ಬೆಳಗಾವಿ ಜಿಲ್ಲೆಯು ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಮಹತ್ವದ ಸ್ಥಾನ ಪಡೆದಿದೆ.
2026ರ ಅಂದಾಜಿನ ಪ್ರಕಾರ ಬೆಳಗಾವಿಯ ಜನಸಂಖ್ಯೆ ಮತ್ತು ಭೌಗೋಳಿಕ ವಿವರಗಳು ಇಲ್ಲಿವೆ.
ಬೆಳಗಾವಿ ಜಿಲ್ಲೆಯ ಭೌಗೋಳಿಕ ಚಿತ್ರಣ (2011ರ ಅಂಕಿಅಂಶ)
ಬೆಳಗಾವಿ ಜಿಲ್ಲೆಯು ಒಟ್ಟು 13,433 ವರ್ಗ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಜಿಲ್ಲೆಯ ಆಡಳಿತಾತ್ಮಕ ವಿಭಾಗಗಳು ಹೀಗಿವೆ:
| ವಿವರಗಳು | ಸಂಖ್ಯೆ |
| ಉಪ-ವಿಭಾಗಗಳು | 3 |
| ತಾಲೂಕುಗಳು | 10 |
| ಗ್ರಾಮ ಪಂಚಾಯತ್ಗಳು | 505 |
| ಒಟ್ಟು ಗ್ರಾಮಗಳು | 1,275 |
| ಮಹಾನಗರ ಪಾಲಿಕೆ | 1 (ಬೆಳಗಾವಿ) |
ಬೆಳಗಾವಿ ನಗರದ ಜನಸಂಖ್ಯೆ 2026 (ಅಂದಾಜು)
2011ರ ಜನಗಣತಿಯ ನಂತರ 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದೆ.
ಪ್ರಸ್ತುತ ಲಭ್ಯವಿರುವ ಬೆಳವಣಿಗೆಯ ದರದ ಆಧಾರದ ಮೇಲೆ 2026ರ ಅಂದಾಜು ಜನಸಂಖ್ಯೆ ಹೀಗಿದೆ:
- ಬೆಳಗಾವಿ ನಗರ: 7,33,000
- ಬೆಳಗಾವಿ ಮಹಾನಗರ (Metropolitan Area): 9,16,000
ಸಾಕ್ಷರತೆ ಮತ್ತು ಲಿಂಗ ಅನುಪಾತ
ಬೆಳಗಾವಿ ನಗರವು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ.
- ಸರಾಸರಿ ಸಾಕ್ಷರತೆ: ಶೇ. 89.82
- ಪುರುಷರ ಸಾಕ್ಷರತೆ: ಶೇ. 93.78
- ಮಹಿಳಾ ಸಾಕ್ಷರತೆ: ಶೇ. 85.84
- ಲಿಂಗ ಅನುಪಾತ: ಪ್ರತಿ 1000 ಪುರುಷರಿಗೆ 988 ಮಹಿಳೆಯರು.
- ಮಕ್ಕಳ ಲಿಂಗ ಅನುಪಾತ: ಪ್ರತಿ 1000 ಹುಡುಗರಿಗೆ 936 ಹುಡುಗಿಯರು.
ಧರ್ಮವಾರು ಜನಸಂಖ್ಯೆ (Belagavi Religion Data)
ಬೆಳಗಾವಿ ನಗರವು ವಿವಿಧ ಧರ್ಮಗಳ ಸಂಗಮವಾಗಿದೆ. ನಗರದ ಒಟ್ಟು ಜನಸಂಖ್ಯೆಯಲ್ಲಿ ಧರ್ಮವಾರು ಹಂಚಿಕೆ ಹೀಗಿದೆ:
| ಧರ್ಮ | ಶೇಕಡಾವಾರು (%) |
| ಹಿಂದೂ | 73.24% |
| ಮುಸ್ಲಿಂ | 20.62% |
| ಜೈನ | 4.22% |
