ಬೆಳಗಾವಿ ಮಹಾನಗರದಲ್ಲಿ ನೆತ್ತಿ ಸುಡುವ ಬಿಸಿಲಿನ ತಾಪದಿಂದ ತತ್ತರಿಸಿದ ನಾಗರಿಕರಿಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಮಹಾನಗರಪಾಲಿಕೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಾಣಿ ಚೆನ್ನಮ್ಮ ವೃತ್ತದಲ್ಲಿ ‘ಕೂಲಿಂಗ್ ಟೆಂಟ್’ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಬಿಸಿಲಿನ ಝಳದಿಂದ ದಣಿವರಿದ ಜನರಿಗೆ ನೆರಳಿನ ಆಸರೆ ಸಿಕ್ಕಂತಾಗಿದೆ.
ಬಡವರ ಮಹಾಬಳೇಶ್ವರ ಎಂದು ಕರೆಯಲ್ಪಡುವ ಬೆಳಗಾವಿಯಲ್ಲಿ ಇತ್ತೀಚೆಗೆ ಬಿಸಿಲಿನ ತಾಪಮಾನ 36 ರಿಂದ 38 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ 28 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಈಗ 40 ಡಿಗ್ರಿ ಸೆಲ್ಸಿಯಸ್ ಸಮೀಪಿಸುತ್ತಿರುವುದು ಜನರನ್ನು ಕಂಗೆಡಿಸಿದೆ.
ಟ್ರಾಫಿಕ್ ಸಿಗ್ನಲ್ಗಳಲ್ಲಿ ನಿಲ್ಲುವಾಗ ನೇರವಾಗಿ ತಲೆಗೆ ಬಿಸಿಲು ತಾಗುತ್ತಿದ್ದು, ಜನ ಹೈರಾಣಾಗುತ್ತಿದ್ದರು. ಇದೀಗ ಈ ಟೆಂಟ್ ವ್ಯವಸ್ಥೆಯಿಂದಾಗಿ ಸಿಗ್ನಲ್ ಬೀಳುವವರೆಗೆ ಜನರು ನೆರಳಿನಲ್ಲಿ ಆಶ್ರಯ ಪಡೆಯಲು ಸಾಧ್ಯವಾಗಿದೆ.
ಬೆಳಗಾವಿ ನಗರದಲ್ಲಿ ಈ ರೀತಿಯ ಉಪಕ್ರಮ ಮೊದಲ ಬಾರಿಗೆ ಅನುಷ್ಠಾನಗೊಂಡಿದ್ದು, ನಾಗರಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆಯೂ ಬಸವನಾಡು ವಿಜಯಪುರದಲ್ಲಿ ಇದೇ ಮಾದರಿಯ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.
ಈ ವ್ಯವಸ್ಥೆಯಿಂದ ಅತ್ಯಂತ ಸಂತೋಷವಾಗಿದೆ ಎಂದು ಜನರು ಹೇಳಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ನೆರಳಿನ ವ್ಯವಸ್ಥೆ ಮಾಡಿದ್ದಕ್ಕೆ ನಾಗರಿಕರು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ರಾಣಿ ಚೆನ್ನಮ್ಮ ವೃತ್ತದ ಜೊತೆಗೆ ನಗರದ ಇತರ ಪ್ರಮುಖ ವೃತ್ತಗಳು ಹಾಗೂ ಟ್ರಾಫಿಕ್ ಸಿಗ್ನಲ್ಗಳ ಬಳಿಯೂ ಇದೇ ರೀತಿಯ ಕೂಲಿಂಗ್ ಟೆಂಟ್ ವ್ಯವಸ್ಥೆ ಮಾಡುವಂತೆ ಬೆಳಗಾವಿಗರು ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಹೆಚ್ಚಿದ ಬಿಸಿಲಿನ ತಾಪ
- ಬೆಳಗಾವಿಯಲ್ಲಿ ಬಿಸಿಲಿನ ತಾಪಮಾನ 36 ರಿಂದ 38 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.
- ಹಿಂದೆ 28 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ತಾಪಮಾನ ಇದೀಗ 40 ಡಿಗ್ರಿ ಸೆಲ್ಸಿಯಸ್ ಸಮೀಪಿಸುತ್ತಿದೆ.
- ವಾಹನಗಳ ಸಂಖ್ಯೆ ಹೆಚ್ಚಳ ಹಾಗೂ ಪ್ರಕೃತಿ ನಾಶದಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
ನಾಗರಿಕರ ಮೆಚ್ಚುಗೆ ಹಾಗೂ ಬೇಡಿಕೆ
- “ಈ ನೆರಳಿನ ವ್ಯವಸ್ಥೆ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ಇದರಿಂದ ಬಿಸಿಲಿನಿಂದ ನಿಲ್ಲಲು ಅನುಕೂಲವಾಗಿದೆ” ಎಂದು ಮಹಿಳೆಯೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.
- “ಟ್ರಾಫಿಕ್ ಸಿಗ್ನಲ್ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಾಣಿ-ಪಕ್ಷಿಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು” ಎಂದು ಇನ್ನೊಬ್ಬ ನಾಗರಿಕರು ಸಲಹೆ ನೀಡಿದ್ದಾರೆ.
- “ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲು ಹೆಚ್ಚಾಗಿದೆ. ಟ್ರಾಫಿಕ್ ಜಾಮ್, ವಾಹನಗಳ ಸಂಖ್ಯೆ ಏರಿಕೆಯೂ ಇದಕ್ಕೆ ಕಾರಣ. ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು” ಎಂದು ಪರಿಸರ ಪ್ರೇಮಿಯೊಬ್ಬರು ಹೇಳಿದ್ದಾರೆ.
- ಬೆಳಗಾವಿ ಜಿಲ್ಲಾಡಳಿತದ ಈ ಉಪಕ್ರಮಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
- ನಗರದ ಇತರ ಪ್ರಮುಖ ಟ್ರಾಫಿಕ್ ಸಿಗ್ನಲ್ಗಳಲ್ಲೂ ಇದೇ ರೀತಿ ನೆರಳಿನ ವ್ಯವಸ್ಥೆ ವಿಸ್ತರಿಸಲು ಒತ್ತಾಯ ಕೇಳಿಬಂದಿದೆ.
- ಕುಡಿಯುವ ನೀರು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆಯ ಅಗತ್ಯವನ್ನೂ ಬೆಳಗಾವಿಗರು ಒತ್ತಿ ಹೇಳಿದ್ದಾರೆ.
ಇದ್ದನು ಓದಿ:
ಬೆಳಗಾವಿ: ಹಂಗರಗಾದಲ್ಲಿ ಅಗ್ನಿ ಅವಘಡ – ಪಾಟೀಲ್ ಕುಟುಂಬದ ಮನೆ ಬೂದಿ!
ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ದುರಂತ: ಬಾವಿಗೆ ಬಿದ್ದ ಯುವಕ ಮೃತ – ಗ್ರಾಮದಲ್ಲಿ ಆಘಾತ..!
IPL ಕ್ರೇಜ್ ನಡುವೆ ಬೆಳಗಾವಿಯಲ್ಲಿ ಆನ್ಲೈನ್ ಬೆಟ್ಟಿಂಗ್ ದಂಧೆಗೆ ಪೊಲೀಸ್ ದಾಳಿ










