿ ತುರ್ತು ಪರಿಸ್ಥಿತಿ!

  • ಬಾದಲಿ: 2000+ eKYC
  • ಗೊರೆಬಾಳು: 1500+ eKYC
  • ಗುಂಜಾಳಿ: 1200+ eKYC

FRUITS eKYC ಮಾಡಿಸುವುದು ಹೇಗೆ?

  • ಆಧಾರ್ ಕಾರ್ಡ್
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಫೋನ್

FRUITS eKYC ಮಾಡಿಸದಿದ್ದರೆ ಏನಾಗುತ್ತೆ?

  • ಪಿಎಂ ಕಿಸಾನ್ 6,000 ರೂಪಾಯಿ ಕಟ್.
  • ಬೆಳೆ ಪರಿಹಾರ ಹಣ ಕಟ್.
  • ಸರ್ಕಾರದಿಂದ ಸಿಗುವ ಸಬ್ಸಿಡಿಗಳು ಕಟ್.

FRUITS eKYC ಕೊನೆಯ ದಿನಾಂಕ ಮತ್ತು ತುರ್ತು ಕ್ರಮಗಳು

ಈ FRUITS eKYC ಮಾಡಿಸೋಕೆ ಇರೋ ಕೊನೆಯ ದಿನಾಂಕ ಈ ತಿಂಗಳ March 5ನೇ ತಾರೀಕು.

ಸಮಯ ಬಹಳ ಕಡಿಮೆ ಇದೆ. ದಯವಿಟ್ಟು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಈ ಕೆಲಸ ಮುಗಿಸಿ.

ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಹಳ್ಳಿಯ ಇತರ ರೈತರಿಗೆ ಈ ಬಗ್ಗೆ ಗೊತ್ತಿಲ್ಲ ಅಂದ್ರೆ, ಅವರಿಗೆ ತಿಳಿಹೇಳಿ. 6,000 ರೂಪಾಯಿ ಒಂದು ರೈತನಿಗೆ ದೊಡ್ಡ ಸಹಾಯ.

ಅದನ್ನ ಕಳೆದುಕೊಳ್ಳಲು ಬಿಡಬೇಡಿ.

ನಿಮ್ಮ ದಾಖಲಾತಿಗಳನ್ನು ಸುರಕ್ಷಿತಗೊಳಿಸಿ

  • ಕೃಷಿ ಇಲಾಖೆಗೆ ಭೇಟಿ ನೀಡಿ
  • ಅಗತ್ಯ ದಾಖಲೆಗಳನ್ನು ಒದಗಿಸಿ
  • OTP ಮೂಲಕ ದೃಢೀಕರಿಸಿ

ರೈತ ಬಾಂಧವರೇ, FRUITS eKYC ಬಹಳ ಸರಳ ಪ್ರಕ್ರಿಯೆ. ಆದರೆ ಇದರ ಮಹತ್ವ ಅಗಾಧ. ಸರ್ಕಾರದಿಂದ ಬರುವ ಯಾವುದೇ ಸಹಾಯಧನ ನಿಮಗೆ ತಲುಪಬೇಕಂದ್ರೆ, ಇದನ್ನ ಕಡ್ಡಾಯವಾಗಿ ಮಾಡಿಸಬೇಕು. ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ, ತಕ್ಷಣವೇ ಕ್ರಮ ಕೈಗೊಳ್ಳಿ.

ನಿಮ್ಮ ಹಾಗೂ ನಿಮ್ಮ ಸಹ ರೈತರ ಹಿತದೃಷ್ಟಿಯಿಂದ, ಈ ಮಾಹಿತಿಯನ್ನು ಎಲ್ಲರಿಗೂ ತಲುಪಿಸಿ. ಜೈ ಹಿಂದ್, ಜೈ ಕರ್ನಾಟಕ, ಜೈ ಜವಾನ್ ಜೈ ಕಿಸಾನ್!

Contact Number: 1800-425-3553

FAQ

FRUITS eKYC ಕೊನೆಯ ದಿನಾಂಕ?

ಈ ತಿಂಗಳ March 5ನೇ ತಾರೀಕು

Read More:

Yeshasvini Card: ₹5 ಲಕ್ಷದ ಉಚಿತ ಚಿಕಿತ್ಸೆ, ಅರ್ಜಿ ಸಲ್ಲಿಕೆಗೆ ಮಾ. 31 ಕೊನೆ ದಿನ! ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

ಬೆಂಗಳೂರು ರಸ್ತೆ ಕಾಮಗಾರಿ 2026: ₹5,065 ಕೋಟಿ ವೆಚ್ಚದಲ್ಲಿ ಕೆಲಸ ಶುರು! ಏಪ್ರಿಲ್ 2026ರ ವೇಳೆಗೆ ಕಾಮಗಾರಿ ಪೂರ್ಣ!

ಪ್ರಿಯಾಂಕ ಖರ್ಗೆ: ಕಲಬುರಗಿಯಲ್ಲಿ ₹120 ಕೋಟಿ ವೆಚ್ಚದ ಜಿಟಿಟಿಸಿ (GTTC) ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ!

belagavivoice - writeups

Guru R

Hello, this is Guru R. from Belagavi. I am a Kannada Content Specialist with five years of proven experience in content writing. I have successfully contributed to over 10 Kannada and English content sites, covering diverse topics from Entertainment to complex Government Schemes. My dedication to quality content was recognized by Google for achieving some of the fastest click-through rates (CTRs) on a previous project. I now maintain this Belagavi voice platform with a commitment to providing Karnataka’s audience with accurate, truthful, and knowledgeable information.

Leave a Comment