| ಕ್ರಿಶ್ಚಿಯನ್ | 1.10% |
| ಇತರರು (ಸಿಖ್, ಬೌದ್ಧ, ಇತ್ಯಾದಿ) | 0.82% |
ಭವಿಷ್ಯದ ಜನಸಂಖ್ಯೆಯ ಮುನ್ಸೂಚನೆ (2021 – 2031)
ಬೆಳಗಾವಿ ನಗರ ಮತ್ತು ಮಹಾನಗರ ಪ್ರದೇಶ ಬೆಳೆಯುತ್ತಿರುವ ವೇಗವನ್ನು ಈ ಕೆಳಗಿನ ಕೋಷ್ಟಕದಲ್ಲಿ ನೋಡಬಹುದು:
| ವರ್ಷ | ನಗರ ಜನಸಂಖ್ಯೆ | ಮಹಾನಗರ ಜನಸಂಖ್ಯೆ |
| 2011 (ಅಸಲಿ) | 4,88,157 | 6,10,350 |
| 2026 (ಅಂದಾಜು) | 7,33,000 | 9,16,000 |
| 2031 (ಅಂದಾಜು) | 8,46,000 | 10,60,000 |
ಬೆಳಗಾವಿ ಮಹಾನಗರ ಪ್ರದೇಶದ ವ್ಯಾಪ್ತಿ
ಬೆಳಗಾವಿ ನಗರದ ಜೊತೆಗೆ ಸುತ್ತಮುತ್ತಲಿನ ಹಲವು ಪ್ರದೇಶಗಳು ಮಹಾನಗರ ಪಾಲಿಕೆಯ ಅಡಿಯಲ್ಲಿ ಬರುತ್ತವೆ. ಅವುಗಳೆಂದರೆ:
ಬೆಳಗಾವಿ ಕಂಟೋನ್ಮೆಂಟ್, ಬೆನಕನಹಳ್ಳಿ, ಗೌಂಡವಾಡ, ಹಿಂಡಲಗಿ, ಕಾಕತಿ, ಕಂಗ್ರಾಳಿ (ಬಿಕೆ & ಕೆಎಚ್), ಮಚ್ಚೆ, ಮುತಗಾ, ಪೀರನವಾಡಿ ಮತ್ತು ಶಿಂದೋಳಿ.
ಬೆಳಗಾವಿ: ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಏಕೆ?
ಬೆಳಗಾವಿ ಜಿಲ್ಲೆಯ ವಿಸ್ತೀರ್ಣ ಬರೋಬ್ಬರಿ 13,415 ಚದರ ಕಿಲೋಮೀಟರ್! ಇದು ಬರೀ ಒಂದು ಜಿಲ್ಲೆ ಅಲ್ಲ, ಒಂದು ಸಣ್ಣ ರಾಜ್ಯದಂತೆಯೇ ಕಾಣುತ್ತದೆ.
ಒಟ್ಟು 15 ತಾಲೂಕುಗಳು, 33 ಸ್ಥಳೀಯ ಸಂಸ್ಥೆಗಳು, ಒಂದು ಮಹಾನಗರಪಾಲಿಕೆ ಸೇರಿ, ಒಟ್ಟಾರೆ ‘ಮಿನಿ ರಾಜ್ಯ‘ದಂತಹ ಆಡಳಿತ ವ್ಯವಸ್ಥೆ ಇಲ್ಲಿದೆ. ಉತ್ತರದಲ್ಲಿ ಅಥಣಿಯಿಂದ ದಕ್ಷಿಣದಲ್ಲಿ ಖಾನಾಪುರದವರೆಗೆ ವ್ಯಾಪಿಸಿರೋ ಈ ಬೃಹತ್ ಜಿಲ್ಲೆಯ ನಿರ್ವಹಣೆ ನಿಜಕ್ಕೂ ದೊಡ್ಡ ಸವಾಲು.
ಇದರ ಗಾತ್ರ ಮತ್ತು ಆಡಳಿತಾತ್ಮಕ ಸಂಕೀರ್ಣತೆ ನೋಡಿ, ‘ಮಿನಿ ರಾಜ್ಯ’ ಅನ್ನೋದು ಸರಿಯಾಗಿದೆ.
ಸಿಕ್ಕಿಂ, ಇಸ್ರೇಲ್ಗೂ ಬೆಳಗಾವಿಗೂ ಏನು ಸಂಬಂಧ?
ಬೆಳಗಾವಿ ಜಿಲ್ಲೆಯ ವಿಸ್ತೀರ್ಣ ಎಷ್ಟು ದೊಡ್ಡದು ಅಂದರೆ, ಮಿಡಲ್ ಈಸ್ಟ್ನಲ್ಲಿರೋ ಇಸ್ರೇಲ್ ದೇಶದ ಮೂರನೇ ಎರಡರಷ್ಟು ಭಾಗ ನಮ್ಮ ಬೆಳಗಾವಿ ಒಂದೇ ಇದೆ!
ನಮ್ಮದೇ ಸಿಕ್ಕಿಂ ರಾಜ್ಯಕ್ಕಿಂತಲೂ ಇದು ಎರಡು ಪಟ್ಟು ದೊಡ್ಡದು. ಜನಸಂಖ್ಯೆಯಲ್ಲೂ ಸಿಕ್ಕಿಂಗಿಂತ 10 ಪಟ್ಟು ಹೆಚ್ಚಿದೆ. 2011ರಲ್ಲೇ 47 ಲಕ್ಷ ಜನ ಇದ್ದರು, ಈಗ 55-56 ಲಕ್ಷ ದಾಟಿದೆ ಅಂದಾಜು.
18 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಜಿಲ್ಲೆ ಹರಡಿಕೊಂಡಿದೆ. ಇಷ್ಟು ಬೃಹತ್ ಪ್ರದೇಶದ ನಿರ್ವಹಣೆ ಸವಾಲುಗಳಿಂದ ಕೂಡಿದೆ.
ದೂರದೂರದ ಗ್ರಾಮಗಳ ಕಷ್ಟ: ಜಿಲ್ಲಾ ಕೇಂದ್ರಕ್ಕೆ ಹೋಗೋದು ಅಂದ್ರೆ ಪ್ರಯಾಸ:
- ಅಥಣಿ ತಾಲೂಕಿನ ತಲಸಂಗ ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ 190 ಕಿ.ಮೀ ದೂರ.
- ವಿಜಯಪುರ ಗಡಿಯ ಹನವಾಡ ಬೆಳಗಾವಿಯಿಂದ 194 ಕಿ.ಮೀ ದೂರ.
ಸಮಯ, ದುಡ್ಡು, ನೆಮ್ಮದಿ ಎಲ್ಲವೂ ದೂರ: ದೈನಂದಿನ ಸಮಸ್ಯೆಗಳು
ಒಂದು ಸಣ್ಣ ಕೆಲಸ ಅಥವಾ ಆರೋಗ್ಯ ಸಮಸ್ಯೆಗಾಗಿ, ಜನರು ಜಿಲ್ಲಾ ಆಸ್ಪತ್ರೆ ಅಥವಾ ಡಿಸಿ ಕಚೇರಿಗೆ ಹೋಗೋದು ಅನಿವಾರ್ಯ.
200 ಕಿ.ಮೀ ದೂರಕ್ಕೆ ಹೋಗಬೇಕು ಅಂದರೆ, ಒಂದು ಇಡೀ ದಿನ ವೇಸ್ಟ್.
ಕೆಲಸ ಕಾರ್ಯ ಬಿಟ್ಟು ಹೋದರೂ, ಕೆಲಸ ಪೂರ್ಣವಾಗೋ ಖಾತ್ರಿ ಇರಲ್ಲ.
ಇದರಿಂದ ಅಥಣಿ, ಕಾಗವಾಡ, ಚಿಕ್ಕೋಡಿ ಕಡೆಯ ಜನರಿಗೆ ಜಿಲ್ಲಾ ಕೇಂದ್ರಕ್ಕಿಂತ ಮಹಾರಾಷ್ಟ್ರದ ಸಾಂಗ್ಲಿ, ಮಿರಾಜ್, ಪುಣೆಗಳಿಗೆ ಹೋಗೋದೇ ಸುಲಭ.
ಇದು ಜನರ ಸಮಯ, ದುಡ್ಡು ಎರಡನ್ನೂ ಹಾಳು ಮಾಡುವ ಸಮಸ್ಯೆ.
ಆರ್ಥಿಕತೆಯ ಓಟಕ್ಕೆ ಬ್ರೇಕ್: ಉದ್ಯೋಗ, ವ್ಯಾಪಾರ ವಹಿವಾಟಿನ ಸಮಸ್ಯೆ
ಬೆಳಗಾವಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಕೂಡ ಸವಾಲಿನಿಂದ ಕೂಡಿದೆ.
ಇಲ್ಲಿ 30-40 ಸಕ್ಕರೆ ಕಾರ್ಖಾನೆಗಳು ಇವೆ ನಿಜ, ಆದರೆ 50-55 ಲಕ್ಷ ಜನಸಂಖ್ಯೆಗೆ ಉದ್ಯೋಗ ಕೊರತೆ ಇದೆ.
ಇದರಿಂದ ಬಹುತೇಕ ಯುವಕರು ಹೊರ ರಾಜ್ಯಗಳಿಗೆ ವಲಸೆ ಹೋಗ್ತಾರೆ.
ವ್ಯಾಪಾರ ವಹಿವಾಟಿಗೂ ಜಿಲ್ಲಾ ಕೇಂದ್ರ ಬೆಳಗಾವಿಗೆ ಹೋಗಬೇಕು, ಆದರೆ ದೂರದ ಜನರಿಗೆ ಇದು ಕಷ್ಟ.
ಹೀಗಾಗಿ, ಪಕ್ಕದ ಮಹಾರಾಷ್ಟ್ರದ ಮಾರುಕಟ್ಟೆಗಳಿಗೆ ಹೋಗ್ತಾರೆ.
ಇದು ರಾಜ್ಯದಿಂದ ಹಣದ ಹೊರಹರಿವಿಗೆ ಕಾರಣವಾಗ್ತಿದೆ.
ಜಿಲ್ಲೆ ವಿಭಜನೆ ಆದರೆ, ಅಭಿವೃದ್ಧಿಗೆ ವೇಗ ಸಿಗುತ್ತೆ ಅನ್ನೋದು ಇಲ್ಲಿನ ಜನರ ನಿರೀಕ್ಷೆ.
ಅನುದಾನದ ತಾರತಮ್ಯ, ಆಡಳಿತಾತ್ಮಕ ಹೊರೆ: ಅಧಿಕಾರಿಗಳಿಗೂ ಸವಾಲು!
ಬೆಳಗಾವಿ ದೊಡ್ಡ ‘ಮಿನಿ ರಾಜ್ಯ‘ ಆಗಿದ್ದರೂ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಇದೆ ಅನ್ನೋ ಆರೋಪ ಕೇಳಿಬರುತ್ತಿದೆ. ರಾಜಕೀಯವಾಗಿ ಎರಡು ಮಂತ್ರಿ ಸ್ಥಾನ ಸಿಕ್ಕರೂ, ಜಿಲ್ಲಾವಾರು ಸ್ಥಾನದ ಆಧಾರದಲ್ಲಿಯೇ ಅನುದಾನ ಸಿಗುತ್ತೆ.
ಇದರಿಂದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳ ವಿತರಣೆಗೆ ಅಡ್ಡಿಯಾಗಿದೆ.
ಒಬ್ಬ ಡಿಸಿ, ಒಬ್ಬ ಎಸ್ಪಿ 15 ತಾಲೂಕುಗಳನ್ನು, ಅಷ್ಟು ವಿಶಾಲ ಭೂಪ್ರದೇಶವನ್ನು ನಿರ್ವಹಿಸುವುದು ಕಷ್ಟ. ಅಧಿಕಾರಿಗಳಿಗೂ ಈ ‘ಮಿನಿ ರಾಜ್ಯ’ವನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ.
ಎಷ್ಟು ಜಿಲ್ಲೆಗಳಾಗಬಹುದು?
- ನಾಯಕರ ಭಿನ್ನಾಭಿಪ್ರಾಯ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಮೂರು ಜಿಲ್ಲೆಗಳ ಪರವಾಗಿದ್ದರೆ, ಸತೀಶ್ ಜಾರಕಿಹೊಳಿ ಅವರು ಬೆಳಗಾವಿ, ಗೋಕಾಕ್ ಮತ್ತು ಚಿಕ್ಕೋಡಿ ಜಿಲ್ಲೆಗಳಾಗಬೇಕು ಎಂದು ವಾದಿಸುತ್ತಿದ್ದಾರೆ.
- ಆಯೋಗಗಳ ಶಿಫಾರಸು: ಈ ಹಿಂದೆ ವಾಸುದೇವನ್, ಹುಂಡೇಕರ್, ಗಂಧಿಗೌಡರ್ ಮತ್ತು ಎ.ವಿ. ಪ್ರಕಾಶ್ ಆಯೋಗಗಳು ಜಿಲ್ಲೆಯನ್ನು ಎರಡು ಭಾಗ ಮಾಡಲು ಶಿಫಾರಸು ಮಾಡಿದ್ದವು.
- ಹೆಚ್ಚುತ್ತಿರುವ ಬೇಡಿಕೆ: ಪ್ರಸ್ತುತ ಚಿಕ್ಕೋಡಿ ಮತ್ತು ಅಥಣಿ ಮಾತ್ರವಲ್ಲದೆ, ಬೈಲಹೊಂಗಲ ಭಾಗದಿಂದಲೂ ಪ್ರತ್ಯೇಕ ಜಿಲ್ಲೆಗಾಗಿ ತೀವ್ರ ಬೇಡಿಕೆ ಕೇಳಿಬರುತ್ತಿದೆ.
- ಅಸ್ಪಷ್ಟ ನಿರ್ಧಾರ: ಜಿಲ್ಲೆಯನ್ನು ಎಷ್ಟು ಭಾಗ ಮಾಡಬೇಕು ಮತ್ತು ಕೇಂದ್ರ ಕಚೇರಿ ಎಲ್ಲಿರಬೇಕು ಎಂಬ ಬಗ್ಗೆ ಇನ್ನೂ ಅಂತಿಮ ಸ್ಪಷ್ಟತೆ ಸಿಕ್ಕಿಲ್ಲ.
ಹಿಂದೆ ಯಾಕಿತ್ತು ವಿರೋಧ? ಈಗ ಕನ್ನಡಪರ ಸಂಘಟನೆಗಳ ನಿಲುವೇನು? ಮುಂದೇನು?
1997ರಲ್ಲಿ ಅಂದಿನ ಸಿಎಂ ಜೆ.ಎಚ್. ಪಟೇಲ್ ಚಿಕ್ಕೋಡಿ-ಗೋಕಾಕ್ ಪ್ರತ್ಯೇಕ ಜಿಲ್ಲೆ ಮಾಡಲು ಮುಂದಾಗಿದ್ರು. ಆಗ ಎಂಇಎಸ್ ಪ್ರಬಲವಾಗಿದ್ದು, ವಿಭಜನೆ ಮಾಡಿದ್ರೆ ಮರಾಠಿಗರ ಪ್ರಾಬಲ್ಯ ಹೆಚ್ಚುತ್ತೆ ಅಂತ ಕನ್ನಡಪರ ಸಂಘಟನೆಗಳು ವಿರೋಧಿಸಿದ್ದವು. ಆದರೆ ಈಗ ಎಂಇಎಸ್ ಅಸ್ತಿತ್ವ ಕಳೆದುಕೊಂಡಿದೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗೋದು ಕನಸು ಅಂತ ಅರಿತ ಕನ್ನಡಪರ ಸಂಘಟನೆಗಳು, ಅಭಿವೃದ್ಧಿ ದೃಷ್ಟಿಯಿಂದ ವಿಭಜನೆಯನ್ನ ಬೆಂಬಲಿಸ್ತಿವೆ. ಆದ್ರೆ ಎಷ್ಟು ಜಿಲ್ಲೆಗಳು, ಯಾವುದು ಕೇಂದ್ರ ಅನ್ನೋದರ ಬಗ್ಗೆ ಗೊಂದಲವಿದೆ. ಜಾತಿ ರಾಜಕೀಯ ಬಿಟ್ಟು ಅಭಿವೃದ್ಧಿ ದೃಷ್ಟಿಯಿಂದ ಹೆಜ್ಜೆ ಇಡಬೇಕು.
ಕೊನೆಯ ಮಾತು:
ಬೆಳಗಾವಿ ಜಿಲ್ಲೆ ವಿಭಜನೆ ಬಹುದಿನಗಳ ಬೇಡಿಕೆಯಾಗಿದ್ದು, ಸಿಎಂ ಸಿದ್ದರಾಮಯ್ಯನವರ ಹೇಳಿಕೆಯಿಂದ ಇದಕ್ಕೆ ಹೊಸ ಜೀವ ಬಂದಿದೆ.
ಭೌಗೋಳಿಕ ವಿಸ್ತಾರ, ಆಡಳಿತಾತ್ಮಕ ಹೊರೆ, ಆರ್ಥಿಕ ಹಿಂದುಳಿದಿರುವಿಕೆ ಮುಂತಾದ ಕಾರಣಗಳಿಂದ ವಿಭಜನೆ ಅನಿವಾರ್ಯವಾಗಿದೆ.
ಆದರೂ ಎಷ್ಟು ಜಿಲ್ಲೆಗಳು, ಯಾವುದು ಕೇಂದ್ರವಾಗಬೇಕು ಅನ್ನೋದು ರಾಜಕೀಯವಾಗಿ ಸವಾಲಿನ ಸಂಗತಿ.
ಜಾತಿ ರಾಜಕೀಯಕ್ಕೆ ಸಿಕ್ಕಿ, ಹೆಸರಿಗೆ ಮಾತ್ರ ಜಿಲ್ಲೆಯಾಗಿ ಉಳಿಯದೇ, ಜನರಿಗೆ ನಿಜವಾದ ಅಭಿವೃದ್ಧಿ ತಲುಪಿಸಬೇಕಿದೆ. ಸಮರ್ಪಕ ನಿರ್ಧಾರದಿಂದ ಮಾತ್ರ ಬೆಳಗಾವಿ ಹೊಸ ಹಾದಿಯನ್ನ ಕಾಣಲು ಸಾಧ್ಯ.
ಇದನ್ನು ಓದಿ:










